ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ ; 35 ಸಾವಿರಕ್ಕೂ ಅಧಿಕ ಭಕ್ತರಿಂದ ಭೋಜನ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ ಅಕ್ಟೋಬರ್ 18 : ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆದಿತ್ಯವಾರದಂದು ಹರಿದು ಬಂದ ಭಕ್ತ ಸಾಗರದಲ್ಲಿ ಸುಮಾರು 35 ಸಾವಿರದಷ್ಟು ಭಕ್ತರು ಶ್ರೀ ದೇವರ ದರ್ಶನದೊಂದಿಗೆ ಭೋಜನ ಸ್ವೀಕರಿಸಿದ್ದಾರೆ. ರಜಾ ದಿನವಾದ ರವಿವಾರದಂದು ಹಾಗೂ ಶಾಲೆಗಳಿಗೆ ದಸರಾ ಇದ್ದುದರಿಂದ ಭಕ್ತರು ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶ್ರೀ ದೇವಳದ...

ನವರಾತ್ರಿಯಂದು ಕುಲ್ಕುಂದ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಅಕ್ಟೋಬರ್ 18 : ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಸೇತುವೆಯಿಂದ ಕುಲ್ಕುಂದ ಭಾಗದವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಕಸ ಕಡ್ಡಿ,ಶತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ತಟ್ಟೆಗಳು, ಬಾಟಲ್ ಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಶೇಖರಿಸಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು...
Ad Widget

ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು ಕಾಲೇಜಿನ ಎನ್‌.ಎಸ್‌.ಎಸ್ ವಾರ್ಷಿಕ ವಿಶೇಷ ಶಿಬಿರ ; “ಯುವ ಜನಾಂಗದ ಮೌಲ್ಯಯುತ ಬದುಕಿಗೆ ಎನ್‌.ಎಸ್.ಎಸ್ ರಹದಾರಿ” : ಜಯಸೂರ್ಯ ರೈ ಮಾದೋಡಿ ಅಭಿಮತ

ಸುಬ್ರಹ್ಮಣ್ಯ : “ಯುವ ವಿದ್ಯಾರ್ಥಿಗಳ ಮೌಲ್ಯಯುತ ಬದುಕಿಗೆ ಎನ್.ಎಸ್.ಎಸ್ ರಹದಾರಿಯಾಗಿದೆ. ಸೇವೆಯಿಂದ ಆನಂದವನ್ನು ಪಡೆಯಬಹುದೆಂಬ ಜ್ಞಾನವನ್ನು ಇದು ನೀಡುವ ಕಾರಣ ಈ ಸಂಸ್ಥೆ ವಿದ್ಯಾರ್ಥಿ ದೆಸೆಯಿಂದಲೇ ಜೀವನ ಪಾಠ ಕಲಿಸುತ್ತದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಭೂಷಣವಾಗಿದೆ. ವಿದ್ಯೆ ಅನ್ನುವುದು ಜೀವನದ ಪ್ರಗತಿಗೆ ಮೆಟ್ಟಿಲು ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅತ್ಯವಶ್ಯಕ. ಇದರೊಂದಿಗೆ ಪರಿಸರ...

ಅ.17 ರಿಂದ ಬೀದಿಗುಡ್ಡೆಯಲ್ಲಿ ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿಶೇಷ ವಾರ್ಷಿಕ ಶಿಬಿರ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ವಾರ್ಷಿಕ ಶಿಬಿರವು ದಿನಾಂಕ 17.10.2026 ರಿಂದ 23.10.2026 ರವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೀದಿಗುಡ್ಡೆಯಲ್ಲಿ ನಡೆಯಲಿದೆ. ಈ ಶಿಬಿರದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ದತ್ತು ಗ್ರಾಮ ಬಳ್ಪ ಇದರ ಆಡಳಿತ ಅಧಿಕಾರಿ ಶ್ರೀಕಾಂತ್ ಇವರು ವಹಿಸಲಿದ್ದಾರೆ. ಶಿಬಿರವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ...

