ಕಲ್ಮಕಾರು : ವಿಷ ಸೇವಿಸಿ ಆತ್ಮಹತ್ಯೆ

ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕು ಕಲ್ಮಕಾರು ಗ್ರಾಮದಿಂದ ವರದಿಯಾಗಿದ್ದು, ಬಾಳೆಬೈಲು ನಿವಾಸಿ ಶ್ರೀಮತಿ ಭಾಗೀರಥಿ ಪಾಂಡಿಗದ್ದೆ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ.ಮಹಿಳೆ ವಿಷ ಸೇವಿಸಿದ್ದು ಗೊತ್ತಾದ ತಕ್ಷಣ ಹರಿಹರ ಪಳ್ಳತ್ತಡ್ಕದ ವೈದ್ಯರಾದ ಡಾ| ಗಿರೀಶ್ ರವರಲ್ಲಿಗೆ ತರಲಾಗಿದ್ದು, ಮಹಿಳೆ ಆದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ಸುಳ್ಯ...

ಫ್ಲವರ್ ಗೈಸ್ ಬೆಳ್ಳಾರೆ ದಶಮಾನೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ – ಫ್ಲವರ್ ಗೈಸ್ ಬೆಳ್ಳಾರೆ ಹಾಗೂ ಬಿರುವೆರ್ ಕುಡ್ಲ ಸುಳ್ಯ ಘಟಕದ ವತಿಯಿಂದ ಸೇವಾ ಯೋಜನೆ ಪ್ರಾರಂಭ

ದಿನಾಂಕ 26 ಆದಿತ್ಯವಾರದಂದ್ದು ಬೆಳ್ಳಾರೆ ಕೆ ಪಿ ಎಸ್ ಶಾಲಾ ಮೈದಾನ ದಲ್ಲಿ ಫ್ಲವರ್ ಗೈಸ್ ಬೆಳ್ಳಾರೆ ಯ ದಶಮಾನೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ ನಡೆಯಿತು. ಫ್ಲವರ್ ಗೈಸ್ ಬೆಳ್ಳಾರೆ ಮತ್ತು ಬಿರುವೆರ್ ಕುಡ್ಲ ಸುಳ್ಯ ಘಟಕದ ವತಿಯಿಂದ 2025 ರ ಮೊದಲ ಸೇವಾ ಯೋಜನೆಯನ್ನು ಪೆರುವಾಜೆಯ ಭಾಗದ ಅನಾರೋಗ್ಯದ ವ್ಯಕ್ತಿಗೆ ಚಿಕಿತ್ಸೆವೆಚ್ಚ ನೀಡಲಾಯಿತು, ಸಮಾರೋಪ...
Ad Widget

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಶಾಲಾ ಸಂಸತ್ತು ಅಧಿವೇಶನ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಶಾಲಾ ಸಂಸತ್ತು ಅಧಿವೇಶನ ಜ.27ರಂದು ಜರುಗಿತು. ವಿದ್ಯಾರ್ಥಿ ಸರಕಾರದ ಸಭಾಪತಿಯಾದ ಕುಲದೀಪ್ ಜಿ. ಎನ್ ಸಭಾಧ್ಯಕ್ಷತೆಯನ್ನು ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಸದೀಯ ಕಾರ್ಯದರ್ಶಿಯಾದ ಬೃಂದಾ ಗತ ಅಧಿವೇಶನದ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು. ಮುಖ್ಯಮಂತ್ರಿಯಾದ ಜಶ್ಮಿ ಎನ್ . ಸಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಕ್ರೀಡಾಕೂಟದ ಸಾಧನೆಗಳಿಗೆ ಅಭಿನಂದನಾ ಗೊತ್ತುವಳಿಯನ್ನು...

ಅಹಂಕಾರದ ಬದುಕು ಆಮೆ-ಮೊಲದ ಆಟದಂತಾಗುತ್ತದೆ…

ಒಂದು ಊರಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಎಲ್ಲರೆದುರು ಅಹಂಕಾರದಿಂದ ಬೀಗುತ್ತಿದ್ದ ಆತ “ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ” ಎನ್ನುವ ಭ್ರಮೆಯಲ್ಲಿ ಬದುಕುತ್ತಿದ್ದ. ಆದರೆ ಆತನಿಗೇ ಅರಿವಾಗದ ಆತನ ಬದುಕಿನ ಸತ್ಯಗಳು ಹೀಗಿದ್ದವು…“ನಾನು” ಎನ್ನುವ ಅಹಂಕಾರದ ಅಂಧಕಾರದಲ್ಲಿ ಮುಳುಗಿದ್ದ ಆತನಿಗೆ ತಾನೂ ಕೂಡ ಮುಂದೊಮ್ಮೆ ಎಲ್ಲರಂತೆ ಸತ್ತು ಮಣ್ಣು ಸೇರುತ್ತೇನೆ ಎಂಬುವುದು ನೆನಪಾಗಲೇ ಇಲ್ಲ…“ನನ್ನಿಂದಲೇ ಎಲ್ಲಾ” ಎನ್ನುವ ದೊಡ್ಡಸ್ತಿಕೆಯ...

ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲಾ ಸ್ಕೌಟ್ ತಂಡ ತಮಿಳುನಾಡಿನಲ್ಲಿ ನಡೆಯಲಿರುವ ಡೈಮಂಡ್ ಜುಬಿಲಿ ಜಾಂಬೂರಿಗೆ ಆಯ್ಕೆ

ಭಾರತ್ ಸ್ಕೌಟ್ ಮತ್ತು ಗೈಡ್ಸ್, ರಾಷ್ಟ್ರೀಯ ಸಂಸ್ಥೆ ಮತ್ತು ರಾಜ್ಯ ಸಂಸ್ಥೆ ತಮಿಳುನಾಡು ಇವುಗಳ ಸಹಯೋಗದಲ್ಲಿ ಜ.28 ರಿಂದ ಫೆ.03 ರವರೆಗೆ ತಮಿಳುನಾಡಿನ ಸಿಪ್ ಕಾಟ್ ಇಂಡಸ್ಟ್ರೀಯಲ್ ಪಾರ್ಕ್, ಮುನಪ್ಪರೈ, ತಿರಿಚಿರೆಪಳ್ಳಿ ಎಂಬಲ್ಲಿ 75ನೇ ವರ್ಷಾಚರಣೆ ಅಂಗವಾಗಿ ಸ್ಕೌಟ್ ಗೈಡ್ಸ್ ವಿಶೇಷ ಡೈಮಂಡ್ ಜುಬಿಲಿ ಜಾಂಬೂರಿ ಯನ್ನು ಆಯೋಜಿಸಿದ್ದು, ಈ ಜಾಂಬೂರಿ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ...

ಸುಳ್ಯ : ವಿಶೇಷ ಚೇತನರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ

ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ಇಂದು ತಾಲೂಕಿನ ವಿಶೇಷ ಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ನಡೆಯಿತು. ತಾಲ್ಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ ಎಂ ಆರ್ ಡಬ್ಲ್ಯೂ ಚಂದ್ರಶೇಖರ್ ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್, ಗ್ರಾಮ ಪಂಚಾಯತ್ ಗಳ ವಿ...

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ – ಡಾ. ಅನುರಾಧಾ ಕುರುಂಜಿ

ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುವುದರೊಂದಿಗೆ ಮೌಲ್ಯಯುತ ಜೀವನವನ್ನು ನಿರ್ವಹಿಸಲು ಸಾಧ್ಯವಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಪರೀಕ್ಷೆ ನಿಮ್ಮ ಜೀವನದ ಅವಿಭಾಜ್ಯ ಅಂಗವೆಂದರಿಯಿರಿ. ಆ ಮೂಲಕ ನೀವು ಪಡೆದ ಶಿಕ್ಷಣ ಸಾರ್ಥಕವಾಗಲಿ. ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯ ಪಟ್ಟರು. ಅವರು ಸರ್ಕಾರಿ ಪ್ರೌಢಶಾಲೆ ಎಡಮಂಗಲ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್...

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳದ ಆಡಳಿತ ಮಂಡಳಿ ಚುನಾವಣೆ –  ನಿರ್ದೇಶಕರಾಗಿ ಚಂದ್ರ ಕೋಲ್ಚಾರು ಆಯ್ಕೆ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ  ಸಂಘಗಳ ಮಹಾ ಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಇಂದು (ಜ.28) ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಚಾರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಚಂದ್ರ ಕೋಲ್ಚಾರು ರವರು ದ.ಕ.ಜಿಲ್ಲಾ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಲ್ಸೂರು : ಶ್ರೀ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ

ಅಡ್ಕಾರುಮನೆ-ಜಾಲ್ಸೂರು ಬಾಳಾಜೆ ಎಂಬಲ್ಲಿ ಜ.26 ರಂದು ಶ್ರೀ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ನಡೆಯಿತು.ಬೆಳಿಗ್ಗೆ ಶ್ರೀ ಗಣಪತಿ ಹವನ ನಡೆದು ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು ಹಾಗೂ ಎಣ್ಣೆಬೂಳ್ಯ ನಡೆಯಿತು. ನಂತರ ರಾತ್ರಿ ಅನ್ನಸಂತರ್ಪಣೆ ನಡೆದು ಶ್ರೀ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ನಡೆದು ಪ್ರಸಾದ ವಿತರಣೆಯೊಂದಿಗೆ ನೇಮೋತ್ಸವವು ಸಂಪನ್ನಗೊಂಡಿತು.(ವರದಿ :...

ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ. ವ್ಯಕ್ತಿತ್ವ ವಿಕಸನಕ್ಕೆ ಕಾರಣವಾದ ಜೀವಸತ್ವ ಶಿಕ್ಷಣ – ಪೂವಪ್ಪ ಕಣಿಯೂರು

ಶಿಕ್ಷಣವೆಂದರೆ ಶೀಲರಚನೆ ಜ್ಞಾನವಿವೇಕವಾಗಿ ಪರಿವರ್ತಿತವಾಗಿ ಮಾನವೀಯ ಮೌಲ್ಯಗಳನ್ನು ತಂದು ಕೊಡುತ್ತದೆ. ಅವರು ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವರ್ತಮಾನದಲ್ಲಿ ಹಣ ಸಂಪಾದನೆ ಮಾಡುವುದಕ್ಕಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬಾರದು. ಮಾತೃಭಾಷೆಯಲ್ಲಿ ಮಾತ್ರ ನಾವು ಮೌಲ್ಯಯುತವಾದ ಶೀಲಯುಕ್ತವಾದ ಶಿಕ್ಷಣವನ್ನು ಪಡೆಯಲು ಸಾಧ್ಯ. ಸಾಧನೆಗೆ ಭಾಷೆ ತೊಡಕಾಗುವುದಿಲ್ಲವೆಂದು ಅಭಿಪ್ರಾಯಪಟ್ಟರು....
Loading posts...

All posts loaded

No more posts

error: Content is protected !!