ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ರಥಗಳಿಗೆ ಗೂಟ ಮುಹೂರ್ತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಕಾರ್ಯಕ್ರಮ ನ.27 ರಿಂದ ಆರಂಭವಾಗಲಿದ್ದು ಅದರ ಪೂರ್ವಭಾವಿಯಾಗಿ ರಥ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಇಂದು ರಥಗಳ ಗೂಟ ಮುಹೂರ್ತ ಜರಗಿತು. ಈ ಸಂದರ್ಭ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಛೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾ‌ರ್, ಇತರೇ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹರಿಹರ ಪಳ್ಳತ್ತಡ್ಕ : ತೆರವಾಗಿದ್ದ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಪೃಥ್ವಿಚಂದ್ರ ಮುಂಡಾಜೆ ಅವಿರೋಧ ಆಯ್ಕೆ

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ದಿವಾಕರ ಮುಂಡಾಜೆ ರವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿ ನ.12 ರಂದು ಪೃಥ್ವಿಚಂದ್ರ ಮುಂಡಾಜೆ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಕ್ಷಿತ್ ಕಜೆಗದ್ದೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಕ್ಷಿತ್ ಕಜೆಗದ್ದೆ ರವರು ಈ ಹಿಂದಿನ ಮಾತುಕತೆಯಂತೆ ನಾಮಪತ್ರ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದ್ದು,...
Ad Widget

ಪ್ರತಿಭಟನಾ ಕಾರರ ಒತ್ತಡಕ್ಕೆ ಮಣಿದು ಎಸಿ ಆಗಮನ , ಮನವಿ ಸ್ವೀಕಾರ ರಸ್ತೆ ತಡೆ ಹಿಂತೆಗೆತ

ಗುಂಡ್ಯ: ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸಿದ ಬಳಿಕ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಈ ಪ್ರತಿಭಟನೆಯ ಮಾಹಿತಿಯನ್ನು ಸರಕಾರಕ್ಕೆ ಇಂದು ಸಂಜೆಯ ಒಳಗೆ ತಲುಪಿಸಿ ಮಾಧ್ಯಮದ ಮೂಲಕ ಪ್ರತಿಭಟನಾ ನಿರತರಿಗೆ ತಿಳಿಸುವುದು ಮತ್ತು ನಮಗೂ ಸರಕಾರದ ನಾನಾ ಕೆಲಸಗಳು ಇರುವ ಹಿನ್ನಲೆಯಲ್ಲಿ ತಡವಾಯಿತು ಅದಿಕ್ಕಾಗಿ ಪ್ರತಿಭಟನಾ...

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಮನವಿ ಸ್ವೀಕಾರಕ್ಕೆ ಎಸಿ ವಿಳಂಬ ಹಿನ್ನಲೆ , ರಸ್ತೆ ತಡೆ. ಪೊಲೀಸರಿಂದ ಮನವೋಲಿಕೆಗೆ ಯತ್ನ ?

ಸುಳ್ಯ : ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸುವುದಾಗಿ ಪೋಲಿಸ್ ಇಲಾಖೆ ತಿಳಿಸಿದ್ದು ಇದೀಗ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ನೇತೃತ್ವದಲ್ಲಿ ಪ್ರತಿಭಟನಾ ಹೋರಾಟಗಾರರು ಇದೀಗ ರಸ್ತೆ ತಡೆ ಆರಂಬಿಸಿದ್ದು ರಸ್ತೆ ಸಂಪೂರ್ಣ ಮುಚ್ಚ ಗಡೆಯಾಗಿದೆ.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಮನವಿ ಸ್ವೀಕಾರಕ್ಕೆ ಎಸಿ ವಿಳಂಬ ಹಿನ್ನಲೆ , ರಸ್ತೆ ತಡೆ ಹೆಚ್ಚಿದ ಒತ್ತಡ

ಸುಳ್ಯ : ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸುವುದಾಗಿ ಪೋಲಿಸ್ ಇಲಾಖೆ ತಿಳಿಸಿದ್ದು ಇದೀಗ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ರಸ್ತೆ ತಡೆಗೆ ಮುಂದಡಿಯಿಡಲು ಒತ್ತಡ ಹೆಚ್ಚುತ್ತಿದ್ದು ಇದೀಗ ರಸ್ತೆಗೆ ಇಳಿಯಲಿದ್ದು ಇದೀಗ ಶಾಸಕರ ಸಮ್ಮುಖದಲ್ಲಿ ಹೈ ಡ್ರಾಮವೇ ನಡೆಯಲಿದೆ.

ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಜರಗುವ ಬೃಹತ್ ಪ್ರತಿಭಟನಾ ಸಭೆಗೆ ಕ್ಷಣಗಣನೆ –  ಶಾಸಕರು ನಾಯಕರ ಆಗಮನ – ಬೃಹತ್ ಸಂಖ್ಯೆಯಲ್ಲಿ ಸೇರುತ್ತಿರುವ ಕೃಷಿಕರು

ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಜರಗುವ ಬೃಹತ್ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನ ಸಭೆಯು ಗಂಡ್ಯದಲ್ಲಿ ಜರುಗಲಿದ್ದು ಈ ಪ್ರತಿಭಟನಾ ಸಭೆಗೆ ಶಾಸಕರಾದ ಕು.ಭಾಗೀರಥಿ ಮುರುಳ್ಯ , ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸೇರಿದಂತೆ ನಾನಾ ಪಕ್ಷಗಳ ಪ್ರಮುಖ ನಾಯಕರು, ಧಾರ್ಮಿಕ ನಾಯಕರು,ಪಕ್ಷಗಳ ಕಾರ್ಯಕರ್ತರು ಆಗಮಿಸಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಜನತೆ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಾರ್ಷಿಕ ಮೇಳ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಭಾರತ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಸಹಯೋಗದೊಂದಿಗೆ ದಿನಾಂಕ 8 ಮತ್ತು 9 ನವಂಬರ್ 2024 ರಂದು ಎರಡು ದಿನದ ವಾರ್ಷಿಕ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜಿನ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಅರವಿಂದ ಅಯ್ಯಪ್ಪ ಸುತ ಗುಂಡಿ ಅವರು ವಹಿಸಿದರು....

ತಡೆಬೇಲಿಗೆ ಗುದ್ದಿದ ಟಾಟಾ ವಾಹನ, ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿಯ ತಡೆಬೇಲಿಗೆ ಟಾಟಾ ಗಾಡಿಯೊಂದು ಢಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಈ ಘಟನೆಯು ಮುಂಜಾನೆ ಮೂರು ಗಂಟೆ ಸುಮಾರಿಗೆ ನಡೆದಿರಬಹುದು ಎಂದು ಹೇಳಲಾಗುತ್ತಿದ್ದು ಟಾಟಾ ವಾಹನದಲ್ಲಿ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಗಾಯಗೊಂಡವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪಂಬೆತ್ತಾಡಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲ (ರಿ)ಪಂಬೆತ್ತಾಡಿ. ಅಕ್ಷತಾ ಯುವತಿ ಮಂಡಲ (ರಿ) ಪಂಬೆತ್ತಾಡಿ. ಅಮೃತಾ ಮಹಿಳಾ ಮಂಡಲ(ರಿ)ಪಂಬೆತ್ತಾಡಿ ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಪಂಬೆತ್ತಾಡಿ ಶಾಲೆಯಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿಗಳು ನೆರವೇರಿಸಿದರುಸಭಾಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿನಾಯಕಿ ಧಕ್ಷಾ ಎಂ ವಹಿಸಿದ್ದರು ಜಂಟಿ ಸಂಸ್ಥೆಯ ಪರವಾಗಿ ಶಾಲಾ ಮಕ್ಕಳಿಗೆ ಮತ್ತು...

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಕೆಲ ಕಾಲ ಬಂದ್ , ಮರ ತೆರವು.

ಪೆರಾಜೆಯ ಕಲ್ಬರ್ಪೆ ಬಳಿ ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮರವೊಂದು ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದ ಒಂದು ವಾಹನವು ಹಾನಿಗೊಂಡಿದ್ದು ಹಿನ್ನೆಲೆಯಲ್ಲಿ ಮಡಿಕೇರಿಯಿಂದ ಸುಳ್ಯ ಸಂಪರ್ಕಿಸುವ ರಸ್ತೆ ಬ್ಲಾಕ್ ಆಗಿದ್ದು ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು ಬಳಿಕ ಮರವನ್ನು ತೆರವು ಗೊಳಿಸಿದ ಬಳಿಕ ಸುಗಮ ಸಂಚಾರಕ್ಕೆ...
Loading posts...

All posts loaded

No more posts

error: Content is protected !!