ಕುಲ್ಕುಂದ ಬಸವೇಶ್ವರ ದೇವಾಲಯದಲ್ಲಿ ನವಾನ್ನ ಭೋಜನ : 2,500ಕ್ಕೂ ಮಿಕ್ಕಿ ಭಕ್ತರಿಂದ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ (ಅಕ್ಟೋಬರ್ 14): ಇತಿಹಾಸ ಪ್ರಸಿದ್ಧ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ 2026 ನೇ ಸಾಲಿನ ಹೊಸರೋಗಣೆ (ನವಾನ್ನ) ಕಾರ್ಯಕ್ರಮದಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಮಿಕ್ಕಿ ಭಕ್ತರು ಹೊಸ ಅಕ್ಕಿ ಭೋಜನವನ್ನು ಸವಿದರು. 21 ಬಗೆಯ ವಿವಿಧ ಖಾದ್ಯಗಳನ್ನು ಒಳಗೊಂಡ ಭೋಜನದ ಸವಿಯನ್ನು ಭಕ್ತರು ಪಡೆದುಕೊಂಡರು. ಭೋಜನಕ್ಕಾಗಿ ದೇವಳದ ಮುಂಭಾಗದಲ್ಲಿ ಹಿಂದಿನ ಸಂಪ್ರದಾಯದಂತೆ ಸಗಣಿ...

ಸ್ವಚ್ಛ ದಂಡಯಾತ್ರೆ: ನಾಗರಾಜ್ ಬಜಾಲ್ ಅವರ ಪರಿಸರ ಕಾಳಜಿ ಸಮಾಜಕ್ಕೆ ಮಾದರಿ – ಕಸ ಹೆಕ್ಕುತ್ತಾ ಸ್ವಚ್ಛತೆಯ ಜಾಗೃತಿ ಮೂಡಿಸಿದ ಪರಿಸರ ಪ್ರೇಮಿ – ಯತೀಶ್ ದೇವ ಸಂಟ್ಯಾರು

ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವ ಉದ್ದೇಶದಿಂದ ಮಂಗಳೂರು ಪಡೀಲ್ ಮೂಲದ ನಾಗರಾಜ್ ಬಜಾಲ್ ಅವರು ಕೈಗೊಂಡಿರುವ ಸ್ವಚ್ಛತಾ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ದೂರದ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರೂ, ತನ್ನ ನಾಡು, ನೆಲ, ಜಲ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಾಗರಾಜ್ ಬಜಾಲ್ ಅವರು ಮಾಣಿ–ಸಂಪಾಜೆ ರಾಷ್ಟ್ರೀಯ ಹೆದ್ದಾರಿ...

ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಕೊಡುಗೆಗಳ ಮಹಾಪೂರ

ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಸ್ಥಳೀಯ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಕೊಡುಗೆಗಳ ಮಹಾಪೂರವೇ ಹರಿದು ಬಂದಿದೆ. ಬಸವೇಶ್ವರ ಜೀರ್ಣೋದ್ಧಾರ ಸಮಯದಲ್ಲಿ ಗಣಪತಿ ಗುಡಿಯ ನಿರ್ಮಾಣಕ್ಕೆ 4,01,111/- ದೇವಸ್ಥಾನದ ಒಳಾಂಗಣ ಶಾಶ್ವತ ಮೇಲ್ಚಾವಣಿಯ ಬಗ್ಗೆ 2,57,000/- ದೇವಸ್ಥಾನಕ್ಕೆ ಸೌಂಡ್ ಸಿಸ್ಟಮ್ ಬಗ್ಗೆ 43,000/- ದೇವಳದ ಜೀರ್ಣೋದ್ಧಾರ ಸಮಯ ಮಾಡಿದ ಸಾಲದ ಮರುಪಾವತಿ...

ಸುಬ್ರಹ್ಮಣ್ಯ : ಕೆ ಎಸ್ ಎಸ್ ಕಾಲೇಜಿನಲ್ಲಿ ಸುಳ್ಯ-ಕಡಬ ವಲಯ ಎನ್ಎಸ್ಎಸ್ ಘಟಕದ ಸಾಂಸ್ಕೃತಿಕ ಸ್ಪರ್ಧೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಎನ್ಎಸ್ಎಸ್ ಘಟಕ ಸಹಯೋಗದೊಂದಿಗೆ ಸುಳ್ಯ ಕಡಬ ವಲಯ ಎನ್ಎಸ್ಎಸ್ ಘಟಕದ ವೈಯಕ್ತಿಕ ನೃತ್ಯ ಹಾಗೂ ವೈಯಕ್ತಿಕ ಹಾಡು ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ಅಧ್ಯಕ್ಷತೆಯನ್ನು ವಹಿಸಿದರು. ಕೆ.ಎಸ್.ಎಸ್ ಕಾಲೇಜಿನ ಇತಿಹಾಸ ವಿಭಾಗದ...

