ಹರಿಹರ ಪಲ್ಲತ್ತಡ್ಕ :- ಲಯನ್ಸ್ ಕ್ಲಬ್ ವತಿಯಿಂದ ತೇಜಕುಮಾರ್ ಕಜ್ಜೋಡಿ ಮನೆಯವರಿಗೆ ಸಹಾಯಧನ ವಿತರಣೆ. ಸೋಮಶೇಖರ್ ಕಟ್ಟೆಮನೆ ಅವರಿಗೆ ಸನ್ಮಾನ.

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಆ.12 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ಬರೆ ಜರಿದು ಮನೆ ಕಳೆದುಕೊಂಡ ತೇಜಕುಮಾರ್ ಕಜ್ಜೋಡಿ ಮನೆಯವರಿಗೆ ಲಯನ್ಸ್ ಕ್ಲಬ್ ವತಿಯಿಂದ ಸಹಾಯಧನ ವಿತರಿಸಲಾಯಿತು. ತಾರಾಮತಿ ಕಜ್ಜೋಡಿ ಅವರು ಸಹಾಯಧನ ಸ್ವೀಕರಿಸಿದರು. ಹಾಗೂ ಆ.02 ರಂದು ಹರಿಹರ ಪಲ್ಲತ್ತಡ್ಕದ ಸೇತುವೆಯಲ್ಲಿ ಸಿಲುಕಿದ...

ಮಾಜಿ ಸಚಿವ ರಮಾನಾಥ ರೈ ರವರಿಂದ ಸೋಮಶೇಖರ್ ಕಟ್ಟೆಮನೆ ಅವರಿಗೆ ಸನ್ಮಾನ

ಮಳೆಯಿಂದಾಗಿ ಹರಿಹರ ಪಲ್ಲತಡ್ಕದಲ್ಲಿ ಹಾನಿ ಉಂಟಾಗಿದ್ದು ಆ.2ರಂದು ಸೇತುವೆಗೆ ತಡೆಯಾಗಿ ಬಿದ್ದಂತಹ ಮರಗಳ ತೆರವು ಗೊಳಿಸುವ ವೇಳೆಯಲ್ಲಿ ಕ್ರೇನ್ ಚಾಲಕ ಶರೀಫ್ ಎಂಬುವರು ನೀರಿಗೆ ಬಿದ್ದಿದ್ದು ಅವರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆ ಅವರನ್ನು ಕಾಂಗ್ರೆಸ್ ಮುಖಂಡ ಮಾಜಿ ಸಚಿವರಾದ ರಮಾನಾಥ ರೈ ಅವರು ಆ.11 ರಂದು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು...
Ad Widget

ಸುಬ್ರಹ್ಮಣ್ಯ : ಡಿಗ್ರಿ ಕಾಲೇಜಿನಲ್ಲಿ ಹರ್ ಘರ್ ತಿರಂಗಾ ಅಭಿಯಾನ

ಸುಬ್ರಹ್ಮಣ್ಯ : ಡಿಗ್ರಿ ಕಾಲೇಜಿನಲ್ಲಿ ಹರ್ ಘರ್ ತಿರಂಗಾ ಅಭಿಯಾನಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಆ. 12 ರಂದು ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಬಾಳಿಲ ಪ್ರೌಢಶಾಲೆಯಲ್ಲಿ ಸಾಹಿತ್ಯೋತ್ಸವ

ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲದ ಸಂಸ್ಥಾಪಕ ನೆಟ್ಟಾರು ವೆಂಕಟಸುಬ್ಬರಾವ್ ಅವರ ಸ್ಮರಣಾರ್ಥ ಕುರಿತು ಆ.11 ರಂದು ಬಾಳಿಲದಲ್ಲಿ ಸಾಹಿತ್ಯೋತ್ಸವ ಜರುಗಿತು. ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿ ಸಂಚಾಲಕ ಪಿಜಿಎಸ್ ಎನ್ ಪ್ರಸಾದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್ ವೆಂಕಟ್ರಮಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ರಾಧಾಕೃಷ್ಣ ರಾವ್ ಉಡುವೆಕೋಡಿ...

