ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ – ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಕೊರೊನಾ ಕಾರಣದಿಂದಾಗಿ ಈ ಬಾರಿಯ ಗಣೇಶೋತ್ಸವ ಆಚರಣೆ ಮಾಡಲು ನಿರ್ಬಂಧ ಹೊರಡಿಸಲಾಗಿತ್ತು. ಮತ್ತೆ ಈಗ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಸಂಘ- ಸಂಸ್ಥೆಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ...

ಹರಿಹರದ ವ್ಯಕ್ತಿಯೊಬ್ಬರಿಗೆ ಇಂದು ಪಾಸಿಟಿವ್ – ನಿನ್ನೆ ಅರಂತೋಡು, ಹಾಲೆಮಜಲಿನಲ್ಲಿ ತಲಾ ಒಂದು ಪ್ರಕರಣ ಪತ್ತೆ

ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ರಾಂಡಮ್ ಟೆಸ್ಟ್ ವೇಳೆ ಹರಿಹರ ಪಲ್ಲತ್ತಡ್ಕದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಧೃಡಪಟ್ಟಿದೆ.ನಿನ್ನೆ ಹಾಲೆಮಜಲಿನ ಮಹಿಳೆಯೊಬ್ಬರು ಚಿಕಿತ್ಸೆ ಗಾಗಿ ಮಂಗಳೂರಿಗೆ ಹೋಗಿದ್ದ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್‌ ಮಾಡಿದಾಗ ಪಾಸಿಟಿವ್ ಬಂದಿದೆ. ಹಾಗೂ ಅರಂತೋಡಿನ ಅಂಚೆ ವಿತರಕರಿಗೆ ಕೂಡ ಪಾಸಿಟಿವ್ ಧೃಡಪಟ್ಟಿದೆ. ಜನತೆ ಭಯಪಡುವ ಭಯಪಡುವ ಅಗತ್ಯವಿಲ್ಲ, ಸಾಮಾಜಿಕ ಅಂತರ, ಮಾಸ್ಕ್...
Ad Widget

ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹಿತೇಶ್ ಕುಂಚಡ್ಕ ಗೆ 611 ಅಂಕ

ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಹಿತೇಶ್ ಕುಂಚಡ್ಕ ಈ ಬಾರಿಯ ಎಸ್ . ಎಸ್.ಎಲ್.ಸಿ.ಪರೀಕ್ಷೆಯಲ್ಲಿ ( 611 ) ಶೇ .97.76 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ . ಈತ ಆಲೆಟ್ಟಿ ಗ್ರಾಮದ ಕುಂಚಡ್ಕ ಲೋಲಜಾಕ್ಷ ಕೆ.ಸಿ.ಮತ್ತು ಶ್ರೀಮತಿ ಪದ್ಮಾವತಿ ಕೆ ದಂಪತಿಗಳ ಪುತ್ರ .

ಮೊಟುಕಾನದಲ್ಲಿ ಕಾರಂಟೈನ್ ನಲ್ಲಿದ್ದ ಎಲ್ಲಾ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್

ಬೆಳ್ಳಾರೆ : ಪಾಸಿಟಿವ್ ಆಗಿದ್ದ ಮೊಟುಕಾನದ ಪತ್ರಕರ್ತರ ಪ್ರಾಥಮಿಕ ಸಂಪರ್ಕಿತರಾಗಿ ಕಾರಂಟೈನ್ ನಲ್ಲಿದ್ದ ಮನೆಯ ಎಲ್ಲರ ಪರೀಕ್ಷೆ ಇಂದು ನಡೆದಿದ್ದು ವರದಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.

ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯರಾಗಿ ಸವಣೂರಿನ ದಿನೇಶ್ ಮೆದು

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯರಾಗಿ ಪುತ್ತೂರು ಎ ಪಿ ಎಂ ಸಿ ಅಧ್ಯಕ್ಷರಾದ ಸವಣೂರಿನ ದಿನೇಶ್ ಮೆದು ಆಯ್ಕೆಯಾಗಿದ್ದಾರೆ.

