ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ – ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಬೇಡಿ, ಶಾಂತಿಯುತ ಸುಳ್ಯ ಶಾಂತಿಯುತವಾಗಿ ಮುಂದುವರಿಯಲಿ

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ (ಭೂಮಿ ಪೂಜಾ) ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಅತಿರೇಕಕ್ಕೆ ಒಳಗಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸನ್ನಿವೇಶಕ್ಕೆ ಮುಂದಾಗಬಾರದು ಎಂದು ಇಂದು ಸಂಜೆ ಸುಳ್ಯದಲ್ಲಿ ನಡೆದ ಶಾಂತಿ ಸಭೆಯಲ್ಲಿ ವಿವಿಧ ಧರ್ಮದ ಮುಖಂಡರು ಮತ್ತು ರಾಜಕೀಯ ನೇತಾರರನ್ನು ಉದ್ದೇಶಿಸಿ ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ ರವರು...

ಕೊಡಗಿನಲ್ಲಿ 41 ಹೊಸ ಕೋವಿಡ್ ಪ್ರಕರಣ ಪತ್ತೆ

ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 15 ಹೊಸ ಕೋವಿಡ್ ಪ್ರಕರಣಗಳು ಮತ್ತು  ಮಧ್ಯಾಹ್ನ 1.30 ರ ವೇಳೆಗೆ 26 ಹೊಸ ಕೋವಿಡ್-19 ಪ್ರಕರಣ ಸೇರಿದಂತೆ ಒಟ್ಟು 41 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ವಿರಾಜಪೇಟೆಯ ವಡ್ಡರಮಡುವಿನ 38 ವರ್ಷದ ಪುರುಷ, 10 ಮತ್ತು 12 ವರ್ಷದ ಬಾಲಕ,...
Ad Widget

ತಾಲೂಕು ಎನ್ ಎಸ್ ಯು ಐ ಘಟಕದಿಂದ ಎನ್ ಎಂ ಸಿ ಪ್ರಾಂಶುಪಾಲರಿಗೆ ಮನವಿ

ತಾಲೂಕು ಎನ್ ಎಸ್ ಯು ಐ ಘಟಕದಿಂದ ವಿದ್ಯಾರ್ಥಿಗಳಿಗೆ ಫೀಸು ಕಟ್ಟಲು ಕೊರೊನ ಮಹಾಮಾರಿ ಕಾಯಿಲೆಯಿಂದ ಪೊಷಕರ ಬಳಿ ಹಣದ ಕೊರತೆ ಇರುವುದರಿಂದ ಫೀಸು ಕಟ್ಟಲು ಸಮಸ್ಯೆಯಾಗುತ್ತಿದ್ದು ಕಾಲೇಜು ವತಿಯಿಂದ ಸಮಯಾವಕಾಶ ಕೊಡಬೇಕೆಂದು ಎನ್ ಎಂ ಸಿ ಪ್ರಾಂಶುಪಾಲರಾದ ಪೂವಪ್ಪ ಕಣಿಯೂರು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ...

ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿ ಅಧ್ಯಕ್ಷರಾಗಿ ಪಿ.ಎ. ಮುನೀರ್ ಸಖಾಫಿ ಪುನರಾಯ್ಕೆ

ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಮಿತಿಯ ಅಧ್ಯಕ್ಷರಾದ ಪಿ.ಎ.ಮುನೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ ಒಂದರಂದು ಬಿಜೆಯಂ ವಠಾರದಲ್ಲಿ ನಡೆಯಿತು.ಸಿ.ಎಚ್.ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುಆ ಮೂಲಕ ಸಭೆಗೆ ಚಾಲನೆ ನೀಡಿ ಸಭೆಯನ್ನು ಉದ್ಘಾಟಿಸಿದರು. ಹಾಫಿಳ್ ಯೂನುಸ್ ಎಂ.ಪಿ. ಖಿರಾಅತ್ ಪಟಿಸಿದರು. ಎಚ್ಐಎಂ ಸದರ್ ಉಸ್ತಾದ್ ಅಲ್ ಹಾಜ್ ಬಿ. ಎಂ.ಇಸ್ಮಾಯಿಲ್ ಸಖಾಫಿ ಮುತ ಅಲ್ಲಿಂ...

ಪಂಜ : ಪೌಷ್ಟಿಕಾಹಾರ ವಿತರಣೆ, ಸ್ತನ್ಯಪಾನ ಸಪ್ತಾಹ

ಪಂಜ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕಾಹಾರ ವಿತರಣೆ ನಡೆಯಿತು. ವನಿತ ಸಮಾಜದ ಅಧ್ಯಕ್ಷೆ ಹೇಮಲತ ಸಿ ವಿತರಿಸಿದರು. ಆರೋಗ್ಯ ಕಾರ್ಯಕರ್ತೆ ಕಮಲ ಎ.ಎಸ್., ಆಶಾ ಕಾರ್ಯಕರ್ತೆ ಪುಷ್ಪಾವತಿ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಹಾಗೂ ಪೋಷಕರು, ಫಲಾನುಭವಿಗಳು ಉಪಸ್ಥಿತರಿದ್ದರು.

