ದೇವರಕೊಲ್ಲಿ ವಾಹನದಡಿಗೆ ಬಿದ್ದು ಚಿರತೆ ಮರಿ ಸಾವು .

ಸಂಪಾಜೆ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಇದೀಗ ಸುಮಾರು 9 ಗಂಟೆಯ ವೇಳೆಗೆ ಚಿರತೆ ಮರಿಯೊಂದು ಕಾಡಿನಿಂದ ರಸ್ತೆ ಮಾರ್ಗವಾಗಿ ದಾಟುವ ಸಂದರ್ಭದಲ್ಲಿ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ವಾನಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ . ಸದ್ಯ ಅರಣ್ಯ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು ಇದರ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಗಾಂಧಿನಗರ : ತಲವಾರು ಹಿಡಿದು ಗಲಾಟೆ – ಆತಂಕ ಸೃಷ್ಟಿಸಿದ ವ್ಯಕ್ತಿಗಳ ಪತ್ತೆಗಿಳಿದ ಪೋಲೀಸರು

ಗಾಂಧಿನಗರ ವೈನ್ ಶಾಪ್ ಬಳಿ ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಕೆಲವು ಹೊತ್ತು ಅವರೊಳಗೆ ಗಲಾಟೆ ಮಾಡಿಕೊಂಡು ಆತಂಕ ಸೃಷ್ಟಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. https://youtube.com/shorts/FkSqp5uM9M0?si=5PCLqgZn1kacbDkN ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ಚೀಲದಿಂದ ತಲವಾ‌ರ್ ರೀತಿಯ ಕತ್ತಿಯನ್ನು ಹೊರಗೆ ತೆಗೆದು ಮತ್ತೆ ಚೀಲದಲ್ಲಿ ಇರಿಸುವ ದೃಶ್ಯ ಕಂಡು ಬರುತ್ತಿದೆ. ಸ್ವಲ್ಪ ಮುಂದಕ್ಕೆ...
Ad Widget

ಒಸಾಟ್ ಸಂಸ್ಥೆ ವತಿಯಿಂದ 1 ಕೋಟಿ ರೂ ವೆಚ್ಚದಲ್ಲಿ ಸುಳ್ಯ ಸ.ಪ.ಪೂ. ಕಾಲೇಜು ಕೊಠಡಿ ಮತ್ತು ನೂತನ ಸಭಾಭವನಕ್ಕೆ ಶಿಲಾನ್ಯಾಸ

ಸಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಅಮೇರಿಕಾದ ಒಸಾಟ್ ಸಂಸ್ಥೆ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿ ನಿರ್ಮಾಣವಾಗಲಿದ್ದು, ಅದರ ಶಿಲಾನ್ಯಾಸ ಕಾರ್ಯಕ್ರಮ ನ.20ರಂದು ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಪುರೋಹಿತ ನಾಗರಾಜ ಭಟ್ ರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು, ಅಕಾಡೆಮಿ...

ನೂತನ ಉದ್ಯಾನವನಕ್ಕೆ ಸರದಾರ ವಲ್ಲಭಭಾಯಿ ಪಟೇಲ್ ನಾಮಕರಣ ಮಾಡುವಂತೆ ರಾಷ್ಟ್ರಾಭಿಮಾನಿಗಳ ಬಳಗದವರಿಂದ ಮನವಿ

ಸುಳ್ಯ ನಗರ ಪಂಚಾಯತ್ ವತಿಯಿಂದ ಜ್ಯೋತಿ ಸರ್ಕಲ್ ನಿಂದ ನಿರೀಕ್ಷಣಾ ಮಂದಿರದ ರಸ್ತೆಯ ಬಲಬದಿಯಲ್ಲಿ ನೂತನವಾಗಿ ನಿರ್ಮಿಸಿದ ಉದ್ಯಾನವನಕ್ಕೆ ಸರ್ದಾ‌ರ್ ವಲ್ಲಭಾಯಿ ಪಟೇಲ್ ನಾಮಕರಣ ಮಾಡುವಂತೆ ಹಾಗೂ ಪುತ್ಥಳಿ ನಿರ್ಮಿಸುವಂತೆ ಸುಳ್ಯರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಇಂದು ಮನವಿ ನೀಡಲಾಯಿತು.ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ ರವರಲ್ಲಿ ಮನವಿ ಪತ್ರವನ್ನು ರಾಷ್ಟ್ರಾಭಿಮಾನಿಗಳ ಬಳಗದ ಸಂಚಾಲಕ ಉಮೇಶ್ ಪಿ.ಕೆ...

ಸುಳ್ಯ ಸರಕಾರಿ ಆಸ್ಪತ್ರೆ – ಸಿಬ್ಬಂದಿಗಳಿಗೆ ವಾಹನ ಪಾರ್ಕಿಂಗ್ ಗೆ ಕಾಯ್ದಿರಿಸಿದ ಸ್ಥಳದಲ್ಲಿ ಖಾಸಗಿ ಆಂಬುಲೆನ್ಸ್ ವಾಹನ ನಿಲುಗಡೆ

ವೈದ್ಯರಿಗೊಂದು ನ್ಯಾಯ ಆಂಬುಲೆನ್ಸ್ ಚಾಲಕರಿಗೊಂದು ನ್ಯಾಯವಾ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ವಾಹನ ನಿಲುಗಡೆಗೆ ಕಾಯ್ದಿರಿಸಿದ ಸ್ಥಳದಲ್ಲಿ ನ.19 ರಂದು ಮಧ್ಯಾಹ್ನ ವೇಳೆ ಖಾಸಗಿ ಆಂಬುಲೆನ್ಸ್‌ ವಾಹನವೊಂದು ನಿಲ್ಲಿಸಿದ್ದು ಇದರ ಫೋಟೋ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣ ವಾಗಿದೆ.ಇದೇ ರೀತಿಯ ಘಟನೆ ಕಳೆದ ಕೆಲವು ದಿನಗಳ...