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(18.08.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 320 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಕಮಿಲ ರಸ್ತೆಗೆ ತಟ್ಟಿದ ಶಾಪ ವಿಮೋಚನೆಗೆ ಇನ್ನೆಷ್ಟೂ ವರ್ಷ ಕಾಯಬೇಕು ?

ಸುಳ್ಯ ತಾಲೂಕಿನ ಹಲವೆಡೇ ರಸ್ತೆ ಅಭಿವೃದ್ಧಿ ಕಂಡರೂ ಈ ಗುತ್ತಿಗಾರು ಬಳ್ಪ ರಸ್ತೆ ಮಾತ್ರ ಹದಗೆಟ್ಟು ಪ್ರಯಾಣಿಕರು ನರಳಾಡುವಂತೆ ಆಗಿದೆ. ಈ ರಸ್ತೆಯಲ್ಲೊಮ್ಮೆ ಪ್ರಯಾಣಿಸಿದ ಪ್ರತಿಯೊಬ್ಬನೂ ಶಾಪ ಹಾಕದೇ ಹೋದವರು ಇರಲಿಕ್ಕಿಲ್ಲ ಅಲ್ಲವೇ.? ಬಳ್ಪ ಕಮಿಲ ರಸ್ತೆಗೆ ಕೆಲವೆಡೆ ಅಭಿವೃದ್ಧಿ ಆದರೇ ಹಲವೆಡೆ ಸಂಪೂರ್ಣ ಹದಗೆಟ್ಟಿದ್ದು ದಶಕಗಳ ಹಿಂದೆ ಹಾಕಿದ ಡಾಮರ್ ಮಾಯವಾಗಿದೆ‌. ಇದರಿಂದ ಮಣ್ಣಿನ...

ಅಡುಗೆ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಬಾಕಿ ಇರುವ ಗೌರವ ಧನ ನೀಡುವಂತೆ ಆಗ್ರಹಿಸಿ ಎಸ್ಡಿಪಿಐ ತಹಶೀಲ್ದಾರ್ ಗೆ ಮನವಿ

ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರು ಹಾಗೂ ಅಡುಗೆ ಸಹಾಯಕಿಯರಿಗೆ ತಕ್ಷಣ ಐದು ತಿಂಗಳ ಗೌರವ ಧನ ನೀಡುವಂತೆ ಆಗ್ರಹಿಸಿ ಎಸ್ ಡಿ ಪಿ ಐ ಸುಳ್ಯ ವಿಧಾನ ಸಭಾ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯಾದ್ಯಂತ ಇರುವ 54 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಟ್ಟು 1.70...

ಎಂ ಬಿ ಪೌಂಢೇಶನ್ ಸಹಕಾರದೊಂದಿಗೆ ಸರಕಾರಿ ಶಾಲೆ ಮಕ್ಕಳಿಗೆ ಅನ್ಲೈನ್ ಶಿಕ್ಷಣ

ಸರಕಾರದ ನೂತನ ನೀತಿಯಂತೆ ಸರಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಒದಗಿಸಲು ಹೆತ್ತವರಿಗೆ ಸಾಧ್ಯವಾಗದೆ ಇದ್ದರೆ ಸಮುದಾಯ ಕೇಂದ್ರ ಗಳನ್ನು ಪ್ರಾರಂಭಿಸಿ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಚಟುವಟಿಕೆ ಯಲ್ಲಿ ತೊಡಗಿಸಿಗೊಳ್ಳುವಂತೆ ಮಾಡುವ ನೂತನ ಕಾರ್ಯಕ್ರಮ ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರಾರಂಭ ಗೊಂಡಿದೆ. ಇಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ ದಲ್ಲಿ ಈ ಕುರಿತು ಕಾರ್ಯಾಗಾರ...

ನಾಳೆ ಸುಳ್ಯದಲ್ಲಿ ಕರೆಂಟಿಲ್ಲ

ನಾಳೆ (ಆ.18 ) ಮಂಗಳವಾರ ದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಸುಬ್ರಹ್ಮಣ್ಯ ಫೀಡರುಗಳಲ್ಲಿ ಬೆಳಿಗ್ಗೆ 1೦ ರಿಂದ ಸಾಯಂಕಾಲ 6 ರ...
Loading posts...

All posts loaded

No more posts

error: Content is protected !!