ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ -ಗ್ರಾಮೀಣರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆಗೆ ಕ್ರಮ

ಈ ಹಿಂದೆ ಲಸಿಕೆಗಳು ಅಧಿಕವಿರುವಾಗ ಜನತೆ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದರು.ಇದೀಗ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಪೂರೈಕೆ ಮಾಡುವುದು ಕಷ್ಟವಾಗಿದೆ. ಮುಂದಿನ ಒಂದು ವಾರದ ಒಳಗೆ ಅಧಿಕ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆ ವಿತರಣೆಯಾಗಲಿದೆ. ಈ ಮೂಲಕ ಸರ್ವರಿಗೂ ಲಸಿಕೆ ದೊರಕುವಂತೆ ಮಾಡಲು ಸರಕಾರ ಕಾರ್ಯಪ್ರವೃತ್ತವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರವು ಗ್ರಾಮೀಣ ಪ್ರದೇಶಗಳಿಂದ ಕೂಡಿರುವ...

ಕೊಲ್ಲಮೊಗ್ರ : ತುರ್ತು ಸೇವೆಗೆ ವಾಹನ ಮೀಸಲು – ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಅನುಮತಿ ಪತ್ರ ಹಾಗೂ 10 ಪಿ.ಪಿ.ಇ ಕಿಟ್ ಹಸ್ತಾಂತರ

ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಕೋವಿಡ್-19 ಹಾಗೂ ಇತರ ವೈಧ್ಯಕೀಯ ತುರ್ತು ಸೇವೆಗಳಿಗಾಗಿ ಕಲ್ಮಕಾರು ಗ್ರಾಮಪಂಚಾಯತ್ ಸದಸ್ಯರಾದ ಪುಷ್ಪರಾಜ್ ಪಡ್ಪು ಅವರ ವಾಹನವನ್ನು ಮೀಸಲಿರಿಸಲಾಗಿದೆ. ಈ ವಾಹನವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ಇದರ ನಿರ್ವಹಣೆಯನ್ನು ಸೇವಾಭಾರತಿ ಕೊಲ್ಲಮೊಗ್ರ ಹಾಗೂ ಕೋವಿಡ್-19 ಕಾರ್ಯಪಡೆ ಕೊಲ್ಲಮೊಗ್ರ ನಿರ್ವಹಿಸಲಿದೆ....
Ad Widget

ಕೊರೊನ ಸಂಕಷ್ಟದಿಂದ ಹೊರಬರಲು ಸರಕಾರದ ಜೊತೆಗೆ ನಾವು ನಮ್ಮ ಕರ್ತವ್ಯ ಮಾಡಬೇಕಿದೆ

 ಕಣ್ಣಿಗೆ ಕಾಣದೇ ಬಂದಿರುವ ಈ ಕೊರೊನ ವೈರಸ್ ಮನುಷ್ಯನ ಜೀವನವನ್ನು ಹಾಳು ಮಾಡಿದೆ.  ಈ ವೈರಸನ್ನು ಹೋಗಲಾಡಿಸಲು ಲಾಕ್-ಡೌನ್ ಸೃಷ್ಟಿಯಾಗಿ ಇಂದು ಜನರಲ್ಲಿ ಅನೇಕ ರೀತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ಒಂದು ಕಡೆ ಲಾಕ್ ಡೌನ್ ಇನ್ನೊಂದು ಕಡೆ ಕೊರೊನ ವೈರಸ್ ಆತಂಕ. ಇವೆರಡು ಮನುಷ್ಯರಲ್ಲಿ ಭಯದ ವಾತಾವರಣ ಉಂಟು ಮಾಡಿದೆ.  ವೈರಸ್ ಕಾಣಿಸಿಕೊಂಡು ಒಂದು ವರ್ಷ...

ಸುಳ್ಯದಲ್ಲಿ ಇಂದು 54 ಕ್ಕೆ ಏರಿದ ಕೊರೊನಾ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು ಇಂದು 54 ಕೊರೊನಾ ಪಾಸಿಟಿವ್ ಕಂಡುಬಂದಿದೆ. ನಿನ್ನೆ 29 ಕ್ಕೆ ಇಳಿದಿತ್ತು. ತಾಲೂಕಿನಲ್ಲಿ ಒಟ್ಟು 415 ಕ್ಕೆ ಸಕ್ರೀಯ ಪ್ರಕರಣ ಏರಿಕೆ ಕಂಡಿದೆ.