ಕೂಟೇಲು: ಕಾಡು ಹಂದಿ ತಿವಿದು ಟ್ಯಾಪರ್ಸ್ ಮಹಿಳೆಗೆ ಗಾಯ

ಕೆ ಎಫ್ ಡಿ ಸಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಟ್ಯಾಪಿಂಗ್ ಮಾಡುತ್ತಿರುವ ವೇಳೆ ಕಾಡು ಹಂದಿ ತಿವಿದು ಮಹಿಳೆ ಗಾಯಗೊಂಡ ಘಟನೆ ದುಗ್ಗಲಡ್ಕ ದಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಕೂಟೇಲು ಸಿಆರ್ ಸಿ ಯ ರಾಮಚಂದ್ರನ್ ಎಂಬವರ ಪತ್ನಿ ಅಂಬಿಕಾ ಎಂಬವರು ದುಗ್ಗಲಡ್ಕ ರಬ್ಬರ್ ತೋಟದಲ್ಲಿ ಸುಮಾರು 7 ಗಂಟೆ ಹೊತ್ತಿಗೆ ಟ್ಯಾಪಿಂಗ್ ನಡೆಸುತ್ತಿದ್ದರು. ಆಗ ಪೊದೆಗಳ...

ದೇವಚಳ್ಳ : ಎಂ ಆರ್ ಪಿ ಎಲ್ ನಿಂದ ಕಂದ್ರಪ್ಪಾಡಿ ಶಾಲೆಯಲ್ಲಿ ನಿರ್ಮಾಣಗೊಳ್ಳುವ ಕೊಠಡಿಗೆ ಗುದ್ದಲಿಪೂಜೆ

ಶತಮಾನೋತ್ಸವ ಆಚರಿಸಿಕೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ ಗೆ ಎಂ.ಆರ್.ಪಿ.ಎಲ್‌.ನ ವತಿಯಿಂದ ನಿರ್ಮಾಣವಾಗಲಿರುವ ರೂ.15 ಲಕ್ಷದ ಕೊಠಡಿಗೆ ಗುದ್ದಲಿಪೂಜೆಯು ನ.18ರಂದು ನಡೆಯಿತು. ಸುಳ್ಯ ಶಾಸಕಿ ಕು। ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಗ್ರಾಮ ಪಂಚಾಯತ್‌ ಸದಸ್ಯರಾದ ಭವಾನಿ ಶಂಕರ...

ಅರಂತೋಡು: ಅನಾರೋಗ್ಯದ ಹಿನ್ನೆಲೆ, ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಅನಾರೋಗ್ಯದ ಹಿನ್ನೆಲೆಯಲ್ಲಿದ್ದ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡು ಗ್ರಾಮದ ಉಳುವಾರಿನಲ್ಲಿ ನ.19ರಂದು ಸಂಜೆ ಸಂಭವಿಸಿದೆ.ಅರಂತೋಡು ಗ್ರಾಮದ ಉಳುವಾರಿನ ಪುಟ್ಟಣ್ಣ ಅವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಅವರಿಗೆ 63 ವರ್ಷ ವಯಸ್ಸಾಗಿತ್ತು. ಪುಟ್ಟಣ್ಣ ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ. ಮೃತರ ಪತ್ನಿ ಈ ಹಿಂದೆ ನಿಧನರಾಗಿದ್ದು, ಪುತ್ರ ಶರತ್, ಪುತ್ರಿ ರಮ್ಯ...

ನ. 24-25 : ಪೈಚಾರ್ ಅಲ್ ಅಮೀನ್ ಯೂತ್ ಸೆಂಟ‌ರ್ ವತಿಯಿಂದ ಸ್ವಲಾತ್‌ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಕಛೇರಿ ಉದ್ಘಾಟನೆ

ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ 18 ನೇ ವಾರ್ಷಿಕ ಸ್ವಲಾತ್ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಯೂತ್ ಸೆಂಟರ್‌ನ ನೂತನ ಕಛೇರಿ ಉದ್ಘಾಟನೆ ನ.24 ಮತ್ತು 25 ರಂದು ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಅಲ್ ಅಮೀನ್ ಯೂತ್ ಸೆಂಟರ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯದಲ್ಲಿ...

ನ.25- ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ನಿಂತಿಕಲ್ಲು ಸಹಯೋಗದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ

ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಾಸ್ ಲಿಮಿಟೆಡ್ ವತಿಯಿಂದ ಮುರುಳ್ಯ ಎಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಸಹಯೋಗದಲ್ಲಿ ಸಹಕಾರರತ್ನ ಎಂ.ಎನ್‌. ರಾಜೇಂದ್ರಕುಮಾ‌ರ್ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭವು ನ.25ರಂದು ನಿಂತಿಕಲ್ಲಿನ ಸಾಧನಾ ಸಹಕಾರಿ ಸೌಧದಲ್ಲಿ ನಡೆಯಲಿದೆ ಎಂದು ಮಂಗಳೂರು ಮಾಸ್ ಲಿಮಿಟೆಡ್ ಅಧ್ಯಕ್ಷ ಸಹಕಾರಿ ರತ್ನ...
Loading posts...

All posts loaded

No more posts

error: Content is protected !!