Ad Widget

9ನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಮುಷ್ಕರ : ಇಂದು ಸುಳ್ಯದಲ್ಲಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ರಾಜ್ಯವ್ಯಾಪಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಸುಳ್ಯದ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಸುಳ್ಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ಅ.02 ರಂದು ಪ್ರತಿಭಟನಾ ಸಭೆ ಜರುಗಿತು. ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಎಂ.ಬಿ.ಫೌಂಡೇಶನ್ ನ ಶ್ರೀ ಎಂ.ಬಿ.ಸದಾಶಿವ ರವರು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು,...

ಅರಂತೋಡು : ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್ ನ ವತಿಯಿಂದ ಗಾಂಧಿ ಜಯಂತಿ ದಿನದಂದು ಸ್ವಚ್ಯೋತ್ಸವ - ನಿತ್ಯೋತ್ಸವ ಮಾಸಾಚರಣೆ ಉದ್ಘಾಟನಾ ಸಮಾರಂಭ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ‍ ರೈತರ ಕಾಮಗಾರಿಗಳ ಕ್ರಿಯಾ ಯೋಜನೆ ಯ ಅಭಿಯಾನಕ್ಕೆ ಚಾಲನೆ ನಡೆಯಿತು. ಸಭೆಯ ನಂತರ ಅರಂತೋಡು ಪೇಟೆಯ ವಠಾರವನ್ನು ಸ್ವಚ್ಛಗೊಳಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ...
Ad Widget

ರೋಟರಿ ಜಿಲ್ಲಾ ಗವರ್ನರ್ ಆಗಿ ರೊ.ಜಿತೇಂದ್ರ ಎನ್.ಎ.

ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181 ಝೋನ್-5 ರ 2021- 2022 ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಸ್ತುತ ರೋಟರಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕರಾದ ರೊ. ಜಿತೇಂದ್ರ ಎನ್.ಎ. ರವರನ್ನು ನಿಯೋಜಿತ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಆಯ್ಕೆ ಮಾಡಿರುತ್ತಾರೆ. ಪ್ರಸ್ತುತ ಝೋನಲ್ ಲೆಫ್ಟಿನೆಂಟ್ ಆಗಿ ಕರ್ತವ್ಯ...

ಉಬರಡ್ಕ ಕೋವಿಡ್ ಟೆಸ್ಟ್ – ಎಲ್ಲಾ ವರದಿ ನೆಗೆಟಿವ್

ಉಬರಡ್ಕ ಗ್ರಾ.ಪಂ.ವತಿಯಿಂದ ಇಂದು ಕೋವಿಡ್ -19 ಟೆಸ್ಟ್ ಪಂಚಾಯತ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪರೀಕ್ಷೆಗೊಳಪಟ್ಟ ಎಲ್ಲಾ 45 ಜನರ ವರದಿ ನೆಗೆಟಿವ್ ಬಂದಿದೆ.

ವಿಖಾಯ ರಕ್ತದಾನಿ ಬಳಗಕ್ಕೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಶಂಸೆ

ರಾಷ್ಟ್ರೀಯ ರಕ್ತ ದಾನ ದಿನದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಕ್ಟೋಬರ್ 01 2020 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿಗ ಬಳಗದ ಕಾರ್ಯವೈಕರಿಯನ್ನು ಶ್ಲಾಘಿಸಿ ಪ್ರಶಂಸನಾ ಪತ್ರ ವನ್ನು ಬ್ಯಾಂಕ್ ಆಫ್ ಬರೋಡದ ವಿಭಾಗೀಯ ಮುಖ್ಯಸ್ಥೆ ಶ್ರೀಮತಿ ಸುಜಯಾ ವಿ. ಶೆಟ್ಟಿ...

