ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಗೋಪೂಜೆ ಆಚರಣೆ

ಅಕ್ಟೋಬರ್ 18ರಂದು  ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೀಪಾವಳಿಯ ಮಹತ್ವ ಸಾರುವ ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಹಿಂದೂ ಸಂಸ್ಕೃತಿಯ ಪ್ರಕಾರ ಗೋವುಗಳ ಮಹತ್ವವನ್ನು ತಿಳಿಸುವ ಪ್ರಯತ್ನದೊಂದಿಗೆ ಶಾಲೆಯಲ್ಲಿ ಗೋವನ್ನು ಜಳಕ ಮಾಡಿಸಿ, ಹೂಹಾರ ಹಾಕಿ, ಅರಸಿನ-ಕುಂಕುಮ ಹಚ್ಚಿ ದೀಪಾರತಿ ಬೆಳಗಿಸಿ ಹಣ್ಣು -ಹಂಪಲುಗಳನ್ನು ನೀಡಲಾಯಿತು. ಗೋಮಾತೆಗೆ ಪ್ರದಕ್ಷಿಣೆ ಮಾಡಿದರೆ ತ್ರಿಲೋಕ ಪ್ರದಕ್ಷಿಣೆ ಮಾಡಿದ ಪುಣ್ಯ ಸಿಗುತ್ತದೆ ಎಂಬಂತೆ ಆಚರಿಸಲಾಯಿತು....

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಸ್ವರ್ಣಂ ದೀಪಂ” ದೀಪಾವಳಿ ವಿಶೇಷ ಆಫರ್ ಗೆ ಗ್ರಾಹಕರ ಉತ್ತಮ ಸ್ಪಂದನೆ ; ಚಿನ್ನ ಖರೀದಿಗೆ ಸ್ವರ್ಣಂ ನಲ್ಲಿ  ಮುಗಿಬಿದ್ದ ಗ್ರಾಹಕರು

ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅ.15 ರಿಂದ ಅ.25 ರವರೆಗೆ ಪ್ರತೀ ಆಭರಣಗಳಿಗೆ  ದೀಪಾವಳಿ ಹಬ್ಬದ ಪ್ರಯುಕ್ತ “ಸ್ವರ್ಣಂ ದೀಪಂ” ದೀಪಾವಳಿ ವಿಶೇಷ ಆಫರ್ ನೀಡಲಾಗಿದ್ದು  ಚಿನ್ನ ಖರೀದಿಯಲ್ಲಿ  ಗ್ರಾಹಕರು ಉತ್ತಮ ಸ್ಪಂದನೆ ನೀಡಿದ್ದಾರೆ.ಸ್ವರ್ಣಂ ಜ್ಯುವೆಲ್ಸ್ ನ ಪ್ರತೀ ಆಯೋಜನೆಗೂ ಗ್ರಾಹಕರ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ,...
Ad Widget

ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ದೀಪಾವಳಿ ಆಚರಣೆ

ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಕಾಲೇಜಿನ ವಠಾರವನ್ನು ದೀಪದಿಂದ ಬೆಳಗಿಸಿ ಅಲಂಕರಿಸಲಾಯಿತು. ದೀಪಾವಳಿ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಮಹಾತ್ಮ ಗಾಂಧಿ ಸ್ಮಾರಕ ಪ್ರೌಢಶಾಲೆಯ ಸಂಚಾಲಕರಾದ ಶ್ರೀ ದೊಡ್ಡಣ್ಣ ಬರಮೇಲು ರವರು ಉದ್ಘಾಟಿಸಿ ದೀಪಾವಳಿಯ ಸಂಭ್ರಮದ ಕ್ರಮ ಮತ್ತು ಆಚರಣೆಯ ಉದ್ದೇಶವನ್ನು ಇಂದಿನ ಮಕ್ಕಳು...

