ಏ.15 : ಅಯ್ಯನಕಟ್ಟೆ ಪಂಡಿತ್ ದೀನ್ ದಯಾಳ್ ಸಮುದಾಯ ಭವನದಲ್ಲಿ ಕೊರೊನಾ ಲಸಿಕಾ ಶಿಬಿರ

ಈಗಾಗಲೇ ದೇಶಾದ್ಯಂತ ಕೊರೊನ ವೈರಸ್ ನ 2ನೇ ಅಲೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲೂ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ವೈರಾಣುವಿನ ವಿರುದ್ದ ಹೋರಾಡಲು ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಈಗಾಗಲೇ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲ ಕೋವಿಡ್ ಲಸಿಕಾ ಶಿಬಿರವು ಗ್ರಾಮಸ್ಥರ ಸಹಕಾರದಿಂದ ಬಹಳ ಯಶಸ್ವಿಯಾಗಿ ನಡೆದಿರುತ್ತದೆ. ಮುಂದುವರೆದು...

ಮಡಪ್ಪಾಡಿ : ಅಂಬೇಡ್ಕರ್ ಜನ್ಮದಿನಾಚರಣೆ

ಮಡಪ್ಪಾಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 130 ನೇ ಜನ್ಮದಿನಾಚರಣೆ ಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ, ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಕಲ್ಮಡ್ಕ : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಆಚರಣೆ

ಕಲ್ಮಡ್ಕ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಾಬ ಸಾಹೇಬ್ ಅಂಬೆಡ್ಕರ್ ರವರ 130ನೇ ಜನುಮ ದಿನಾಚರಣೆಯನ್ನು ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ ಇವರು ದೀಪ ಬೆಳಗಿಸುವುದರೊಂದಿಗೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಯವರು ಮತ್ತು ಪಂಚಾಯತ್ ಕಾರ್ಯದರ್ಶಿಯಾದ ಶ್ರೀ ಗೋಪಾಲಕೃಷ್ಣ ಕೆ ಹಾಗೂ...

ನಾಗತೀರ್ಥ : ಯುಗಾದಿ ಪ್ರಯುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಎಂ.ಎಂ.ಸಿ ನಾಗತೀರ್ಥ ಇದರ ಆಶ್ರಯದಲ್ಲಿಯುಗಾದಿ ಹಬ್ಬದ ಪ್ರಯುಕ್ತ 4 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುಗಾದಿ ಕಪ್ 2021 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗ ಮೈದಾನದಲ್ಲಿ ನಡೆಯಿತು. ಹಿರಿಯ ಆಟಗಾರ ಪುರುಷೋತ್ತಮ ನಾಗತೀರ್ಥ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಶರತ್ ಕುದ್ವ ,ಪಂಚಶ್ರೀ ಪಂಜ...

ಕಮಿಲ : ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ನೇಮ

ಕಮಿಲದ ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸಾನ್ನಿಧ್ಯದಲ್ಲಿ  ಶ್ರೀ ರಕ್ತೇಶ್ವರೀ ಹಾಗೂ ಗುಳಿಗಳ ದೈವಗಳ ನೇಮ ಸೋಮವಾರ ನಡೆಯಿತು. ಬೆಳಗ್ಗೆ  ಶ್ರೀ ರಕ್ತೇಶ್ವರೀ ಹಾಗೂ ಗುಳಿಗಳ ದೈವಗಳ ನೇಮ ನಡೆಯಿತು. ಈ ಸಂದರ್ಭ ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸಾನ್ನಿಧ್ಯದ ಆಡಳಿತ ಮೊಕ್ತೇಸರ ಗುರುರಾಜ ಭಟ್‌ ಪುಚ್ಚಪ್ಪಾಡಿ, ಆಡಳಿತ ಸಮಿತಿ ಅಧ್ಯಕ್ಷ ಕೆ ಎಸ್‌ ಶೂರಪ್ಪ...

ಶ್ರೀ ಧೂಮಾವತೀ ದೈವಸ್ಥಾನ ಕಿಲಂಗೋಡಿಯಲ್ಲಿ ವಾರ್ಷಿಕ ಜಾತ್ರೆ

ಕಳಂಜ ಗ್ರಾಮದ ಕಿಲಂಗೋಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ವಾರ್ಷಿಕ ಜಾತ್ರೋತ್ಸವ ಎ.12 ಹಾಗೂ 13ರಂದು ನಡೆಯಿತು. ಎ.12 ಸೋಮವಾರದಂದು ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ರಮೇಶ್ಚಂದ್ರ ಕಿಲಂಗೋಡಿ ಮತ್ತು ಮನೆಯವರ ಹರಕೆಯ ಶ್ರೀ ಧೂಮಾವತೀ ನೇಮೋತ್ಸವ ಜರುಗಿತು. ರಾತ್ರಿ ಗಂಟೆ 8.00ರಿಂದ ಶ್ರೀ ಮುಕಾಂಬಿ (ಅಗ್ನಿ) ಗುಳಿಗ ಮತ್ತು ಪರಿವಾರ...

