- Tuesday
- August 4th, 2026
ಮಂಗಳೂರಿನ ಐಕಳದ ಪೊಂಪೈ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿರುವ ಡಾ.ಪುರುಷೋತ್ತಮ ಕೆ.ವಿ. ಕರಂಗಲ್ಲು ಇವರನ್ನು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ನೇಮಕ ಸರಕಾರ ನೇಮಕಗೊಳಿಸಿದೆ. ಪರಿಚಯ : ಡಾ.ಪುರುಷೋತ್ತಮ ಕೆ ವಿ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳಿ ಗ್ರಾಮದ ಕರಂಗಲ್ಲಿನಲ್ಲಿ ದಿವಂಗತ ವೆಂಕಪ್ಪ ಗೌಡ ಮತ್ತು ದಿವಂಗತ ದುಗ್ಗಮ್ಮ...
ವಕೀಲರು ಹಾಗು ನೋಟರಿ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಯವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತಲೆನೋವಿನ ಕಾರಣಕ್ಕೆ ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ತೆರಳಿದಾಗ ವೈದ್ಯರ ಸಲಹೆ ಮೇರೆಗೆ ಕೊರೋನಾ ಪರೀಕ್ಷೆಗೆ ಒಳಗಾದರು. ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಈ ಬಗ್ಗೆ ಪತ್ರಿಕೆಗೆ ಹೇಳಿಕೆ...
ಸುಳ್ಯ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಗುರುತಿನ ಚೀಟಿ, ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸೆ.2 ರಂದು ನಡೆಯಿತು. ಮಂಗಳೂರಿನಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದ ಯಶಸ್ವಿನ ಸವಿ ನೆನಪಿಗಾಗಿ ಸಂಘದ ಸದಸ್ಯರಿಗೆ ಕಿಟ್ ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ...
ಮಂಗಳೂರಿನಲ್ಲಿ ನೆಲೆಸಿರುವ ಮೂಲತಃ ದೇವಚಳ್ಳ ಗ್ರಾಮದ ಕರಂಗಲ್ಲು ಡಾ.ಪುರುಷೋತ್ತಮ ಕೆ.ವಿ.ಯವರು ಮಂಗಳೂರಿನ ಐಕಳ ಪೊಂಪೈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿದ್ದಾರೆ. ಸುಮಾರು 15 ವರ್ಷಗಳಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅರೆಬಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದಾರೆ. ಇವರು ದೇವಚಳ್ಳ ಗ್ರಾಮದ ಕರಂಗಲ್ಲು ದಿ. ವೆಂಕಪ್ಪ ಗೌಡ ಮತ್ತು ದಿ. ದುಗ್ಗಮ್ಮ...
ಆಲೆಟ್ಟಿ ಗ್ರಾಮದ ಮಾಣಿಮರ್ಧು ಜನಾರ್ದನ ನಾಯ್ಕ ಎಂಬವರು ಅಗಸ್ಟ್ 31 ನಿಧನರಾದರು. ಅನಾರೋಗ್ಯಕ್ಕೊಳಗಾದ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಹೃದಯಘಾತದಿಂದ ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಶ್ರೀದೇವಿ, ಸುನಿತ, ದಮಯಂತಿ,ದೇವಿಪ್ರಸಾದ ಮತ್ತು ಸಹೊದರ ಸಹೋದರಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ವಿಶ್ವ ಹಿಂದೂ ಪರಿಷದ್ ಭಜರಂಗದಳ, ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ ಸೆಪ್ಟೆಂಬರ್ 6 ರ ಭಾನುವಾರ ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ. ಶಿಬಿರವು ಬೆಳಗ್ಗೆ 9 ರಿಂದ ಸಂಜೆ 5 ರ ತನಕ ಜರುಗಲಿದ್ದು ಸಾರ್ವಜನಿಕರು ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್...
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆಯಲ್ಲಿ ಒಂದಾದ ಅರ್ಹ ಕುಟುಂಬಸ್ಥರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಎಸ್ಸೆಸ್ಸೆಫ್ ಬೆಳ್ಳಾರೆ ಶಾಖಾ ವತಿಯಿಂದ, ಸುನ್ನೀ ಸೆಂಟರ್ ನಲ್ಲಿ ನಡೆಸಲಾಯಿತು, ಹಲವಾರು ಜನರು ಇದರ ಸದುಪಯೋಗವನ್ನು ಪಡೆದುಕೊಂಡರು ,ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅರ್ಹ ವ್ಯಕ್ತಿಗಳಿಗೆ ನೀಡಲಾಯಿತು ..ಪ್ರಸ್ತುತ ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮಾ ಅಧ್ಯಕ್ಷರಾದ ಹಸ್ಸನ್ ಸಖಾಫಿ ಬೆಳ್ಳಾರೆ, SYS ಬ್ರಾಂಚ್...
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಸುವ ಪ್ರಯುಕ್ತವಾಗಿ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿರುವ ಪುಡ್ಕಜೆ ಮಂಜುನಾಥ ಆಳ್ವರವರು ರೂ. 1 ಲಕ್ಷದ ಚೆಕ್ ಅನ್ನು ದೇಣಿಗೆಯಾಗಿ ಸೆ.1 ರಂದು ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆಯವರು ಚೆಕ್ ನ್ನು ಸ್ವೀಕರಿಸಿದರು.
ಭಾರತೀಯ ಜನತಾ ಪಾರ್ಟಿ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಜಯಪ್ರಕಾಶ್ ಮುಳುಗಾಡು ನಿಯುಕ್ತಿಗೊಂಡಿರುತ್ತಾರೆ. ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮುಳುಗಾಡು ಚಂದ್ರಶೇಖರ ಹಾಗೂ ಪದ್ಮಾವತಿ ದಂಪತಿಗಳ ಪುತ್ರ. ಇವರು ಸುಳ್ಯದಲ್ಲಿ ಎಬಿವಿಪಿ ಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
Loading posts...
All posts loaded
No more posts
