- Saturday
- August 8th, 2026
*婢Join "AMARA SUDDI" WhatsApp Group*https://chat.whatsapp.com/CeqyIEKmJ1YK1rvXNVGnja?mode=ac_t ಮಾಣಿ ಮೈಸೂರು ಹೆದ್ದಾರಿಯ ಸಂಪಾಜೆಯ ದೊಡ್ಡಡ್ಕ ಸಮೀಪ ಇಂದು ಸರಣಿ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರನಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಕಾರು ಹಾಗೂ ಲಾರಿ ಮುಖಾಮುಖಿ ಢಿಕ್ಕಿಯಾಗಿದ್ದು, ಲಾರಿಗೆ ಹಿಂದಿನಿಂದ ಬರುತ್ತಿದ್ದ ಸ್ಕೂಟಿ ಗುದ್ದಿದೆ. ಈ ಅಪಘಾತದಿಂದ ಸ್ಕೂಟಿ ಸವಾರನ ತಲೆಗೆ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸುಳ್ಯದ ಅಂಬಟೆಡ್ಕದ ಗಿರಿದರ್ಶಿನಿ ಕಲಾಮಂದಿರದ ಎದುರಿನ ಆರೋಹಿ ಎನ್ಕ್ಲೆವ್ ಕಾಂಪ್ಲೆಕ್ಸ್ ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೃಹತ್ ಮಳಿಗೆ "ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್" ಅಕ್ಟೋಬರ್ 02 ರಂದು ಶುಭಾರಂಭಗೊಂಡಿತು.ಎ.ಓ.ಎಲ್.ಇ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕರಾದ ಎಂ. ವೆಂಕಪ್ಪ ಗೌಡ, ಶ್ರೀಮತಿ ಚಂಪಾ ವಿ.ಗೌಡ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನಿವೃತ್ತ...
ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ ಅ.02 ರಂದು ನಡೆಯಿತು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಪೂರ್ವಾಧ್ಯಕ್ಷೆ ದಿವ್ಯ ರಮೇಶ್ ಪಡ್ಪು, ಅಂಗನವಾಡಿ ಸಹಾಯಕಿ ಸುಜಾತ ಬಸ್ತಿಗುಡ್ಡೆ, ಪೋಷಕರು ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತೆ ಭಾರತಿ ಕೆ ಸ್ವಾಗತಿಸಿ ವಂದಿಸಿದರು.
ಅರಂತೋಡು ಗ್ರಾಮದ ಜೀವನ್ ಮೇಲಡ್ತಲೆ ಯವರ ಕಿರ್ಲಾಯದಲ್ಲಿರುವ ಕೃಷಿ ಜಾಗಕ್ಕೆ ಕಳೆದ ರಾತ್ರಿ ಆನೆಗಳ ಹಿಂಡು ದಾಳಿ ನಡೆಸಿದ್ದು, ಸುಮಾರು 10 ತೆಂಗಿನಗಿಡ ಹಾಗೂ 20 ಕ್ಕೂ ಹೆಚ್ಚು ಗೇರು ಗಿಡಗಳನ್ನು ನಾಶಪಡಿಸಿದೆ. ಅಡಿಕೆಯ ಹಳದಿ ರೋಗದಿಂದ ತತ್ತರಿಸಿರುವ ಜನಕ್ಕೆ ಕಾಡಾನೆ ದಾಳಿಯು ಇನ್ನಷ್ಟು ಸಂಕಷ್ಟವನ್ನು ತಂದಿದೆ ಎಂದು ಜೀವನ್ ಮೇಲಡ್ತಲೆ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ರವರು ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ “ಕಾಂತಾರ ಚಾಪ್ಟರ್ 01” ಸಿನಿಮಾ ಇಂದು(ಅ.02) ವಿಶ್ವದಾದ್ಯಂತ ಏಳು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಮೊದಲ ದಿನವೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ “ಮಿಥುನ್ ಕುಮಾರ್ ಸೋನ” ರವರು “ರಾಜವೈದ್ಯ”ರ ಪಾತ್ರದಲ್ಲಿ...
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ವಹಿಸಿದ್ದರು.ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ. ಜೋನಿ,...
ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು ಪ್ರತೀ ಪವನ್ ನ ಮೇಲೆ ರೂ. 1,600 ರಿಯಾಯಿತಿ ಹಾಗೂ ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ. 100...
ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿ ಪೂಜಾ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಅ 2ರಂದು ಶುಭಾರಂಭಗೊಂಡಿತು.ಬೆಳ್ಳಾರೆ ಕಾಮಧೇನು ಟವರ್ಸ್ ಮಾಲಕರಾದ ಮಾಧವ ಗೌಡ ಕಾಮಧೇನು ದೀಪ ಬೆಳಗಿಸಿ ಉಧ್ಘಾಟಿಸಿದರು. ಅತಿಥಿಗಳಾಗಿ ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷೆ ನಮಿತಾ ಎಲ್.ರೈ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ವ್ಯವಸ್ಥಾಪಕರಾದ ಎಂ.ಪಿ ಉಮೇಶ್, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...
ಸುಳ್ಯದ ಶಿವಕೃಪ ಕಲಾಮಂದಿರದ ಸಭಾಂಗಣದಲ್ಲಿ ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷರಾದ ಅಶೋಕ ಎಡಮಲೆ ವಹಿಸಿದ್ದರು.ಕಾರ್ಯಕ್ರಮವು ಸಂವಿಧಾನ ಪೀಠಿಕೆ ವಾಚನದೊಂದಿಗೆ ಆರಂಭಗೊಂಡಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಾಂಧೀಜಿಯವರ ತತ್ವ-ಆದರ್ಶಗಳನ್ನು ಸ್ಮರಿಸಿ, ಅವುಗಳನ್ನು ಅನುಸರಿಸುವ ಸಂಕಲ್ಪದೊಂದಿಗೆ ಗೋಪಾಲ್ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಜಾನಿ ಕೆ.ಪಿ....
Loading posts...
All posts loaded
No more posts
