ಅಗಲಿದ ಪತ್ರಕರ್ತ ಬಾಳೆಪುಣಿ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ

ಸುಳ್ಯ: ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನ ಪ್ರಾರ್ಥನೆ ನಡೆಸಿ ನುಡಿನಮನ ಸಲ್ಲಿಸಲಾಯಿತು.ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ...

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನೂತನ ರಾಜಗೋಪುರ ಪಡ್ಪಿರೆ ಉದ್ಘಾಟನೆ

ಕೊಡಗಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ: ಶಾಸಕ ಎ.ಎಸ್. ಪೊನ್ನಣ್ಣ ದೇವಾಲಯ ಅಭಿವೃದ್ಧಿಗೊಂಡರೆ ಊರಿನ ಅಭಿವೃದ್ಧಿ: ಶಾಸಕಿ ಭಾಗೀರಥಿ ದೇವಸ್ಥಾನದ ಅಭಿವೃದ್ಧಿಯಿಂದ ಗ್ರಾಮದಲ್ಲಿ ಒಗ್ಗಟ್ಟು ಮೂಡುತ್ತದೆ: ಕೆ.ಜಿ. ಬೋಪಯ್ಯ ಶಾಸ್ತಾವು ದೇವಾಲಯ ಕನ್ನಡ, ಮಲೆಯಾಳಿ, ತುಳು ದೈವಗಳ ಸಂಗಮವಿರುವ ಐತಿಹಾಸಿಕ ಕ್ಷೇತ್ರ: ಪ್ರೊ. ಕೆ.ಇ. ರಾಧಾಕೃಷ್ಣ ಶ್ರೀ ಶಾಸ್ತಾವು ದೇವರ...
Ad Widget

ಕಲ್ಮಡ್ಕ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ – ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮಾಜಿ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷರಾಗಿ ರಾಮ ನಾಯ್ಕ ಉಡುವೆಕೋಡಿ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಜ.30 ರಂದು ನಡೆಯಿತು. . ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮಾಜಿ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷರಾಗಿ ರಾಮ ನಾಯ್ಕ ಉಡುವೆಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ಜಿ. ಗೋಳ್ತಾಜೆ, ತೃಪ್ತಿ ಯು., ರವಿಕಿರಣ ಎ.,...

ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ವಸಂತ ನಡುಬೈಲು ಎರಡನೇ ಬಾರಿಗೆ ಆಯ್ಕೆ – ಉಪಾಧ್ಯಕ್ಷರಾಗಿ ಬಂಡಾಯ ಅಭ್ಯರ್ಥಿ ನಾಗೇಶ್ ಆಳ್ವ ಆಯ್ಕೆ – ಶಾಸಕರ ತವರಲ್ಲೇ ಬಿಜೆಪಿಗೆ ಬಂಡಾಯದ ಬಿಸಿ – ಬಣ ರಾಜಕೀಯ ತಾರಕಕ್ಕೆ

ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಜ.30 ದಿನ ನಿಗದಿಯಾಗಿತ್ತು. ಪಕ್ಷ ಸೂಚಿಸಿದ ಅಭ್ಯರ್ಥಿಗಳ ಬಗ್ಗೆ ಮಾಜಿ ಅಧ್ಯಕ್ಷ ವಸಂತ ನಡುಬೈಲು ತಂಡ ಅಸಮಾಧಾನಗೊಂಡು ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಬಂಡಾಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಅಧ್ಯಕ್ಷರಾಗಿ ವಸಂತ ನಡುಬೈಲು...

ನಿವೃತ್ತ ವನಪಾಲಕ ಶಿವರಾಮ ಬಲ್ಯಾಯ ಅಡ್ಕಾರು ನಿಧನ

ಜಾಲ್ಲೂರು ಗ್ರಾಮದ ಅಡ್ಕಾರು ನಿವಾಸಿ, ನಿವೃತ್ತ ವನಪಾಲಕರಾದ ಶಿವರಾಮ ಬಲ್ಯಾಯ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜ.30ರಂದು ಬೆಳಗ್ಗಿನ ಜಾವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಶಿವರಾಮ ಬಲ್ಯಾಯರು ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಸರೋಜಿನಿ, ಪುತ್ರರಾದ ಶಶಿ ಅಡ್ಕಾರು, ಸಂದೇಶ್ ಅಡ್ಕಾರು, ಸುದೀಶ್ ಅಡ್ಕಾರು, ಪುತ್ರಿಯರಾದ...

24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂದಿಸಿದ ಸುಳ್ಯ ಪೊಲೀಸ್!.

ಸುಳ್ಯ: 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಳ್ಯ ಪೊಲೀಸ್ ಠಾಣಾ ಅಕ್ರ: 60/2002 ಕಲಂ: 457, 380 ಐಪಿಸಿ (LPC no. 04/2007)ರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ V.T ಬಾಬು ಯಾನೆ ಆಗಸ್ಟಿನ್ (55 ವರ್ಷ ) ತಂದೆ : ತೋಮಸ್ ವಾಸ :ವಲಿಯಪರಂಬಿಲ್, ಇಡುಕ್ಕಿ, ಕೇರಳ ಮತ್ತು V.T.ರಾರಿ...

ಪಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಶಾಸ್ತ್ರಿ, ಉಪಾಧ್ಯಕ್ಷರಾಗಿ ಸದಾನಂದ ಕಾರ್ಜ ಅವಿರೋಧ ಆಯ್ಕೆ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು 12 ಸ್ಥಾನದಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಜ.30 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿ ಎರಡು...

ಮಡಪ್ಪಾಡಿ, ಕಂದ್ರಪ್ಪಾಡಿ, ದೇವ, ಬಳ್ಳಕ್ಕ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಅವ್ಯವಸ್ಥೆ – ಜನತೆ ಆಕ್ರೋಶ

ದೇಶದ ಅಭಿವೃದ್ಧಿಯಾಗಬೇಕಾದರೇ ಹಳ್ಳಿಗಳು ಅಭಿವೃದ್ಧಿಯಾಗಬೇಕು. ಹಳ್ಳಿ ಹಳ್ಳಿಗಳನ್ನು ಸೇರಿಸುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ದೇಶದ ಅನೇಕ ಪ್ರದೇಶಗಳಲ್ಲಿ ಹೊಸ ಟವರ್ ನಿರ್ಮಿಸಿ 4G ಸೇವೆ ನೀಡುತ್ತಿದೆ. ಆದರೇ ಸುಳ್ಯ ತಾಲೂಕಿನ ಅನೇಕ ಗ್ರಾಮಗಳು ಸೇರಿದೆ. ಟವರ್ ನಿರ್ಮಾಣಗೊಂಡು ನೆಟ್ವರ್ಕ್ ಬಂದಾಗ ಅನೇಕ ಜನರು ಖುಷಿ ಪಟ್ಟರು. ಆದರೇ ಬಹುದಿನ ಉಳಿಯಲಿಲ್ಲ. ಸುಳ್ಯದ ಮಡಪ್ಪಾಡಿ, ಕಂದ್ರಪ್ಪಾಡಿ, ದೇವ, ಬಳ್ಳಕ್ಕ...

ಯಶಸ್ವಿನಿ ಯೋಜನೆಯು ಸಹಕಾರಿ ಸಂಘದ ಸದಸ್ಯರಿಗೆ ತಾಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯ ಸಿಗುವಂತಾಗಲು ಪ್ರಯತ್ನಿಸುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ

ಸರಕಾರದ "ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಯೋಜನೆ"ಯನ್ನು ಸಹಕಾರಿ ಸಂಘದ ಮೂಲಕ ಸದಸ್ಯರಿಗೆ ಜಾರಿಗೊಳಿಸಲಾಗಿದ್ದು, ಸುಳ್ಯ ಮತ್ತು ಪುತ್ತೂರು ತಾಲೂಕು ಮಟ್ಟದಲ್ಲಿ ಯಾವುದೇ ಯಶಸ್ವಿನಿ ನೋಂದಾಯಿತ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗದೇ ವಂಚಿತರಾಗುತ್ತಿದ್ದಾರೆಸುಳ್ಯ ತಾಲೂಕಿನಲ್ಲಿ ಕೆ.ವಿ.ಜಿ ವೈದ್ಯಕೀಯ ಆಸ್ಪತ್ರೆ ಮತ್ತು ಪುತ್ತೂರು ತಾಲೂಕಿನ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ...

ಪೆರಾಜೆ : ಶಾಮಿಯಾನ ಹಾಕಲು ಅನ್ಯಮತೀಯರಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ – ಮಾತುಕತೆಯ ಬಳಿಕ ಪ್ರಕರಣ ಸುಖಾಂತ್ಯ

ಪೆರಾಜೆ ದೇವಸ್ಥಾನದಲ್ಲಿ ನಡೆಯಲಿದ್ದ ಕಾರ್ಯಕ್ರಮದ ಅಂಗವಾಗಿ ಅನ್ಯಮತೀಯರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದು ವರದಿಯಾಗಿದೆ. ಸುಳ್ಯದ ಸಹನಾ ಶಾಮಿಯಾನ ದವರಿಗೆ ಅವಕಾಶ ನೀಡಿದ್ದಕ್ಕೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ನಾವು ಸ್ವಾತಿ ಸೌಂಡ್ಸ್ ನವರಿಗೆ ನೀಡಿದ್ದೇವು ಅವರು ಸಹನಾ ದವರಿಗೆ ಸಬ್ ಕಾಂಟ್ರಾಕ್ಸ್ ನೀಡಿದ್ದಾರೆ ಎಂದು...
Loading posts...

All posts loaded

No more posts

error: Content is protected !!