ಸುಳ್ಯ : ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಪ್ರಭಾಕರ ನಾಯಕ್ – ಉಪಾಧ್ಯಕ್ಷರಾಗಿ ಸೋಮನಾಥ ಪೂಜಾರಿ ಅವಿರೋಧ ಆಯ್ಕೆ

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರಭಾಕರ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಸೋಮನಾಥ ಪೂಜಾರಿ, ಕೋಶಾಧಿಕಾರಿಯಾಗಿ ಶ್ರೀಮತಿ ಸುವರ್ಣಿನಿ ಎನ್.ಎಸ್ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಚುನಾವಣಾಧಿಕಾರಿಯಾಗಿ ಸಿ.ಡಿ.ಒ ಶಿವಲಿಂಗಯ್ಯ ರವರು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ವಿಶ್ವನಾಥ ಬಿಳಿಮಲೆ,...

ಎರುಕಡಪು ಕಿಂಡಿಅಣೆಕಟ್ಟು ನಿರ್ಮಾಣಕ್ಕಿರುವ ತೊಡಕು ನಿವಾರಣೆಗೆ ಮಾಡಲು ಸೂಚನೆ ನೀಡಿದ ಸಚಿವ ಅಂಗಾರ

ತೊಡಿಕಾನ ಗ್ರಾಮದ ಕಾಡುಪಂಜ - ಊರುಪಂಜದ ಎರುಕಡಪುವಿನಲ್ಲಿ ಪಶ್ಚಿಮವಾಹಿನಿ ಜಲಸಮೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆಗೆ ಅರಣ್ಯ ಇಲಾಖೆಯ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಸಚಿವರಾದ ಎಸ್. ಅಂಗಾರರವರು ಅರಣ್ಯಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕೈಗೊಳ್ಳಲು ಇರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಸುಳ್ಯ ಆರ್.ಎಫ್.ಓ. ಗಿರೀಶ್, ಸಣ್ಣ ನೀರಾವರಿ ಇಲಾಖೆಯ...
Ad Widget

ವಳಲಂಬೆ : ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯ

ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಅಭಿಯಾನದ ಅಂಗವಾಗಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವಳಲಂಬೆ ಒಕ್ಕೂಟದ ವತಿಯಿಂದ ಶ್ರಮದಾನ ನಡೆಯಿತು.

ಮಡಪ್ಪಾಡಿ : ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ

ಮಡಪ್ಪಾಡಿ ಗ್ರಾಮ ಪಂಚಾಯಿತಿನಲ್ಲಿ ಜ. 07 ರಂದು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು ನಡೆಯಿತು. ಗ್ರಾಮದ ಶಾಲೆಯ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ, ಅಧಿಕಾರಿಯವರು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಮೇಲ್ವಿಚಾರಕರು, ಎಲ್ಲಾ ಶಾಲೆಯ...

ತೊಡಿಕಾನ : ವಾರೀಸುದಾರರಿಲ್ಲದೇ ರಸ್ತೆಯಲ್ಲಿ ತಿರುಗಾಡುವ ದನಗಳನ್ನು ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಲು ಗ್ರಾ.ಪಂ.ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಿಕಾನ ಗ್ರಾಮದ ವ್ಯಾಪ್ತಿಯಲ್ಲಿ ವಾರೀಸುದಾರರಿಲ್ಲದೆ ತಿರುಗಾಡುವ ಜಾನುವಾರುಗಳಿಂದಾಗಿ ರಸ್ತೆ ಬದಿ ನಡೆದುಕೊಂಡು ಜನರಿಗೆ, ವಾಹನ ಸವಾರರಿಗೆ, ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು ಮಕ್ಕಳು, ಮಹಿಳೆಯರು ಭಯದಿಂದಲೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಗ್ರಾಮಸಭೆ ಹಾಗೂ ಮಕ್ಕಳ ಗ್ರಾಮಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆದು ವಾರಿಸುದಾರರಿಲ್ಲದೇ ರಸ್ತೆಯಲ್ಲಿ ತಿರುಗಾಡುವ ದನಗಳನ್ನು ಗೋಶಾಲೆಗೆ ಹಿಡಿದು...