ಮಂಡೆಕೋಲು : ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ

“ನಿರಂತರ ಕಲಿಕೆಯಿಂದ ವೃತ್ತಿಯಲ್ಲಿ ಕೌಶಲ್ಯತೆ ಹೊಂದಲು ಸಾಧ್ಯ” – ಟೋನಿ ಮೈಕಲ್

ಮಂಡೆಕೋಲು : “ನಿರಂತರ ಕಲಿಕೆ ಹಾಗೂ ಸತತ ಪರಿಶ್ರಮ ಇದ್ದರೆ ಯಾವುದೇ ಕೆಲಸದಲ್ಲಿ ಉತ್ತಮ ಕೌಶಲ್ಯತೆ ಹೊಂದಬಹುದು” ಎಂದು ಕೇಂದ್ರೀಯ ರಬ್ಬರ್ ಪ್ರಾಧಿಕಾರದ ಪುತ್ತೂರು ವಿಭಾಗದ ಸಹಾಯಕ ಅಭಿವೃದ್ಧಿ ಅಧಿಕಾರಿ ಟೋನಿ ಮೈಕಲ್ ಹೇಳಿದರು.ಕೇಂದ್ರೀಯ ರಬ್ಬರ್ ಪ್ರಾಧಿಕಾರ ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ ನ ಅರಿವು ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಎಂಟು ದಿನಗಳ ರಬ್ಬರ್ ಟ್ಯಾಪಿಂಗ್...

ಸುಬ್ರಹ್ಮಣ್ಯ – ಏನೆಕಲ್ಲು ರಾಜರಸ್ತೆಯ ಹೊಂಡ-ಗುಂಡಿಗಳಿಗೆ ಮುಕ್ತಿ ಎಂದು…!? ; ವಾಹನ ಸವಾರರ ಸಂಕಷ್ಟಗಳಿಗೆ ಕೊನೆ ಎಂದು…!?

ಸುಬ್ರಹ್ಮಣ್ಯ ಅಕ್ಟೋಬರ್ 18 : ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭವಾಗುವ ಸುಬ್ರಹ್ಮಣ್ಯ - ಮಂಜೇಶ್ವರ ರಾಜರಸ್ತೆಯು ಕುಮಾರಧಾರ ಜಂಕ್ಷನ್ ನಿಂದ ಏನೇಕಲ್ಲುವರೆಗೆ ಸಂಪೂರ್ಣ ಹಾಳಾಗಿರುತ್ತದೆ. ಹೆಜ್ಜೆ ಹೆಜ್ಜೆಗೂ ಅಲ್ಲಲ್ಲಿ ಹೊಂಡ-ಗುಂಡಿಗಳು ಬಿದ್ದಿವೆ. ಇಲ್ಲಿ ದ್ವಿಚಕ್ರ ವಾಹನ ಸವರಾರು ಸರ್ಕಸ್ ಮಾಡಿಕೊಂಡೇ ಸಂಚರಿಸಬೇಕಾಗಿದ್ದು, ನಾಲ್ಕು ಚಕ್ರಗಳ ವಾಹನಗಳು ಕೂಡ 10-15 ಕಿಲೋಮೀಟರ್ ವೇಗದ ಮಿತಿಯಲ್ಲಿ ಚಲಿಸುವಂತಹ ಪರಿಸ್ಥಿತಿ ಉಂಟಾಗಿದೆ....

ಮಡಪ್ಪಾಡಿ : ಯುವಕ ಮಂಡಲದ ವತಿಯಿಂದ “ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025”

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇವುಗಳ ಸಂಯುಕ್ತಾಶ್ರಯದಲ್ಲಿ “ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025” (75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಮೂರನೇ  ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ ಅ.18 ಶನಿವಾರದಂದು ಪೂ. 7.00 ಗಂಟೆಗೆ ಸರಿಯಾಗಿ ಮಡಪ್ಪಾಡಿ ಅಂಗನವಾಡಿ ಕೇಂದ್ರದ ಹತ್ತಿರ ಸ್ವಚ್ಛತೆ ನಡೆಸಿ,ಹಣ್ಣಿನ ಗಿಡ ನೆಡುವುದರ ಮೂಲಕ ಮಾಡಲಾಯಿತು.ಈ...

