ಪಂಜ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾಹಾರ ವಿತರಣೆ

ಪಂಜ ಅಂಗನವಾಡಿ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಾದ ಮಕ್ಕಳು ಮತ್ತು ಬಾಣಂತಿಯರಿಗೆ ಪೌಷ್ಟಿಕಾಹಾರ ವಿತರಣೆ ಇಂದು ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರಮೀಳ ಪಿ. ಪೂರಕ ಆಹಾರ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯೆ ನಳಿನಿ, ಶಾಲಾ ಮುಖ್ಯ ಶಿಕ್ಷಕ ಮುತ್ತಪ್ಪ ಗೌಡ,ಆಶಾ ಕಾರ್ಯಕರ್ತೆ ಹಾಗೂ ಪೋಷಕರು,ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ಭಾಗೀರಥಿ, ಸಹಾಯಕಿ ವಿಮಲ ಸಹಕರಿಸಿದರು.

ಸಮಸ್ಯೆಯನ್ನು ಹುಟ್ಟುಹಾಕುವವರು ಎಸ್ ವೈಎಸ್ ನವರಾಗಬಾರದು – ಮೌಲಾನಾ ಜಿ.ಎಮ್ ಉಸ್ತಾದ್

ಎಸ್ ವೈಎಸ್ ಪಂಜ ನೆಕ್ಕಿಲ ಬ್ರಾಂಚ್ ಹಮ್ಮಿಕೊಂಡ ಸಂಘಟನಾ ಕಾರ್ಯಾಗಾರದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಎಸ್ ವೈಎಸ್ ರಾಜ್ಯ ಸಮಿತಿಯ ಸಾಂತ್ವನ ವಿಭಾಗದ ಚೇರ್ಮೆನ್ ಜಿ ಎಮ್ ಉಸ್ತಾದರು ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಹುಟ್ಟು ಹಾಕುವವರು ಎಸ್ ವೈಎಸ್ , ಎಸ್ಸೆಸ್ಸೆಫ್ ಕಾರ್ಯಕರ್ತರಾಗಬಾರದು ಎಂದು ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.ಪ್ರಸ್ತುತ ಆನ್ ಲೈನ್ ಶಿಬಿರದ ಸಭಾಧ್ಯಕ್ಷತೆಯನ್ನು ನೆಕ್ಕಿಲ ಬ್ರಾಂಚ್...
Ad Widget

ಕಡಬದಲ್ಲಿ ಸತ್ಯಶ್ರೀ ಅಸೋಸಿಯೇಟ್ಸ್ ಕಚೇರಿ ಶುಭಾರಂಭ

ಎಡಮಂಗಲ ಗ್ರಾಮದ ಪೊಟ್ರೆ ತಿಮ್ಮಪ್ಪ ಗೌಡರ ಪುತ್ರ ರಾಜೇಶ್ ಪಿ. ಯವರ ಮಾಲಕತ್ವದ ಸತ್ಯಶ್ರೀ ಅಸೋಸಿಯೇಟ್ಸ್ ಸಿವಿಲ್ ಇಂಜಿನಿಯರಿಂಗ್ ಕಚೇರಿಯು ಆ.31 ರಂದು ಕಡಬದಲ್ಲಿ ಶುಭಾರಂಭಗೊಂಡಿತು.

ಜಯನಗರ ಪರಿಸರದಲ್ಲಿ ಕೇಂದ್ರ ಸರ್ಕಾರದ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ಕಾರ್ಯಕ್ರಮ

ಮೊಗರ್ಪಣೆ ಎಸ್ಎಸ್ಎಫ್ ಶಾಖೆ ವತಿಯಿಂದ ಕೇಂದ್ರ ಸರ್ಕಾರದ ಮಹತ್ ಕಾಂಕ್ಷಿ ಯೋಜನೆಯಲ್ಲಿ ಒಂದಾದ ಬಿಪಿಎಲ್ ಅರ್ಹ ಕುಟುಂಬಸ್ಥರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ಕಾರ್ಯಕ್ರಮ ಜಯನಗರ ಬಿಎಂ ಸ್ಟೋರ್ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಮೊಗರ್ಪಣೆ ಎಸ್ಎಸ್ಎಫ್ ವತಿಯಿಂದ ಆಯೋಜಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಆಸಿಫ್ ಜಯನಗರ, ಪ್ರಧಾನ ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ, ಕೋಶಧಿಕಾರಿ ಶರೀಫ್ ಜಯನಗರ,...

