- Monday
- July 13th, 2026
ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕೆಂದು ಕೋರಿ ವಕೀಲ ಹರ್ಷ ಮುತಾಲಿಕ್ ಎಂಬವರು ಸಲ್ಲಿಸಿದ ಮನವಿಯನ್ನು ಉಲ್ಲೇಖಿಸಿ ಕ್ರಮಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಆದೇಶದಲ್ಲಿ ಉಲ್ಲೇಖಿತ ಮನವಿಯನ್ನು ಲಗತ್ತಿಸಲಾಗಿದ್ದು, ಮನವಿಯಲ್ಲಿ ರಾಜ್ಯಾದ್ಯಂತ ಮುಸ್ಲಿಮ್ ಬಾಂಧವರು ಸಲ್ಲಿಸುವ ಪ್ರಾರ್ಥನೆಗಳಲ್ಲಿ ಹೆಚ್ಚು ಧ್ವನಿಯುಂಟಾಗುತ್ತಿದ್ದು, ಅವುಗಳಿಂದ ತೊಂದರೆಯುಂಟಾಗುತ್ತಿದ್ದು, ಈ ಬಗ್ಗೆ ಮಸೀದಿಗಳಿಂದ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಆಕ್ಷೇಪಿಸಿರುತ್ತಾರೆ....
ಕೇರಳ ರಾಜ್ಯದ ರಿಜಿಸ್ಟರ್ ನಂಬರ್ ಹೊಂದಿರುವ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಗಾಂಜಾವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಹಿಂಬಾಲಿಸಿಕೊಂಡು ಬಂದು ಸುಳ್ಯ ಜ್ಯೋತಿ ವೃತ್ತದ ಬಳಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ, ದೇವಚಳ್ಳ ಗ್ರಾಮದ ಕರಂಗಲ್ಲು, ಕೂತ್ಕುಂಜ ಗ್ರಾಮದ ಬಳ್ಳಕ, ಬಾಳುಗೋಡು ಪ್ರದೇಶಗಳಲ್ಲಿ ಸರಿಯಾದ ನೆಟ್ವರ್ಕ್ ಸಿಗದೇ ಇರುವುದರಿಂದ ಈ ಭಾಗದ ಜನರಿಗೆ, ಸಹಕಾರಿ ಸಂಘ, ಸ್ಥಳೀಯ ಸಂಸ್ಥೆ, ಧಾರ್ಮಿಕ ಸಂಸ್ಥೆಗಳಿಗೆ ತೊಂದರೆ ಉಂಟಾಗುತ್ತಿದ್ದು ಇದರಿಂದ ಈ ಪ್ರದೇಶದಲ್ಲಿ ಟವರ್ ಮುಖ್ಯವಾಗಿರುವುದರಿಂದ ಈ ಕುರಿತಂತೆ ಶಾಸಕ ಎಸ್.ಅಂಗಾರ ಜಿಯೋ ಕಂಪೆನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಿನಿಂದ ಸುಳ್ಯದ ಕೆಲವು ಮೊಬೈಲ್ ಅಂಗಡಿ ಗಳು ತಮ್ಮ ಸಂಸ್ಥೆಯ ಪ್ರಚಾರ ಪತ್ರದೊಂದಿಗೆ ಜಾಹೀರಾತನ್ನು ಪ್ರಕಟಿಸಿ ಈ ಜಾಹೀರಾತನ್ನು ಸಾರ್ವಜನಿಕರು ತಮ್ಮ ತಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಆಗಿಸಿ ಅದರಲ್ಲಿ 500 ಮತ್ತು 200 ವೀಕ್ಷಕರನ್ನು ಮಾಡಿದರೆ ಅವರಿಗೆ ಸಂಸ್ಥೆಯ ವತಿಯಿಂದ ಸೂಕ್ತ ಬಹುಮಾನ ನೀಡುವುದಾಗಿ ಪ್ರಚಾರಪಡಿಸಿದ್ದರು. ಕೆಲವು ಅಂಗಡಿಗಳು ಒಂದು...
ಇತ್ತೀಚೆಗೆ ಸರಕಾರ ಘೋಷಿಸಿದ ಅತಿವೃಷ್ಟಿ ಪೀಡಿತ ತಾಲೂಕು ಪಟ್ಟಿಯಲ್ಲಿ ಸುಳ್ಯ ವನ್ನು ಕೈಬಿಡಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಶಾಸಕ ಎಸ್ ಅಂಗಾರ ರವರು ಸಚಿವರು ಮುಖಾಂತರ ಒತ್ತಡ ತಂದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕನ್ನು ಸೇರ್ಪಡೆಗೊಳಿಸಿ ಸರಕಾರ ಆದೇಶ ಮಾಡಿದೆ.
ಮೂರು ವರ್ಷಗಳಿಂದ ಬಾಕಿಯುಳಿದಿದ್ದ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಾದ ಏಕಲವ್ಯ, ಕರ್ನಾಟಕ ಕ್ರೀಡಾರತ್ನ, ಜೀವಮಾನ ಸಾಧನೆ ಮತ್ತು ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ರಾಜ್ಯದ ಕ್ರೀಡಾ ಇಲಾಖೆ ಸಚಿವರಾದ ಸಿ.ಟಿ.ರವಿ ಅವರು ನ.೧ರಂದು ಬಿಡುಗಡೆಗೊಳಿಸಿದ್ದರು. ನಂತರ ನ. ೨ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೧೭, ೨೦೧೮, ೨೦೧೯ನೇ ಸಾಲಿನ...
ಮಂಗಳೂರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಳೆದ ಜನವರಿ 5 ರಂದು ಗ್ರಾಮ ವಾಸ್ತವ್ಯ ಮಾಡಿದ್ದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಇದಕ್ಕೆ...
ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ವಿನಯ ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲ್ತಡ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷತೆಗೆ ಮತ್ತು ಉಪಾಧ್ಯಕ್ಷ ತೆಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ್ ಅನಂತಶಂಕರ್ ಅಧಿಕೃತ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಉಪ...
ಜಾಲ್ಸೂರು ಎನ್ ಇ ಸಂಕಿರಣದಲ್ಲಿ ಎನ್ ಇ ಸಹೋದರರ ಮಾಲಕತ್ವದ ಎನ್ ಇ ಗ್ರೋಸರಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಗೆ ಅಸ್ಸಯ್ಯದ್ ಎ ಎಸ್ ಆಟು ಕೊಯ ತಂಙಳ್ ಕುಂಬೋಳ್ ಆಶೀರ್ವದಿಸಿದರು. ಸ್ಥಳೀಯ ಮಸೀದಿ ಖತೀಬರಾದ ಅಬೂಬಕ್ಕರ್ ಫೈಝಿ ಕುಂಬಡಾಜೆ ದುವಾ ನೆರವೇರಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಬ್ಬಾಸ್ ಮುಸ್ಲಿಯಾರ್, ಹಾಜಿ ಅಬ್ದುಲ್ಲಾ ಕಟ್ಟೆ ಕಾರ್ಸ್,...
ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಾಮಾನ್ಯ ಸಭೆಯು ನ.3 ನಡೆಯಿತು. ಈ ಸಂದರ್ಭದಲ್ಲಿ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಆಯ್ಕೆಯಾದ ನಿತ್ಯಾನಂದ ಮುಂಡೋಡಿಯವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ್, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಜಾಕೆ ಸದಾನಂದ, ಎ.ವಿ.ತೀರ್ಥರಾಮ, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ...
Loading posts...
All posts loaded
No more posts
