- Tuesday
- April 28th, 2026
ಬಳ್ಪ ವರ್ತಕರ ಸಂಘದಿಂದ ನೆರವಿನ ಹಸ್ತಬಳ್ಪದ ಹಿರಿಯ ವರ್ತಕ ವಾಸು ಮಣಿಯಾಣಿ ಯವರು ಅನಾರೋಗ್ಯ ದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ನೆರವಿನ ಹಸ್ತ ಚಾಚಿದ ಬಳ್ಪದ ವರ್ತಕರೆಲ್ಲಾ ಸೇರಿ ಸಂಗ್ರಹಿಸಿದ ಸುಮಾರು ರೂ 23 ಸಾವಿರ ಧನ ಸಹಾಯನ್ನು ವಾಸು ಮಣಿಯಾಣಿ ಅವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಅಧ್ಯಕ್ಷರಾದ ಹಸೈನಾರು ಬಳ್ಪ, ಕಾರ್ಯದರ್ಶಿ ಪ್ರಸನ್ನ...
ಐವರ್ನಾಡಿನ ಪಾಲೆಪ್ಪಾಡಿ ಅಮಲ ರಸ್ತೆಯನ್ನು ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ಸದಸ್ಯರು ಶ್ರಮದಾನದ ಮೂಲಕ ಆ.9 ರಂದು ದುರಸ್ಥಿಗೊಳಿಸಿದರು.ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿ,ರಸ್ತೆ ಬದಿ ಇರುವ ಕಾಡು,ಪೊದೆಗಳನ್ನು ಕಡಿಯಲಾಯಿತು.ಗೆಳೆಯರ ಬಳಗದ ಎಲ್ಲಾ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಹಿಂದೂ ಜಾಗರಣ ವೇದಿಕೆ-ಕಣ್ಕಲ್ ಇದರ ವತಿಯಿಂದ ಕೇನ್ಯ ಗ್ರಾಮದ ಪ್ರಮುಖ ರಸ್ತೆ ಗಳಲ್ಲಿ ಶ್ರಮದಾನ ನಡೆಯಿತು. ಕೇನ್ಯ, ಕಣ್ಕಲ್, ಐನಡ್ಕ, ಬರಮೇಲು,ಪೆಲತ್ತಗಂಡಿ, ಕೆರೆಕ್ಕೋಡಿ, ನೆಲ್ಯಡ್ಕ, ಕಣ್ಕಲ್, ಪೇರ್ಬುಡ, ಗೆಜ್ಜೆ, ಕಾರ್ಯತಡ್ಕ, ಕೇನ್ಯ, ಚಾಲ್ಯಾರು, ಅಡ್ಡಬೈಲುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪೊದೆಗಳನ್ನು ಕಡಿಯುವ ಮುಖಾಂತರ ಶ್ರಮದಾನ ಮಾಡಲಾಯಿತು ಮತ್ತು ರಸ್ತೆಯಲ್ಲಿರುವ ಹೊಂಡಕ್ಕೆ ಕಲ್ಲು ಮಿಶ್ರಿತ ಮರಳು ಹಾಕಿ...
ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆ ಗಟ್ಟಿಗಾರು ಪಂಚಾಯತ್ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ, ರಸ್ತೆ ಬದಿಯ ಸ್ವಚ್ಛತೆ ಕೆಲಸವನ್ನು ಸ್ಥಳೀಯ ನಾಗರಿಕರ ತಂಡವು ಶ್ರಮದಾನದ ಮೂಲಕ ನೆರವೇರಿಸಿತು. ಈ ಶ್ರಮದಾನದಲ್ಲಿ ಸ್ಥಳೀಯರಾದ ಪುರುಷೋತ್ತಮ ಕಜೆ, ಶಿವಕರ ಕಜೆ, ದೀಕ್ಷಿತ್ ಚಿತ್ತಡ್ಕ, ಕಿರಣ್ ಗುಡ್ಡೆಮನೆ, ಸುಮಿತ್ ಗಟ್ಟಿಗಾರು, ಲಕ್ಷ್ಮೀನಾರಾಯಣ ಕಜೆ, ಓಂ ಪ್ರಸಾದ್ ಕಜೆ, ಮನೋಜ್ ಚಿತ್ತಡ್ಕ,...
ಸುಳ್ಯ ಗಾಂಧಿನಗರದ ಅಂಗನವಾಡಿ ಕೇಂದ್ರದ ಸುತ್ತ ಮುತ್ತಲಿನ ಪರಿಸರವನ್ನು ಮಹಾಮಾಯಿ ದೇವಸ್ಥಾನ ಸಮಿತಿ ಹಾಗು ಕೃಷ್ಣ ಜನ್ಮಾಷ್ಟಮಿ ಸಮಿತಿಯ ತಂಡದವರಿಂದ ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಶ್ರಮದಾನ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸೇವೆಯನ್ನು ಅಭಿನಂದಿಸಿದರು . ಈ ಸಂದರ್ಭದಲ್ಲಿ ಎಂ ಬಿ ಚೋಮ, ನಾರಾಯಣ, ರವಿ ನಾವೂರು, ಐತಪ್ಪ, ಗುರು,...
ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸರಕಾರಿ ಶಾಲೆಯ ಹಿಂಭಾಗದ ಬರೆ ಕುಸಿತ ಗೊಂಡಿದ್ದು ಹೊಸದಾಗಿ ನಿರ್ಮಾಣವಾದ ಕಟ್ಟಡಕ್ಕೆ ಹಾನಿಗೊಂಡಿದ್ದು ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.
ಮಳೆಗಾಲದ ಅದ್ಭುತ ಸವಿಯೇ ಹಾಗೆ, ಮನಕೆ ಮುದ ನೀಡುವ ಚೆಲುವಿಕೆ. ವರ್ಷದಾರೆ ಭುವಿಗೆ ತಂಪನ್ನು ನೀಡುವ ಜೊತೆಗೆ ಕಂಗಳಿಗೂ ನಯನಮನೋಹರ ದೃಶ್ಯಾವಳಿ ನೀಡುವುದು. ಭೋರ್ಗರೆದು ಧುಮ್ಮುಕ್ಕುವ ಸ್ಥಳೀಯ ಜಲಪಾತವಾಗಿ ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸುವುದು.ಇಂತಹ ನಯನಮನೋಹರ ಜಲಪಾತ ಸುಳ್ಯ ತಾಲೂಕಿನ ಸೋಣಂಗೇರಿಯಲ್ಲಿದೆ. ಸದ್ಯ ಮಳೆಯ ಪ್ರಮಾಣ ಅಧಿಕವಾಗಿದ್ದು ಜಲಪಾತದ ಅಂದ ಹೆಚ್ಚಾಗಿದೆ.ಬೆಳ್ಳಾರೆ - ಸುಳ್ಯ ಹೆದ್ದಾರಿ ಬದಿಯಲ್ಲಿ...
ವಿಶ್ವಹಿಂದೂ ಪರಿಷತ್ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಉಪಾಧ್ಯಕ್ಷರಾಗಿ ರೋಹಿತ್ ಕೊಳಂಬಳ, ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವರಕಾನ, ಗೋರಕ್ಷಾ ಪ್ರಮುಖ್ ಆಗಿ ರಂಜಿತ್ ಬಾಳಿಲ ಸುಳ್ಯ ಪ್ರಖಂಡ ವತಿಯಿಂದ ಸುಳ್ಯ ಕೇರ್ಪಳ ದೇವಸ್ಥಾನ ದಲ್ಲಿ ಆಯ್ಕೆ ಮಾಡಲಾಯಿತು. ರೋಹಿತ್ ಕೊಳಂಬಳ ಚೇತನ್ ದೇವರಕಾನ ರಂಜಿತ್ ಬಾಳಿಲ
ಸುಳ್ಯದಲ್ಲಿ ಎರಡನೇ ಹಂತದ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿಯ ಸಮಾರೋಪ ಸಮಾರಂಭ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಆ 8ರಂದು ನಡೆಯಿತು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಾ ಕಾರ್ಯವಾಹಕು ಹಾಗೂ ಹೊಸದಿಗಂತ ಪತ್ರಿಕೆಯ ಸಿ.ಓ....
ಸುರಿಯುತ್ತಿರುವ ಭಾರಿ ಮಳೆಗೆ ಅಡ್ಡಬೈಲು- ಬಸ್ತಿಕಾಡು ಹೊಳೆಯಲ್ಲಿ ಪ್ರವಾಹದ ಜತೆಗೆ ಬಂದು ಕಿರುಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬೃಹತ್ ಮರದ ತುಂಡುಗಳು, ಕಸಕಡ್ಡಿ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡಬೈಲ್ ಸಮೀಪದ ಬೊಳ್ಮಲೆಯಿಂದ ಕೂತ್ಕುಂಜ ಗ್ರಾಮದ ಬಸ್ತಿಕಾಡುವಿಗೆ ಹೋಗುವ ಕಿರುಸೇತುವೆಯಲ್ಲಿ ಕಸಕಡ್ಡಿಗಳು, ಮರದ ದಿಮ್ಮಿಗಳು ನಿಂತು, ನೀರು ಸೇತುವೆ ಮೇಲೆ ಹರಿದು ಸಂಚಾರಕ್ಕೆ...
Loading posts...
All posts loaded
No more posts