ಇಂಪಾರ್ಟೆಂಟ್ ಎಫ್‌.ಸಿ ಗುತ್ತಿಗಾರು ಇದರ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಇಂಪಾರ್ಟೆಂಟ್ ಎಫ್‌.ಸಿ ಗುತ್ತಿಗಾರು ಇದರ ವಾರ್ಷಿಕ ಮಹಾಸಭೆ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುಳಿಯ ಸಾತ್ವಿಕ್ ವಹಿಸಿದ್ದರು. ಈ ಸಂದರ್ಭದಲ್ಲಿ ಯುವಕ ಮಂಡಲ ಗುತ್ತಿಗಾರು ಇದರ ಗೌರವಾಧ್ಯಕ್ಷ ಲೋಹಿತ್ ಚೈಪೆ, ಗುತ್ತಿಗಾರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಬಾಕಿಲ ಹಾಗೂ ಗುತ್ತಿಗಾರು ರಬ್ಬರ್ ಸೊಸೈಟಿಯ ನಿರ್ದೇಶಕ ಲೋಕೇಶ್ವರ ಡಿ.ಆರ್ ಉಪಸ್ಥಿತರಿದ್ದರು. ಸಭೆಯಲ್ಲಿ ಹೊಸ ಕಾರ್ಯಕಾರಿ...

ಬೆಳ್ಳಾರೆ : ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಾಗದ ಸರ್ವೆ

ಬೆಳ್ಳಾರೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಳೆಯ ಅಂಬೇಡ್ಕರ್ ಭವನದ ಜಾಗದಲ್ಲಿ ತಾಲೂಕು ಸರ್ವೆಯರ್ ಜಗದೀಶ್ ಮತ್ತು ಸಹಾಯಕರಿಂದ ಸರ್ವೆ ಕಾರ್ಯ ನಡೆಯಿತು.90-1b1 ಸರ್ವೆ ಸಂಖ್ಯೆಯ ಈ ಜಾಗವು ಸುಮಾರು 7 ಸೆನ್ಸ್ ರಷ್ಟಿದೆ ಎಂದು ಸರ್ವೆಯಲ್ಲಿ ತಿಳಿದುಬಂದಿದೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರಾದ(ಮೈಸೂರು ವಿಭಾಗ)ಆನಂದ ಬೆಳ್ಳಾರೆಯವರ ಸತತ ಹತ್ತು ವರುಷಗಳ...

ದ.ಸಂ.ಸಮಿತಿ ಮೈಸೂರು ವಿಭಾಗೀಯ ಸಂಚಾಲಕರಾಗಿ ಆನಂದ ಬೆಳ್ಳಾರೆ ಆಯ್ಕೆ

ಅ.05 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ.) ರಾಜ್ಯ ಸಮಿತಿ ಬೆಂಗಳೂರು ಇದರ ನೂತನ ಸಮಿತಿಯನ್ನು ರಚಿಸಲಾಯಿತು. ಇದರ ನಾಲ್ಕು ವಿಭಾಗೀಯ ಸಮಿತಿಗಳಲ್ಲಿ ಒಂದಾದ ಮೈಸೂರು ವಿಭಾಗೀಯ ಸಮಿತಿ ಸಂಚಾಲಕರಾಗಿ ಆನಂದ ಬೆಳ್ಳಾರೆ ಇವರನ್ನು ರಾಜ್ಯ ಸಮಿತಿ ಆಯ್ಕೆ ಮಾಡಿರುತ್ತದೆ.ಇವರ ಕಾರ್ಯ ವ್ಯಾಪ್ತಿಗೆ ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು,...

ಕಾರ್ಕಳ : ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಕಾರ್ಯದರ್ಶಿಯಾಗಿ ಬಾಲಕೃಷ್ಣ ಭೀಮಗುಳಿ – ಕೋಶಾಧಿಕಾರಿಯಾಗಿ ಪವನ್ ಪೆರುಮುಂಡ ಆಯ್ಕೆ

ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಾರ್ಕಳ ಇದರ ವಾರ್ಷಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ನಗರದ ಸ್ವಾಗತ್ ಹೊಟೇಲ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಪ್ರೋ ಪದ್ಮನಾಭ ಗೌಡ, ನೂತನ ಅಧ್ಯಕ್ಷರಾಗಿ ವಸಂತಸೇನ ಗೌಡ, ಉಪಾಧ್ಯಕ್ಷರಾಗಿ ಉಮೇಶ್ ಬೆಳ್ಳಿಪ್ಪಾಡಿ,...
Loading posts...

All posts loaded

No more posts

error: Content is protected !!