ತೊಡಿಕಾನ : ವಿಎಚ್ಪಿ ಬಜರಂಗದಳದ ವತಿಯಿಂದ ಶ್ರಮದಾನ

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ತೊಡಿಕಾನ ದೇವರಗುಂಡಿ ಹಾಗೂ ಮೀನಿನ ಗುಂಡಿ ಸ್ವಚ್ಛತೆ ನಡೆಸಲಾಯಿತು. ಅಧ್ಯಕ್ಷ ಸೋಮಶೇಖರ್ ಪೈಕ, ರಂಜಿತ್ ಸುಳ್ಯ ಕಾರ್ಯದರ್ಶಿ, ನವೀನ್ ಎಲಿಮಲೆ, ಸನತ್ ಚೊಕ್ಕಾಡಿ, ಧನುಷ್ ಮುರೂರ್, ಮಹೇಶ್ ಕುತ್ಯಾಳ, ರಾಜೇಂದ್ರ ಅರಂತೋಡು ಮತ್ತಿತರರು ಭಾಗವಹಿಸಿದ್ದರು.

ಕಲ್ಮಕಾರು : ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಅಣೆಕಟ್ಟು ಸ್ವಚ್ಛತೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಸುಬ್ರಹ್ಮಣ್ಯ ವಲಯದ ವಿಪತ್ತು ನಿರ್ವಹಣಾ ಘಟಕ ದ ವತಿಯಿಂದ ಕಲ್ಮಕಾರು ಬೈಲು ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯಕ್ರಮ ಇಂದು ಜರುಗಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕ ರಾದ ಸೀತಾರಾಮ್ ಹಾಗೂ ಊರಿನ ತೇಜ ಕುಮಾರ ಕೊತ್ನಡ್ಕ, ತೇಜ ಕುಮಾರ ದಬ್ಬಡ್ಕ, ಶಿವರಾಮ ಮತ್ತು ಘಟಕದ ವಲಯ...
Ad Widget

ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಶೀಘ್ರ ಮಾರುಕಟ್ಟೆಗೆ : ಇಂದೇ ಏಜೆಂಟರಲ್ಲಿ ಕಾಯ್ದಿರಿಸಿ

ಅಮರ ಸುಳ್ಯ ಸುದ್ದಿ ಕನ್ನಡ ವಾರಪತ್ರಿಕೆ, ಅಮರ ಸುದ್ದಿ ವೆಬ್ಸೈಟ್ ನೇತೃತ್ವದಲ್ಲಿ ಹೊರಬರುತ್ತಿರುವ ದೀಪಾವಳಿ ವಿಶೇಷಾಂಕ ಶೀಘ್ರದಲ್ಲಿ ಮಾರುಕಟ್ಟೆ ಗೆ ಬರಲಿದೆ. ಕಳೆದ 3 ವರ್ಷಗಳಿಂದ ಸಂಚಿಕೆ ಹೊರತಂದು ಜನಮೆಚ್ಚುಗೆ ಗಳಿಸಿದೆ. ಈ ಬಾರಿ ಕಳೆದ ಸಲಕ್ಕಿಂತ ಹೆಚ್ಚಿನ ಪುಟಗಳಿಂದ ಕೂಡಿದ್ದು, ಮುದ್ದು ಮಕ್ಕಳ ಫೋಟೋ, ಕಥೆ ಕವನ, ಲೇಖನದೊಂದಿಗೆ ಆಕರ್ಷಣೀಯ ವಾಗಿ ಮೂಡಿ ಬಂದಿದೆ....