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಮಟ್ಟದ “ಯುವ ರೆಡ್‌ಕ್ರಾಸ್ ಪ್ರೇರಣಾ ಶಿಬಿರ – 2026” – “ಮನಸ್ಸಿನಲ್ಲಿ ಅಪಾರವಾದ ಶಕ್ತಿಯನ್ನು ತಿಳಿಸುವ ಕೆಲಸ ಶಿಕ್ಷಣದ ಉದ್ದೇಶ” – ಡಾ.ಗಣನಾಥ ಯೆಕ್ಕಾರ್

ಸುಬ್ರಹ್ಮಣ್ಯ : “ಮನುಷ್ಯನ ಮನಸ್ಸಿನಲ್ಲಿ ಆಳವಾದ ಅಪಾರವಾದ ಶಕ್ತಿ ಇದೆ. ಆ ಶಕ್ತಿಯ ಅರಿವನ್ನು ತಿಳಿಸುವ ಕೆಲಸ ಶಿಕ್ಷಣದ ಉದ್ದೇಶವಾಗಿದೆ. ವಿದ್ಯಾರ್ಥಿಳ ಮನಸ್ಸಿನಲ್ಲಿರುವ ಆಗಾದ ಶಕ್ತಿಯನ್ನು ಪರಿಚಯಿಸುವ ಕೆಲಸ ಪ್ರೇರಣ ಶಿಬಿರ ಮಾಡುತ್ತದೆ” ಎಂದು ವೈಆರ್‌ಸಿ ರಾಜ್ಯ ಸಲಹೆಗಾರ ಪ್ರಧಾನ ಕಾರ್ಯದರ್ಶಿ ಉಡುಪಿ ಡಾ.ಗಣನಾಥ ಶೆಟ್ಟಿ ಯೆಕ್ಕಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಯುವ ರೆಡ್...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ವಿದ್ಯಾರ್ಥಿ ಪರಿಷತ್‌ ಉದ್ಘಾಟನೆ – “ನಾಯಕತ್ವ ಅಧಿಕಾರ ಅಲ್ಲ, ಸೇವೆಗೆ ಇರುವಂತಹ ಅವಕಾಶ” – ಡಾ. ಸುಬ್ರಹ್ಮಣ್ಯ

ಸುಬ್ರಹ್ಮಣ್ಯ : “ಶಿಕ್ಷಣವು ನಮ್ಮೊಳಗಿನ ಜ್ಞಾನವನ್ನು ಹೊರತರುವ ಪ್ರಯತ್ನವನ್ನು ಮಾಡುತ್ತದೆ. ಶಿಕ್ಷಣ ಪಠ್ಯ ಕೇಂದ್ರೀತವಲ್ಲ, ವಿದ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಗೆ ಅವಕಾಶ ನೀಡುತ್ತದೆ. ನಾಯಕತ್ವ ಎಂಬುದು ಶಿಸ್ತು, ಸಹಕಾರ, ಜವಾಬ್ದಾರಿ, ಸಾಮಾಜಿಕ ಕಾಳಜಿಯ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ವಿದ್ಯಾರ್ಥಿ ಪರಿಷತ್ತು ಸಹಕಾರಿಯಾಗಿದೆ. ನಾಯಕತ್ವ ಅಧಿಕಾರ ಅಲ್ಲ. ಸೇವೆಗೆ ಇರುವಂತಹ ಅವಕಾಶ” ಎಂದು ಪುತ್ತೂರಿನ ಜಿ.ಎಫ್.ಜಿ.ಸಿ. ಬೆಟ್ಟಂಪಾಡಿ ಕಾಲೇಜಿನ ಕನ್ನಡ...
Loading posts...

All posts loaded

No more posts

error: Content is protected !!