ಗುತ್ತಿಗಾರು ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆ

ಗುತ್ತಿಗಾರು ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆ ಸಭೆಯು ಮೇ.25 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಈ ಸಭೆಯಲ್ಲಿ ನಿರ್ಣಯಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ...

ಹರಿಹರ ಕೊಲ್ಲಮೊಗ್ರ ಭಾಗದ ಜನರ ತುರ್ತು ಸೇವೆಗೆ ವಾಹನ ವ್ಯವಸ್ಥೆ – ವೆಚ್ಚ ಭರಿಸಲಿದೆ ಕುಕ್ಕೆ ಆಡಳಿತ ಮಂಡಳಿ

ಕೊಲ್ಲಮೊಗ್ರ ಹರಿಹರ ಬಾಳುಗೋಡು ಕಲ್ಮಕಾರು ಗ್ರಾಮಗಳ ಜನರಿಗೆ ಕೋವಿಡ್ ಹಾಗೂ ಅತೀ ಅಗತ್ಯ ಸೇವೆಗಳಿಗಾಗಿ ವಾಹನವೊಂದು ದಿನದ ಇಪ್ಪತ್ಕಾಲ್ಕು ಗಂಟೆಯು ಉಚಿತವಾಗಿ ಕಾರ್ಯನಿರ್ವಹಿಸಲಿದೆ. ಈ ವಾಹನದ ಸಂಪೂರ್ಣ ವೆಚ್ಚವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಮಂಡಳಿ ಭರಿಸಲಿದೆ. ತುರ್ತು ಸೇವೆಗಳಿಗೆಉದಯ ಶಿವಾಲ 9483904542, 8431200521, ಕೇಶವ ಅಂಬೆಕಲ್ಲು 6361822198, ಪುಷ್ಪರಾಜ್ ಪಡ್ಪು 9449162052 ಇವರನ್ನು ಸಂಪರ್ಕಿಸಬಹುದು.

ಗುತ್ತಿಗಾರು : ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರ ಹರ್ಷಿತ್ ಜಿ.ಬಿ. ರವರಿಂದ ಕಿಟ್ ವಿತರಣೆ

ಗುತ್ತಿಗಾರು ಮೇ| ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ.ರವರು ಕೋರೋನಾ ಪೀಡಿತ ಸಂತ್ರಸ್ತರ ನೆರವಿಗೆ ನೀಡುತ್ತಿರುವ ಕಿಟ್ ಗಳನ್ನು ಗುತ್ತಿಗಾರು ಗ್ರಾ.ಪಂ ಗೆ ಇಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ‌ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಯಂ.ಆರ್ , ಗ್ರಾ.ಪಂ. ಅಧ್ಯಕ್ಷೆ ರೇವತಿ ಆಚಳ್ಳಿ , ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು , ಭರತ್ ಕೆ.ವಿ...

ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾದ ಶ್ರೀ ಅಂಗಾರ ರವರು ಮೇ 25 ರಂದು ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಕೋವಿಡ್ ನ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು oxigen concentrator ನೀಡಿದರು. ಮತ್ತು ಕೋವಿಡ್ ಕಾರ್ಯಪಡೆಯು ರೋಗಿಗಳನ್ನು ಸಾಗಿಸುವ ತುರ್ತು ವಾಹನದ...

ಸುಳ್ಯದಲ್ಲಿ ಇಂದು 29 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 29 ಕೊರೋನಾ ಪಾಸಿಟಿವ್ ಕಂಡುಬಂದಿದೆ. ನಿನ್ನೆ 55 ಪಾಸಿಟಿವ್ ಬಂದಿತ್ತು. ಒಟ್ಟು 393 ಸಕ್ರೀಯ ಪ್ರಕರಣಗಳಿವೆ.

ಪೆರಾಜೆ : ಲಾರಿ ಗುದ್ದಿ ವಿದ್ಯುತ್ ಕಂಬ ತುಂಡು – ಚಾಲಕ ಪಾರು

ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಮಿನಿ ಟೆಂಪೋ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಇಂದು ಮುಂಜಾನೆ ನಡೆದಿದೆ. ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!