- Monday
- July 13th, 2026
ಇದೇ ಮೊದಲ ಬಾರಿಗೆ ಸುಳ್ಯದಲ್ಲಿ ರೋಡ್ ರನ್ನರ್ಸ್ ಎಂಬ ಫುಡ್ ಡೆಲಿವರಿ ಸಂಸ್ಥೆ ಇಂದು ಶುಭಾರಂಭಗೊಂಡಿತು. ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 10.30 ರ ತನಕ ಫುಡ್ ಡೆಲಿವರಿ ವ್ಯವಸ್ಥೆ ಮಾಡಲಿದ್ದಾರೆ. 8123067957 ಸಂಖ್ಯೆಯ ವಾಟ್ಸಾಪ್ ನಂಬರ್ ಗೆ ಸಂದೇಶ ಕಳುಹಿಸಿದರೆ ಕೂಡಲೇ ನಿಮ್ಮ ಮನೆ ಬಾಗಿಲಿಗೆ ಫುಡ್ ಡೆಲಿವರಿ...
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಸಮಿತಿ ಗ್ರಾಮ ಪಂಚಾಯತ್ ಚುನಾವಣೆ ಉಸ್ತುವಾರಿಗಳ ಮತ್ತು ಗ್ರಾಮ ಅಧ್ಯಕ್ಷರುಗಳು, ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕರು ಸಭೆಯನ್ನು ಇಂದು ಸುಳ್ಯದ ಯೋಜನಾ ಸಂಯುಕ್ತ ಮಂಡಲಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್...
ಸುಳ್ಯ ಕೆ.ಎಸ್.ಆರ್.ಟಿ.ಸಿ ಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೋಪಾಲ ದುಗ್ಗಲಡ್ಕ ಇವರನ್ನು ಸನ್ಮಾನಿಸಲಾಯಿತು. ಇವರು ಈಗ ಕೆ.ಎಸ್.ಆರ್.ಟಿ.ಸಿ. ಯ ನೌಕರನಲ್ಲದಿದ್ದರೂ ತನ್ನದೇ ಸಂಸ್ಥೆ ಎಂಬಂತೆ ಸೇವೆ ಸಲ್ಲಿಸುತ್ತಿದ್ದು ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸುಳ್ಯ ಘಟಕ ಹಾಗೂ ಸಿಬ್ಬಂದಿಗಳ ಪರವಾಗಿ ಹೂ ಗುಚ್ಚ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಸುಂದರ್ ರಾಜ್,...
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೊಸದಾಗಿ ರಚಿಸಲಾದ ಗೀತೆಯನ್ನು ಯೂಟ್ಯೂಬ್ ನಲ್ಲಿ ಟಾಲೆಂಟ್ ಹಂಟರ್ಸ್ ಎಂಬ ಚಾನೆಲ್ ನಲ್ಲಿ ನವಂಬರ್ 1 ರಂದು ಬಿಡುಗಡೆ ಮಾಡಲಾಯಿತು. ನಮ್ಮ ಕನ್ನಡದ ಜನಪ್ರಿಯ ಸಂಸ್ಕೃತಿಯನ್ನು ಎತ್ತಿ ತೋರಿಸುವ ಮೂಲಕ ಹೊಸ ಪ್ರಯತ್ನದಲ್ಲಿ ಗಾಯಕನಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಕೊಳಲಿನಲ್ಲಿ ವೀಕ್ಷಿತ್ ಕುತ್ಯಾಳ ಇವರಿದ್ದು ಉತ್ತಮವಾಗಿ ಮೂಡಿಬಂದಿದೆ. ವೀಕ್ಷಿಸಲು ಇಲ್ಲಿ ಕ್ಲಿಕ್...
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯದ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು, ಹಾಗೂ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಯವರಿಗೆ ಪ್ರಶಸ್ತಿ ಪ್ರಧಾನ ನಡೆಯಿತು. ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತಿತರರು ಉಪಸ್ಥಿತರಿದ್ದರು.
