ಶ್ರೀ.ಕ್ಷೇ.ಧ.ಗ್ರಾ ಯೋಜನೆ ದೊಡ್ಡತೋಟ ವಲಯದ ಅಧ್ಯಕ್ಷರಾಗಿ ಕಳಂಜ ಒಕ್ಕೂಟದ ಅಧ್ಯಕ್ಷ ನಾರಾಯಣ ಆಯ್ಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕಿನ ದೊಡ್ಡತೋಟ ವಲಯದ ಅಧ್ಯಕ್ಷರಾಗಿ ಕಳಂಜ ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಬರಡ್ಕ ಒಕ್ಕೂಟದ ಜನಾರ್ಧನ, ಕಾರ್ಯದರ್ಶಿಯಾಗಿ ದೊಡ್ಡತೋಟ ವಲಯ ಮೇಲ್ವಿಚಾರಕರಾದ ಸೀತಾರಾಮ ಕಾನಾವು, ಜೊತೆ ಕಾರ್ಯದರ್ಶಿಯಾಗಿ ಸೇವಾಪ್ರತಿನಿಧಿ ದಿವ್ಯ ಪೈಲಾರು, ಕೋಶಾಧಿಕಾರಿಯಾಗಿ ಚೊಕ್ಕಾಡಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಪು...

ಹರಿಹರ ಪಲ್ಲತ್ತಡ್ಕ :- ಪ್ರೌಢಶಾಲೆಯಲ್ಲಿ ಸ್ವಚ್ಛತಾ ಹೀ ಸೇವಾ ಪ್ರತಿಜ್ಞಾವಿಧಿ ಬೋಧನೆ

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವತಿಯಿಂದ ಸೆ.22 ರಂದು ಹರಿಹರ ಪಲ್ಲತ್ತಡ್ಕ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಹೀ ಸೇವಾ ಪ್ರತಿಜ್ಞಾವಿಧಿ ಬೋಧನೆ ನಡೆಯಿತು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಮುಖ್ಯೋಪಾಧ್ಯಾಯರಾದ ರಾಮಚಂದ್ರ ಕಜ್ಜೋಡಿ, ಸಹಶಿಕ್ಷಕರುಗಳು, ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ...
Ad Widget

ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷರಾಗಿ ಗೋಪಾಲ ಪೆರಾಜೆ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷರಾಗಿ ಶ್ರೀ ಗೋಪಾಲ ಪೆರಾಜೆ ಆಯ್ಕೆ ಆಗಿದ್ದಾರೆ. ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀ ನವೀನ್ ಅಂಬೇಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶನದಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ...

ಅಚ್ರಪ್ಪಾಡಿ ಶಾಲಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಮತ್ತು ಗ್ರಂಥಾಲಯದ ಮಾಹಿತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ, ಎಲಿಮಲೆ ಉಪಕೇಂದ್ರ ವತಿಯಿಂದ ಸೆ.22 ರಂದು ಅಚ್ರಪ್ಪಾಡಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ಯೋಗ ತರಬೇತುದಾರರು ಶ್ರೀಯುತ ಕೃಷ್ಣಪ್ರಸನ್ನ ನೀಡಿದರು. ಹಾಗೂ ದೇವಚಳ್ಳ ಗ್ರಂಥಾಲಯಕ್ಕೆ ನೂತನವಾಗಿ ನೇಮಕಗೊಂಡಿರುವ ಗ್ರಂಥಪಾಲಕಿ ಶ್ರೀಮತಿ ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿ ಅವರು ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಲಭ್ಯವಿರುವ...

ಕೊಲ್ಲಮೊಗ್ರು: ಪಕ್ಕಾಸು ಬಿದ್ದು ಗಾಯಗೊಂಡ ಮೋಹನ ಪೈಕರವರಿಗೆ ಕೆಪಿಸಿಸಿ ಸದಸ್ಯ ನಂದಕುಮಾರ್ ಧನಸಹಾಯ

ಕೆಲಸ ಮಾಡುತ್ತಿರುವಾಗ ಪಕ್ಕಾಸು ಬಿದ್ದು ಕಾಲು ಜಖಂಗೊಂಡು ಅಶ್ವಸ್ಥಗೊಂಡಿರುವ ಕೊಲ್ಲಮೊಗ್ರ ಗ್ರಾಮದ ಮೋಹನ ಪೈಕರವರ ಮನೆಗೆ ಇಂದು ಕಮಲಾಕ್ಷ ಪೆರ್ನಾಜೆಯವರ ನೇತೃತ್ವದಲ್ಲಿ ಕೆಪಿಸಿಸಿಯಾದ ಹೆಚ್.ಎಂ.ನಂದಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧನಸಹಾಯ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ವಿಜೇಶ್ ಹಿರಿಯಡ್ಕ ಹಾಗೂ...

