Ad Widget

ಶಾಲಾ ಶೈಕ್ಷಣಿಕ ಫೀಸು ಕಟ್ಟಲು ವಿದ್ಯಾರ್ಥಿಗಳಿಗೆ ಕಾಲಾವಕಾಶ ಮಾಡಿ ಕೊಡುವಂತೆ ಸರಕಾರಕ್ಕೆ ಅಗ್ರಹ – ರಿಯಾಜ್ ಕಟ್ಟೆಕಾರ್

ವಿಶ್ವದಾದ್ಯಂತ ಕೊರೊನ ಮಹಾಮಾರಿ ಸೋಂಕಿನಿಂದ ಜನರು ಕಂಗಾಲಾಗಿ ಹೋಗಿದ್ದು ಉದ್ಯೋಗವಿಲ್ಲದೆ , ಹಣವಿಲ್ಲದೆ ಕಷ್ಟದ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ . ಶಾಲಾ ಕಾಲೇಜು ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ಬಾರಿಯ ಫೀಸು ಕಟ್ಟದೆ ಬಾಕಿಯಾಗಿರುತ್ತದೆ . ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಫೀಸು ಕಟ್ಟುವಂತೆ ಒತ್ತಾಯ ಮಾಡುತ್ತಿರುವ ವಿಷಯ ಮಾದ್ಯಮಗಳಲ್ಲಿ ಕಂಡು ಬಂದಿರುತ್ತದೆ...

ಪಂಜ : ಪಿಯುಸಿಯಲ್ಲಿ 590 ಅಂಕ ಪಡೆದ ಅಂಕಿತ ರವರಿಗೆ ಪುರಸ್ಕಾರ

ದ್ವಿತೀಯ ಪಿಯುಸಿಯಲ್ಲಿ 590 ಅಂಕಗಳಿಸಿದ ಪಂಜದ ಕೃಷ್ಣನಗರ ಗಂಗಾಧರ ಶಾಸ್ತ್ರಿ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಅಂಕಿತ ರವರಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ದ ಆಡಳಿತಾಧಿಕಾರಿ ಡಾ. ದೇವಿ ಪ್ರಸಾದ್ ಕಾನತ್ತೂರ್ ರವರುಅವರ ನಿವಾಸಕ್ಕೆ ತೆರಳಿ ಪುರಸ್ಕರಿಸಿದರು.
Ad Widget

ಚೆಂಬು ಕಿರುಸೇತುವೆ ಕುಸಿತ – ಪರ್ಯಾಯ ರಸ್ತೆ ನಿರ್ಮಾಣ

ಚೆಂಬು ಗ್ರಾಮದ ದಬ್ಬಡ್ಕ ರಸ್ತೆಯಲ್ಲಿ ಕಾಂತುಬೈಲಿನಿಂದ ಮುಂದಕ್ಕೆ ಜು.19 ರಂದು ಸುರಿದ ಭಾರಿ ಮಳೆಗೆ ಕಿರುಸೇತುವೆಯೊಂದು ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನೆಲೆಯಲ್ಲಿ ಜು.22 ರಂದು ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್ , ಪಯಸ್ವಿನಿ ಸಹಕಾರಿ ಸಂಘದ ಅದ್ಯಕ್ಷ ಅನಂತ್ ಎನ್.ಸಿ ರವರ ಉಪಸ್ಥಿತಿಯಲ್ಲಿ ಗುತ್ತಿಗೆದಾರ ಪ್ರಶಾಂತ್ ಮತ್ತು ಊರವರ ಸಹಕಾರದಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮತ್ತು...

