ಯೋಗ 2020 ಸ್ಪರ್ಧೆಯಲ್ಲಿ ಶರತ್ ಮರ್ಗಿಲಡ್ಕ ರಿಗೆ ಬಹುಮಾನ

ಆವಿಷ್ಕಾರ ಯೋಗ ಮಂಗಳೂರು ಮತ್ತು ಯೋಗ ವಿದ್ಯಾ ಟ್ರಸ್ಟ್, ಮಂಗಳೂರು ಸಹಯೋಗದಲ್ಲಿ ಆಯೋಜಿಸಿರುವ ದಸರಾ ಯೋಗ 2020 ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ತಂಡ ಸುಳ್ಯ ಇದರ ಸದಸ್ಯ ಶರತ್ ಮರ್ಗಿಲಡ್ಕ ಅವರು 26 ರಿಂದ 35ರ ವಯೋಮಿತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರ ಯೋಗ ಗುರು ಸಂತೋಷ್ ಮುಂಡಕಜೆಯವರಿಂದ ಮಾರ್ಗದರ್ಶನ ಪಡೆದಿರುತ್ತಾರೆ.

ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅ.27 ರಂದು ವಿಕಲಚೇತನರ ಆರೋಗ್ಯ ಶಿಬಿರ ನಡೆಯಿತು. ವಿಕಲಚೇತನ ಇಲಾಖೆಯ ನಗರ ಪಂಚಾಯತ್ ನ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್ ಸುಳ್ಯ, ತಾಲೂಕು ಪಂಚಾಯತ್ ಎಮ್ ಆರ್ ಡಬ್ಲ್ಯೂ ಚಂದ್ರಶೇಖರ, ಪುಟ್ಟಣ್ಣ ವಿ. ಮತ್ತು ತಾಲೂಕಿನ ಎಲ್ಲಾ ವಿ ಆರ್ ಡಬ್ಲ್ಯೂ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವು...
Ad Widget

ಭಕ್ತಕೋಡಿಯಲ್ಲಿ ಅ.25 ರಂದು ಕಾರುಗಳ ನಡುವೆ ಅಪಘಾತ- ಗಾಯಾಳು ಪಡ್ಪಿನಂಗಡಿಯ ಓಮ್ನಿ ಚಾಲಕ ಇಂದು ಮೃತ್ಯು

ಪುತ್ತೂರು ಕಾಣಿಯೂರು ರಸ್ತೆಯ ಭಕ್ತಕೋಡಿಯಲ್ಲಿ ಅ.25 ರಂದು ಮಾರುತಿ ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓಮ್ನಿ ಚಾಲಕ ಪಡ್ಪಿನಂಗಡಿ ಸಮೀಪ ಅಡಿಬಾಯಿ ಅಬ್ದುಲ್ ರಹಿಮಾನ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಐವತ್ತೊಕ್ಲು ಗ್ರಾಮದ ಅಡಿಬಾಯಿ ರಹಿಮಾನ್ ಅವರು ಮೃತಪಟ್ಟವರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ಅಬ್ದುಲ್...

ತೊಡಿಕಾನ : ಅಶ್ಲೀಲ ಫೋಟೋ ಶೂಟಿಂಗ್ – ಭಕ್ತರ ಆಕ್ರೋಶ

ತೊಡಿಕಾನ ಕ್ಷೇತ್ರಕ್ಕೆ ಸಂಬಂಧಿಸಿದ ದೇವರಗುಂಡಿ ಬಳಿ ಇತ್ತೀಚೆಗೆ ಕೆಲವರು ಬಂದು ಅಶ್ಲೀಲವಾಗಿ ಫೋಟೋಗಳನ್ನು ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದೇವಸ್ಥಾನಕ್ಕೆ ಸಂಬಂಧಿಸಿದವರ ಜೊತೆಗೆ ಯಾವುದೇ ಅನುಮತಿ ಪಡೆಯದೇ ಆಶ್ಲೀಲ ಚಿತ್ರಗಳನ್ನು ಶೂಟಿಂಗ್ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರ ಆಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತರು ಒತ್ತಾಯಿಸಿದ್ದಾರೆ....

ಜಯಾನಂದ ಸಂಪಾಜೆಯವರಿಗೆ ಯಕ್ಷಪ್ರದೀಪ್ತರತ್ನ ಪ್ರಶಸ್ತಿ

ಪುತ್ತೂರು ಶ್ರೀ ಭಗವತೀ ಯಕ್ಷಗಾನ ಬಳಗ ಇದರ ಆಶ್ರಯದಲ್ಲಿ ಅ.26 ರಂದು ಪುತ್ತೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಖ್ಯಾತ ಮುಮ್ಮೇಳ ಕಲಾವಿದರಾದ ಜಯಾನಂದ ಸಂಪಾಜೆಯವರಿಗೆ ಯಕ್ಷಪ್ರದೀಪ್ತರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ‌ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಕಾಪು, ಬಿ.ಜಯಕರ ಶೆಟ್ಟಿ...

ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ 8 ನೇ ವರ್ಷದ ನವರಾತ್ರಿ ಉತ್ಸವವು ವೈಧಿಕ, ಧಾರ್ಮಿಕ ಹಾಗೂ ಪ್ರತೀ ದಿನ ವಿವಿಧ ಮಂಡಳಿಯಿಂದ ಭಜನಾ ಸೇವೆ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ನೆರವೇರಿತು. ಊರ ಹಾಗೂ ಪರವೂರ ಸಾವಿರಾರು ಭಕ್ತಾಧಿಗಳು ಶ್ರೀದೇವಿಯ ದರ್ಶನ ಪಡೆದರು. ಈ ಸಂದರ್ಭ ಹೊಸ ಭಜನಾ ತಂಡ ರಚಿಸಲಾಯಿತು.

