ಗುತ್ತಿಗಾರು :- ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್ ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಜು.09 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು...

ಹರಿಹರ ಪಲ್ಲತ್ತಡ್ಕ :- ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಒಕ್ಕೂಟಗಳ ವತಿಯಿಂದ ಶ್ರಮಸೇವೆ.

ಮೊನ್ನೆ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ ಸಂಭವಿಸಿದ್ದು, ಆ.09 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು, ಜನಜಾಗೃತಿ ಪ್ರದೇಶದ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ತಾಲೂಕು ಹಾಗೂ ಸುಬ್ರಹ್ಮಣ್ಯ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವುಗಳ ವತಿಯಿಂದ ಬೃಹತ್ ಶ್ರಮದಾನ...
Ad Widget

ಮಡಪ್ಪಾಡಿ: ಯುವಕ ಮಂಡಲ ಮತ್ತು ಸೇವಾಭಾರತಿ ತಂಡದಿಂದ ಶ್ರಮಸೇವೆ

ಪ್ರವಾಹ ಪೀಡಿತ ಪ್ರದೇಶಗಳಾದ ಹರಿಹರ-ಕೊಲ್ಲಮೊಗ್ರ-ಕಲ್ಮಕಾರು ಅಲ್ಲಿ ಮಡಪ್ಪಾಡಿಯ ಯುವಕ ಮಂಡಲ ಮತ್ತು ಸೇವಾಭಾರತಿ ತಂಡದಿಂದ ಒಂದು ದಿನದ ಶ್ರಮಸೇವೆ ನಡೆಸಲಾಯಿತು.

ಸುಬ್ರಮಣ್ಯ : ಎಬಿವಿಪಿ ವತಿಯಿಂದ “ಯುವಾಂಕುರ” ಸ್ಪರ್ಧಾ ಕಾರ್ಯಕ್ರಮ – ಮ್ಯಾರಥಾನ್ ಓಟ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸುಳ್ಯ ಹಾಗೂ ಕಡಬ ತಾಲೂಕು ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ"ಯುವಾಂಕುರ" ವಲ್ಲೀಶ ಸಭಾಭವನದಲ್ಲಿ ಆ. 13 ರಂದು ನಡೆಯಲಿದೆ. ಈ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಕುಣಿತ ಭಜನೆ, ದೇಶಭಕ್ತಿಗೀತೆ, ಕಸದಿಂದ ರಸ, ರಂಗೋಲಿ, ನಿಧಿ...

ಸಂಪಾಜೆ: ವಿದ್ಯುತ್ ಘಟನೆಯಿಂದ ಹಾನಿಗೊಂಡ ಅಂಗಡಿ ಕಟ್ಟಡದ ಮಾಲೀಕನಿಗೆ ಧನಸಹಾಯ

ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ವಿದ್ಯುತ್ ಆಕಸ್ಮಿಕ ಘಟನೆಯಲ್ಲಿ ಅಂಗಡಿ ಕಟ್ಟಡವನ್ನು ಕಳೆದುಕೊಂಡ ಮಹಮ್ಮದ್ ಕುಂಞ, ಟೈರ್ ಅಂಗಡಿಯ ಲಿಗೋರಿ ಡಿ ಸೋಜಾ, ಹೊಟೇಲ್ ನ ಆನಂದ ರವರಿಗೆ ಸಾರ್ವಜನಿಕ ಸಹಕಾರದೊಂದಿಗೆ ಸಂಗ್ರಹಿಸಿದ ಹಣವನ್ನು ತುರ್ತು ಪರಿಹಾರದ ಸಹಾಯಧನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಟಿ...