ರಾಮ ಮಂದಿರ ಶಂಕು ಸ್ಥಾಪನೆ ಹಿನ್ನೆಲೆಯಲ್ಲಿ ಯಾವುದೇ ಕೋಮು ಪ್ರಚೋದಕ ಸಂದೇಶ ಹಾಕಬಾರದೆಂದು ಬೆಳ್ಳಾರೆ ಪೊಲೀಸರಿಂದ ಸಾರ್ವಜನಿಕರಿಗೆ ಸೂಚನೆ

ಜುಲೈ 05 ರಂದು ಅಯೋಧ್ಯೆ ಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಇರುವುದರಿಂದ ಸಾರ್ವಜನಿಕರು ಯಾವುದೇ ಕೋಮುಗಲಭೆಗಳನ್ನು ಸೃಷ್ಟಿಸುವಂತಹ ಸಂದೇಶ ಗಳನ್ನು ವಾಟ್ಸಾಪ್ ಅಥವಾ ಫೇಸ್ಬುಕ್ನಲ್ಲಿ ಒಂದು ಧರ್ಮಕ್ಕೆ ಮತ್ತು ಇನ್ನೊಂದು ಧರ್ಮಕ್ಕೆ ಧಕ್ಕೆಯಾಗುವಂತೆ ಯಾವುದೇ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು ಮತ್ತು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು. ಯಾರಾದರೂ ಅಂತ ಸಂದೇಶಗಳನ್ನು...

ಯಶಸ್ವಿಯಾಗಿ ಮುನ್ನಡೆಯುತ್ತಿರುವ ದ್ವಿತೀಯ ಹಂತದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ( ರಿ), ಸಹಕಾರ ಭಾರತಿ ದ. ಕ. ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಎಂ.ಸಿ.ಸಭಾಂಗಣದಲ್ಲಿ ನಡೆದ ಎರಡನೇ ವಾರದ " ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ " ಇದರ ಉದ್ಘಾಟನಾ ಕಾರ್ಯಕ್ರಮ ವನ್ನು ಪಶು...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(03.08.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಕೊಡಗಿನಾದ್ಯಂತ ಬಾರಿ ಮಳೆ ಜನಜೀವನ ಅಸ್ತವ್ಯಸ್ತ

ಇಂದು ಕೊಡಗಿನಾದ್ಯಂತ ಆಟಿ ಹಬ್ಬದ ದಿನ ವಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸತತವಾಗಿ ಎರಡು ಗಂಟೆಗಳ ಕಾಲ ಸುರಿದ ಭಾರಿ ಗಾಳಿ ಮಳೆಗೆ ನಗರದ ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಹರಿದಾಡಿದವು.ಬಹಳ ಹಿಂದಿನ ಕಾಲದಿಂದಲೇ ಬಂದಿರುವ ಆಟಿ ತಿಂಗಳನ್ನು ನೆನಪಿಸುವ ರೀತಿಯಲ್ಲಿ ಇಂದು ಸಂಜೆ 4 ಗಂಟೆಯಿಂದ ಸುಮಾರು 6 ಗಂಟೆಯ...

ನಾಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸುಳ್ಯ ವಿಧಾನಸಭಾ ಕ್ಷೇತ್ರ ಭೇಟಿ

ವಿಧಾನ ಪರಿಷತ್ ಸದಸ್ಯ  ಪ್ರತಾಪ್ ಸಿಂಹ ನಾಯಕ್ ಆ.3 ರಂದು  ಸುಳ್ಯ ವಿಧಾನಸಭಾ ಕ್ಷೇತ್ರ ಭೇಟಿ ಮಾಡಲಿದ್ದಾರೆ. ಅಂದು ಮಧ್ಯಾಹ್ನ ಗಂ12.00 ಕ್ಕೆ ಕಡಬ ದುರ್ಗಾಂಬಿಕ ದೇವಸ್ಥಾನದ ಬಳಿ  ಪ್ರತಾಪ್ ಸಿಂಹ ನಾಯಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂ 3.00 ಕ್ಕೆ ಸುಳ್ಯ ಬಿಜೆಪಿ  ಕಛೇರಿಗೆ ಭೇಟಿ ನೀಡಲಿದ್ದಾರೆ ಎಂದು ಸುಳ್ಯ ಬಿಜೆಪಿ ಪ್ರಕಟಣೆ ತಿಳಿಸಿದೆ.
Loading posts...

All posts loaded

No more posts

error: Content is protected !!