Ad Widget

ಸಹಕಾರಿ ಧುರೀಣ ಪಿ.ಸಿ.ಜಯರಾಮ್ ರಿಗೆ ಸಮಾಜ ರತ್ನ ಪ್ರಶಸ್ತಿ

ಸಹಕಾರಿ,ಸಾಮಾಜಿಕ ಹಾಗೂ ರಾಜಕೀಯ ಧುರೀಣರಾಗಿರುವ ಪಿ.ಸಿ.ಜಯರಾಮ್ ರಿಗೆ ಸಹಕಾರಿ ಕ್ಷೇತ್ರದ ಸಾಧನೆಗಾಗಿ ಸಮಾಜ ರತ್ನ ಪ್ರಶಸ್ತಿ ಭಾಜನರಾಗಿದ್ದಾರೆ. ಅವರು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸುಳ್ಯ ವೆಂಕಟರಮಣ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ .17 ರಂದು ಮಂಗಳೂರಿನಲ್ಲಿ ನಡೆಯುವ ಕನ್ನಡ ಕಲಾ ಪ್ರತಿಭೋತ್ಸವದಲ್ಲಿ ಸಮಾಜರತ್ನ ಪ್ರಶಸ್ತಿ ನೀಡಲಾಗುವುದು ಎಂದು ತಿಳಿದುಬಂದಿದೆ.

ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ಕ್ರಮ ಜಾರಿಗೊಳಿಸುವಂತೆ ವಿಹಿಂಪ, ಬಜರಂಗದಳ ಸರಕಾರಕ್ಕೆ ಮನವಿ

ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ಕ್ರಮ ಜಾರಿಗೊಳಿಸುವಂತೆ ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಇದರ ವತಿಯಿಂದ ತಹಶೀಲ್ದಾರ್ ರ ಮೂಲಕ ಮಾನ್ಯ ಮುಖ್ಯ ಮತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಪ್ರಖಂಡ ಅಧ್ಯಕ್ಷ ರಾದ ಸೋಮಶೇಖರ್ ಪೈಕ, ಕಾರ್ಯದರ್ಶಿ ರಂಜಿತ್ ಸುಳ್ಯ, ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ತಾಲೂಕು ಸಹ...
Ad Widget

ಪತ್ರಕರ್ತ ದುರ್ಗಾಕುಮಾರ್ ಗೆ ದಿ. ರಾಜೇಶ್ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿ

ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕದ ವತಿಯಿಂದ ನೀಡಲಾಗುವ ದಿ.ರಾಜೇಶ್ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿಗೆ ಸುಳ್ಯದ ಪ್ರತಿಭಾನ್ವಿತ ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಭಾಜನರಾಗಿದ್ದಾರೆ. ಜನವಾಹಿನಿ ಪತ್ರಿಕೆಯ ವರದಿಗಾರರಾಗಿದ್ದ ರಾಜೇಶ್ ಶಿಬಾಜೆಯವರು ಹಲವು ವರ್ಷಗಳ ಹಿಂದೆ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಅವರ ಸ್ಮರಣಾರ್ಥ ಮಾಧ್ಯಮ ಗೌರವ ಪ್ರಶಸ್ತಿಯನ್ನು ಪತ್ರಕರ್ತರ ವೇದಿಕೆ...

ಪಂಜ : ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ವಿಧಿವಶ

ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಿತ್ರ ಕಲಾ ಶಿಕ್ಷಕ, ಸಂಘಟಕ ಪಂಜದ ಮಹಾಬಲ ಕುಳ ನ.11 ಬೆಳಗ್ಗಿನ ಜಾವ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ನ.10 ರಂದು ಪಂಜದ ಕೃಷ್ಣನಗರದಲ್ಲಿರುವ ಅವರ ಮನೆಯ ಬಳಿ ಇರುವ ಮರದ ಗೆಲ್ಲು ಕಡಿಯಲೆಂದು ಮರ ಏರಿದ್ದ ವೇಳೆ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು...

ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ.ಯವರಿಗೆ ಸಮಾಜ ರತ್ನ ರಾಜ್ಯ ಪ್ರಶಸ್ತಿ

ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ನೀಡುವ ಸಮಾಜ ರತ್ನ ರಾಜ್ಯ ಪ್ರಶಸ್ತಿಗೆ ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ.ಯವರು ಭಾಜನರಾಗಿದ್ದಾರೆ. ಜ.17 ರಂದು ಮಂಗಳೂರಿನಲ್ಲಿ ನಡೆಯುವ ಜ್ಞಾನ ಮಂದಾರ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿದುಬಂದಿದೆ.

ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷೆ ಪೂರ್ಣಿಮ ಚಿಕ್ಕಿನಡ್ಕ, ಕಾರ್ಯದರ್ಶಿ ವೀಣಾ ಪಡ್ಪು

Poornima chikkinadka Veena padpu Nandini Chennamule ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ 2019-20 ನೇ ಸಾಲಿನ ಮಹಾಸಭೆಯ ನವೆಂಬರ್ 8 ರಂದು ನಡೆಯಿತು. ಶ್ರೀಮತಿ ಉಷಾಲತಾ ಪಡ್ಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜತೆ ಕಾರ್ಯದರ್ಶಿ ಶ್ರೀಮತಿ ಹೇಮಲತಾ ಪಡ್ಪು ವರದಿ ವಾಚಿಸಿ, ಖಜಾಂಜಿ ಸನ್ನಿಧಿ ಪೂಜಾರಿಮನೆ ಲೆಕ್ಕ ಪತ್ರ ಮಂಡಿಸಿದರು. ಸರ್ವ ಸದಸ್ಯರ...