ಸುಳ್ಯ: ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತು ಕಾರ್ಯಾಗಾರ – ಸಚಿವ ಅಂಗಾರ ಉದ್ಘಾಟನೆ

ಮೀನುಗಾರಿಕೆ ಇಲಾಖೆ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಫ್ರೀಡಂ ಆ್ಯಪ್ ಬೆಂಗಳೂರು ಇವರ ಸಹಯೋಗದೊಂದಿಗೆ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತು ಮಾಹಿತಿ ಕಾರ್ಯಾಗಾರ ಇಂದು ನಡೆಯಿತು.‌ ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಕಾರ್ಯಾಗಾರ ಉದ್ಘಾಟಿಸಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ...

ಇಂದಿನಿಂದ ರಂಗಮನೆಯಲ್ಲಿ ನಾಟಕ ಪ್ರದರ್ಶನ – ಜ.13 ರಿಂದ 15 ರವರೆಗೆ ಯಕ್ಷ ರಂಗಾಯಣ ಮತ್ತು ನೀನಾಸಂ ನಾಟಕಗಳ ಪ್ರದರ್ಶನ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ) ಸುಳ್ಯ ಇದರ ಆಶ್ರಯದಲ್ಲಿ ಜ. 13,14,15 ರಂದು ಪ್ರತಿದಿನ ಸಂಜೆ 6.30ಕ್ಕೆ ಯಕ್ಷ ರಂಗಾಯಣ ಮತ್ತು ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ.ಜ. 13 ರಂದು ಯಕ್ಷ ರಂಗಾಯಣ ಕಾರ್ಕಳ ಇಲ್ಲಿನ ಸಂಚಾರಿ ರಂಗ ತಂಡ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ವಿರಚಿತ, ಜೀವನ್ ರಾಂ ಸುಳ್ಯ ನಿರ್ದೇಶನದ ಪರಶುರಾಮ...

ಮೂರುಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಳಿಲ ಒಕ್ಕೂಟದಿಂದ ಶ್ರಮದಾನ

ಬಾಳಿಲ ಗ್ರಾಮದ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕದಲ್ಲಿ ಜ.26ರಿಂದ 'ಅಯ್ಯನಕಟ್ಟೆ ಜಾತ್ರೆ'ಯು ಆರಂಭಗೊಳ್ಳಲಿದ್ದು, ಇದರ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಳಿಲ ಒಕ್ಕೂಟದ ಸದಸ್ಯರಿಂದ ಜ.12ರಂದು ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ದೇವರಕೊಲ್ಲಿ : ಸ್ಕಾರ್ಪಿಯೋ ವಾಹನಕ್ಕೆ ಡಿಕ್ಕಿ ಹೊಡೆದ ವ್ಯಾನ್ – ಹಲವರಿಗೆ ಗಂಭೀರ ಗಾಯ

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಮಂಗಳೂರಿನವರು ಪ್ರಯಾಣಿಸುತ್ತಿದ್ದ ವ್ಯಾನ್ ದೇವರಕೊಲ್ಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ಸ್ಕಾರ್ಪಿಯೋಕ್ಕೆ ಗುದ್ದಿದ ಘಟನೆ ಇಂದು ವರದಿಯಾಗಿದೆ. ಎಮ್ಮೆಮಾಡಿಗೆ ಹೋಗಿ ಮರಳಿ ಮಂಗಳೂರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸಾರ್ವಜನಿಕರ ಸಹಾಯದಿಂದ ಹೊರ ತೆಗೆದು ಸುಳ್ಯದ ಆಸ್ಪತ್ರೆ ಗೆ ಕರೆತರಲಾಗಿದೆ. ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ...

ಕೆ.ವಿ.ಜಿ. ಅಮರಜ್ಯೋತಿ ಪಿ.ಯು.ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ರಾಷ್ಟ್ರೀಯ ಯುವ ದಿನದ ಆಚರಣೆ ಜ.12 ರಂದು ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಆದರ್ಶಗಳ ಸ್ಮರಣೆಯೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಅವರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ದಿನದ ಶುಭಾಶಯ ತಿಳಿಸಿದರು....
Loading posts...

All posts loaded

No more posts

error: Content is protected !!