- Saturday
- June 27th, 2026
ಮಡಪ್ಪಾಡಿ ಗ್ರಾಮದ ಶೀರಡ್ಕ ಶ್ರೀ ಉಳ್ಳಾಕುಲು ಮತ್ತು ಮಲೆಭೂತಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವವು ಫೆ.01ನೇ ಆದಿತ್ಯವಾರದಿಂದ ಫೆ.04ನೇ ಬುಧವಾರದವರೆಗೆ ನಡೆಯಲಿದ್ದು, ಫೆ.01ರಂದು ಬೆಳಿಗ್ಗೆ 7:00 ಗಂಟೆಗೆ ಗಣಹೋಮ, 8:00 ಗಂಟೆಗೆ ನಾಗತಂಬಿಲ, 9:00 ಗಂಟೆಗೆ ವನದುರ್ಗಾಪೂಜೆ, 9:30ಗೆ ಉಪಹಾರ, 10:00 ಗಂಟೆಗೆ ಚಾವಡಿಯಲ್ಲಿ ಪ್ರತಿಷ್ಠಾ ಮಹೋತ್ಸವ...
ಸುಳ್ಯದ ಎಲ್.ಡಿ ಬ್ಯಾಂಕ್‌ನ ವಾಣಿಜ್ಯ ಕಟ್ಟಡಕ್ಕೆ ತಪ್ಪು ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಅವರಿಗೆ ಮೆಸ್ಕಾಂ ದಂಡ ಪಾವತಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿ ಮೆಸ್ಕಾಂ ಇಂಜಿನಿಯರ್ ವರ್ತನೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಾಗೂ ಈ ಕುರಿತು ಸದಸ್ಯರಿಗೆ ಸ್ಪಷ್ಟ ಮಾಹಿತಿ ದೊರೆಯದೇ ಇದ್ದಾಗ ಮುಂದಿನ ಸಭೆಗೆ ದಾಖಲೆ ಸಹಿತ ವರದಿ ...
ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಬೆಂಕಿಯಿಂದ ರಕ್ಷಿಸುವ ಬಗ್ಗೆ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಒಂದು ದಿನದ ಜನಜಾಗೃತಿ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರವು ಈ ದಿನ ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ರವರು ವಹಿಸಿ...
ಮೌನವಾಗಿದ್ದೆ ನಾನು ಹಸಿರು ಚೆಲ್ಲುತ್ತಾ ಉಸಿರು ಪಸರಿಸುತ್ತಾ ಅಮೃತವಾಗಿ ಸಿರಿ ಸಮೃದ್ಧಿಯಾಗಿ ತಾಯ ಮಮತೆಯ ತೊಟ್ಟಿಲಾಗಿ ಹದವರಿತು ಕಾರ್ಯವೆಸಗುತಲಿದ್ದೆ ಕ್ಷಮೆಯಾಧರಿತ್ರಿಯಾಗಿ ಕಾಯುತಲಿದ್ದೆಬಡಿದೆಬ್ಬಿಸಿದೆ ನೀನು ವಿಕೃತಿಯ ಮೆರೆಯುತ್ತಾನಿನ್ನಾಸೆ ಆಮಿಷಗಳಿಗೆ ನನ್ನ ಬಲಿಕೊಟ್ಟೆ ನನ್ನೊಡಲ ನೀ ಬರಿದು ಮಾಡಿಬಿಟ್ಟೆ ನನ್ನುಸಿರಿನಲ್ಲೇ ನಿನ್ನುಸಿರು ಅದ ಮರೆತು ಬಗೆದೆ ನನ್ನ ಬಸಿರುನಿಗೂಢತೆಯ ಹೊತ್ತ ವಿಸ್ಮಯಗಳ ತಾಣದೊಳು ರಹಸ್ಯಗಳ ಒಡಲೊಳಿಟ್ಟು ಮೌನವಾಗಿದ್ದೆ ನಾನು...
ಜ.30ನೇ ಶುಕ್ರವಾರದಂದು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ 33 ಕೆ.ವಿ ಮಾರ್ಗ ಹಾಗೂ 33/11 ಕೆ.ವಿ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ ವಿದ್ಯುತ್ ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ಉಪ ಕೇಂದ್ರಗಳಿಂದ ಹೊರಡುವ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ ಸುಬ್ರಹ್ಮಣ್ಯ ಉಪ ಕೇಂದ್ರದಿಂದ ಹೊರಡುವ ಹರಿಹರ...
