ಚೆನ್ನಾವರ ಎಸ್ ವೈಎಸ್ ಎಸ್ಸೆಸ್ಸೆಫ್ ವತಿಯಿಂದ ಈದ್ ಕಿಟ್ ವಿತರಣೆ

ಚೆನ್ನಾವರ ಎಸ್ ವೈಎಸ್ ಬ್ರಾಂಚ್ ಹಾಗೂ ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಈದುಲ್ ಅಝ್ಹಾ ಪ್ರಯುಕ್ತ 50 ಕುಟುಂಬಗಳಿಗೆ ಈದ್ ಆಚರಿಸಲು ಬೇಕಾದ ತುಪ್ಪಕ್ಕಿ,ತುಪ್ಪ , ಸಕ್ಕರೆ ಪಾನೀಯಪದಾರ್ಥ, ತರಕಾರಿ, ಮಸಾಲ ಪದಾರ್ಥಗಳನ್ನೊಳಗೊಂಡ ಕಿಟ್ ವಿತರಿಸಲಾಯ್ತು.ಪ್ರಸ್ತುತ ಕಿಟ್ ಗಳಿಗಾಗಿ ಸಂಘಟನೆಯ ಹೆಚ್ಚಿನ ಕಾರ್ಯಕರ್ತರು ವಿದೇಶದಿಂದಲೂ ಊರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರವನ್ನು ನೀಡಿರುತ್ತಾರೆ.ಈ ಕಾರ್ಯ ಪ್ರವೃತ್ತಿಗೆ ಸಹಕರಿಸಿದ...

ಪಂಜ ಕೋವಿಡ್ ಕಾರ್ಯಪಡೆ ಸಭೆ

ಪಂಜ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ಕಾರ್ಯ ಪಡೆಯ ಸಭೆಯು ಗ್ರಾ.ಪಂ. ಸಭಾ ಭವನದಲ್ಲಿ ನಡೆಯಿತು . ಪಂಚಾಯತ್ ಆಡಳಿತಾಧಿಕಾರಿ ಡಾ . ದೇವಿಪ್ರಸಾದ್ ಕಾನತ್ತೂರ್ , ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ಮಂಜುನಾಥ್ , ಪಿಡಿಒ ಮಣಿಯಾನ ಪುರುಷೋತ್ತಮ , ಕಾರ್ಯದರ್ಶಿ ಪದ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು .
Ad Widget

*ಪತ್ರಿಕಾರಂಗ ಪತ್ರಿಕಾ ರಂಗವಾಗಿಯೇ ಉಳಿಯಬೇಕು ಪತ್ರಿಕೋದ್ಯಮವಾಗಬಾರದು ಡಾ. ಸುಂದರ್ ಕೇನಾಜೆ*

ದೇಶದ ಸಂವಿಧಾನದಲ್ಲಿ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗವನ್ನು ಗುರುತಿಸಲಾಗುತ್ತಿದೆ. ದೇಶದ ಇನ್ನಿತರ ಅಂಶಗಳಾದ ಆರೋಗ್ಯ, ಕಲೆ,ಸಾಹಿತ್ಯ, ವಿಜ್ಞಾನ,ಇವುಗಳು ಯಾವುದನ್ನು ಉದ್ಯಮವಾಗಿ ಬಿಂಬಿಸ ಲಾಗುತ್ತಿಲ್ಲ. ಅದೇ ರೀತಿ ಪತ್ರಿಕೆಗಳು ಕೂಡ ಪತ್ರಿಕಾರಂಗ ವಾಗಿಯೇ ಇರಬೇಕೇ ವಿನಹ ಯಾವತ್ತಿಗೂ ಪತ್ರಿಕೋದ್ಯಮ ವಾಗ ಬಾರದು.  1843 ರಿಂದ 1947 ರವರೆಗೆ ದೇಶದಲ್ಲಿ ಪತ್ರಿಕಾರಂಗ ದೇಶದಲ್ಲಿ ಜಾಗೃತಿ ಮತ್ತು ಸ್ವಾತಂತ್ರ್ಯ ಕ್ರಾಂತಿಯನ್ನು ಉಂಟು...

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಜು.30 ರಂದು ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು. ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್ .ಭವಾನಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆ ವಹಿಸಲಿದ್ದರು. ಶಿವರಾಮ ಕಾರಂತ ಬಾಲವನ ಪುತ್ತೂರು ಇದರ ಆಡಳಿತಾಧಿಕಾರಿ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(30.07.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಕೇಂದ್ರ ಸರಕಾರದಿಂದ ಅನ್ ಲಾಕ್-3 ಹೊಸ ಮಾರ್ಗ ಸೂಚಿ ಪ್ರಕಟ : ಆಗಸ್ಟ್ 31ರವರೆಗೆ ಶಾಲಾರಂಭವಿಲ್ಲ : ಆ. 5 ರಿಂದ ನೂತನ ನಿಯಮ ಜಾರಿ : ಜಿಮ್, ಸ್ವಿಮ್ಮಿಂಗ್, ಯೋಗಕ್ಕೆ ಅನುಮತಿ

