ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಸಂಪಾಜೆ :ಗೂನಡ್ಕ ಪೇರಡ್ಕ ಮೊಹಿಯದ್ದಿನ್ ಜುಮಾ ಮಸೀದಿ ವಠಾರದಲ್ಲಿ ಭಾರತದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಜಮಾಅತ್ ಸಮಿತಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ಪೇರಡ್ಕ ಮಸೀದಿ ಖತೀಬರಾದ ಅಹ್ಮದ್ ನ‌ಈಂ ಫೈಝಿ ಅಲ್ ಮ‌ಅಬರಿ ಮುಖ್ಯ ಭಾಷಣ ನಡೆಸಿ ಗಣರಜ್ಯೋತ್ಸವದ ಮಹತ್ವದ ಬಗ್ಗೆ, ದೇಶ ಪ್ರೇಮದ...

ಜನಾರ್ಧನ ಪಾಲ್ತಾಡು ನೇಣು ಬಿಗಿದು ಆತ್ಮಹತ್ಯೆ

ನಾಟಿ ವೈದ್ಯರಾದ ಹರಿಹರ ಪಳ್ಳತ್ತಡ್ಕ ಗ್ರಾಮದ ಪಾಲ್ತಾಡು ನಿವಾಸಿ ಜನಾರ್ಧನ ಪಾಲ್ತಾಡು ರವರು ತಮ್ಮ ಸ್ವಗೃಹದಲ್ಲಿ ಜ.26 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತರಿಗೆ 72 ವರ್ಷ ವಯಸ್ಸಾಗಿತ್ತು.ಇವರು ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಎಸ್.ಐ ಕಾರ್ತಿಕ್ ರವರು ಸ್ಥಳ ಮಹಜರು ನಡೆಸಿ ಮೃತದೇಹವನ್ನು...
Ad Widget

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 76ನೇ ಗಣರಾಜ್ಯೋತ್ಸವ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಂದು(ಜ.26) 76ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನಡೆಯಿತು. ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದಾಮೋದರ ಕೂಜುಗೋಡು ಕಟ್ಟೆಮನೆ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಬಟ್ಟೋಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿ ಆನೆ ಸಾವು ,

ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಂಡೆಕೋಲು ಕನ್ಯಾನ ಕಾಡಿನಲ್ಲಿ ಆನೆಯೊಂದು ಸಾವಿಗೀಡಾಗಿರುವ ಘಟನೆ ಇದೀಗ ವರದಿಯಾಗಿದೆ. ಸಂಜೆ ಕಾಡಿಗೆ ಕಟ್ಟಿಗೆಗೆ ಹೋದವರಿಗೆ ಸತ್ತ ಆನೆ ಕಂಡು ಬಂದಿದ್ದು, ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಲಾಗಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆಯವರು ಹಾಗೂ ಜನರು ಸೇರಿದ್ದಾರೆಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ತೆರಳಿದ್ದು ತನಿಖೆ ನಡೆಸಲಿದ್ದಾರೆ ಎಂದು...

ಸುಳ್ಯದಲ್ಲಿ 76ನೇ ಗಣ ರಾಜ್ಯೋತ್ಸವ ಆಚರಣೆ ಹಾಗೂ ಪಥ ಸಂಚಲನ

ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಸುಳ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಸುಳ್ಯ ತಹಶೀಲ್ದಾ‌ರ್ ಶ್ರೀಮತಿ ಮಂಜುಳಾ ರವರು ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿದರು. ಸುಳ್ಯ ಪೊಲೀಸ್‌ ಇಲಾಖೆ, ನಿವೃತ್ತ ಸೈನಿಕರ ಸಂಘ,ಸುಳ್ಯ ಹೋಮ್ಹಾರ್ಡ್ಸ್, ಎನ್ ಸಿ ಸಿ,...