ಕೊಡಗು-ಸಂಪಾಜೆ ಗ್ರಾಮದ ಕೊಯನಾಡು ಶ್ರೀ ಗಣೇಶ ಯುವ ಬಳಗ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಶ್ರಮದಾನ ಕಾರ್ಯ ನಡೆಯಿತು.ಸ್ವಚ್ಛ ಎಂದರೆ ನಿರ್ಮಲವಾದದ್ದು, ಪರಿಶುದ್ಧವಾದದ್ದು ಎಂದರ್ಥ ಸ್ವಚ್ಛ ಭಾರತ ಎಂದರೆ ಭಾರತ ದೇಶದ ಕಲುಷಿತ ಸ್ಥಳಗಳನ್ನು ನಿರ್ಮಲಗೊಳಿಸುವದು. ಸ್ವಚ್ಛ ಭಾರತ ಅಭಿಯಾನವು ಭಾರತ ದೇಶದ ಒಂದು ಅತ್ಯುತ್ತಮ ನೈರ್ಮಲ್ಯ ಯೋಜನೆಯಾಗಿದೆ ಈ ಉದ್ದೇಶದಿಂದ ಗಣರಾಜ್ಯೋತ್ಸವದಂದು ಕೊಯನಾಡಿನಿಂದ - ಚಿಟ್ಟೆಕಾನ...
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ, ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರ ಮಾತಾಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2026 ನೇ ಸಾಲಿನ “ವನಜ-ಸುಜನಾ ರಂಗಮನೆ ಪ್ರಶಸ್ತಿ”ಗೆ ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗಾರರಾದ ಮಹೇಶ್ ಮಣಿಯಾಣಿಯವರನ್ನು ಆಯ್ಕೆ ಮಾಡಲಾಗಿದೆ.ಸುಳ್ಯ ತಾಲೂಕಿನ ದೊಡ್ಡತೋಟದವರಾದ ಮಹೇಶ ಮಣಿಯಾಣಿ ಇವರು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ...
ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ತಳೂರು --ಮೆತ್ತಡ್ಕ ರಸ್ತೆಯ ತಳೂರು ಅಂಗನವಾಡಿ ಬಳಿಯ ಕಾಂಕ್ರೀಟ್ ರಸ್ತೆಯನ್ನು ಹಿರಿಯರಾದ ಶ್ರೀಮತಿ ರಾಮಕ್ಕ ನಾರಾಯಣ ಮಡಿವಾಳ ದೀಪ ಬೆಳಗಿಸಿ ಉದ್ಘಾಟಿಸಿದರು. ದಯಾನಂದ ಮೆತ್ತಡ್ಕಮತ್ತು ರಮೇಶ್ ತಳೂರು ಜಂಟಿಯಾಗಿ ರಿಬ್ಬನ್ ಕತ್ತರಿಸಿದರು. ಗುತ್ತಿಗಾರು ಸೊಸೈಟಿ ಮಾಜಿ ನಿರ್ದೇಶಕ ಆನಂದ ನಾಯ್ಕ್ ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ...
ಪುತ್ತೂರು : ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ಜ. 24 ರಂದು ಹಲವು ವಿಶೇಷಗಳಲ್ಲಿ ಜಾಗತಿಕವಾಗಿ ಜೇನು ಗಡ್ಡದಾರಿ ಜೇನು ಕೃಷಿ ವಿಶಿಷ್ಟ ಬರಹ ಸಂಶೋಧನೆ ಬೋರ್ಡ್ ದ್ರಾವಣ ಟೆಕ್ನಿಕ್ ರಾಷ್ಟ್ರೀಯ ಪ್ರಶಸ್ತಿ ಹಲವು ಪ್ರಶಸ್ತಿ ಸನ್ಮಾನ...
ಸುಬ್ರಹ್ಮಣ್ಯ ಜನವರಿ 27 : ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜ.27ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸುಬ್ರಹ್ಮಣ್ಯ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿದ್ವತ್ ಸಮ್ಮೇಳನ ವಿಶ್ವ ಸಂಭ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಈ ಸಂದರ್ಭದಲ್ಲಿ ಶ್ರೀ...
Loading posts...
All posts loaded
No more posts
