- Friday
- November 1st, 2024
ತಾಲೂಕಿನ 12 ತಾಲೂಕು ರಸ್ತೆಗಳನ್ನು ಜಿಲ್ಲಾ ರಸ್ತೆಗಳನ್ನಾಗಿ, 2 ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದೀಗ ಆ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಮಾಡಿದೆ. ದೊಡ್ಡತೋಟ – ಕುಕ್ಕುಜಡ್ಕ-ಪಾಜಪಳ್ಳ ರಸ್ತೆ 15.05 ಕಿ.ಮೀ, ಗುತ್ತಿಗಾರು-ಬಳ್ಳಕ-ಪಂಜ ರಸ್ತೆ 10.20ಕಿ.ಮೀ, ಗುತ್ತಿಗಾರು-ಕಮಿಲ- ಬಳ್ಪ ರಸ್ತೆ 5.40ಕಿ.ಮೀ, ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ರಸ್ತೆ 11.90 ಕಿ.ಮೀ,...
ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಕರ್ನಾಟಕದಲ್ಲಿ ಸ್ಥಾಪಿತಗೊಂಡು ಮೂವತ್ತೊಂದು ವರುಷಗಳು ಪೂರ್ತಿಕರಿಸಿದೆ. 2020 ಸೆಪ್ಟಂಬರ್ 19ರಂದು ಮೂವತ್ತೆರಡನೇ ವರುಷಕ್ಕೆ ಕಾಲಿರಿಸುತ್ತಿದೆ. ಮೂರು ದಶಕಗಳಲ್ಲಿ ರಾಜ್ಯದುದ್ದಕ್ಕೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಮೂಹಿಕ ಕ್ಷೇತ್ರಗಳಲ್ಲಿ ಎಸ್ಸೆಸ್ಸೆಫ್ ನಡೆಸಿದೆ. ಧ್ವಜ ದಿನದ ಅಂಗವಾಗಿ ಸುಳ್ಯ ಡಿವಿಷನ್ ಸಮಿತಿಯಿಂದ ಸೆಪ್ಟಂಬರ್ 19ರಂದು ವಿವಿಧ ಕಾರ್ಯಕ್ರಮಗಳು ಜರಗಲಿದೆ. ಬೆಳಗ್ಗೆ ಡಿವಿಷನ್ ಸಮಿತಿ ಅಧೀನದ...
ಪೊಲೀಸ್ ಇಲಾಖೆಯಿಂದ ಪ್ರತೀ ಠಾಣೆಗಳಿಗೆ ಸರ್ಕಲ್ ಇನ್ಸ್ಪೆಕ್ಟರ್ ಠಾಣಾಧಿಕಾರಿ ಆಗುವ ನಿಟ್ಟಿನಲ್ಲಿ, ಬೆಳ್ಳಾರೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಕಡಬ ವೃತ್ತಕ್ಕೆ ಸೇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸುಳ್ಯ ವೃತ್ತ ದ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದ ಕಾರಣ ಬೆಳ್ಳಾರೆ ಹಾಗೂ ಸ್ಥಳೀಯ ಗ್ರಾಮದ ಜನತೆಗೆ ಕಾನೂನು ಸುವ್ಯವಸ್ಥೆಯ ವಿಷಯಗಳಲ್ಲಿ ತುಂಬಾ ಅನುಕೂಲವಾಗುತ್ತಿತ್ತು. ಆದರೆ ಇದೀಗ ಬೆಳ್ಳಾರೆ ಠಾಣೆಯನ್ನು ಸುಳ್ಯದಿಂದ...
ಸುಳ್ಯ ಎಸ್ ವೈ ಎಸ್ ಸಂಘಟನೆಯ ಮುಖಂಡರು, ಸಮಾಜ ಸೇವಕರು , ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿ ಇದರ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಹಾಜಿ ಮೊಹಿದ್ದಿನ್ ಶಾಂತಿನಗರ ಇವರು ಕೆಲವು ಕಾಲದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ವಿಚಾರಣೆಗಾಗಿ ಸೆಪ್ಟೆಂಬರ್ 17ರಂದು ಶಾಂತಿನಗರ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ...
ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ಕೇಪಣ್ಣಗೌಡ ಕಲ್ಲುಗದ್ದೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಇವರಿಗೆ ಸಹಕಾರಿ ಸಂಘದ ಸಾರ್ವ ಜನಿಕೋಪಕಾರ ನಿಧಿಯಿಂದ ರೂಪಾಯಿ 5000 ಸಹಾಯಧನವನ್ನು ಚಿಕಿತ್ಸಾ ವೆಚ್ಚವಾಗಿ ನೀಡಲಾಯಿತು.ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಸಹಾಯಧನದ ಚೆಕ್ಕನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ನಿರ್ದೇಶಕರಾದ ಕುಸುಮಾಧರ...
ಮಲೆನಾಡ ಚಾರಿಚೇಬಲ್ ಟ್ರಸ್ಟ್ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಶ್ರಯದಲ್ಲಿ ಸಜ್ಜನ ಸಿರಿ ಮಲೆನಾಡ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ.೧೮ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು. ಮಲೆನಾಡ ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷ ಕೆ.ಎಂ ಮುಸ್ತಾಫ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ವಿ.ಜಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎನ್.ಎ ಜ್ಞಾನೇಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು....
ಮಾಣಿ-ಮೈಸೂರು ಹೆದ್ದಾರಿ ಸುಳ್ಯ ಅಡ್ಕಾರು ಪರಿಸರದ ತಿರುವಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಿರಂತರವಾಗಿ ಅಪಘಾತಗಳು ಸಂಭವಿಸಿ ಹಲವು ಜೀವಹಾನಿ ಉಂಟಾಗಿದ್ದವು. ಆ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನಗಳು ನಿಧಾನವಾಗಿ ಚಲಾಯಿಸಲು ಕ್ರಮವನ್ನು ವಹಿಸಲಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ...
“ಸಮಾಜದ ಏಳಿಗೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡು , ತನ್ನ ವ್ಯವಹಾರದ ಒತ್ತಡದ ನಡುವೆಯೂ ಸಮಾಜಕ್ಕಾಗಿ ಮಿಡಿತ-ತುಡಿತಗಳನ್ನು ಕೇಂದ್ರೀಕರಿಸಿದ ವ್ಯಕ್ತಿತ್ವ ಶ್ರೀ ಪ್ರೇಮನಾಥ ರೈಯವರದ್ದು. ನಿಷ್ಕಲ್ಮಶ ಮನಸ್ಸಿನ, ನಿಷ್ಕಂಳಕ ನಡತೆಯ, ಓರ್ವ ಪ್ರಾಮಾಣಿಕ, ಸಜ್ಜನ ವ್ಯಕ್ತಿಯ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪಾದರಸವನ್ನು ಮೀರಿ ನಿಂತ ಅವರ ಕ್ರಿಯಾಶೀಲತೆಗೆ ಮನಸೋಲದವರು ವಿರಳ”. ಎಂದು ಬೆಳಂದೂರು ಕಾಲೇಜಿನ ಪ್ರಾಂಶುಪಾಲರಾದ...
ಜಾತ್ರೆ, ಸಭೆ,ಸಮಾರಂಭ,ಮೆರವಣಿಗೆ ಗಳಲ್ಲಿ ಆಕರ್ಷಕವಾದ ಚಂಡೆವಾದನ ಕೇಳಿರಬಹುದು. ಚಂಡೆ ಪೆಟ್ಟಿಗೆ ತಾವು ಒಂದು ಹೆಜ್ಜೆ ಹಾಕುವ ಅನ್ನಿಸಿರಬಹುದು, ಕೆಲವರಿಗೆ ಚಂಡೆವಾದನ ಕಲಿಯಬೇಕು ಎನ್ನಿಸಿರಬಹುದು. ಮನೆಯಲ್ಲಿ ಹೋಗಿ ಅದೇ ತರ ಬಾರಿಸಲು ಪ್ರಯತ್ನಿಸಿರಬಹುದು. ಈ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ರಾಜೇಶ್ ಪಣಿಕ್ಕರ್ ಅವರು ನಿಮಗೆ ಸುವರ್ಣಾವಕಾಶ ಒದಗಿಸಿದ್ದಾರೆ. ಅವರು ಮಾವಿನಕಟ್ಟೆ ಮತ್ತು ವಿವಿಧೆಡೆ ಶ್ರೀ...
Loading posts...
All posts loaded
No more posts