- Tuesday
- November 5th, 2024
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(07.09.2020 ಸೋಮವಾರ ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 400ಡಬಲ್ ಚೋಲ್ 300 - 400 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 -...
ಬೆಳ್ಳಾರೆಯ ಪ್ರಧಾನ ರಸ್ತೆಯಲ್ಲಿರುವ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಕೆ ಮುಂಡುಗಾರು ಮಾಲಕತ್ವದ ಸನ್ನಿಧಿ ಅಗ್ರಿಟೆಕ್ ಸೆ.02 ರಂದು ಶುಭಾರಂಭಗೊಂಡಿತು. ಇಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸರ್ವೀಸ್ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಅಯ್ಯನಕಟ್ಟೆಯ ಪ್ರಧಾನ ರಸ್ತೆಯಲ್ಲಿರುವ ಕೆ.ಎಸ್. ಕಾಂಪ್ಲೆಕ್ಸ್ ನಲ್ಲಿ ಎಚ್.ಎಂ.ಸಿದ್ದೀಕ್ ಹಾಗೂ ರಝಾಕ್ ಮಾಲಕತ್ವದ ಕೆ.ಎಸ್.ಸುಪಾರಿ ಟ್ರೇಡರ್ಸ್ ಇಂದು (ಸೆ.07) ಶುಭಾರಂಭಗೊಂಡಿತು. ಇಲ್ಲಿ ಅಡಿಕೆ, ಕಾಳುಮೆಣಸು ಹಾಗೂ ಕಾಡುತ್ಪನ್ನಗಳನ್ನು ಖರೀದಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ನೇತೃತ್ವದಲ್ಲಿ ತುಳುನಾಡ ಒಕ್ಕೂಟ ಸುಳ್ಯ ದ.ಕ ಇದರ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮ ಸುಳ್ಯ ಗ್ರ್ಯಾಂಡ್ ಪರಿವಾರ್ ಪರಿವಾರಕಾನ ಇದರ ಸಭಾಂಗಣದಲ್ಲಿ ಸೆ. 6 ರಂದು ನಡೆಯಿತು.ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್ ಬಿ ಪ್ರಸ್ತಾವಿಕ ಮಾತನಾಡಿ ತುಳುನಾಡ ಒಕ್ಕೂಟ , ದಕ್ಷಿಣ ಕನ್ನಡ ಹಾಗೂ...
ಕರ್ನಾಟಕ ರಾಜ್ಯ ಎನ್.ಎಸ್.ಯು.ಐ.ವತಿಯಿಂದ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ "ನಮ್ಮೂರ ಹೆಮ್ಮೆ "ಕಾರ್ಯಕ್ರಮಕ್ಕೆ ಸೆ.8 ರಂದು ಅಪರಾಹ್ನ 2 ಗಂಟೆಗೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗಮಿಸಿ ಚಾಲನೆ ನೀಡಲಿದ್ದಾರೆ. ವಿವಿಧ ಘಟಕಗಳ...
ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಸದಸ್ಯರಿಗೆ ಕೊಡಮಾಡುವ 'ಸಾಧನಾಶ್ರೀ' ಪ್ರಶಸ್ತಿಗೆ ಬೆಳ್ಳಾರೆ ಜೇಸಿಐ ಘಟಕದಿಂದ ಜೇಸೀ ಎಚ್.ಜಿ.ಎಫ್ ಜಗದೀಶ್ ಪಿ ಎಲ್ ಆಯ್ಕೆಯಾಗಿದ್ದು, ಇಂದು (ಸೆ.06) ಅವರು ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ವಿತೀಯ ವ್ಯವಹಾರ ಸಮ್ಮೇಳನ 2020 ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಇವರು ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷರಾಗಿದ್ದಾರೆ. ಯುವ...
ಮಂಗಳೂರು ನಗರ ಉತ್ತರವಲಯದ ಗಾಂಧಿನಗರ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಿರುವ ಇಂದ್ರಾವತಿ ಎನ್ ಇವರು 2020 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 1996 ರಲ್ಲಿ ಸೇವೆಗೆ ಸೇರಿದ ಇವರು 24 ವರ್ಷಗಳ ಸುದೀರ್ಘ ಅವಧಿಯಲ್ಲಿ 22 ವರ್ಷ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಉತ್ತಮ ಜನಾನುರಾಗಿಯಾಗಿದ್ದಾರೆ. ಇಲಾಖೆ...
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಬಳ್ಪ ಘಟಕದ ರಚನೆಯು ಇಂದು ಬಳ್ಪ ವಿಕ್ರಮ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಕುಶಾಲಪ್ಪ ಗೌಡ, ಅಧ್ಯಕ್ಷರಾಗಿ ಪ್ರಖ್ಯಾತ್ ರೈ, ಉಪಾಧ್ಯಕ್ಷರಾಗಿ ಹರ್ಷಿತ್ ಪಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಪರಪ್ಪಣೆ, ಕಾರ್ಯದರ್ಶಿಗಳಾಗಿ ಗುಣಶೇಖರ ಬಳ್ಪ, ಮಹೇಶ್ ಗೆಜ್ಜೆ, ಗೋಪಾಲ ಕಲ್ಲೇರಿ, ದಯಾನಂದ ,...
ಕೊಲ್ಲಮೊಗ್ರದಿಂದ ಕಟ್ಟ ಗೋವಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಕಟ್ಟ ಮೈಲ ಎಂಬಲ್ಲಿನ ಕಿರು ಸೇತುವೆ ಪ್ರತಿಶತ 80%ರಷ್ಟು ಕುಸಿತ ಕಂಡಿದ್ದು, ಪ್ರಾಣಬಲಿಗೆ ಹಾತೊರೆಯುತ್ತಿದೆ. ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.ಕಟ್ಟ- ಗೋವಿಂದನಗರ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಟ್ಟ ಮೈಲ ಎಂಬಲ್ಲಿ ಕಿರುಸೇತುವೆಯನ್ನು ಕಟ್ಟಲಾಗಿದೆ....
Loading posts...
All posts loaded
No more posts