- Monday
- September 14th, 2026
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದಲ್ಲಿ ನೂತನವಾಗಿ ಶ್ರೀದುರ್ಗಾ ಪ್ರಗತಿ ಬಂದು ಸಂಘ ರಚನೆಯಾಯಿತು. ಸಂಘದ ಉದ್ಘಾಟನೆಯನ್ನು ಕೊಡಿಯಾಲ ಒಕ್ಕೂಟದ ಅಧ್ಯಕ್ಷರಾದ ಆನಂದ ಕೆ ನೆರವೇರಿಸಿದರು. ವಲಯ ಮೇಲ್ವಿಚಾರಕರಾದ ಮುರಳೀಧರರವರು ದಾಖಲಾತಿ ಹಸ್ತಾಂತರಿಸಿ ನಿಯಮಾವಳಿಗಳ ಬಗ್ಗೆ ತಿಳಿಸಿದರು .ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ವನಿತಾ ಉಪಸ್ಥಿತರಿದ್ದರು.
ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.6 ರಂದು ಶ್ರೀ ಒಡಿಯೂರಿನ ಗ್ರಾಮ ವಿಕಾಸ ಸಂಘದಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು, ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಕಳಗಿ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಶ್ರೀ ಒಡಿಯೂರು ಗ್ರಾಮ ವಿಕಾಸ ಸಂಘದ ಘಟ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಗಾಂಭೀರ್,...
ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಎಂಬಲ್ಲಿ ವಾಸವಾಗಿರುವ ಕು. ಗೀತಾ ಹೆಚ್.ಸಿ ಎಂಬ ವಿದ್ಯಾರ್ಥಿನಿ ಕಲಿಯುವಿಕೆಯಲ್ಲಿ ಮುಂದಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ. ಕೊಡಗು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಈಕೆ ದ್ವಿತೀಯ ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ 600 ರಲ್ಲಿ 558 (93%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಪಡೆದಿರುತ್ತಾಳೆ. ಅವಳ ಸ್ವಗೃಹ ಸಂಪಾಜೆಯಲ್ಲಿ ಸೆ.6...
ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಳ್ಯ ತಾಲೂಕಿನ ಅಧ್ಯಾಪಕರುಗಳಾದ ಸ. ಪ. ಪೂ. ಕಾಲೇಜು ಪಂಜ ಅಧ್ಯಾಪಕರಾದ ಟೈಟಸ್ ವರ್ಗೀಸ್ ಹಾಗೂ ಸ. ಉ. ಹಿ. ಪ್ರಾ. ಶಾಲೆ ಇಡ್ಯಡ್ಕ ಅಧ್ಯಾಪಕಿ ರೇಖಾ ಸರ್ವೋತ್ತಮ ಶೇಟ್ ಮತ್ತು ಸ. ಕಿ. ಪ್ರಾ. ಶಾಲೆ ಬಾನಡ್ಕ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರವು ಕೊಡಿಯಾಲ ಗ್ರಾ.ಪಂ. ಇದರ ಗ್ರಂಥಾಲಯದಲ್ಲಿ ಇಂದು (ಸೆ.06) ನಡೆಯಿತು. ಶಿಬಿರದ ಉದ್ಘಾಟನೆಯನ್ನು ಕೊಡಿಯಾಲ ಭಜನಾ ಪರಿಷದ್ ಸದಸ್ಯರಾದ ಬಾಚೋಡಿ ವೆಂಕಟೇಶ್ ಪೈ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಿ.ಡಬ್ಲ್ಯೂ. ಐ. ಕಂಟ್ರಾಕ್ಟರ್ ಕರುಣಾಕರ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ, ಭಾರತ ಸರ್ಕಾರದ ಸೌಲಭ್ಯಗಳಲ್ಲೊಂದಾದ ಆಯುಷ್ಮಾನ್ ಕಾರ್ಡ್ ನೋಂದಾವಣಿ ಮತ್ತು ವಿತರಣಾ ಶಿಬಿರವು ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಇಂದು(ಸೆ.06) ಜರುಗಿತು. ಕಾರ್ಯಕ್ರಮವನ್ನು ಕಳಂಜ-ಬಾಳಿಲ ಪ್ರಾ. ಕೃ. ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೂಸಪ್ಪ ಗೌಡ ಮುಗುಪ್ಪು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು....
ಸುಳ್ಯ ಯುವಜನ ಸಂಯುಕ್ತ ಮಂಡಳಿ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಂಕರ್ ಪೆರಾಜೆಯವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸುಳ್ಯ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ವಿಜಯ್ ಕುಮಾರ್ ಉಬರಡ್ಕ ವೇದಿಕೆಯಲ್ಲಿದ್ದರು. ಗೌರವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ಕಾರ್ಯದರ್ಶಿ ತೇಜಸ್ವಿ ಕಡಪಳ ವರದಿ...
ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕೆನ್ನುವ ಚಿಂತನೆಯಡಿ ಕೆಎಂಸಿ ಆಸ್ಪತ್ರೆಯಿಂದ ಆರಂಭಿಸಿದ್ದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಎರಡು ದಶಕಗಳನ್ನು ಪೂರೈಸಿರುವ ಹಂತದಲ್ಲಿ, ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸುವ ದೃಷ್ಟಿಯಿಂದ ‘ಸ್ಮಾರ್ಟ್ ಕಾರ್ಡ್’ನ್ನು ಹೊರ ತರಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನಮೋಹನ ಡಿ.ಬಿ. ಅವರು ಮನವಿ ಮಾಡಿದ್ದಾರೆ.ಮಡಿಕೇರಿಯಲ್ಲಿ...
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕಿಯಾಗಿ ಸೇವೆಯಲ್ಲಿದ್ದ ಶ್ರೀಮತಿ ಅನಸೂಯ.ಕೆ ಪದೋನ್ನತಿ ಹೊಂದಿದ್ದು, ಇದೀಗ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಕೊಳ್ನಾಡು ಕಾಡುಮಠ ಇಲ್ಲಿಗೆ ಆಂಗ್ಲಭಾಷಾ ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಕಿ.ಪ್ರಾಥಮಿಕ ಶಾಲೆ ಕಲ್ಪತ್ತಬೈಲು ಇಲ್ಲಿ 6 ವರ್ಷ ಹಾಗೂ ಕೆ.ಪಿ.ಎಸ್ ಬೆಳ್ಳಾರೆ(ಪ್ರಾಥಮಿಕ ವಿಭಾಗ) ಇಲ್ಲಿ 10 ವರ್ಷಗಳ...
ವಿಶ್ವ ಹಿಂದೂ ಪರಿಷದ್ ಭಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ವತಿಯಿಂದ ಇಂದು(ಸೆ.06) ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಂಗಣದಲ್ಲಿಆಯುಷ್ಮಾನ್ ನೋಂದಣಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಯುಷ್ಮಾನ್ ಆರೋಗ್ಯ ಮಿತ್ರ ಕಾರ್ಯನಿರ್ವಾಹಕರಾದ ಮುರಳೀ.ಎನ್ ದೀಪ ಬೆಳಗುವ ಮೂಲಕ ಶಿಬಿರದ ಉದ್ಘಾಟನೆಗೈದರು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್-ಭಜರಂಗದಳ ಸುಳ್ಯ ಪ್ರಖಂಡ ವಿದ್ಯಾರ್ಥಿ ಪ್ರಮುಖ್ ಶರಣ್ ಕರ್ಮಜೆ, ಧಾರ್ಮಿಕ...
Loading posts...
All posts loaded
No more posts