ನ.17 : ಎಸ್.ಎಂ.ಎ ಜಿಲ್ಲಾ ಮಟ್ಟದ 2021-24ನೇ ಸಾಲಿನ ಎಲೆಕ್ಷನ್ ಕ್ರಿಯೇಶನ್

ಎಸ್ ಎಂ ಎ ಸುನ್ನಿ ಮ್ಯಾನೇಜ್ಮೆಂಟ್ ಅಸೋಶಿಯೇಶನ್ ಇದರ ಆಶ್ರಯದಲ್ಲಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಮಟ್ಟದ ಎಲೆಕ್ಷನ್ ಕ್ರಿಯೇಶನ್ ಕಾರ್ಯಕ್ರಮ   ನಡೆಸುವ ಕುರಿತು ಸಭೆ ನಡೆಯಿತು.  ನವೆಂಬರ್ 7 ರಂದು ಆನ್ಲೈನ್ ನಲ್ಲಿ ನಡೆದ SMA ಜಿಲ್ಲಾ ಸಮಿತಿ ಸಭೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಸ್ಥಳ ಮತ್ತು ಸಮಯಗಳ ಕುರಿತು ಚರ್ಚಿಸಿ ನೆಕ್ಕಿಲಾಡಿ ಯಲ್ಲಿ ಎಲೆಕ್ಷನ್ ಕ್ರಿಯೇಶನ್...

ಒಂದೇ ಮನೆಯ ಪುಟಾಣಿಗಳಿಬ್ಬರಿಗೆ ಸಿರಿ ಗನ್ನಡ ಕಂದ ಪ್ರಶಸ್ತಿ

ಅಂಗನವಾಡಿಯ ಪುಟಾಣಿಗಳಿಬ್ಬರಿಗೆ ಸಿರಿ ಗನ್ನಡ ಕಂದ ಪ್ರಶಸ್ತಿ ಲಭಿಸಿದೆ. ದೇವರಗುಂಡ ಮೂಲದ ಹರೀಶ್ ಡಿ. ಆರ್ ರವರ ಮಗಳಾದ ತನ್ವಿ ಡಿ. ಮತ್ತು ನವೀನ್ ಡಿ. ಆರ್ ರವರ ಮಗನಾದ ಅಶಿತ್ ಡಿ.ಎನ್ ರವರಿಗೆ ಸೆಪ್ಟೆಂಬರ್, ಅಕ್ಟೋಬರ್ 2020ರ ಅವಧಿಯಲ್ಲಿ ಪ್ರಸಾರವಾದ ಹಾಡು ಮಾತಾಡು ಕಾರ್ಯಕ್ರಮ ಸರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಸಿರಿ ಗನ್ನಡ ಕಂದ...

ಜನತಾ ಬಜಾರ್ ನಿರ್ದೇಶಕರಾಗಿ ನವೀನ್ ಬಾಳುಗೋಡು

ಪ್ರತಿಷ್ಟಿತ ಮಂಗಳೂರು ಜನತಾ ಬಜಾರ್ ಆಡಳಿತ ಮಂಡಳಿ ನಿರ್ದೇಶಕ ರಾಗಿ ನವೀನ್ ಬಾಳುಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಪ್ರಾ‌.ಕೃ.ಪ.ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಇವರು ಗುತ್ತಿಗಾರಿನಲ್ಲಿ ಮಹಾಲಕ್ಷ್ಮಿ ಎಂಟರ್ಪ್ರೈಸಸ್, ಹಾರ್ಡ್ ವೇರ್ ಸಂಸ್ಥೆ ನಡೆಸುತ್ತಿದ್ದಾರೆ.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ರೋಹಿಣಿ ಚೆನ್ನಕೇಶವ ಆರ್ನೋಜಿ, ಸೌಮ್ಯ ರಾಮಕೃಷ್ಣ ಪುರಿಯ, ದಿನೇಶ್ ಗರಡಿ ಪಂಬೆತ್ತಾಡಿ, ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ನಾರಾಯಣ ಗೌಡ ಕೋರ್ಜೆ ಹೇಮಳ, ಬಾಲಕೃಷ್ಣ ಕುದ್ವ, ಶಂಕರಕುಮಾರ್ ಭಟ್ ಕಲ್ಮಡ್ಕ, ಪ್ರಧಾನ...

