ಪೆರಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಪೆರಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.20ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಬಿ.ಹೊನ್ನಪ್ಪರವರು ವಹಿಸಿದ್ದರು. 2021_2022ರ ವರದಿಯನ್ನು ನಿರ್ದೇಶಕ ಚಂದ್ರಶೇಖರ.ಪಿ.ಹೆಚ್. ವಾಚಿಸಿದರು.ಕಳೆದ ವಾರ್ಷಿಕ ಸಭೆಯ ವರದಿಯನ್ನು ನಿರ್ದೇಶಕ ವಿಷ್ಣುಪ್ರಸಾದ್ ರವರು ಓದಿದರು. ಕಾರ್ಯನಿರ್ವಾಹಣಾಧಿಕಾರಿ ಇಂದಿರಾ.ಕೆ.ಎಸ್. ಸಭೆಯ ನೋಟಿಸ್ ಓದಿದರು. ಈ ಸಂದರ್ಭದಲ್ಲಿ ಹಾಲಿನ ಡೈರಿಗೆ ಅತಿ ಹೆಚ್ಚು ಹಾಲು...

ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ವಿಮಾ ಮೊತ್ತ ವಿತರಣೆ

ಒಡಿಯೂರು ಶ್ರೀ ವಿವಿದೋದೇಶ ಸೌಹಾರ್ದ ಸಹಕಾರಿ(ನಿ) ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ವತಿಯಿಂದ ಮೃತರ ಕುಟುಂಬಕ್ಕೆ ವಿಮಾ ಮೊತ್ತ ವಿತರಣೆ ನಡೆಯಿತು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ಸಂಘದ ಸದಸ್ಯರಾದ ಶ್ರೀಧರ ಕುಡೆಕಲ್ಲು ಇವರ ಕುಟುಂಬಕ್ಕೆ ಜೀವ ವಿಮೆ ಮೊತ್ತ 50000 ರೂ...
Ad Widget

ಅರಂತೋಡು : ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿ ಉದ್ಘಾಟನೆ

ಅರಂತೋಡು ದುರ್ಗಾ ಮಾತಾ ಮಹಿಳಾ ಮಂಡಲದ ವತಿಯಿಂದ ಸಂಗೀತ ತರಬೇತಿ ಉದ್ಘಾಟನೆ ಸೆ.16 ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ದುರ್ಗಾಮಾತಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ಸಾಹಿತ್ಯ ಸಂಗೀತ ಕಲಾ ಕೇಂದ್ರದ...

ಸುಳ್ಯ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಸಹಜ ಸಮಾಧಿ ಧ್ಯಾನ ಶಿಬಿರ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸುಳ್ಯ ಶಾಖಾ ವತಿಯಿಂದ ಸೆ.16 ರಿಂದ ಸೆ.18 ತನಕ ಸಹಜ ಸಮಾಧಿ ಧ್ಯಾನ ಶಿಬಿರ ಕಾರ್ಯಕ್ರಮ ಶಿವಕೃಪಾ ಕಲಾಮಂದಿರ ದಲ್ಲಿ ನಡೆಯಿತು. ಶಿಬಿರದಲ್ಲಿ ಒತ್ತಡ ರಹಿತ ಶಾಂತವಾದ ಮನಸ್ಸು, ಸಂತೋಷ, ಉತ್ಸಾಹ, ಕ್ರಿಯಾಶೀಲ ಆರೋಗ್ಯಕರ ವಾದ ಬದುಕು ನಡೆಸಲು ಧ್ಯಾನ ಹೇಗೆ ಅವಶ್ಯ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ತರಬೇತುದಾರರಾದ...

ರಬ್ಬರ್ ಮಂಡಳಿಯ ಸದಸ್ಯರಾಗಿ ಮುಳಿಯ ಕೇಶವ ಭಟ್ ನಾಮನಿರ್ದೇಶನ

ರಬ್ಬರು ಮಂಡಳಿಯ ಸದಸ್ಯರಾಗಿ ಸುಳ್ಯದ ಯುವ ಮುಖಂಡರಾದ ಮುಳಿಯ ಕೇಶವ ಭಟ್ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಕೇರಳದ ಕೊಟ್ಟಾಯಂ ನಲ್ಲಿ ಪ್ರಧಾನ ಕಛೇರಿ ಹೊಂದಿದೆ. ಇವರು ಸುಳ್ಯ ತಾ.ಪಂ.ಮಾಜಿ ಅಧ್ಯಕ್ಷರಾಗಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದಲ್ಲಿ 10 ವರ್ಷ ನಿರ್ದೇಶಕರಾಗಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ, ಬಿಜೆಪಿ...

