ಎಸ್.ಎಂ.ಎ ಜಿಲ್ಲಾ ಮಟ್ಟದ ಲೀಡರ್ಸ್ ಮೀಟ್ ಕಾರ್ಯಕ್ರಮ

ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್ಎಂಎ)ದ.ಕ ಜಿಲ್ಲಾ ಈಸ್ಟ್ ಅಲರ್ಟ್ 2020 ಜಿಲ್ಲಾ ಮಟ್ಟದ ಲೀಡರ್ಸ್ ಮೀಟ್ ಕಾರ್ಯಕ್ರಮ ಅ.13ರಂದು ಪುತ್ತೂರು ಕರ್ನಾಟಕ ಮುಸ್ಲಿಂ ಜಮಾಅತ್ ಕಮಿಟಿಯ ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ರವರು ಅಧ್ಯಕ್ಷತೆ ಯಲ್ಲಿ ನಡೆಯಿತು.ಸಭಾ ಕಾರ್ಯಕ್ರಮ ವನ್ನು ಜಿಲ್ಲಾ ಸಮಿತಿ ನೇತಾರ ಸೈಯ್ಯದ್ ಸಾದಾತ್ ತಂಙಳ್ ಉದ್ಘಾಟಿಸಿ ದುವಾ...

ಕಾಯರ್ತೊಡಿ : ಶ್ರೀ ಮಹಾವಿಷ್ಣು ದೇವಸ್ಥಾನ ಆವರಣದ ಸ್ವಚ್ಛತೆ

ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ವತಿಯಿಂದ ದಿನಾಂಕ 13/10/2020 ರಂದು ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕ್ರಮವನ್ನು ನಡೆಸಲಾಯಿತು.ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿದ್ದ ಕಾಡು ಸಸಿಗಳನ್ನು ಕಡಿದು ಸ್ವಚ್ಛತೆ ಗೊಳಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಸ್ವಯಂಸೇವಕರು ಕೆಲಸವನ್ನು ನಿರ್ವಹಿಸಿರುತ್ತಾರೆ .ವಿಪತ್ತು ನಿರ್ವಹಣಾ ಘಟಕದ...
Ad Widget

ಕಡಬ : ಮಿಥುನ್ ರೈ ವಿರುದ್ಧ ಸುಳ್ಯ ಬಿಜೆಪಿ ಯುವ ಮೋರ್ಚಾ ದೂರು ದಾಖಲು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಬಗ್ಗೆ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಪ್ರೆರೇಪಿಸಿರುವಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ಇಂದು (ಅ.13) ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು...

ಗುತ್ತಿಗಾರು : ವಿಪತ್ತು ನಿರ್ವಹಣಾ ತಂಡದವರಿಂದ ಸ್ವಚ್ಛತಾ ಕಾರ್ಯ

ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಯ ಅಂಗವಾಗಿ ಗುತ್ತಿಗಾರು ವಿಪತ್ತು ನಿರ್ವಹಣಾ ಘಟಕದಿಂದ ಇಂದು ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ಗುತ್ತಿಗಾರು ಸಾರ್ವಜನಿಕ ಶೌಚಾಲಯ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲೂ ತುಂಬಿದ್ದ ಕಾಡನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಅಚ್ಚುತ ಗುತ್ತಿಗಾರು, ಮೇಲ್ವಿಚಾರಕರಾದ ಸುಧೀರ್, ಸತೀಶ್ ಮೂಕಮಲೆ, ಲೋಹಿತ್ ಚೈಪೆ, ಜಯರಾಮ ಪೈಕ, ಮನೋಜ್ ಗುತ್ತಿಗಾರು, ವಸಂತ...

ಸುಳ್ಯ : ಅಂಗಡಿಗಳಿಂದ ಕಳ್ಳತನ

ಸುಳ್ಯ ಪೇಟೆಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಕಳೆದ ರಾತ್ರಿ ನಡೆದಿದೆ. ಎಪಿಎಂಸಿ ಬಳಿಯ ಲೋಕೇಶ್ ಕೆರೆಮೂಲೆ ಹಾಗೂ ಯುವಜನ ಸಂಯುಕ್ತ ಮಂಡಳಿ ಬಳಿಯ ಅಂಗಡಿಗಳಿಂದ ಕಳ್ಳರು ದೋಚಿದ್ದಾರೆ. ಲೋಕೇಶ್ ರವರ ಅಂಗಡಿಯಿಂದ ಕಂಪ್ಯೂಟರ್,ಮೊಬೈಲ್, ಹಣ ಸೇರಿದಂತೆ ಸುಮಾರು 50 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.