ಬೆಳ್ಳಾರೆ ಸ್ಟಾಂಡರ್ಡ್ ಮೈಕ್ & ಲೈಟಿಂಗ್ಸ್ ನಲ್ಲಿ ಯುಗಾದಿ ಪ್ರಯುಕ್ತ ಗಣಹೋಮ

ಬೆಳ್ಳಾರೆ ಸ್ಟಾಂಡರ್ಡ್ ಮೈಕ್ & ಲೈಟಿಂಗ್ಸ್ ನಲ್ಲಿ ಯುಗಾದಿ ಪ್ರಯುಕ್ತ ಗಣಹೋಮ ಎ.13 ರಂದು ನಡೆಯಿತು. ಸಂಸ್ಥೆಯ ಮಾಲಕರಾದ ಸುಬ್ರಾಯ ಭಾರದ್ವಾಜ್, ವಿಶ್ವನಾಥ ಭಾರದ್ವಾಜ್, ಮನೆಯವರು ಹಾಗೂ ಇತರರು ಉಪಸ್ಥಿತರಿದ್ದರು.

ಹೊಸ ವರುಷ ತರಲಿ ಹರುಷ……

'ಋತೂನಾಂ ಕುಸುಮಾಕರಂ' ಎಂದು ಗೀತಾಚಾರ್ಯರು ಹೇಳುವಂತೆ ಋತುರಾಜ ವಸಂತದ ಶುಭಾಗಮನದ ದಿನವೇ ಯುಗಾದಿ. ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಆ ದಿನ ಮನೆಯ ಗೋಡೆಯ ಮೇಲೆ ಮಾತ್ರ ಕ್ಯಾಲೆಂಡರ್ ಸಂಪೂರ್ಣವಾಗಿ ಬದಲಾಗಿರುತ್ತದೆ ವಿನಃ ನಮ್ಮ ಜೀವನದಲ್ಲಿ ನಮಗೆ ಹೊಸ ದಿನ ಎಂದರೆ ನಮ್ಮ ಹಿಂದೂ ಸಂಪ್ರದಾಯದ...

ಸುಳ್ಯ : ಬಡವರ ರಸ್ತೆ ಅಭಿವೃದ್ಧಿ ಮಾಡದೇ ತಾರತಮ್ಯ ಎಸಗಿದ ಆಡಳಿತ – ರಸ್ತೆ ಅಭಿವೃದ್ಧಿ ಮಾಡುತ್ತೇವೆ : ವಿನಯಕುಮಾರ್ ಕಂದಡ್ಕ

ಸುಳ್ಯ ನಗರದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಹಾಗೂ ಸೀತಮ್ಮ ಅವರ ಮನೆಗೆ ತೆರಳುವ ದಾರಿ ಅಭಿವೃದ್ಧಿ ಕಾಣದೇ ಹಳ್ಳಹಿಡಿದಿದೆ. ಕತ್ತಲೆಯಲ್ಲಿದ್ದ ನಾರಾಯಣ ಅವರ ಮನೆಗೆ ಸೇವಾ ಭಾರತಿ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಬೆಳಕು ಕಾಣುವಂತಾಗಿದೆ. ಆದರೇ ಇವರ ಮನೆಯನ್ನು ಸಂಪರ್ಕಿಸುವ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಡವರಾದರೇ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಈ...

ಸುಳ್ಯ : ನಿರ್ಲಕ್ಷ್ಯಕ್ಕೆ ಒಳಗಾಗಿ ಕತ್ತಲಲ್ಲಿದ್ದ ಮನೆಗೆ ಬೆಳಕು ನೀಡಿದ ಸೇವಾ ಭಾರತಿ ಹಾಗೂ ಸೆಲ್ಕೋ ಸೋಲಾರ್

ಸುಳ್ಯ ನಗರ ಮಧ್ಯಭಾಗದಲ್ಲಿರುವ ಕೆರೆಮೂಲೆಯಲ್ಲಿ ಹಲವಾರು ವರ್ಷಗಳಿಂದ ಕತ್ತಲಲ್ಲಿದ್ದ ಮನೆಗೆ ಯುಗಾದಿ ದಿನದಂದು ಬೆಳಕು ಕಂಡಿದೆ.ಸೇವಾ ಭಾರತಿ ಸುಳ್ಯ ವತಿಯಿಂದ ಸೆಲ್ಕೋ ಸೋಲಾರ್ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕವಿಲ್ಲದೇ ಸಂಕಷ್ಟದಲ್ಲಿದ್ದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಎಂಬ ಬಡ ಕುಟುಂಬಕ್ಕೆ ಸೋಲಾರ್ ದೀಪ ಅಳವಡಿಸಲಾಯಿತು. ಇವರಿಗೆ ಒಬ್ಬಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸೇರಿದಂತೆ ಮೂವರು...
Loading posts...

All posts loaded

No more posts

error: Content is protected !!