- Wednesday
- November 27th, 2024
ಸುಳ್ಯ ಓಡಬಾಯಿ ಬಳಿ ಅಗ್ನಿಶಾಮಕ ಠಾಣೆ ಮುಂಭಾಗದಲ್ಲಿ ಸುಳ್ಯ ಕಡೆಯಿಂದ ಪುತ್ತೂರಿಗೆ ಚಲಿಸುತ್ತಿದ್ದ ಅಲ್ಟೋ ಕಾರ್ ಡ್ರೈವರ್ ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಆಗಿದೆ. ಡಿಕ್ಕಿಯ ರಭಸಕ್ಕೆ ಕಾರು ರೋಡಿನಲ್ಲಿ ಮಗುಚಿ ಬಿದ್ದು ಕಾರಿನಲ್ಲಿದ್ದ ಒಬ್ಬ ಮಹಿಳೆಯ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ , ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ....
ಕೊರೊನ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಸರ್ಕಾರಿ ರಜೆ ಘೋಷಿಸಿರುವುದರಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ ಇರಲಿದೆ. ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ರಜೆ ಇದ್ದು, ಸರಕಾರಿ ಕಾರ್ಯಗಳು ಸೋಮವಾರ ಮುಂದುವರಿಯಲಿವೆ. ಕೊರೊನ ಲಾಕ್ ಡೌನ್ ಮತ್ತು ಅಗತ್ಯ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.
ಜು.14 ರಂದು ಸುಳ್ಯದಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.ಈ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಜುಲೈ 18ರಿಂದಸೀಲ್ ಡೌನ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಸ್.ಐ. ಹರೀಶ್ ಸೇರಿದಂತೆ ಆರೋಪಿಯ ಬಂಧನದಲ್ಲಿ ತೊಡಗಿಸಿಕೊಂಡ ಮೂವರು ಪೋಲೀಸ್...
ಎಲಿಮಲೆ ಮಡಪ್ಪಾಡಿ ರಸ್ತೆಗೆ ಸೇವಾಜೆ ಸಮೀಪ ಮರ ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸೇವಾಜೆ ಶ್ರೀ ಕೃಷ್ಣ ಸಾಂಸ್ಕೃತಿಕ ಸಮಿತಿ ಸದಸ್ಯರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜ್ ಸುಬ್ರಹ್ಮಣ್ಯ ದ ರಂಗ ಘಟಕ ಕುಸುಮ ಸಾರಂಗವೂ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕೊರೋನ ಸಂಕಷ್ಟದ ಸಮಯದಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು...
ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು 2020-21 ನೇ ಸಾಲಿನ ಪ್ರಥಮ ಪದವಿ ವಿಧ್ಯಾರ್ಥಿಗಳಿಗೆ ಆನ್ ಲೈನ್ ದಾಖಲಾತಿಗಾಗಿ ಆರಂಭವಾಗಿದ್ದು ಲಾಕ್ ಡೌನ್ ವೇಳೆಯಲ್ಲಿ ಪ್ರಥಮ ಹೆಜ್ಜೆಯಿರಿಸಿದೆ. ಪ್ರವೇಶಾತಿಯನ್ನು ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಗೂಗಲ್ ಲಿಂಕ್ ಉಪಯೋಗಿಸಿ ಆನ್ ಲೈನ್ ಅರ್ಜಿ ಭರ್ತಿಗೊಳಿಸುವುದು. ಭರ್ತಿಗೊಳಿಸಿದ ಮಾತ್ರಕ್ಕೆ ಪ್ರವೇಶಾತಿ ಅಂಗೀಕಾರವಾಗಿದೆ ಎಂದು ಭಾವಿಸತಕ್ಕದ್ದಲ್ಲ. ಈ ಮಾಹಿತಿಯನ್ನು...
ಪಿ.ಯು.ಸಿ ಫಲಿತಾಂಶದದಲ್ಲಿ ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ . ಯು ಒಟ್ಟು 567 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ . ಈಕೆ ಉಳುವಾರು ಪುರುಷೋತ್ತಮ ಭಾರತಿ ದಂಪತಿ ಪುತ್ರಿ . ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಕಲಿಕೆಯೊಂದಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ .
ಬೆಳ್ತಂಗಡಿ ತಾಲೇೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಐದುಸೆನ್ಸ್ ನಿವಾಸಿ ವಯೇೂವೃದ್ದ ಮಹಿಳೆ ಶ್ರೀಮತಿ ಅಪ್ಪಿ ಶೆಡ್ತಿಯವರ ಮೇಲೆ ಅವರ ಮೊಮ್ಮಗ ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನೂಷವಾಗಿ ವಯೋವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಒಂದು ಅಮಾನವೀಯ ಘಟನೆ ಇಂದು ನಡೆದಿದ್ದು , ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ...
ಬೆಂಗಳೂರಿನಿಂದ ಹಿಂದಿರುಗಿದ್ದವರಿಂದ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು ಕೊಡಗಿನಲ್ಲಿ ಮತ್ತೆ 13 ಹೊಸ ಪ್ರಕರಣ ದಾಖಲಾಗಿದೆ. 13 ಪ್ರಕರಣಗಳ ಪೈಕಿ 9 ಜನರಿಗೆ ಬೆಂಗಳೂರಿನಿಂದ ಹಿಂದಿರುಗಿದ್ದವರಿಂದಲೇ ಹರಡಿದೆ. ಮಡಿಕೇರಿ ತಾಲ್ಲೂಕಿನ ಮರಗೋಡಿನ ಸೋಂಕಿತನಿಂದ ಐವರಿಗೆ ಸೋಂಕು ಹರಡಿದೆ. ಬೆಂಗಳೂರಿನಿಂದ ಹಿಂದಿರುಗಿದ್ದ ಮತ್ತೊಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ತಗುಲಿದೆ. ಬೆಂಗಳೂರಿನಿಂದ ಹಿಂದಿರುಗಿದ್ದ ಮುತ್ತಾರುಮುಡಿ ಗ್ರಾಮದ...
ಕೊರೋನ ಭಯದಿಂದ ಅಲ್ಲೋಲ ಕಲ್ಲೋಲವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣದಿಂದ ವಂಚಿತವಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳ ಹಿತದೃಷ್ಟಿಯಿಂದ ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರ ಅಪೇಕ್ಷೆ ಮೇರೆಗೆ ಶಾಲಾ ಶಿಕ್ಷಕಿ ಶ್ರೀಮತಿ ಶ್ವೇತಾ ಅವರಿಂದ ವಿಶೇಷ ಶಿಕ್ಷಣ ವ್ಯವಸ್ಥೆ ಆರಂಭವಾಗಿರುವುದು ಪ್ರಯೋಗ ಶೀಲ ಹಾಗೂ ಪ್ರಶಂಸನೀಯವಾಗಿದೆ. ಸದ್ಯಕ್ಕೆ ತರಗತಿ ಕಲಿಕೆ ಸಾಧ್ಯವಿಲ್ಲ ಆನ್ ಲೈನ್...
Loading posts...
All posts loaded
No more posts