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಕಿಶೋರ್ ಕುಮಾರ್ ಉಳುವಾರು, ಗಣಪತಿ ಭಟ್ ಮಜಿಗುಂಡಿ, ಉಮಾಶಂಕರ್ ಅಡ್ಯಡ್ಕ, ಎಸ್.ಪಿ.ಲೋಕನಾಥ ಪೆಲ್ತಡ್ಕ, ಚಂದ್ರಪ್ರಕಾಶ್ , ವಾರಿಜಾ ಪುರುಷೋತ್ತಮ ಕುರುಂಜಿ, ವೇದಾವತಿ ಚಿನ್ನಪ್ಪ ಗೌಡ ಕುತ್ತಮೊಟ್ಟೆ, ಲೋಕೇಶ್ ಕುಮಾರ್ ದೊಡ್ಡೇರಿ, ಪ್ರಧಾನ ಅರ್ಚಕ ಕೇಶವ ಮೂರ್ತಿ ಇವರುಗಳನ್ನು ಸದಸ್ಯರಾಗಿ...

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಜಾತ್ರೋತ್ಸವ ಸಮಿತಿ ರಚನೆ – ಅಧ್ಯಕ್ಷ ಪ್ರೋ. ಮನಮೋಹನ ಮುಡೂರು, ಪ್ರ. ಕಾರ್ಯದರ್ಶಿ ಮಿಥುನ್ ಕರ್ಲಪ್ಪಾಡಿ

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೋತ್ಸವದ ನೂತನ ಸಮಿತಿಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರ ನೇತೃತ್ವದಲ್ಲಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಪ್ರೋ. ಮನಮೋಹನ ಮುಡೂರು ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಕರ್ಲಪ್ಪಾಡಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪುಟ್ಟಣ್ಣ ಗೌಡ ಪಡ್ಡಂಬೈಲು , ಡಾ. ದಾಮೋದರ ನಾರಾಲು ಕಾರ್ಯದರ್ಶಿಯಾಗಿ ರೂಪಾನಂದ ಕರ್ಲಾಪ್ಪಾಡಿ ,ಮಾಧವ ಮುಡೂರು ಸದಸ್ಯರಾಗಿ...

ಬಿದ್ದು ಸಿಕ್ಕಿದ ಪರ್ಸ್ ನ್ನು ಹಿಂತಿರುಗಿಸಿ ಮಾನವೀಯತೆ ಮರೆದ ಮಹಿಮಾ ಆಟೋ ವರ್ಕ್ಸ್ ನ ಮಾಲಕ ನವೀನ್

ಸುಳ್ಯ ಎಸ್ ಡಿ ಎ ಯು ಇದರ ಸುಳ್ಯ ತಾಲೂಕು ಅಧ್ಯಕ್ಷ ಶಾಫಿ ರವರ 7000 ಹಣ ಮತ್ತು ಇತರ ಅತ್ಯಮೂಲ್ಯ ದಾಖಲೆ ಗಳಿದ್ದ ಪರ್ಸ್ ಗಾಂಧಿನಗರದ ಆಸುಪಾಸಿನಲ್ಲಿ ಕಳೆದು ಹೋಗಿತ್ತು. ಇದು ಮಹಿಮಾ ಆಟೋ ವರ್ಕ್ಸ್ ನ ಮಾಲಕರಾದ ನವೀನ್ ಎಂಬವರಿಗೆ ಬಿದ್ದು ಸಿಕ್ಕಿದ್ದು ಅವರು ಪರ್ಸ್ ನಲ್ಲಿದ್ದ ದಾಖಲೆಗಳಿದ್ದ ಹೆಸರು ಮತ್ತು ವಿಳಾಸವನ್ನು...
Loading posts...

All posts loaded

No more posts

error: Content is protected !!