ಮೊಬೈಲ್ ಗ್ಯಾರೇಜ್ ಸಂಸ್ಥೆಯ ಮಾಲಕರಿಂದ ಸ್ಪಷ್ಟನೆ

ಸುಳ್ಯ ನಗರ ಮುಖ್ಯ ರಸ್ತೆ ಬಾಳೆಮಕ್ಕಿ ಯಲ್ಲಿ ಕಳೆದ ಆರು ವರ್ಷಗಳಿಂದ ತಮ್ಮೆಲ್ಲರ ಸಹಕಾರದಿಂದ ಮೊಬೈಲ್ ಗ್ಯಾರೇಜ್ ಎಂಬ ಹೆಸರಿನ ಮೊಬೈಲ್ ಫೋನ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿ ನಡೆಸಿಕೊಂಡು ಬರುತ್ತಿದ್ದೇವೆ. ಈವರೆಗೂ ನಮ್ಮ ಸಂಸ್ಥೆಯ ಬಗ್ಗೆ ಉತ್ತಮ ಹೆಸರಿರುವುದು ತಮಗೆಲ್ಲಾ ಗೊತ್ತಿದೆ. ಇದೀಗ ನಮ್ಮ ಸಂಸ್ಥೆಯಲ್ಲಿ ಆನ್ಲೈನ್ ಜಾಹೀರಾತು ( Digital marketing )...

ಮಹಿಳೆಯೊಂದಿಗೆ ಚಕ್ಕಂದವಾಡಲು ಹೋದ ಯುವಕನ ಬೆನ್ನಿಗೆ ಬಿತ್ತು ಇಸ್ತ್ರಿ

ಸುಳ್ಯದ ಯುವಕನೋರ್ವ ಆಲೆಟ್ಟಿ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಚಕ್ಕಂದವಾಡಲು ಮಹಿಳೆಯ ಮನೆಗೆ ಹೋಗಿ ಸ್ಥಳೀಯ ಯುವಕರ ಕೈಗೆ ಸಿಕ್ಕಿ ಸಕ್ಕತ್ತಾಗಿ ಒದೆ ತಿಂದಿರುವ ಬಗ್ಗೆ ಫೋಟೋ ಸಹಿತ ಜಾಲತಾಣದಲ್ಲಿ ವೈರಲ್ ಆಗಿದೆ.ಆಟೋ ಚಾಲಕನೊಬ್ಬ ಆಲೆಟ್ಟಿ ಗ್ರಾಮದ ಮಹಿಳೆಯೊಂದಿಗೆ ಚಕ್ಕಂದವಾಡುತ್ತಿದ್ದ ಸಮಯದಲ್ಲಿ ಸ್ಥಳೀಯರಿಂದ ಏಟು ತಿಂದ ಘಟನೆ ಜುಲೈ 21 ರ ಮಧ್ಯಾಹ್ನ ನಡೆದಿದೆ....

ನೀಲೇಶ್ವರ ಲೈಂಗಿಕ ದೌರ್ಜನ್ಯ ಆರೋಪಿ ವಿರುದ್ದ ಗೂನಡ್ಕ ಜಮಾಅತ್ ನಿಂದ ಶಿಸ್ತು ಕ್ರಮ

ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಕಾರ್ಯವ್ಯಾಪ್ತಿ ಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದ ಅಬೂಬಕ್ಕರ್ ಮುಸ್ಲಿಯಾರ್ ಎಂಬ ವ್ಯಕ್ತಿಯು ಕೇರಳ ಕರ್ನಾಟಕದ ಕೆಲವು ಭಾಗಗಳಲ್ಲಿ ಮದ್ರಸಾ ಅದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಇವರು ಅನೇಕ ಕಡೆಗಳಲ್ಲಿ ವಿವಿದ ಪ್ರಕರಣಗಳಲ್ಲಿ ಪೋಲಿಸರಿಗೆ ಸಿಕ್ಕಿ ಬಿದ್ದು ಜೈಲು ಶಿಕ್ಷೆಯನ್ನು ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದು ಇದೀಗ ಮತ್ತೊಮ್ಮೆ ಲೈಂಗಿಕ ಚಟುವಟಿಕೆಯಲ್ಲಿ...

