ಪಂಚಾಯತ್ ನಲ್ಲೇ ಜನನ-ಮರಣ ಪ್ರಮಾಣ ಪತ್ರ- ರಾಜ್ಯ ಸರ್ಕಾರ ಆದೇಶ

ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶಕ್ಕೆ ಇ-ಜನನ ತಂತ್ರಾಂಶ ಸಂಯೋಜನೆ ಮಾಡಲಿದ್ದು,...

ದೊಡ್ಡತೋಟ : ಚರಂಡಿಗಿಳಿದ ಲಾರಿ

ದೊಡ್ಡತೋಟ ಸಮೀಪ ಚಡಾವಿನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದೆ. ಈ ರಸ್ತೆಯಲ್ಲಿ ನಿಗದಿತ ಬಾರಕ್ಕಿಂತ ಹೆಚ್ಚಿನ ಲೋಡ್ ಸೇರಿಕೊಂಡು ಸಂಚರಿಸಲು ಅನುಮತಿ ಇಲ್ಲದಿದ್ದರೂ ಈ ರಸ್ತೆಯಲ್ಲಿ ಸಾಗುತ್ತಿವೆ. ಇದರಿಂದಾಗಿ ರಸ್ತೆ ಹಲವೆಡೆ ಹಾನಿಯಾಗಿದೆ. ಈ ಘನ ವಾಹನಗಳಿಂದಾಗಿ ಹಲವು ಕಡೆ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು...
Ad Widget

ಕಲ್ಲಪ್ಪಳ್ಳಿ : ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ

ಪನತ್ತಡಿ ಗ್ರಾಮಪಂಚಾಯತ್ ವತಿಯಿಂದ ಕಲ್ಲಪ್ಪಳ್ಳಿಯಲ್ಲಿ, ವಿವಿಧ ಕಾಮಗಾರಿ ಗಳ ಉದ್ಘಾಟನಾ ಸಮಾರಂಭ ಕಲ್ಲಪ್ಪಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಕೇರಳ ರಾಜ್ಯ ಸರಕಾರದ ಕಂದಾಯ ಸಚಿವರಾದ ಚಂದ್ರಶೇಖರವರು ನೆರವೇರಿಸಿದರು. 1,ಪಾಣತ್ತೂರು-ಕಲ್ಲಪ್ಪಳ್ಳಿ ರಸ್ತೆಯ 3ಕಿಮೀ  ನಿಂದ 6ಕಿಮೀ ವರೇಗೆ 3ಕೋಟಿ ರೂಪಾಯಿ ಗಳಲ್ಲಿ  ಪೂರ್ತಿಗೊಂಡ ರಸ್ತೆಯ ಉದ್ಘಾಟನೆ.2,ಊಡಿಯಾರದಲ್ಲಿ 68ಲಕ್ಷ ರೂಪಾಯಿ ಅನುದಾನಲ್ಲಿ ಪೂರ್ತಿ ಗೊಂಡ ವೆಂಟಿಲೇಟರ್ ಕಂ...

ಲಕ್ಷ್ಮಿ ಅಂಗಡಿಮಠ ಹುಟ್ಟುಹಬ್ಬ

ಸುಳ್ಯ ಗಾಂಧಿನಗರ ಕೆ ಪಿ ಎಸ್ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಹಾಗೂ ಪುಷ್ಪಲತಾ ದಂಪತಿಗಳ ಪುತ್ರಿ ಲಕ್ಷ್ಮಿ ರವರ 15 ನೇ ವರುಷದ ಹುಟ್ಟು ಹಬ್ಬವನ್ನು ಸೆ.21 ರಂದು ಸುಳ್ಯದ ಅಂಗಡಿಮಠ ಮನೆಯಲ್ಲಿ ಆಚರಿಸಲಾಯಿತು.

ಪೈಚಾರು ಫೈವ್ ಸ್ಟಾರ್ ಸ್ವೀಟ್ ಮತ್ತು ಬೇಕರಿ ಕಾರ್ಯಾರಂಭ

ಸುಳ್ಯ ಪೈಚಾರಿನಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯಚರಿಸುತ್ತಿರುವ ಕೆಪಿ ಮೈದೀನ್ ರವರ ಮಾಲಕತ್ವದ ಫೈವ್ ಸ್ಟಾರ್ ಕಟ್ಲೇರಿ ಮಳಿಗೆ ನವೀಕೃತ ಗೊಂಡು ವಿಶಾಲಗೊಳಿಸಿ ನೂತನ ಮಾದರಿಯಲ್ಲಿ ಕಾರ್ಯಾರಂಭ ಗೊಂಡಿದೆ. ಇದೀಗ ಬೇಕರಿ ಹಾಗೂ ಸ್ವೀಟ್ಸ್ ಪದಾರ್ಥಗಳು ಸಂಸ್ಥೆಯಲ್ಲಿ ಲಭ್ಯವಿದ್ದು ಗ್ರಾಹಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .

ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ- ಬೆಳ್ಳಾರೆ ಹಾಗೂ ಸವಣೂರಿನ ಇಬ್ಬರ ಬಂಧನ- ಜಾಮೀನು – 9250 ಕೆಜಿ ಅಕ್ಕಿ ಸಮೇತ ಲಾರಿ ವಶಕ್ಕೆ

ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಸೆ.20ರಂದು ನಡೆದಿದೆ. ಇವರಿಬ್ಬರಿಗೂ ಇಂದು ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ. ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್‌ರವರ ಪುತ್ರ ಖಲಂದರ್(31.ವ) ಹಾಗೂ ಸವಣೂರು ಗ್ರಾಮದ...

ಎಸ್ ಕೆ ಎಸ್ ಎಸ್ ಎಫ್ ತ್ವಲಬ ವಿಂಗ್ ಸವಣೂರು ಕ್ಲಸ್ಟರ್ ಪ್ರತಿನಿಧಿ ಸಂಗಮ ಹಾಗೂ ಸಮಿತಿ ರಚನೆ

ಸವಣೂರು : ಎಸ್ಕೆ ಎಸ್ ಎಸ್ ಎಫ್ ತ್ವಲಬ ವಿಂಗ್ ಸವಣೂರು ಕ್ಲಸ್ಟರ್ ಪ್ರತಿನಿಧಿ ಸಂಗಮ ಪರಣೆ ಮದ್ರಸ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಪರಣೆ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಕುಂಬಮೂಲೆ ರವರು ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಚಾಪಲ್ಲ ದರ್ಸ್ ವಿದ್ಯಾರ್ಥಿ ಮನ್ಸೂರ್ ಖಿರಾಅತ್ ಪಠಿಸಿದರು. ಸ್ಥಳೀಯ ಖತೀಬ್  ಬಶೀರ್ ದಾರಿಮಿ ದುಆ ನೆರವೇರಿಸಿದರು....

ಅಲೆಟ್ಟಿ ಗ್ರಾಮ ಯುವ ಕಾಂಗ್ರೆಸ್ ಘಟಕ ರಚನೆ : ಅಧ್ಯಕ್ಷ ನಿತಿನ್ ಗುಂಡ್ಯ -ಉಪಾಧ್ಯಕ್ಷ ಲತೀಫ್ ಅರಂಬೂರು – ಕಾರ್ಯದರ್ಶಿ ಪ್ರಸಾದ್ ನಾಗಪಟ್ಟಣ

ಆಲೆಟ್ಟಿ ಗ್ರಾಮ ಯುವ ಕಾಂಗ್ರೆಸ್ ಘಟಕ ರಚನಾ ಸಭೆ ಸೆ. 20 ರಂದು ಅಲೆಟ್ಟಿ ಸೊಸೈಟಿ ಯ ಸಭಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಗ್ರಾಮ ಯುವ ಕಾಂಗ್ರೆಸ್ ಘಟಕಕ್ಕೆ ಬ್ಲಾಕ್ ಕಾಂಗ್ರೆಸ್ ಸೂಚನೆಯಂತೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ನಿತಿನ್ ಗುಂಡ್ಯ , ಉಪಾಧಕ್ಷರಾಗಿ ಲತೀಫ್ ಅರಂಬೂರು , ಕಾರ್ಯದರ್ಶಿಯಾಗಿ ಪ್ರಸಾದ್...

ರೈತ ಸಂಘ, ದಲಿತ ಸಂಘ ಕಾರ್ಮಿಕರ ಸಂಘ ಮತ್ತು ಪ್ರಗತಿಪರ ಒಕ್ಕೂಟದ ವತಿಯಿಂದ ಜಂಟಿಯಾಗಿ ಬೃಹತ್ ಪ್ರತಿಭಟನೆ

ಕರ್ನಾಟಕ ರಾಜ್ಯದಾದ್ಯಂತ ರೈತ ಸಂಘ ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯ ಅಂಗವಾಗಿ ಸೆಪ್ಟೆಂಬರ್ 21 ರಂದು ಸುಳ್ಯದ ತಾಲೂಕು ಕಛೇರಿ ವಠಾರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ವತಿಯಿಂದ ನಡೆಯಿತು. ಜೂನ್ 3 ರಂದು ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ರೈತ, ಕಾರ್ಮಿಕ,...

ಸುಳ್ಯ ಬೇಕ್ ಮಾರ್ಟ್ ಶುಭಾರಂಭ

ಸುಳ್ಯ ಪೊಲೀಸ್ ಠಾಣೆ ಮುಂಬಾಗ ಗೋಲ್ಡನ್ ಟವರ್ ನಲ್ಲಿ ರಫೀಕ್ ಬಿಎಸ್ ರವರ ಮಾಲಕತ್ವದ ಬೇಕ್ ಮಾರ್ಟ್ ಸೆ. 21ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಮಾಜಿ ಲಯನ್ಸ್ ಗವರ್ನರ್ ಎಂಬಿ ಸದಾಶಿವ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣಾ ಎಎಸ್ಐ ಭಾಸ್ಕರ್...
Loading posts...

All posts loaded

No more posts

error: Content is protected !!