Ad Widget

ಕಲಾವಿಕಾಸ ಕಳಂಜ : ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕಲಾವಿಕಾಸ (ರಿ) ಕಳಂಜ ಇದರ ವತಿಯಿಂದ 30ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ವಿಷ್ಣುನಗರ ಕಳಂಜದಲ್ಲಿ ಇಂದು (ಸೆ.10) ಆಚರಿಸಲಾಯಿತು. ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎನ್.ವಿಶ್ವನಾಥ ರೈ...

ಕರ್ನಾಟಕ ಬ್ಯಾಂಕ್ ಕಾನೂನು ಸಲಹೆಗಾರರಾಗಿ ಶಂಕರ್ ಕುಮಾರ್ ಆಯ್ಕೆ

ಸುಳ್ಯ ತಾಲೂಕಿನ ಪಂಜದಲ್ಲಿ ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಶಂಕರ ಕುಮಾರ್ ಕರಿಕಳ ಇವರು ಕರ್ನಾಟಕ ಬ್ಯಾಂಕ್ ಕಾನೂನು ಸಲಹೆಗಾರರ ಪ್ಯಾನೆಲ್ ಬೋರ್ಡ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಪಂಜದಲ್ಲಿ ಕಚೇರಿ ಹೊಂದಿರುವ ನ್ಯಾಯವಾದಿ ಶಂಕರ ಕುಮಾರ್ ಅವರು ಸುಳ್ಯ, ಪುತ್ತೂರಿನಲ್ಲಿಯೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕವಾಗಿಯೂ ವಿವಿಧ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
Ad Widget

ಸುಳ್ಯ ಪಯಸ್ವಿನಿ ಜೇಸಿ ವತಿಯಿಂದ “ಜೇಸಿಐ ಸಪ್ತಾಹ 2020”

ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ "ಜೇಸಿಐ ಸಪ್ತಾಹ 2020" ಸೆ.9 ರಂದು ಬಿ. ಸಿ. ಯಂ ಹಾಸ್ಟೆಲ್ ನಲ್ಲಿ ನಡೆಯಿತು. ವಲಯ 15 ರ ಪ್ರಾಂತ್ಯ ಜಿ ಯ ಉಪಾಧ್ಯಕ್ಷರಾದ ಜೆಇಎಫ್ ಪ್ರದೀಪ್ ಬಾಕಿಲರವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲ್ಲೂಕಿನ ಮೂರು ಮಂದಿ ಯುವ ಸಾಧಕೀಯರನ್ನು ಗೌರವಿಸಲಾಯಿತು. ವಲಯ 15 ರ ಕಾರ್ಯಕ್ರಮ...

ಬೇಂಗಮಲೆ ಪರಿಸರದಲ್ಲಿ ಸ್ಕೂಟಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಸವಾರರು ಗಂಭೀರ ಗಾಯ

ಸುಳ್ಯ ಬೇಂಗಮಲೆ ಪರಿಸರದಲ್ಲಿ ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಸುಳ್ಯದಿಂದ ಬೆಳ್ಳಾರೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ 6 ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಸವಾರರು ವಾಹನದಿಂದ ನೆಲಕ್ಕೆ ಉರುಳಿ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆಯಲ್ಲಿ ಚಡಪಡಿಸುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು ಎಂದು ಸ್ಥಳೀಯರು...

ನಾಗರಿಕ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ – ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಕಾರ್ಯದರ್ಶಿಯಾಗಿ ನವೀನ್ ಮುಪ್ಪೇರ್ಯ

PGSN Prasad Navin mupperya ನಾಗರಿಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್.ಎನ್. ಪ್ರಸಾದ್, ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಉಪಾಧ್ಯಕ್ಷರಾಗಿ ಕರುಣಾಕರ ದೇವಸ್ಯ, ಕಾರ್ಯದರ್ಶಿಯಾಗಿ ನವೀನ್ ಮುಪ್ಪೇರ್ಯ, ಖಜಾಂಜಿಯಾಗಿ ನಾರಾಯಣ ನಾಯ್ಕ ಕಾಪುತ್ತಡ್ಕ ರನ್ನು ಆಯ್ಕೆ ಮಾಡಲಾಯಿತು. ಇದೇ...