ಪೆರಾಜೆ ಸೊಸೈಟಿಗೆ ಸ್ಕ್ಯಾಡ್ಸ್ ಸಂಸ್ಥೆಯಿಂದ ಪ್ರಶಸ್ತಿ

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದಲ್ಲಿ 2021-22ರ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಕೊಡಗು ಜಿಲ್ಲೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ (ಸ್ಕ್ಯಾಡ್ಸ್) ನಿಂದ ಪ್ರಥಮ ಸ್ಥಾನ ಲಭಿಸಿದೆ. ಸಂಸ್ಥೆಯ 2021-22 ನೇ ಸಾಲಿನ ಮಹಾಸಭೆಯಲ್ಲಿ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಕೆ ರವೀಂದ್ರ ಕಂಬಳಿ ಇವರು ಪೆರಾಜೆ...

ಕೊಲ್ಲಮೊಗ್ರ : ಭೀಕರ ಮಳೆಗೆ ಕೊಚ್ಚಿಹೋಗಿದ್ದ ಕಡಂಬಳ ಸೇತುವೆ ಶೀಘ್ರ ನಿರ್ಮಿಸಲು ಸಚಿವರ ಸೂಚನೆ

ಭೀಕರ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೊಗಿದ್ದ ಕಡಂಬಳ ಸಂಪರ್ಕ ಸೇತುವೆಯನ್ನು ಸಚಿವರಾದ ಎಸ್. ಅಂಗಾರ ಅವರ ಶಿಪರಾಸ್ಸಿನ ಮೇರೆಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನಿರ್ದೇಶನದಂತೆ ಇಂದು ದುರಸ್ತಿ ಕಾರ್ಯ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪಲಾನುಭವಿಗಳು ಉಪಸ್ಥಿತರಿದ್ದರು. ಪ್ರವಾಹದಿಂದ ಕೊಚ್ಚಿ ಹೊಗಿದ್ದ ಸುಮಾರು 5 ಸೇತುವೆಗಳ ಪೈಕಿ...

ಕೇನ್ಯ : ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ – 130 ಜನ ರಕ್ತದಾನ

ನರೇಂದ್ರ ಮೋದಿ ಅಭಿಮಾನಿ ಬಳಗ ಕೇನ್ಯ ಮತ್ತು ಸೇವಾ ಭಾರತಿ ಪಂಜ ವಲಯದ ವತಿಯಿಂದ ರೆಡ್ ಕ್ರಾಸ್ ಸೊಸೈಟಿ ಮಂಗಳೂರು. ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ನರೇಂದ್ರ ಮೋದಿಜಿಯವರ 72ನೇ ಜನ್ಮದಿನದ ಪ್ರಯುಕ್ತ ಸೆ.18 ರಂದು ಕೇನ್ಯ ಶಾಲಾ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ...

ಕೊಲ್ಲಮೊಗ್ರು : ಕೆಪಿಸಿಸಿ ಸದಸ್ಯ ಎಚ್ ಎಂ ನಂದಕುಮಾರ್ ಭೇಟಿ – ಕೊಚ್ಚಿ ಹೋಗಿರುವ ಕಡಂಬಳ ಸೇತುವೆ ನಿರ್ಮಾಣಕ್ಕೆ ಸಾಥ್

ಸುಳ್ಯ ತಾಲೂಕು ಕೊಲ್ಲಮೊಗರು ಗ್ರಾಮದ ಕಡಂಬಳ ಎಂಬಲ್ಲಿ ತೀವ್ರ ಮಳೆಗೆ ಕೊಚ್ಚಿ ಹೋಗಿರುವ ಸೇತುವೆಯನ್ನು ಕೆಪಿಸಿಸಿ ಸದಸ್ಯ ನಂದಕುಮಾರ್ ಹೆಚ್ಎಂ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಸಂಪರ್ಕ ಕಡಿತಗೊಂಡಿರುವ ಬಗ್ಗೆ ನಂದಕುಮಾರ್ ಅವರ ಗಮನ ಸೆಳೆದಾಗ ತಕ್ಷಣ ತಮ್ಮ ವೈಯಕ್ತಿಕ ದೇಣಿಗೆಯಿಂದ ಸೇತುವೆಯನ್ನು ಪುನರ್ ನಿರ್ಮಾಣ...

ಕುಕ್ಕೆ: ಸರ್ಪಸಂಸ್ಕಾರ ಸೇವೆಯ ಸೇವಾ ದರ ಪರಿಷ್ಕರಣೆ

ನಾಗಾರಾಧನೆ ಯ ಪುಣ್ಯ ತಾಣ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಧೀನದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರಕ್ಕೆ ಇನ್ನು ಮುಂದೆ 4200 ರೂ ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಶ್ರೀ ದೇವಳದಲ್ಲಿ ಸರ್ಪದೋಷ...
Loading posts...

All posts loaded

No more posts

error: Content is protected !!