ಕೃಷಿ ಮಾರುಕಟ್ಟೆ ದರ

*ಕ್ಯಾಂಪ್ಕೋ ನಿಯಮಿತ ಮಂಗಳೂರು.*                  ಶಾಖೆ  :  *ಸುಳ್ಯ.*        (13.10.2020       ಮಂಗಳವಾರ  ) *ಅಡಿಕೆ ಧಾರಣೆ*ಹೊಸ ಅಡಿಕೆ          235 - 300ಹಳೆ ಅಡಿಕೆ             315 - 375ಡಬಲ್ ಚೋಲ್     315 - 400 ಹೊಸ ಫಠೋರ     175 - 235ಹಳೆ ಫಠೋರ        220 - 315 ಹೊಸ ಉಳ್ಳಿಗಡ್ಡೆ    110 - 175ಹಳೆ ಉಳ್ಳಿಗಡ್ಡೆ       150 -...

ಬಯಲು ಚಿತ್ರ ಕಲಾವಿದ ಮೋಹನ್ ಸೋನಾ ವಿಧಿವಶ

ವಿಟ್ಲದ ಸಿ.ಪಿ.ಸಿ.ಆರ್.ಐ ನಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಮೋಹನ್ ಸೋನಾ ನಾಡು ಕಂಡ ಪ್ರಸಿದ್ಧ ಕಲಾವಿದ. ಚಿತ್ರ ಕಲಾವಿದರಾಗಿ, ನಾಟಕ ನಟರಾಗಿ , ನಿರ್ದೇಶಕರಾಗಿ ತನ್ನ ಪ್ರತಿಭೆ ಮೆರೆದಿದ್ದಾರೆ. ಅನೇಕ ಕಡೆ ಚಿತ್ರಕಲಾ ಪ್ರದರ್ಶನ ಮಾಡಿದವರು. ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಕಾರವಾರದ ಕಡಲ ತೀರದಲ್ಲಿ ಚಿತ್ರಕಲೆ ಮಾಡಿದ್ದರು. ಲಿವರ್ ಸಮಸ್ಯೆಯಿಂದ...

ನೂರು ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಗ್ವಾಲಿಯಾರ್ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು 100 ರೂ. ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಶೇಷ ನಾಣ್ಯವನ್ನು ಹಣಕಾಸು ಸಚಿವಾಲಯ ಮುದ್ರಿಸಿದೆ.

ಕಳಂಜದಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟನೆ

ತೋಟಗಾರಿಕಾ ಇಲಾಖೆ ಸುಳ್ಯ ಇದರ ಆಶ್ರಯದಲ್ಲಿ ಕಳಂಜ ಗ್ರಾಮ ಪಂಚಾಯತಿನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಮುದಾಯ ಭವನದಲ್ಲಿ 2 ದಿನಗಳ ಜೇನುಕೃಷಿ ತರಬೇತಿ ಕಾರ್ಯಾಗಾರವು ಅ.12 ರಂದು ಉದ್ಘಾಟನೆಗೊಂಡಿತು. ದಕ್ಷಿಣ ಕನ್ನಡ ಜಿಲ್ಲಾ ಜೇನು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ ಕೋಲ್ಚಾರು ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜೇನುಕೃಷಿ ತರಬೇತುದಾರರಾಗಿ...

ಸಚಿವ ಸಂಪುಟದಲ್ಲಿ ಬದಲಾವಣೆ : ಶ್ರೀರಾಮುಲುಗೆ ಸಮಾಜ ಕಲ್ಯಾಣ, ಡಾ.ಸುಧಾಕರ್ ಗೆ ಆರೋಗ್ಯ ಇಲಾಖೆ ಹೊಣೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೆಲ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದು, ಬಿ.ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದ್ದು, ಡಾ.ಕೆ.ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ವೈಜ್ಞಾನಿಕ ಮಾಹಿತಿಯೊಂದಿಗೆ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಸಾಮರ್ಥ್ಯವಿದ್ದರೆ ಮಾತ್ರ ಸೋಂಕಿನ ನಿಯಂತ್ರಣ ಮತ್ತು...
Loading posts...

All posts loaded

No more posts

error: Content is protected !!