ಪಂಜದಲ್ಲಿ ಯಕ್ಷಗಾನ ಗಾನ ವೈಭವ- 2020 ಉದ್ಘಾಟನೆ

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ, ಕಲಾಭಿಮಾನಿಗಳ ಸಹಕಾರದೊಂದಿಗೆ ಯಕ್ಷಗಾನ ಗಾನ ವೈಭವ -2020 ನ.10 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾ ಭವನದಲ್ಲಿ ಉದ್ಘಾಟನೆ ಗೊಂಡಿತು.ಕಾರ್ಯಕ್ರಮವನ್ನು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ದೀಪ ಬೆಳಗಿಸಿ ಉದ್ಘಾಟಿಸಿದರು.ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಯ ಅಧ್ಯಕ್ಷ...

ಮೊಗ್ರ ಸೇತುವೆ – ಕಮಿಲ ರಸ್ತೆ ಸಮಸ್ಯೆ : ಕಮಿಲ ನಾಗರಿಕರಿಂದ ಪ್ರಧಾನಿಗಳಿಗೆ ವಿಡಿಯೋ ಸಿಡಿ ರವಾನೆ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಮಸ್ಯೆಯ ವಿಡಿಯೋ ಸಹಿತ ವಿವರಣೆಯ ಸಿಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಕಮಿಲ ಅಂಚೆ ಕಚೇರಿ ಮೂಲಕ ಮಂಗಳವಾರ ಕಳುಹಿಸಿದ್ದಾರೆ.ಇಂದು ಆಧುನಿಕ ಮಾಧ್ಯಮಗಳಿದ್ದರೂ ಅಂಚೆ ಕಚೇರಿ ಮೂಲಕವೇ ಸಮಸ್ಯೆಗಳನ್ನು...

ಮನ್ವಿತ್ ಆರ್. ಪಡ್ಡಂಬೈಲು – ಜ್ಞಾನ ಮಂದಾರ’ ಅರಳು ಮಲ್ಲಿಗೆ ‘ರಾಜ್ಯ ಪ್ರಶಸ್ತಿ ಗೆ ಆಯ್ಕೆ

     ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವರು ಕೊಡ ಮಾಡುವ ರಾಜ್ಯಮಟ್ಟದ 'ಅರಳುಮಲ್ಲಿಗೆ' ಪ್ರಶಸ್ತಿ ಗೆ ಬಹುಮುಖ ಪ್ರತಿಭೆಯ ಮಾ| ಮನ್ವಿತ್ ಆರ್.ಪಡ್ಡಂಬೈಲ್ ಆಯ್ಕೆಯಾಗಿರುತ್ತಾನೆ.               ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಮನ್ವಿತ್ ಬಾಲ್ಯದಿಂದಲೇ ಚಿತ್ರಕಲೆ,ಯಕ್ಷಗಾನ ,ಸಂಗೀತ, ಕೊಳಲು,ನಾಟಕ  ಮುಂತಾದ ಕಲೆಗಳಲ್ಲಿ ಆಸಕ್ತಿ ಹೊಂದಿದ್ದು ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಬಹುಮಾನವನ್ನು...

ಮುಕ್ಕೂರು : ಯುವಸೇನೆ ಟ್ರೋಫಿ-2020 ಹಾಗೂ ಕೊರೊನಾ ವಾರಿಯರ್ಸ್ ಗೆ ಗೌರವಾರ್ಪಣೆ – ಎಲ್ಲರನ್ನು ಒಂದುಗೂಡಿಸುವ ಸಾಮರ್ಥ್ಯ ಕ್ರೀಡೆಗಿದೆ : ಆಂಜನೇಯ ರೆಡ್ಡಿ

ಯಾರೆಂದರೆ ಮುಕ್ಕೂರು : ಎಲ್ಲ ವರ್ಗದ, ಪ್ರದೇಶದ ಜನರನ್ನು ಬೇಧಭಾವ ಇಲ್ಲದೆ ಸಾಮರಸ್ಯದ ಮನೋಭಾವದಿಂದ ಒಂದುಗೂಡಿಸುವ ಸಾಮರ್ಥ್ಯ ಇರುವುದು ಕ್ರೀಡೆಗೆ ಮಾತ್ರ ಎಂದು ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು. ಯುವ ಸೇನೆ ಮುಕ್ಕೂರು ಇದರ ಆಶ್ರಯದಲ್ಲಿ ಮುಕ್ಕೂರು ಶಾಲಾ ಕ್ರೀಡಾಂಗಣದಲ್ಲಿ ನ.8 ರಂದು ನಡೆದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುವಸೇನ...
Loading posts...

All posts loaded

No more posts

error: Content is protected !!