ರಾಜ್ಯ ಮಟ್ಟದ ಅಂತರ್ ವಿ.ವಿ. ಕಿರು ನಾಟಕ ಸ್ಪರ್ಧೆ – ಆಳ್ವಾಸ್ ನ “ಅಮರಕ್ರಾಂತಿ” ಪ್ರಥಮ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ  ನಡೆದ ರಾಜ್ಯ ಮಟ್ಟದ ಅಂತರ್ ವಿ.ವಿ.ಗಳ ಕಿರುನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ 'ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837' ನಾಟಕವು ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತದೆ. ಕರ್ನಾಟಕದ ಪ್ರತಿಷ್ಠಿತ 15 ವಿಶ್ವವಿದ್ಯಾನಿಲಯಗಳು ಪ್ರದರ್ಶಿಸಿದ ಒಟ್ಟು 31...

ಮಳೆಯಿಂದ ಹಾನಿಗೊಳಗಾದ ಕುಟುಂಬಕ್ಕೆ ಮರಾಟಿ ಸಮಾಜದಿಂದ ಧನಸಹಾಯ

ಭಾರಿ ಮಳೆಯಿಂದಾಗಿ ಕಲ್ಲುಗುಂಡಿಯ ಸುಧಾಕರ ನಾಯ್ಕ್ ಅವರ ಮನೆ ಸಂಪೂರ್ಣವಾಗಿ ಬಿದ್ದು ಹೋಗಿ ಮನೆಯ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿ ನಿರಾಶ್ರಿತರಾಗಿದ್ದರು. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಈ ಸಮಯದಲ್ಲಿ ತೀರಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದುದರಿಂದ , ಇವರಿಗೆ ಸಹಾಯ ಹಸ್ತವನ್ನು ನೀಡುವ ಸಲುವಾಗಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ...

ಮಡಪ್ಪಾಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಕುರಿತು ಪೂರ್ವಭಾವಿ ಸಭೆ

ಮಡಪ್ಪಾಡಿ ಗ್ರಾಮ ಪಂಚಾಯಿತಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಕುರಿತು ಮತ್ತು ''ಹರ್ ಘರ್ ತಿರಂಗಾ '' ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆಯನ್ನು ಆಗಸ್ಟ್ 8ರಂದು ನಡೆಸಲಾಯಿತು. ನಂತರ ಮನೆಮನೆಗೂ ರಾಷ್ಟ್ರಧ್ವಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ,ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು,...

ಅರಂತೋಡು : ವ್ಯಕ್ತಿತ್ವ ವಿಕಸನ ಕ್ಕೆ ಎನ್ಎಸ್ಎಸ್ ವೇದಿಕೆ ಕಲ್ಪಿಸುತ್ತದೆ-ಕೆ.ಆರ್.ಗಂಗಾಧರ್

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.ಕಾಲೇಜನ ಸಂಚಾಲಕ , ಶ್ರೀ ಕೆ ಆರ್ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ ಬೆಳೆಸುವಲ್ಲಿ ಎನ್ಎಸ್ಎಸ್ ವೇದಿಕೆ ಕಲ್ಪಿಸುತ್ತವೆ ಎಂದರು.ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ...

ದೇವಚಳ್ಳ : ಗ್ರಾ.ಪಂ.ವತಿಯಿಂದ ರಾಷ್ಟ್ರಧ್ವಜ ವಿತರಣೆ

ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ಶಾಲೆ ಮತ್ತು ಅಂಗನವಾಡಿಗಳಿಗೆ ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮ ಇಂದು ನಡೆಯಿತು. ಆಗಸ್ಟ್ 15 ರಂದು ವಿಜೃಂಭಣೆ ಯಿಂದ ಸ್ವಾತಂತ್ರೋತ್ಸವದ ಆಚರಣೆ ಮತ್ತು ಗ್ರಾಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಅವಿರೋಧವಾಗಿ ಆಯ್ಕೆಯಾದ ಯಶೋದಾ ಬಾಳೆಗುಡ್ಡೆಯವರನ್ನು ಸನ್ಮಾನಿಸಲಾಯಿತು....
Loading posts...

All posts loaded

No more posts

error: Content is protected !!