- Thursday
- August 6th, 2026
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೇ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶಿತರಾಗಿದ್ದು, ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. “ಗ್ರಾಮ ಪಂಚಾಯತ್ ಗೂ ಮಾಹಿತಿ ನೀಡದೇ ಸರ್ವೇ ಕಾರ್ಯ ಮಾಡುತ್ತಿರುವುದರಿಂದ ತಮ್ಮ ಕೃಷಿ ಭೂಮಿಗಳಿಗೆ...
ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಡಿಸೆಂಬರ್ 15ರಿಂದ ಜನವರಿ 15ರವರೆಗೆ "ಗ್ಲೊ ಫೆಸ್ಟ್" ವಜ್ರಾಭರಣಗಳ ವಾರ್ಷಿಕ ಮಹೋತ್ಸವವನ್ನು ಆಯೋಜಿಸಲಾಗಿದ್ದು ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್ ಗೆ ರೂ.7000/-ವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹವಿದ್ದು, ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು...
ಸುಳ್ಯ ನಗರ ಪಂಚಾಯತ್ ವಾರ್ಡ್ ಸದಸ್ಯರ ಅನುದಾನದಡಿಯಲ್ಲಿ ಬೋರುಗುಡ್ಡೆ ವಾರ್ಡ್ ಜಟ್ಟಿಪ್ಪಳ್ಳ ರಸ್ತೆಯ ಬಲ ಬಾಗದ ಕನಿಕರಪಳ್ಳ 2ನೇ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು, ಉದ್ಘಾಟನೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಾಫ ಮತ್ತು ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಕೆ.ಎಸ್ ಉಮ್ಮರ್ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಉಮ್ಮರ್ “ನಡೆದಾಡಲೂ ಸಾಧ್ಯವಾಗದೆ ದುಸ್ಥಿತಿಯಲ್ಲಿದ್ದ...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ಡಿ.10 ರಂದು ಚೊಕ್ಕಾಡಿ ವ್ಯಾಪಾರ ವಲಯದ ವಿವಿಧ ಅಂಗಡಿಗಳಿಗೆ ಸ್ವಚ್ಛತಾ ಜಾಗೃತಿ ಉದ್ದೇಶದ ಕಸದ ಡಬ್ಬಿಗಳನ್ನು ವಿತರಿಸಲಾಯಿತು.ಸ್ವಚ್ಛತೆಯ ಮೇಲಿನ ಜಾಗೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂಗಡಿಗಳಿಗೆ ಕಸದ...
ಅರಂತೋಡು : 35ನೇ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸೆಮಿಫೈನಲ್ ಪಂದ್ಯದಲ್ಲಿ "ಪ್ಲೇಯರ್ ಆಫ್ ದಿ ಮ್ಯಾಚ್" ಮತ್ತು ಇಡೀ ಪಂದ್ಯಾಟದಲ್ಲಿನ ಅತ್ಯುತ್ತಮ ಆಟಕ್ಕೆ "ಬೆಸ್ಟ್ ಅಟ್ಯಾಕರ್ ಪ್ರಶಸ್ತಿ" ಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆಗೆ ಭಾಜನರಾದ ಸಂಸ್ಥೆಯ ಹೆಮ್ಮೆಯ ಕ್ರೀಡಾಪಟು...
ಪಂಚಸಪ್ತತಿ-2025 ರ 75ದಿನಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಡಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು. ವತಿಯಿಂದ ನಿರಂತರ 65ನೇ ದಿನದಲ್ಲಿ ಗುತ್ತಿಗಾರು ಪೇಟೆಯ ಮಧ್ಯಭಾಗದಲ್ಲಿ ಕಳೆಗಳನ್ನು ಮಿಷನ್ ಮೂಲಕ ತೆರವುಗೊಳಿಸಿ ಪ್ಯಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಚಗೊಳಿಸಲಾಯಿತು.
“ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಕೂಟಗಳು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಪೂರಕ” ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು.ಅವರು ಶನಿವಾರ ನಡೆದ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಸದಾನಂದ ಜಾಕೆ...
ಸುಬ್ರಹ್ಮಣ್ಯ ಡಿಸೆಂಬರ್ 12 : “ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಈ ಭಾಗದ ಸಣ್ಣ, ಅತಿ ಸಣ್ಣ ರೈತರು ಇಂದು ಕೃಷಿಗೆ ಬಂದಿರತಕ್ಕಂತ ಎಲೆ ಚುಕ್ಕಿರೋಗ, ಕೊಳೆರೋಗ ಇತ್ಯಾದಿಗಳಿಂದ ಮಾನಸಿಕವಾಗಿ ಕುಗ್ಗಿರುವುದೊಂದಿಗೆ ದಿವಾಳಿ ಕೂಡ ಆಗಿರುತ್ತಾರೆ. ಇದಕ್ಕಾಗಿ ಈ ಹಿಂದಿನ ವರ್ಷಗಳಲ್ಲಿ ಬೆಳೆ ವಿಮೆ ಕಟ್ಟಿ ಸರಿಯಾದ ವಿಮಾ ಪರಿಹಾರ ಕೂಡ...
ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಮಂಜೂರು ಮಾಡಿದ ಒಂದು ಲಕ್ಷ ಮೊತ್ತದ ಚೆಕ್ ವಿತರಣೆಯನ್ನು ಡಿ.12 ರಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾದ ಮಾಧವ ಗೌಡರವರು ವಿತರಿಸಿ ಕ್ಷೇತ್ರದ ಇತಿಹಾಸದ ಬಗ್ಗೆ ಕ್ಷೇತ್ರದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ಭಜನಾ ಮಂದಿರದ ಅಭಿವೃದ್ಧಿ...
ಚೈತ್ರಯುವತಿ ಮಂಡಲ(ರಿ.) ಅಜ್ಜಾ ವರ, ಪ್ರತಾಪ ಯುವಕ ಮಂಡಲ(ರಿ.) ಅಜ್ಜಾವರ ಇದರ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಇದರ ಅಂಗವಾಗಿ ನಡೆಯುತ್ತಿರುವ ರಸಪ್ರಶ್ನೆ ಕಾರ್ಯಕ್ರಮದ ಅದೃಷ್ಟಶಾಲಿಗಳ ಆಯ್ಕೆ ಶ್ರೀ ಶಾಸ್ತಾವೇಶ್ವರ ಸಭಾಭವನ ಕರ್ಲಪ್ಪಾಡಿಯಲ್ಲಿ ನಡೆಯಿತು. ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿ ಶ್ರೀಮತಿ ಚಿತ್ರಲೇಖ ಕೆ.ಎಸ್ ಹಾಗೂ ಶ್ರೀ ಶಾಸ್ತಾವೇಶ್ವರ ...
Loading posts...
All posts loaded
No more posts