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಿಶೇಷ ಅಧಿಕಾರಿಯಾಗಿ ಮನೋಜ್ ಮಾಣಿಬೈಲು

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 05 ವರ್ಷಗಳ ಆಡಳಿತ ಮಂಡಳಿ ಅವಧಿಗೆ ಜ.19 ರಂದು ಚುನಾವಣೆ ನಡೆದು ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು, ಈ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟು ಫಲಿತಾಂಶವನ್ನು ಘೋಷಣೆ ಮಾಡಬೇಕಾಗಿರುವುದರಿಂದ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯು ಮುಕ್ತಾಯವಾಗಿರುವುದರಿಂದ ಸಂಘದ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಆಡಳಿತ...

ಅರಂತೋಡಿನ ಆಟೋ ಚಾಲಕ ಆತ್ಮಹತ್ಯೆ

ಅರಂತೋಡಿನ ಆಟೋ ಚಾಲಕ, ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕಂದಸ್ವಾಮಿ ಎಂಬವರು ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಂದಸ್ವಾಮಿಯವರು ನೇಣುಬಿಗಿದುಕೊಂಡ ವಿಷಯ ಗೊತ್ತಾಗಿ ಮನೆಯವರು ಅವರನ್ನು ಹಗ್ಗದಿಂದ ಇಳಿಸಿ, ಸಮೃದ್ಧಿ ಮಾರ್ಟಿನ ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ತಂದರೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ. ಕಂದಸ್ವಾಮಿಯವರಿಗೆ 55 ವರ್ಷ ಪ್ರಾಯವಾಗಿತ್ತು. ಪತ್ನಿ...

ವಳಲಂಬೆ ಜಾತ್ರೋತ್ಸವದ ಅಂಗವಾಗಿ ಗೊನೆ ಮುಹೂರ್ತ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.1 ಮತ್ತು 2 ರಂದು ಜಾತ್ರೋತ್ಸವ ನಡೆಯಲಿದ್ದು ಇದರ ಅಂಗವಾಗಿ ಇಂದು ಗೊನೆ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಅರ್ಚಕರಾದ ಮಹಾಬಲೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ, ಗುತ್ತಿಗಾರು ಮುತ್ತಪ್ಪ ದೈವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ ವಳಲಂಬೆ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ವ್ಯವಸ್ಥಾಪನಾ...

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ವರ್ಗಾವಣೆ

ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮಹಾ ಪಾತ್ರ ರವರು ರಾಯಚೂರಿಗೆ ವರ್ಗಾವಣೆ ಗೊಂಡಿರುತ್ತಾರೆ. ಮುಂದಿನ ಆದೇಶದ ವರೆಗೆ ರಾಯಚೂರು ನಗರ ಪಾಲಿಕೆಯ ಆಯುಕ್ತರಾಗಿ ಸರಕಾರ ಇವರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಇವರು ಪುತ್ತೂರು ಉಪವಿಭಾಗದ ಸುಳ್ಯ ಬೆಳ್ತಂಗಡಿ ಕಡಬ ವ್ಯಾಪ್ತಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ಸಮಯದಲ್ಲಿ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದರು.ಕುಕ್ಕೆ ಸುಬ್ರಹ್ಮಣ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದರು.

ಪಂಜ: ಸರಕಾರಿ ಹಿರಿಯ ಪ್ರಾಥಮಿಕ ನಾಗತೀರ್ಥದಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕ್ರೀಡಾಕೂಟ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥದಲ್ಲಿ ಪ್ರಜಾಪ್ರಭುತ್ವ‌ ದಿನದ ಅಂಗವಾಗಿ ಕ್ರೀಡಾಕೂಟವನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಅಧ್ಯಕ್ಷರಾದ ಹಿತೇಶ್ ಪಂಜದಬೈಲು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ SDMC ಅಧ್ಯಕ್ಷರಾದ ಮಧುಚಂದ್ರ ವಹಿಸಿದರು.ಪಂಜ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ವಿಜಯಲಕ್ಷ್ಮಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುರಾಜ್ ಕಕ್ಯಾನ, ಮುಖ್ಯಶಿಕ್ಷಕಿ...
Loading posts...

All posts loaded

No more posts

error: Content is protected !!