ಸೆ. 15,16 ರಂದು ಕೊಲ್ಲಮೊಗ್ರದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ಕೊಲ್ಲಮೊಗ್ರ ಬಿ.ಜೆ.ಪಿ ಗ್ರಾಮ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಗಳಲ್ಲೊಂದಾದ ಆಯುಷ್ಮಾನ್ ಕಾರ್ಡ್ ಯೋಜನೆಯ ನೋಂದಣಿ ಅಭಿಯಾನ ಸೆಪ್ಟೆಂಬರ್ 15 ಮತ್ತು 16 ರಂದು ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನೋಂದಣಿ ವೇಳೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ತರಬೇಕೇಂದು ಬಿ.ಜೆ.ಪಿಯ ಬೂತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೆ.10,11- ಗುತ್ತಿಗಾರಿನಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೊಂದಾವಣೆ – ಮಾಸಿಕ ಉಳಿತಾಯ ಮಾಡಿ ಲಕ್ಷಾಧಿಪತಿ ಯೋಜನೆಗೆ ಚಾಲನೆ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವತಿಯಿಂದ ಸೆ.10 ಮತ್ತು ಸೆ.11 ರಂದು ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೊಂದಾವಣೆ ಹಾಗೂ ವಿವಿಧ ಹಂತಗಳಲ್ಲಿ ಮಾಸಿಕ ಉಳಿತಾಯ ಮಾಡಿ ಲಕ್ಷಾಧಿಪತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.ಸೆ.10 ರಂದು ಗುತ್ತಿಗಾರು ಗ್ರಾಮದವರ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣೆ ನಡೆದರೆ, ಸೆ.11 ರಂದು ದೇವಚಳ್ಳ...

ಗೂನಡ್ಕ : ಆಸರೆ ಯೋಜನಾ ಸಮಿತಿ ಸಭೆ

ಬಡ ಹಾಗೂ ನಿರಾಶ್ರಿತ ಕುಟುಂಬಕ್ಕೆ ಮನೆ ನಿರ್ಮಿಸಿ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಆಸರೆ ಯೊಜನೆಯ ಸಮಿತಿ ಸಭೆಯು ಮಹಮ್ಮದ್ ಕುಞಿ ಗೂನಡ್ಕರವರ ಕಚೇರಿಯಲ್ಲಿ ನಡೆಯಿತು. ಸಮಿತಿ ಸಂಚಾಲಕರಾದ ಮಹಮ್ಮದ್ ಕುಂಞಿ ಗೂನಡ್ಕ ರವರು ಅಧ್ಯಕ್ಷತೆ ವಹಿಸಿದ್ದರು.ಆಸರೆ ಸಮಿತಿ ಮುಖಾಂತರ ನಿರ್ಮಿಸಲು ಉದ್ದೇಶಿಸಿದ ಮನೆಯ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.ಈಗಾಗಲೇ ಮನೆ ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದ್ದು...

ಹರಿಹರ ಕೊಲ್ಲಮೊಗ್ರ ಮಡಪ್ಪಾಡಿ ಜಿಯೋ ಸೇವೆಗೆ ಚಾಲನೆ -ನಾಳೆಯಿಂದ ಸಂಪೂರ್ಣ ಸೇವೆ ಲಭ್ಯ

ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಯಿಂದ ಬೇಸತ್ತು ಹೋಗಿರುವ ಜನರಿಗೆ ಸಿಹಿ ಸುದ್ದಿ ಸಿಗುವ ಸಮಯ ಬಂದಿದೆ. ಹರಿಹರ ಪಲ್ಲತ್ತಡ್ಕ ಕೊಲ್ಲಮೊಗ್ರ ಹಾಗೂ ಮಡಪ್ಪಾಡಿಯಲ್ಲಿ ಜಿಯೋ ಟವರ್ ಅಳವಡಿಸಿದ್ದರೂ ಕೇಬಲ್ ಅಳವಡಿಕೆ ಹಾಗೂ ತಾಂತ್ರಿಕ ಕಾರಣಗಳಿಂದ ಬಾಕಿಯಾಗಿತ್ತು. ಇದೀಗ ಎಲ್ಲಾ ತಾಂತ್ರಿಕ ಕೆಲಸಗಳು ಪೂರ್ಣಗೊಂಡಿದ್ದು ಜಿಯೋ ಅಧಿಕಾರಿಗಳು ಇಂದು ಚಾಲನೆ ನೀಡಿದ್ದಾರೆ. ಸಾಪ್ಟ್ ವೇರ್ ಅಪ್ ಲೋಡ್...

ಪೆರುವಾಜೆ : ಸೋಕ್ ಪಿಟ್ ಅಭಿಯಾನಕ್ಕೆ ಚಾಲನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸುಳ್ಯ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಪ್ಟೆಂಬರ್ ತಿಂಗಳ ವಿಶೇಷ ಅಭಿಯಾನ ಸೋಕ್ ಪಿಟ್( ಬಚ್ಚಲು ಗುಂಡಿ)ಅಭಿಯಾನಕ್ಕೆಚಾಲನೆ ನೀಡಲಾಯಿತು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್. ಸೋಕ್ ಪಿಟ್ ಅಭಿಯಾನಕ್ಕೆ ಚಾಲನೆ...
Loading posts...

All posts loaded

No more posts

error: Content is protected !!