ಗುತ್ತಿಗಾರು : ಅಕ್ರಮ ಮರ ಸಾಗಾಟ ಪತ್ತೆ – ಟಿಪ್ಪರ್ ಚಾಲಕ ವಶ

ಐನೆಕಿದು ಕಡೆಯಿಂದ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಚಾಲಕ ನನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆಯವರು ವಶಕ್ಕೆ ಪಡೆದ ಘಟನೆ ಅ.25 ರಂದು ನಡೆದಿದೆ. ಕಿರಾಲ್ ಬೋಗಿ ಮತ್ತು ಹೆಬ್ಬಲಸು ಮರದ ಸೈಜುಗಳನ್ನು ಟಿಪ್ಪರ್ ನಲ್ಲಿ ಸಾಗಿಸುತ್ತಿದ್ದಾಗ ಗುತ್ತಿಗಾರು ಸಮೀಪ ಶಾಖಾ ಫಾರೆಸ್ಟರ್ ಮನೋಜ್, ಅರಣ್ಯ ರಕ್ಷಕ ಧನಂಜಯ, ವೀರಭದ್ರಯ್ಯ ಕರಣೀಮಠ, ಅರಣ್ಯ ವೀಕ್ಷಕ...

ಗುತ್ತಿಗಾರು ಸಹಕಾರಿ ಸಂಘದಿಂದ ಜನತೆಗೆ ಮತ್ತೊಂದು ಕೊಡುಗೆ – ಸುವರ್ಣ ಸಹಕಾರ ಮಾರ್ಟ್ ಶುಭಾರಂಭ

ಪ್ರಾ.ಕೃ.ಪ.ಸ.ಸಂಘ ಗುತ್ತಿಗಾರು ಇದರ ಸುವರ್ಣ ಸಹಕಾರ ಮಾರ್ಟ್ ದಿನಸಿ ಮಳಿಗೆ ಅ.25ರಂದು ಶುಭಾರಂಭಗೊಂಡಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಸಹಕಾರ ಮಾರ್ಟ್ ನ್ನು‌ ಉದ್ಘಾಟಿಸಿದರು. ಶಾಸಕ ಎಸ್. ಅಂಗಾರ ದೀಪ ಬೆಳಗಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸೊಸೈಟಿ ಅದ್ಯಕ್ಷ ವೆಂಕಟ್ ದಂಬೆಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗಾರು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಭರತ್...

ಕೋವಿಡ್ 19 ರ ಹಿನ್ನೆಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಐದನೆಯ ಹಂತಕ್ಕೆ ಬಂದಿದ್ದರೂ ಇನ್ನು ಕೂಡ ಪ್ರಥಮ ಹಂತದಲ್ಲಿಯೇ ಸಿಲುಕಿಕೊಂಡು ಸಂಕಷ್ಟದಲ್ಲಿರುವ ಧ್ವನಿ ಮತ್ತು ಬೆಳಕು ಸಂಸ್ಥೆಗಳು

     ಕೋವಿಡ್ 19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಇತ್ತೀಚಿಗೆ ಕೆಲವು ತಿಂಗಳುಗಳಿಂದ ಜನಜೀವನ ಅಲ್ಪಮಟ್ಟಿಗೆ ಸುಧಾರಿಸಿಕೊಂಡು ಸ್ವಲ್ಪಮಟ್ಟಿಗೆ ಚೇತರಿಕೆಯ ದಾಪುಗಾಲು ಇಡುತ್ತಿದೆ. ವ್ಯಾಪಾರ ಕೇಂದ್ರಗಳು , ಕೈಗಾರಿಕಾ ಕೇಂದ್ರಗಳು, ಅಲ್ಪಸ್ವಲ್ಪ ಪ್ರವಾಸೋದ್ಯಮಗಳು ನಿಧಾನವಾಗಿ ಚೇತರಿಸಿಕೊಂಡು ಬರುತ್ತಿದ್ದರೆ, ಇನ್ನೂ ಕೂಡ ತಮ್ಮ ಕೆಲಸ ಕಾರ್ಯಗಳಿಗೆ ಮರಳಲು ಸಾಧ್ಯವಾಗದೆ , ಯಾವುದೇ ಬೆಳವಣಿಗೆಗಳು ಇಲ್ಲದೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ...

ಗುತ್ತಿಗಾರು : ಅಪ್ರಾಪ್ತ ಯುವತಿ ಆತ್ಮಹತ್ಯೆ

ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿ ನಿವಾಸಿ ಚರಂಬು ಅವರ ಪುತ್ರಿ ಜಯಶ್ರೀ (17)ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅ.25 ರಂದು ಮಧ್ಯಾಹ್ನದ ವೇಳೆ ಮನೆ ಸಮೀಪದ ಗೇರು ಮರಕ್ಕೆ ಬಟ್ಟೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ತಂದೆ, ತಾಯಿ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ದೂರದ ಸಂಬಂಧಿಯೊರ್ವನ ಪ್ರೀತಿಸುವುದಕ್ಕೆ ಮನೆಯವರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆತ್ಮಹತ್ಯೆ ಗೈದಿರುವ...
Loading posts...

All posts loaded

No more posts

error: Content is protected !!