ಕೊಡಗಿನ ಸುಂಟಿಕೊಪ್ಪ ಎಂಬಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ನಿವಾಸಿ ಎಂ.ಎಸ್. ರವಿ ಎಂಬುವವರು ಕನ್ನಡದ ಧ್ವಜ ಮತ್ತು ಕನ್ನಡದ ಪೇಟವನ್ನು ಧರಿಸಿ ಪೇಟೆಯಲ್ಲಿ ಸಂಚರಿಸಿ ಜನರಲ್ಲಿ ವಿಶೇಷ ಆಕರ್ಷಣೆಯನ್ನು ಮೂಡಿಸುತ್ತಿದ್ದಾರೆ. ಇವರು ಸತತ 25 ವರ್ಷಗಳಿಂದ ಕನ್ನಡದ ಕಂಪನ್ನು ಬೀರುತ್ತಿದ್ದಾರೆ. ಡಾಕ್ಟರ್ ರಾಜಕುಮಾರ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡು, ಪ್ರಸ್ತುತ ಸುಂಟಿಕೊಪ್ಪ ಡಾಕ್ಟರ್ ಅಂಬೇಡ್ಕರ್ ಸಂಘದ...
ಕಡಬ ತಾ. ಎಡಮಂಗಲ ಗ್ರಾಮದ ದೋಣಿಮನೆ ದಿ.ಮುತ್ತಪ್ಪ ಗೌಡರ ಪುತ್ರ ದೀಪಕ್ ರ ವಿವಾಹವು ಕಡಬ ತಾ. ಕೊಣಾಜೆ ಗ್ರಾಮದ ಪಟ್ಲ ಮನೆ ರುಕ್ಮಯ್ಯ ಗೌಡರ ಪುತ್ರಿ ಮಲ್ಲಿಕಾ ರೊಂದಿಗೆ ವರನ ಮನೆಯಲ್ಲಿ ಅ.28 ರಂದು ನಡೆಯಿತು.
ದೇವಚಳ್ಳ ಗ್ರಾಮದ ಹಿರಿಯಡ್ಕ ನಿವೃತ್ತ ಶಿಕ್ಷಕ ಬಾಲಕೃಷ್ಣ ಗೌಡ ಮತ್ತು ಶೀಲಾವತಿ ದಂಪತಿಗಳ ಪುತ್ರ ಪುನೀತ್ ರವಿ ಯವರ ವಿವಾಹವು ಗುತ್ತಿಗಾರು ಗ್ರಾಮದ ಕೊಡಂಗೊಳಿ- ಚಿದ್ಗಲ್ಲು ಧರ್ಮಾವತಿ ಮತ್ತು ನಾರಾಯಣ ಗೌಡರ ಪುತ್ರಿ ಕವಿತಾ ಳೊಂದಿಗೆ ಅ.25 ರಂದು ವಧುವಿನ ಮನೆಯಲ್ಲಿ ನಡೆಯಿತು.
ದೇವಚಳ್ಳ ಗ್ರಾಮದ ವಾಲ್ತಾಜೆ ರವೀಂದ್ರ ಹಾಗೂ ಕುಸುಮಾವತಿ ದಂಪತಿಗಳ ಪುತ್ರ ರಕ್ಷಿತ್ ವಿ.ಆರ್. (ವಿನು) ರವರ ವಿವಾಹ ನಿಶ್ಚಿತಾರ್ಥವು ಜಾಲ್ಸೂರು ಗ್ರಾಮದ ಕಾಳಮನೆ ಮಾಧವ ಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ ಅಶ್ವಿನಿ ಯೊಂದಿಗೆ ಅ.31 ರಂದು ವಧುವಿನ ಮನೆಯಲ್ಲಿ ನಡೆಯಿತು.
ಗುತ್ತಿಗಾರು ಗ್ರಾಮದ ವಿವಿಧ ಬೂತ್‌ಗಳ ಬಿಜೆಪಿ ಕಾರ್ಯಕರ್ತರ ಸಭೆಯು ಅ.30ರಂದು ಚಿಕ್ಮುಳಿಯಲ್ಲಿ ನಡೆಯಿತು. ಗುತ್ತಿಗಾರು ಗ್ರಾಮದ ಬೂತ್ ಸಂಖ್ಯೆ 121, 122ನೇ ಬೂತಿನ ಕಾರ್ಯಕರ್ತರ ಸಭೆಯು ಅ 30 ರಂದು ದೇವಿಪ್ರಸಾದ್ ಚಿಕ್ಮುಳಿ ಇವರ ಮನೆಯಲ್ಲಿ ನಡೆಯಿತು. ಸಭೆಗೆ ಮಾನ್ಯ ಶಾಸಕರಾದ ಶ್ರೀ ಎಸ್ ಅಂಗಾರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತು ಸುಳ್ಯ ಮಂಡಲ...
Loading posts...
All posts loaded
No more posts