ಜಯನಗರದಲ್ಲಿ ಕೇಂದ್ರ ಸರ್ಕಾರದ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆಯ ಅಭಿಯಾನ

ಮೊಗರ್ಪಣೆ ಎಸ್ಎಸ್ಎಫ್ ಶಾಖೆ ವತಿಯಿಂದ ಕೇಂದ್ರ ಸರ್ಕಾರದ ಮಹತ್ ಕಾಂಕ್ಷಿ ಯೋಜನೆಯಲ್ಲಿ ಒಂದಾದ ಬಿಪಿಎಲ್ ಅರ್ಹ ಕುಟುಂಬಸ್ಥರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ಕಾರ್ಯಕ್ರಮ ಜಯನಗರ ಬಿಎಂ ಸ್ಟೋರ್ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಮೊಗರ್ಪಣೆ ಎಸ್ಎಸ್ಎಫ್ ವತಿಯಿಂದ ಆಯೋಜಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಆಸಿಫ್ ಜಯನಗರ, ಪ್ರಧಾನ ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ, ಕೋಶಧಿಕಾರಿ ಶರೀಫ್ ಜಯನಗರ,...

ಬಿಳಿನೆಲೆಯಲ್ಲಿ ವಿದ್ಯುತ್ ಶಾಕ್ ಗೆ ಕಾಡಾನೆ ಬಲಿ

ವಿದ್ಯುತ್ ಶಾಕ್ ತಗುಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ನಡೆದಿದೆ.ವಿದ್ಯುತ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಪಂಜ ಉಂಗುರ ಬಿದ್ದು ಸಿಕ್ಕಿದೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆ.31 ರಂದು ಚಿನ್ನದ ಉಂಗುರವೊಂದು ಬಿದ್ದು ಸಿಕ್ಕಿರುತ್ತದೆ. ಇದಕ್ಕೆ ಸಂಬಂಧಪಟ್ಟವರು ಪಂಜ ದೇವಾಲಯದ ಆಡಳಿತಾಧಿಕಾರಿಗಳಾದ ಡಾ. ದೇವಿಪ್ರಸಾದ್ ಕಾನತ್ತೂರ್ ಇವರಲ್ಲಿ ಗುರುತು ಹೇಳಿ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸೆಲ್ಸಿ ಸಾಧಕಿ ಆಶಿತಾಳಿಗೆ ಧನಸಹಾಯ

   ಕಡುಬಡತನ ಹಾಗೂ ತಾಯಿಯ ಅನಾರೋಗ್ಯದ ನಡುವೆಯೂ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಡಬ ತಾಲೂಕಿನ ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರಿ ಆಶಿತಾಳಿಗೆ, ಗ್ರಾಮದ ಸಹೃದಯಿ ದಾನಿಗಳಿಂದ ಸಂಗ್ರಹಿಸಲ್ಪಟ್ಟ ರೂ.18000 ಮೊತ್ತದ ಹಣವನ್ನು ಸಹಾಯದ ರೂಪದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್...

ಶಿಥಿಲಗೊಂಡು ಸೋರುತ್ತಿದ್ದ ಕಂದ್ರಪ್ಪಾಡಿ ಅಂಚೆ ಕಛೇರಿಗೆ ಯುವಕ ಮಂಡಲದಿಂದ ಟರ್ಪಾಲ್ ಅಳವಡಿಕೆ

ಸುಮಾರು 60 ವರ್ಷಗಳ ಹಿಂದೆ ನಿರ್ಮಾಣಗೊಂಡ ಕಂದ್ರಪ್ಪಾಡಿ ಅಂಚೆ ಕಛೇರಿ ಸಂಪೂರ್ಣ ಶಿಥಿಲಗೊಂಡಿದ್ದು ಕುಸಿದ ಬೀಳುವ ಹಂತ ತಲುಪಿತ್ತು. ಈ ಬಗ್ಗೆ ಗ್ರಾಮಸ್ಥರ ಮನವಿಯಂತೆ ಆ.29 ರಂದು ಅಮರ ಸುದ್ದಿ ವರದಿ ಪ್ರಕಟಿಸಿತ್ತು.ಆ.30 ರಂದು ಶಿಥಿಲ ಸ್ಥಿತಿಯಲ್ಲಿದ್ದ ಕಂದ್ರಪ್ಪಾಡಿಯ ಅಂಚೆ ಕಚೇರಿ ಇರುವ ಕಟ್ಟಡವನ್ನು ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯ ವತಿಯಿಂದ ಟರ್ಪಾಲು ಹಾಸಿ ತಾತ್ಕಾಲಿಕ...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಧರ್ಮಪಾಲ ಕೊಯಿಂಗಾಜೆ ಸಂತಾಪ

ಮಾಜಿ ರಾಷ್ಟ್ರಪತಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಸಂತಾಪ ಸೂಚಿಸಿದ್ದಾರೆ.ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿ...
Loading posts...

All posts loaded

No more posts

error: Content is protected !!