ಅಜ್ಜಾವರ : ಗ್ರಂಥ ಪಾಲಕರ ದಿನಾಚರಣೆ

ಗ್ರಾಮೀಣಾಭಿವೃದ್ಧಿ ಮತ್ತು ಪ೦ಚಾಯತ್ ರಾಜ್ ಇಲಾಖೆ ,ಗ್ರಾಮ ಪ೦ಚಾಯತ್ ಗ್ರ೦ಥಾಲಯ ಮತ್ತು ಮಾಹಿತಿ ಕೇ೦ದ್ರ ಅಜ್ಜಾವರ ಇದರ ವತಿಯಿ೦ದ ಪದ್ಮಶ್ರೀ ಡಾ.ಎಸ್.ಆರ್ ರ೦ಗನಾಥನ್ ರವರ ಜನ್ಮ ದಿನದ ಪ್ರಯುಕ್ತ "ಗ್ರ೦ಥ ಪಾಲಕರ ದಿನಾಚರಣೆ"ಯನ್ನು ಆಚರಿಸಲಾಯಿತು.ಡಾ.ಎಸ್.ಆರ್ .ರ೦ಗನಾಥನ್ ರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಪ೦ಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆಯವರು ಉದ್ಛಾಟಣೆ ಮಾಡಿದರು.ಈ ಸ೦ದರ್ಭ...

ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಸಾಮೂಹಿಕ ಧ್ವಜ ವಿತರಣೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಆ.11ರಂದು ಸಾಮೂಹಿಕ ಧ್ವಜ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಇಲಾಖೆಯ ನಿರ್ದೇಶಕರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು

ಆಗಸ್ಟ್ 13, ಸುಳ್ಯ ನಗರದಲ್ಲಿ ರಾಷ್ಟ್ರದ್ವಜ ಸಹಿತ ಮಾನವ ಸರಪಳಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರ ಪಂಚಾಯತ್ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳ ಹಾಗೂ ಶಾಲಾ ಕಾಲೇಜುಗಳ ಸಹಕಾರದೊಂದಿಗೆ ಆಗಸ್ಟ್ 13 ರಂದು ಪೂರ್ವಾಹ್ನ 9 ರಿಂದ 9:15 ರ ತನಕ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರಧ್ವಜ ಸಹಿತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲಾ ನಾಗರಿಕರು ಸಾರ್ವಜನಿಕರು ವಿದ್ಯಾರ್ಥಿಗಳು ಈ 15 ನಿಮಿಷಗಳ...

ಹರಿಹರ ಪಲ್ಲತ್ತಡ್ಕ :- ಮಳೆ ಹಾನಿ ಬಗ್ಗೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರ ಸಭೆ

ಮೊನ್ನೆ ಸುರಿದ ಭಾರಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದ್ದು, ಆ.11 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಲ್.ಎಚ್ ಮಂಜುನಾಥ್ ಅವರು ಸಭೆ ನಡೆಸಿ ಸೇತುವೆ ಹಾನಿ ಹಾಗೂ ಕೃಷಿ ಹಾನಿಗಳ ಬಗ್ಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ಜನಜಾಗೃತಿ...

ಗುತ್ತಿಗಾರು : ಮಾಸಾಶನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಸುಳ್ಯ ತಾಲೂಕು , ಗುತ್ತಿಗಾರು ಗ್ರಾಮದ ಬಳ್ಳಕ್ಕ ನಿವಾಸಿ ಕಂಚಾಲ್ತಿ ಎಂಬವರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ/ ಡಿ. ವೀರೆಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ನಿರ್ಗತಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟ ಪಡುತ್ತಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ...

ಅರಂತೋಡು: ಎನ್ಎಸ್ಎಸ್ ಘಟಕದ ಹರ್ ಘರ್ ತಿರಂಗ್ ಅಭಿಯಾನ ಕಾರ್ಯಕ್ರಮ

ಅರಂತೋಡು: ಎನ್ಎಸ್ಎಸ್ ಘಟಕದ ಹರ್ ಘರ್ ತಿರಂಗ್ ಅಭಿಯಾನ ಕಾರ್ಯಕ್ರಮ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜವನ್ನು ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ತ್ರಿವರ್ಣ ಧ್ವಜ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಿ, ಮಾತನಾಡಿ, ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ನಿಯಮಗಳನ್ನು ಅರಿತು , ಗೌರವದಿಂದ...
Loading posts...

All posts loaded

No more posts

error: Content is protected !!