- Monday
- July 13th, 2026
ಸುಳ್ಯ:- ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ಸ್ವತಂತ್ರ ಭಾರತದ ಅತ್ಯಂತ ಕರಾಳ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದೇಶವ್ಯಾಪಿ ಅಕ್ಟೋಬರ್ ತಿಂಗಳಿನಲ್ಲಿ "ಜಾಗೋ ಕಿಸಾನ್" ಕೃಷಿ ಸಂಹಾರ ಬಿಜೆಪಿಯ ಹುನ್ನಾರ ಎಂಬ ಹೆಸರಿನಲ್ಲಿ ಅಭಿಯಾನ ಕೈಗೊಂಡಿದ್ದು ಇದರ ಭಾಗವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ...
ಸುಳ್ಯ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಎಎಸ್ಐ ದಾಮೋದರ, ಸುಳ್ಯ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ರೈಟರ್ ದೇವರಾಜ್, ಸಿಬ್ಬಂದಿಗಳಾದ ರಾಮಚಂದ್ರ, ಮಂಜುನಾಥ, ಮೌಲಾನ, ಸುರೇಶ್,...
ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ 5 ನೇ ವರ್ಷದ ಶ್ರೀ ಶಾರದೋತ್ಸವ ಅ.25 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು. ಪತಂಜಲಿ ಶಾಸ್ತ್ರೀ ಮುಕ್ಕೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬೆಳಗ್ಗೆ ಶಾರದಾ ಪ್ರತಿಷ್ಟೆ, ಪೂಜೆ, ಗಣಹೋಮ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಮುಕ್ಕೂರು ವಠಾರದಿಂದ ಮೆರವಣಿಗೆ ಸಾಗಿ ಚೆನ್ನಾವರ ಗೌರಿ...
ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಸರವು ರತ್ನವೇಣಿ ಭಟ್ ಅವರ ಕೃಷಿ ಜಾಗಕ್ಕೆ ಅ.24 ರಂದು ಕಾಡಾನೆ ದಾಳಿ ಮಾಡಿದ್ದು ಅಪಾರವಾದ ಕೃಷಿ ನಷ್ಟ ಗೊಂಡಿರುತ್ತದೆ. ಕೃಷಿ ಜಾಗದಲ್ಲಿ ತೆಂಗು, ಅಡಿಕೆ, ಬಾಳೆ ಕೃಷಿಯು ನಾಶಗೊಂಡಿರುತ್ತದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಡ್ಕಾರ್ ಯುನಿಟ್ ವತಿಯಿಂದ ಅಡ್ಕಾರ್ ಸರ್ಕಾರಿ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಲಾಕ್ ಡೌನ್ ನಿಂದಾಗಿ ಶಾಲೆಗಳು ಮುಚ್ಚಿದ್ದರಿಂದ, ಶಾಲೆಯ ಪರಿಸರ ಕಾಡು ಗಿಡಗಳಿಂದ ಆವರಿಸಿತು. ಇದನ್ನು ಮನಗಂಡ ಕ್ಯಾಂಪಸ್ ಫ್ರಂಟ್ ಅಡ್ಕಾರ್ ಯುನಿಟ್ ನ ವಿದ್ಯಾರ್ಥಿಗಳು ಶಾಲೆಯ ಪರಿಸರವನ್ನು ಸ್ವಚ್ಚಗೊಳಿಸಿದರು.ಈ ಸಂಧರ್ಭದಲ್ಲಿ ಸಮಿತಿಯ ಸುಳ್ಯ...
ಸುಳ್ಯ ನಲಿಕೆ ಫ್ರೆಂಡ್ಸ್ ಮತ್ತು ಅಜಿಲ ಸೇವಾ ಸಮಾಜ ಸಂಘದ ವಾರ್ಷಿಕ ಸಭೆಯು ಅ .24 ರಂದು ಅರಂಬೂರು ಮಾಕಾಂಬಿಕಾ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು . ತಾಲೂಕು ಅಜಿಲ ಸೇವಾ ಸಮಾಜ ಸಂಘದ ಅಧ್ಯಕ್ಷ ಜಯರಾಮ ಬೊಳಿಯಮಜಲು ರವರು ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ನಲಿಕೆ ಫ್ರೆಂಡ್ಸ್ ಅಧ್ಯಕ್ಷ ಶ್ರೀಧರ ಅಜಿಲ ಅಡ್ತಲೆ ,...
ಸುಳ್ಯ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯುಧ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ಪೂಜಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಎಸ್ಐ ಹರೀಶ್ ಎಂ ಆರ್, ಕ್ರೈಂ ಎಸ್ಐ ರತನ್ ಕುಮಾರ್, ಪ್ರೊಬೆಷನರಿ ಎಸ್ಐ ಸಂದೀಪ್ ಶೆಟ್ಟಿ, ಎಎಸ್ಐ ಭಾಸ್ಕರ್ ಪ್ರಸಾದ್, ನ್ಯಾಯವಾದಿ ವೆಂಕಪ್ಪ ಗೌಡ, ಕೆವಿಜಿ ಆಯುರ್ವೇದ ಮೆಡಿಕಲ್...
ಗುತ್ತಿಗಾರು ಮೆಸ್ಕಾಂ ಕಛೇರಿಯಲ್ಲಿ ಆಯುಧಪೂಜೆ, ವಾಹನಪೂಜೆ ಅ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಎಇಇ ಚಿದಾನಂದ ಕೆ., ಜೆ.ಇ. ಲೋಕೇಶ್ ಎಣ್ಣೆಮಜಲು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕದಲ್ಲಿ ಅ. 24 ರಂದು ಶ್ರಮದಾನ ನಡೆಸಲಾಯಿತು.ಈ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಗುರುಗಳು , ಪೋಷಕರು ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.
Loading posts...
All posts loaded
No more posts