ಡಾ. ಪ್ರಭಾಕರ ಶಿಶಿಲರ ‘ಅಲಿಮಾಳ ಆಡು’ ಕಥಾ ಸಂಕಲನ ಬಿಡುಗಡೆ

ಡಾ. ಪ್ರಭಾಕರ ಶಿಶಿಲ ಅವರ ಏಳನೆಯ ಕಥಾ ಸಂಕಲನವಾದ "ಅಲಿಮಾಳ ಆಡು" ಕಥಾ ಸಂಕಲನವನ್ನು ನಿಂತಿಕಲ್ ಕೆ.ಎಸ್.ಗೌಡ ವಿದ್ಯಾಸಂಸ್ಥೆಯಲ್ಲಿ ಸೆ. 14 ರಂದು ವಿದ್ಯಾಸಂಸ್ಥೆಯ ಸಂಚಾಲಕ ಕುಮಾರಸ್ವಾಮಿ ಅವರಿಂದ ಬಿಡುಗಡೆಗೊಳಿಸಲಾಯಿತು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ಇದು ಧರ್ಮ ಸಮನ್ವಯದ ಆಶಯವುಳ್ಳ ಅಪೂರ್ವ ಕಥಾ ಸಂಕಲನ. ಕೃತಿಕಾರ ಶಿಶಿಲರು ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ...

ಸೇವಾಜೆ : ಸ.ಕಿ.ಪ್ರಾ.ಶಾಲೆಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ಸೇವಾಜೆ ಸ.ಕಿ.ಪ್ರಾ.ಶಾಲೆಯಲ್ಲಿ ಸೆ.19ರಂದು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದಂತಹ ತರಕಾರಿ ಹಣ್ಣುಗಳನ್ನು ಇರಿಸಿ ಅವುಗಳಲ್ಲಿ ಕಾರ್ಬೋಹೈಡ್ರೆಟ್, ವಿಟಮಿನ್, ಪ್ರೋಟಿನ್, ಲಿಪಿಡ್, ಖನಿಜ, ನಾರು ಮತ್ತು ನೀರಿನ ಅಂಶವನ್ನು ಹೊಂದಿರುವ ಪದಾರ್ಥಗಳನ್ನಾಗಿ ವಿಂಗಡಿಸಿ ಮಕ್ಕಳಿಗೆ ಪೌಷ್ಟಿಕ ಹಾಗೂ ಸಮತೋಲನ ಆಹಾರಗಳ ಬಗ್ಗೆ ವಿವರಿಸಲಾಯಿತು. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ...

ಗುತ್ತಿಗಾರಿನಲ್ಲಿ ಪ್ರಸಾದ್ ಬಾರ್ & ರೆಸ್ಟೋರೆಂಟ್ ಶುಭಾರಂಭ

ಗುತ್ತಿಗಾರಿನ ಮುಖ್ಯ ರಸ್ತೆಯಲ್ಲಿರುವ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ದೇವಿಪ್ರಸಾದ್ ಚಿಕ್ಮುಳಿ ಮಾಲಕತ್ವದ ಪ್ರಸಾದ್ ಬಾರ್ & ರೆಸ್ಟೋರೆಂಟ್ ಸೆ.20 ರಂದು ಶುಭಾರಂಭಗೊಂಡಿತು.

ಅಡ್ಕಾರು: ಶ್ರೀ ಶಾರದಾಂಬ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಅ.5ರಂದು ನವರಾತ್ರಿ ಹಬ್ಬದ ಪ್ರಯುಕ್ತ ಜರುಗುವ ಶ್ರೀ ಶಾರದಾಂಬ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಸೆ.20ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ದೇವಾಲಯದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು,...

ಚೊಕ್ಕಾಡಿ: ಧರ್ಮಸ್ಥಳ ಯೋಜನೆಯ ದೊಡ್ಡತೋಟ ವಲಯದ ಒಕ್ಕೂಟಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ದೊಡ್ಡತೋಟ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆ.19 ರಂದು ಚೊಕ್ಕಾಡಿ ರಾಮ ದೇವಾಲಯದ ದೇಸಿ ಭವನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚೊಕ್ಕಾಡಿ ರಾಮ ದೇವಾಲಯದ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಪಡ್ನೂರು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ...
Loading posts...

All posts loaded

No more posts

error: Content is protected !!