ಅಡ್ಡತೋಡು ಚಿದ್ಗಲ್ ಕಾಂಕ್ರೀಟ್ ರಸ್ತೆ ಶಾಸಕರಿಂದ ಉದ್ಘಾಟನೆ

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂತ್ಕುಂಜ ಗ್ರಾಮದ ಅಡ್ಡತೋಡು ಚಿದ್ಗಲ್ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಎಸ್. ಅಂಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ರಾಮಯ್ಯ ಭಟ್ ಪಂಜ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಗುತ್ತಿಗಾರು ಮಾಜಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ ವಳಲಂಬೆ, ಪಂಜ ಗ್ರಾ. ಪಂ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಗ್ರಾ.ಪಂ. ಅಭಿವೃದ್ಧಿ...

ಸೂಟ್ ಕೇಸ್ ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು

ಸುಳ್ಯ: ಸೂಟ್ ಕೇಸ್ ನಲ್ಲಿ ತುಂಬಿಸಿ 15 ಕೆ.ಜಿ. ಗೋಮಾಂಸ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಸುಳ್ಯ ಜ್ಯೋತಿ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಆರೋಪಿಯಿಂದ ಸ್ಕೂಟರ್, 15 ಕೆ.ಜಿ. ಗೋಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಲ್ಲುಮುಟ್ಲು ನಿವಾಸಿ ನಿಸಾರ್(30) ಬಂಧಿತ. ಈತ ಗಾಂಧಿನಗರದಿಂದ ಸ್ಕೂಟರ್ ನಲ್ಲಿ ಸೂಟ್ ಕೇಸ್...

ಸುಳ್ಯ ಶಾಂತಿನಗರ ಪರಿಸರದಲ್ಲಿ ನಡೆದಿದೆ ಎನ್ನಲಾದ ಕೆಂಪು ಕಲ್ಲು ಗಣಿಗಾರಿಕೆ, ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರದ ನಿಯಮಾನುಸಾರ ನಡೆದಿದೆ – ಅಧಿಕಾರಿಗಳಿಂದ ಸ್ಪಷ್ಟನೆ

ಸುಳ್ಯ ಶಾಂತಿನಗರ ಕ್ರೀಡಾಂಗಣದಲ್ಲಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಚಿತ್ರೀಕರಣ ಹರಿದಾಡುತ್ತಿದ್ದವು. ಈ ಘಟನೆಯ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿಯಲ್ಲಿ ಗಣಿಗಾರಿಕೆ ಅಕ್ರಮವೋ! ಸಕ್ರಮವೋ? ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಉತ್ತರಿಸುವಂತೆ ವರದಿ ಪ್ರಕಟಿಸಿತ್ತು.ಈ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳನ್ನು ನಮ್ಮ ಪತ್ರಿಕೆಯ ವರದಿಗಾರರು ಸಂಪರ್ಕಿಸಿದಾಗ ಕ್ರೀಡಾಂಗಣದ ಅಭಿವೃದ್ಧಿಕರಣಕ್ಕೆ ಶಾಂತಿನಗರದ...

ಬೆಳ್ಳಾರೆ – ಪ್ರಿಯಾ ತಾಜಾ ಹಂದಿ ಮಾಂಸದ ಅಂಗಡಿ ಶುಭಾರಂಭ

ಬೆಳ್ಳಾರೆಯಲ್ಲಿ ಧನಂಜಯ ಸವಣೂರು ಮಾಲಕತ್ವದ ಪ್ರಿಯಾ ತಾಜಾ ಹಂದಿ ಮಾಂಸದ ಅಂಗಡಿ ಇತ್ತೀಚೆಗೆ ಶುಭಾರಂಭಗೊಂಡಿದೆ. ತಾಜಾ ಮತ್ತು ಶುದ್ಧ ಹಂದಿ ಮಾಂಸವು ಮಿತ ದರದಲ್ಲಿ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!