Ad Widget

ಬ್ಯಾಂಕ್ ಆಫ್ ಬರೋಡ ಸ್ಥಾಪನಾ ದಿನಾಚರಣೆ

ಬ್ಯಾಂಕ್ ಆಫ್ ಬರೋಡ 1908 ಜುಲೈ 20 ರಂದು ಗುಜರಾತ್ ನ ವಡೋದರ ದಲ್ಲಿ ಮಹಾರಾಜ್ ಸಯಾಜಿರಾವ್ ಗಾಯಕ್ ವಾಡ್ ನೇತೃತ್ವದಲ್ಲಿ ಪ್ರಾರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಾಪನಾ ದಿನಾಚರಣೆ ಸುಳ್ಯ ಬರೋಡ ಬ್ಯಾಂಕ್ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ರಾಜಶೇಖರ ಎಂ.ಯು.,ಮಂಜು ಸಣ್ಣುಗೊಂಡ, ಕು.ಭಾಗ್ಯಶ್ರೀ ಕೆ.ಎಚ್., ಯಶೋಧ, ಸುಪ್ರೀತಾ...

ಎಲಿಮಲೆ-ಮರ್ಕಂಜ -ಅರಂತೋಡು ರಸ್ತೆ ಅಗಲೀಕರಿಸಿ ಡಾಮರೀಕರಣ ಮಾಡುವಂತೆ ಮರ್ಕಂಜ ಕಾಂಗ್ರೆಸ್ ಒತ್ತಾಯ

ಸುಬ್ರಹ್ಮಣ್ಯ ಕ್ಕೆ ಮತ್ತು ಮಡಿಕೇರಿ ಕಡೆ ಹೋಗುವ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಸುಮಾರು 15 ಕಿ ಮೀ ಅಂತರದ ಎಲಿಮಲೆ -ಮರ್ಕಂಜ -ಅರಂತೋಡು ರಸ್ತೆ ಪಿ ಡಬ್ಲ್ಯೂ ಡಿ ರಸ್ತೆ ಇದ್ದು ಅತ್ಯಂತ ಹತ್ತಿರದ ರಸ್ತೆಯಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ , ಸಾರ್ವಜನಿಕರಿಗೆ ಸಂಚರಿಸಲು ಸುತ್ತಾಡಿ ಬರುವ ಅವಶ್ಯಕತೆ ಇರುವುದಿಲ್ಲ .ಈ ರಸ್ತೆಯ ಅಭಿವೃದ್ದಿ ಕಾಮಗಾರಿ ಆಗಲು...
Ad Widget

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(23.07.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 350ಹಳೆ ಅಡಿಕೆ 300 - 360ಡಬಲ್ ಚೋಲ್ 300 - 360 ಫಠೋರ 220 - 285ಉಳ್ಳಿಗಡ್ಡೆ 110 - 190ಕರಿಗೋಟು 110 - 175 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಪಂಜ ಸಿಂಡಿಕೇಟ್ ಮ್ಯಾನೇಜರ್ ರಿಂದ ರಿಕ್ಷಾ ಚಾಲಕರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ

ಪಂಜ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಸದಸ್ಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕನ್ನು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಅಶೋಕ್ ನಾಯಕ್ ಕೊಡುಗೆ ನೀಡಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸ್ ಠಾಣಾ ಮುಖ್ಯಪೇದೆ ಉಮೇಶ್ ನಿಧನ

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಪ್ಪೇರ್ಯ ಗ್ರಾಮದ ಉಮೇಶ್ ಇವರು(47 ವರ್ಷ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಕೆಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.ಮೃತರು ತಾಯಿ ಕಮಲ,ಪತ್ನಿ ತೀರ್ಥಕುಮಾರಿ,ಓರ್ವ ಪುತ್ರ,ಓರ್ವ ಪುತ್ರಿ,ಐವರು ಸಹೋದರರು,ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಶಾಲಾ ಶೈಕ್ಷಣಿಕ ಫೀಸು ಕಟ್ಟಲು ವಿದ್ಯಾರ್ಥಿಗಳಿಗೆ ಕಾಲಾವಕಾಶ ಮಾಡಿ ಕೊಡುವಂತೆ ಸರಕಾರಕ್ಕೆ ಅಗ್ರಹ – ರಿಯಾಜ್ ಕಟ್ಟೆಕಾರ್

ವಿಶ್ವದಾದ್ಯಂತ ಕೊರೊನ ಮಹಾಮಾರಿ ಸೋಂಕಿನಿಂದ ಜನರು ಕಂಗಾಲಾಗಿ ಹೋಗಿದ್ದು ಉದ್ಯೋಗವಿಲ್ಲದೆ , ಹಣವಿಲ್ಲದೆ ಕಷ್ಟದ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ . ಶಾಲಾ ಕಾಲೇಜು ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ಬಾರಿಯ ಫೀಸು ಕಟ್ಟದೆ ಬಾಕಿಯಾಗಿರುತ್ತದೆ . ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಫೀಸು ಕಟ್ಟುವಂತೆ ಒತ್ತಾಯ ಮಾಡುತ್ತಿರುವ ವಿಷಯ ಮಾದ್ಯಮಗಳಲ್ಲಿ ಕಂಡು ಬಂದಿರುತ್ತದೆ...

