ಸುಳ್ಯ: ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಮಿತಿ ರಚನೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪನೆಯಾಗಿ 25 ವರ್ಷ ಪೂರ್ತಿಯಾಗಿರುವ ಹಿನ್ನಲೆಯಲ್ಲಿ ಬೆಳ್ಳಿ ಹಬ್ಬ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳ್ಳಿ ಹಬ್ಬ ವರ್ಷದಲ್ಲಿ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಾಗು ಮುಂದಿನ ಏಪ್ರಿಲ್ ತಿಂಗಳಲ್ಲಿ 3 ದಿನಗಳ ಬೆಳ್ಳಿ...

ಕನಕಮಜಲು: ಗ್ರಾಮ ಸಭೆ

ಕನಕಮಜಲು: ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ.6ರಂದು ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ಪ್ರಥಮ ಹಂತದ ಎಂ. ಜಿ. ಎನ್.ಆರ್.ಜಿ.ಎ. ಸಾಮಾಜಿಕ ಪರಿಶೋಧನೆ ವರದಿ ಮಂಡನೆ ಹಾಗೂ 15ನೇ ಹಣಕಾಸು ಯೋಜನೆಯಡಿ 2021-22ನೇ ಸಾಲಿನ ಸಾಮಾಜಿಕ ಪರಿಶೋಧನೆ ವರದಿ ಮಂಡನೆ ಬಗ್ಗೆ ವಿಶೇಷ ಗ್ರಾಮ ಸಭೆ ನಡೆಯಿತು.ಸಭೆಯಲ್ಲಿ ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ...
Ad Widget

ಕೋಟೆ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಕೊಡುಗೆ

ಉಬರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಟು ಲೀವ್ ಕೋಟೆ ಫೌಂಡೇಶನ್ ವತಿಯಿಂದ ಕೃಷ್ಣಕುಮಾರ್ ಕಲ್ಚಾರ್ ಮತ್ತು ಸಾಯಿ ರಂಜನ್ ಕಲ್ಚಾರ್ ರವರ ಸಹಕಾರದಿಂದ ಸ್ಕೂಲ್ ಬ್ಯಾಗನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪುರುಷೋತ್ತಮ ಪಾಪುನಡ್ಕ, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಕೋಟೆ ಫೌಂಡೇಶನ್ ನ ಪ್ರತಿನಿಧಿ ಪ್ರದೀಪ್ ಹುಳಿಯಡ್ಕ, ಉಬರಡ್ಕ ಗ್ರಾಮ ಪಂಚಾಯತ್...

ಐವರ್ನಾಡು : ಬೆಂಕಿ ದುರಂತಕ್ಕೆ ಮನೆಯೊಳಗಿದ್ದ ವ್ಯಕ್ತಿ ಬಲಿ

ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ವ್ಯಕ್ತಿ ಜೀವಂತ ದಹನವಾಗಿದ ಘಟನೆಯೊಂದು ಇಂದು ಬೆಳಿಗ್ಗೆ ಐವರ್ನಾಡಿನ ಪರ್ಲಿಕಜೆ ಎಂಬಲ್ಲಿ ಸಂಭವಿಸಿದೆ. ಸುಧಾಕರ ಎಂಬವರು ಅನಾರೋಗ್ಯದಿಂದಿದ್ದು ಮನೆಯಲ್ಲಿ ಮಲಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಮನೆಯ ಒಂದು ಭಾಗ ಸುಟ್ಟು ಹೋಗಿದೆ. ಮನೆಯೊಳಗಿದ್ದ ಸುಧಾಕರ ಅವರಿಗೆ ಹೊರಹೋಗಲಾಗದೇ ಬೆಂಕಿಗೆ ಆಹುತಿಯಾಗಿದ್ದಾರೆನ್ನಲಾಗಿದೆ. ಈ...

ಪೆರ್ನಾಜೆ: ಮನತಣಿಸಿದ “ಸ್ವರ ಸಿಂಚನ ” @22 ಸಂಗೀತೋತ್ಸವ, ಪ್ರಶಸ್ತಿ ,ಸನ್ಮಾನ

ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಹಾಗೂ ಪಡಿಬಾಗಿಲು ವಿದ್ಯಾರ್ಥಿಗಳಿಂದ ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸಿಂಹ ಮಾಸದ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಂಗೀತೋತ್ಸವ ಮತ್ತು ಪುರಸ್ಕಾರ, ಸನ್ಮಾನ ಪ್ರಶಸ್ತಿ ಪ್ರಧಾನ ಸಮಾರಂಭವು ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀಯುತ ವಿದ್ವಾನ್ ಡಾಕ್ಟರ್ ವಿ.ಆರ್ ನಾರಾಯಣ್ ಪ್ರಕಾಶ್ ಕ್ಯಾಲಿಕೆಟ್ ರವರು ಸಮಾರಂಭವನ್ನು...