ಕೊರೊನಾ ವೈರಸ್ ಭೀತಿಯಿಂದ ಹೇರಿದ್ದ ಲಾಕ್‍ಡೌನ್ ಬಗ್ಗೆ ಕೇಂದ್ರ ಸರಕಾರ ಇದೀಗ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ. ಅನ್ ಲಾಕ್ 3.0 ನಿಯಮಗಳು ಅಗಸ್ಟ್ 1 ರಿಂದ ಜಾರಿಯಾಗಲಿದೆ. ಇದುವರೆಗೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ರದ್ದು ಮಾಡಲಾಗಿದೆ. ಆ.31 ರವರೆಗೆ ಶಾಲಾ-ಕಾಲೇಜು ತೆರೆಯುವಂತಿಲ್ಲ. ಆಗಸ್ಟ್ 5 ರಿಂದ ಯೋಗ, ಜಿಮ್, ಸ್ವಿಮ್ಮಿಂಗ್ ಪೂಲ್ ನಡೆಸಲು ಅವಕಾಶ...

ಗುತ್ತಿಗಾರಿನಲ್ಲಿ 109 ಮಂದಿಯ ಉಚಿತ ಕೋವಿಡ್ ಪರೀಕ್ಷೆ – ಎಲ್ಲಾ ವರದಿ ನೆಗೆಟಿವ್

ತಾಲೂಕು ಆರೋಗ್ಯ ಇಲಾಖೆ, ಕೋವಿಡ್ ನಿಗ್ರಹ ದಳ ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಉಚಿತ ಕೋವಿಡ್ ಪರೀಕ್ಷೆ ಗುತ್ತಿಗಾರಿನ ಪಂಚಾಯತ್ ಪ. ವರ್ಗದ ಸಭಾಂಗಣದಲ್ಲಿ ಜು.29 ರಂದು ನಡೆಯಿತು.ಗುತ್ತಿಗಾರು ಗ್ರಾ ಪಂ ಮಾಜಿ ಅಧ್ಯಕ್ಷ ಅಚ್ಯುತ ಗುತ್ತಿಗಾರು ಕಾರ್ಯಕ್ರಮ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ...

ಕಳಂಜ ಗ್ರಾಮದ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಕಳಂಜ ಗ್ರಾಮದ ಮಣಿಮಜಲಿನ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಇವರು ಇತ್ತೀಚೆಗೆ ತಮ್ಮ ಮನೆಯಲ್ಲಿ ಕ್ವಾರಂಟೈನ್ಗೆ ಒಳಪಟ್ಟಿದ್ದರು. ಇದೀಗ ವರದಿ ಕೈಸೇರಿದ್ದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾಜಿ ಶಾಸಕ ಕೂಜುಗೋಡು ಕಟ್ಟೆಮನೆ ದಿ. ವೆಂಕಟ್ರಮಣ ಗೌಡರ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ

ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ನೇತೃತ್ವದಲ್ಲಿ ಇಂದು 2 ವಿಶೇಷ ಲಕೋಟೆಗಳು ಬಿಡುಗಡೆಗೊಳಿಸಲ್ಪಟ್ಟಿತು . ಪುತ್ತೂರು ಅಂಚೆ ವಿಭಾಗೀಯ ತರಬೇತಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧಾರ್ಮಿಕ ಚಿಂತನಕಾರ , ಸಾಮಾಜಿಕ ಸುಧಾರಕ , ರಾಜಕೀಯ ಹುರಿಯಾಳು ಮದ್ರಾಸು ರಾಜ್ಯದಡಿಯಲ್ಲಿ ಪ್ರಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಅವಿಭಜಿತ ಪುತ್ತೂರು ಕ್ಷೇತ್ರದಿಂದ ಪ್ರಥಮ ಬಾರಿಗೆ...

ಸಂಪುಟ ಪುನರ್ ರಚನೆ ಶೀಘ್ರ : ಸುಳ್ಯ ಶಾಸಕ ಎಸ್.ಅಂಗಾರ ಮಂತ್ರಿ ಸಾಧ್ಯತೆ ಹೆಚ್ಚು

ಬಿ.ಎಸ್ ಯಡಿಯೂರಪ್ಪ ‌ನೇತ್ರತ್ವದ ರಾಜ್ಯ ಸರ್ಕಾರವು ಒಂದು ವರ್ಷದ ಅವಧಿ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸುವ ಸಾಧ್ಯತೆ ಇದ್ದು, ಸುಳ್ಯ ಶಾಸಕ ಎಸ್.ಅಂಗಾರರು ಸಚಿವರಾಗುವ ಸಾಧ್ಯತೆ ನಿಚ್ಚಳವಾಗಿದೆ. ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಮುಜುರಾಯಿ ಇಲಾಖೆ ಮಂತ್ರಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೈ ಬಿಟ್ಟು ಇವರ ಬದಲಿಗೆ ಅಂಗಾರರನ್ನು ಮಂತ್ರಿ ಸ್ಥಾನಕ್ಕೆ...
Loading posts...

All posts loaded

No more posts

error: Content is protected !!