ಪಂಜ : ಪಿಯುಸಿಯಲ್ಲಿ 590 ಅಂಕ ಪಡೆದ ಅಂಕಿತ ರವರಿಗೆ ಪುರಸ್ಕಾರ

ದ್ವಿತೀಯ ಪಿಯುಸಿಯಲ್ಲಿ 590 ಅಂಕಗಳಿಸಿದ ಪಂಜದ ಕೃಷ್ಣನಗರ ಗಂಗಾಧರ ಶಾಸ್ತ್ರಿ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಅಂಕಿತ ರವರಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ದ ಆಡಳಿತಾಧಿಕಾರಿ ಡಾ. ದೇವಿ ಪ್ರಸಾದ್ ಕಾನತ್ತೂರ್ ರವರುಅವರ ನಿವಾಸಕ್ಕೆ ತೆರಳಿ ಪುರಸ್ಕರಿಸಿದರು.

ಚೆಂಬು ಕಿರುಸೇತುವೆ ಕುಸಿತ – ಪರ್ಯಾಯ ರಸ್ತೆ ನಿರ್ಮಾಣ

ಚೆಂಬು ಗ್ರಾಮದ ದಬ್ಬಡ್ಕ ರಸ್ತೆಯಲ್ಲಿ ಕಾಂತುಬೈಲಿನಿಂದ ಮುಂದಕ್ಕೆ ಜು.19 ರಂದು ಸುರಿದ ಭಾರಿ ಮಳೆಗೆ ಕಿರುಸೇತುವೆಯೊಂದು ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನೆಲೆಯಲ್ಲಿ ಜು.22 ರಂದು ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್ , ಪಯಸ್ವಿನಿ ಸಹಕಾರಿ ಸಂಘದ ಅದ್ಯಕ್ಷ ಅನಂತ್ ಎನ್.ಸಿ ರವರ ಉಪಸ್ಥಿತಿಯಲ್ಲಿ ಗುತ್ತಿಗೆದಾರ ಪ್ರಶಾಂತ್ ಮತ್ತು ಊರವರ ಸಹಕಾರದಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮತ್ತು...

ಮೊಬೈಲ್ ಗ್ಯಾರೇಜ್ ಸಂಸ್ಥೆಯ ಮಾಲಕರಿಂದ ಸ್ಪಷ್ಟನೆ

ಸುಳ್ಯ ನಗರ ಮುಖ್ಯ ರಸ್ತೆ ಬಾಳೆಮಕ್ಕಿ ಯಲ್ಲಿ ಕಳೆದ ಆರು ವರ್ಷಗಳಿಂದ ತಮ್ಮೆಲ್ಲರ ಸಹಕಾರದಿಂದ ಮೊಬೈಲ್ ಗ್ಯಾರೇಜ್ ಎಂಬ ಹೆಸರಿನ ಮೊಬೈಲ್ ಫೋನ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿ ನಡೆಸಿಕೊಂಡು ಬರುತ್ತಿದ್ದೇವೆ. ಈವರೆಗೂ ನಮ್ಮ ಸಂಸ್ಥೆಯ ಬಗ್ಗೆ ಉತ್ತಮ ಹೆಸರಿರುವುದು ತಮಗೆಲ್ಲಾ ಗೊತ್ತಿದೆ. ಇದೀಗ ನಮ್ಮ ಸಂಸ್ಥೆಯಲ್ಲಿ ಆನ್ಲೈನ್ ಜಾಹೀರಾತು ( Digital marketing )...

ಮಹಿಳೆಯೊಂದಿಗೆ ಚಕ್ಕಂದವಾಡಲು ಹೋದ ಯುವಕನ ಬೆನ್ನಿಗೆ ಬಿತ್ತು ಇಸ್ತ್ರಿ

ಸುಳ್ಯದ ಯುವಕನೋರ್ವ ಆಲೆಟ್ಟಿ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಚಕ್ಕಂದವಾಡಲು ಮಹಿಳೆಯ ಮನೆಗೆ ಹೋಗಿ ಸ್ಥಳೀಯ ಯುವಕರ ಕೈಗೆ ಸಿಕ್ಕಿ ಸಕ್ಕತ್ತಾಗಿ ಒದೆ ತಿಂದಿರುವ ಬಗ್ಗೆ ಫೋಟೋ ಸಹಿತ ಜಾಲತಾಣದಲ್ಲಿ ವೈರಲ್ ಆಗಿದೆ.ಆಟೋ ಚಾಲಕನೊಬ್ಬ ಆಲೆಟ್ಟಿ ಗ್ರಾಮದ ಮಹಿಳೆಯೊಂದಿಗೆ ಚಕ್ಕಂದವಾಡುತ್ತಿದ್ದ ಸಮಯದಲ್ಲಿ ಸ್ಥಳೀಯರಿಂದ ಏಟು ತಿಂದ ಘಟನೆ ಜುಲೈ 21 ರ ಮಧ್ಯಾಹ್ನ ನಡೆದಿದೆ....
Loading posts...

All posts loaded

No more posts

error: Content is protected !!