ಸೆ. 13 ರಂದು ಜಯನಗರ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಬ್ಬಡಿ ಪಂದ್ಯಾಟ

ಸೆ.13 ರಂದು ಜಯನಗರ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಬ್ಬಡಿ ಪಂದ್ಯಾಟ ನಡೆಯಲಿದ್ದು, 14 ವರ್ಷ ವಯೋಮಿತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಆಯ್ಕೆ ಪಂದ್ಯಾಟ ಕೂಡ ಸೆ.13 ರಂದು ನಡೆಯಲಿದೆ. ಬೆಳಿಗ್ಗೆ 9:30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಜೆ 4:30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ....

ನಡುಗಲ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಶಾಲಾ ಸಂಸತ್ತು, ವಿದ್ಯಾರ್ಥಿಗಳ ಶಿಕ್ಷಕರ ಸಹಭಾಗಿತ್ವದೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸ್ವಾಗತ ನಡೆಯಿತು. ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಪಾರೆಪಾಡಿ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರನ್ನು ಹೂಗುಚ್ಛ ಹಾಗೂ ಕಿರು ಕಾಣಿಕೆಯನ್ನು ನೀಡಿ ಸನ್ಮಾನಿಸಿದರು....

ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಬಾಲಕರ ತಂಡ ದ್ವಿತೀಯ ಸ್ಥಾನ

ಪದವಿ ಪೂರ್ವ ಶಿಕ್ಷಣ ಇಲಾಖೆ.ದ.ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ,ಸುಳ್ಯ ತಾಲೂಕು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 06/09/2022 ರಂದು ನಡೆಯುವ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಖೋ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ,ತಂಡದಲ್ಲಿ ಲೊಕೇಶ್.ಎನ್, ಸಿಂಚನ್.ಬಿ.ಎಸ್,ರತನ್.ಪಿ.ಎಸ್, ವಿನೋದ್.ಸಿ,ಸುಪ್ರಿತ್,ಗೋಪಿ,...

ಮಳೆಗೆ ಕೊಚ್ಚಿ ಹೋದ ಪೈಲಾರು ಜಬಳೆ ರಸ್ತೆಯ ತಾತ್ಕಾಲಿಕ ಸೇತುವೆತಾತ್ಕಾಲಿಕ ಪಾಲ ನಿರ್ಮಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡ

ಜಬಳೆ ಪೈಲಾರು ರಸ್ತೆಯ ಕೋಡ್ತುಗುಳಿ ಎಂಬಲ್ಲಿ ಸೇತುವೆ ಕೆಲಸ ಅರ್ಧದಲ್ಲಿದ್ದು, ಜನರ ಓಡಾಟಕ್ಕೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಅಥವಾ ಇನ್ನಿತರ ಸಮಸ್ಯೆ ಉಂಟಾದಲ್ಲಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಸೇತುವೆಯು ಸೆ.05 ರಂದು ಸುರಿದ ಮಳೆಗೆ ಕೊಚ್ಚಿ ಹೋಗಿದ್ದು, ಸೆ.06 ರಂದು ದೊಡ್ಡತೋಟ ವಲಯದ ಶೌರ್ಯ ವಿಪತ್ತು ನಿರ್ವಹಣಾ...

ಕಲ್ಲುಗುಂಡಿ : ಅಟೋ ರಿಕ್ಷಾ ಚಾಲಕರ ಸಂಘದ ಪದಗ್ರಹಣ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ಬಿ.ಯಂ.ಯಸ್ ಸಂಯೋಜಿತ) ಕಲ್ಲುಗುಂಡಿ ಘಟಕ ಇದರ ವಾರ್ಷಿಕ ಮಹಾಸಭೆಯು ಇಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಬಿ.ಯಂ.ಯಸ್ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಹಾಗೂ ಕಾರ್ಯದರ್ಶಿಯಾದ ಚಂದ್ರಶೇಖರ ಮರ್ಕಂಜ ಹಾಗೂ ಕಲ್ಲುಗುಂಡಿ ಬಿ.ಯಂ.ಯಸ್ ಘಟಕದ ಅಧ್ಯಕ್ಷರಾದ ವಸಂತ ಊರುಬೈಲ್ ಇವರ ನೇತೃತ್ವದಲ್ಲಿ ಕಲ್ಲುಗುಂಡಿ ಘಟಕದ...
Loading posts...

All posts loaded

No more posts

error: Content is protected !!