ಸಂಪಾಜೆ ಮತ್ತು ಭಾಗಮಂಡಲ ಮೀಸಲು ಅರಣ್ಯದಲ್ಲಿ ಕಡವೆ ಹತ್ಯೆ – ಆರೋಪಿಗಳ ಬಂಧನ

ಮಡಿಕೇರಿ ವಿಭಾಗದ ಭಾಗಮಂಡಲ ವಲಯ ವ್ಯಾಪ್ತಿಗೆ ಬರುವ ಪಟ್ಟಿಘಾಟ್ ಮೀಸಲು ಅರಣ್ಯದ ಡೆಂಕಲ್ ಎಂಬಲ್ಲಿ ಕಡವ ಹತ್ಯೆ ಸಂಬಂಧವಾಗಿ ಪ್ರಭಾಕರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಡಿಕೇರಿ ವಿಭಾಗ , ಹಾಗೂ ನಿಲೇಶ್ ಸಿಂಧೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು , ಮಡಿಕೇರಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಹಾಗೂ ಭಾಗಮಂಡಲ ಸಹಾಯಕ...

ಬಿಜೆಪಿ ಸುಳ್ಯ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.1ರಂದು ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸುಳ್ಯ ಮಂಡಲ ಅಧ್ಯಕ್ಷ ಹರೀಶ ಕಂಜಿಪಿಲಿ ವಹಿಸಿದ್ದರು. ವೇದಿಕೆಯಲ್ಲಿ ಮಾನ್ಯ ಶಾಸಕ ಎಸ್ ಅಂಗಾರ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೋಗಿ...

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿಸ್ತೃತ ಕಟ್ಟಡ ಉದ್ಘಾಟನೆ – ಮೌಲ್ಯಯುತ ಶಿಕ್ಷಣಕ್ಕೆ ಸರಕಾರದಿಂದ ಪ್ರೋತ್ಸಾಹ : ಮೀನಾಕ್ಷಿ ಶಾಂತಿಗೋಡು

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಆರ್.ಐ.ಡಿ.ಎಫ್ ನಬಾರ್ಡ್ 25 ಯೋಜನೆಯಡಿ ರೂ.119 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲೇಜಿನ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭವು ಅ.01 ರಂದು ನಡೆಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ವಿಸ್ತೃತ ಕಟ್ಟಡದ ಉದ್ಘಾಟನೆಗೈದರು.ಶಾಸಕ ಎಸ್.ಅಂಗಾರ ನಾಮಫಲಕ ಅನಾವರಣಗೊಳಿಸಿದರು. ನಂತರ...

ರೋಟರಿ ತರಬೇತಿ ಕಾರ್ಯಗಾರದ ಜಿಲ್ಲಾ ಸಂಚಾಲಕರಾಗಿ ರೊ.ಡಾ.ಕೇಶವ ಪಿ.ಕೆ

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಜಿಲ್ಲೆಗಳನ್ನೊಳಗೊಂಡ ಸುಮಾರು 100 ಕ್ಕೂ ಮಿಕ್ಕಿ ರೋಟರಿ ಕ್ಲಬ್ ಗಳ ರೋಟರಿ ಜಿಲ್ಲೆ 3181 ಇದರ 2021- 2022 ಸಾಲಿನ ನಿಯೋಜಿತ ಅಧ್ಯಕ್ಷ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರದ (PETS & SETS) ಜಿಲ್ಲಾ ಸಂಚಾಲಕರಾಗಿ ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರೊ.ಡಾ.ಕೇಶವ PK ಯವರು ಸರ್ವಾನುಮತದಿಂದ ಆಯ್ಕೆಗೊಂಡಿರುತ್ತಾರೆ.ಸುಳ್ಯ ರೋಟರಿಯ...

ವಿಹಿಂಪ ಬೆಳ್ಳಾರೆಯ ದರ್ಖಾಸು ಶಾಖೆ ಉದ್ಘಾಟನೆ – ಸಂಯೋಜಕರಾಗಿ ಹರೀಶ್ ಚೂಂತಾರು

ವಿಶ್ವ ಹಿಂದೂ ಪರಿಷದ್ ಭಜರಂಗದಳ, ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಉಪಸಮಿತಿ ದರ್ಖಾಸು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಸೆ.30 ರಂದು ಶ್ರೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಪ್ರಖಂಡದ ವಿಶ್ವಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ, ಭಜರಂಗದಳ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳ ಸಂಯೋಜಕ್ ನಿಕೇಶ್ ಉಬರಡ್ಕ, ಸುಳ್ಯ ವಿಹಿಂಪ ಸಹ...
Loading posts...

All posts loaded

No more posts

error: Content is protected !!