- Monday
- September 21st, 2026
ಉಬರಡ್ಕ ಶ್ರೀ ನರಸಿಂಹ ದೇವಾಲಯದಲ್ಲಿ ಸಾರ್ವಜನಿಕ ರಂಗಪೂಜೆಯು ನ.16 ರಿಂದ ಆರಂಭಗೊಂಡಿದ್ದು ಡಿ. 14 ತನಕ ನಡೆಯಲಿರುವುದು. ಪ್ರತಿದಿನ ಸಾಯಂಕಾಲ ವಿವಿಧ ಭಜನ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ನ.12 ರಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ನಲ್ಲಿ ಬಿಬಿಬಿಪಿ ಯೋಜನೆಯಡಿಯಲ್ಲಿ ಗ್ರಾಮ ಮಟ್ಟದ "ಹೆಣ್ಣು ಮಕ್ಕಳ ಶಿಶು ಪ್ರದರ್ಶನ" ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತಿಯ ಸಹಯೋಗದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೇಮ್...
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಬಲಿ ಹೊರಡುವ ಕಾರ್ಯಕ್ರಮ ನಡೆಯಿತು.ಪ್ರತಿವರ್ಷ ದೀಪಾವಳಿಯಂದು ಶ್ರೀ ದೇವರ ಬಲಿ ಹೊರಡುವ ಕಾರ್ಯಕ್ರಮ ನಡೆಯುತ್ತದೆ. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಅಕ್ರಮ ಸಕ್ರಮ ಸಮಿತಿಗೆ ಸಮಿತಿ ಸದಸ್ಯರಾಗಿ ಚೆಂಬು ಗ್ರಾಮದ ಸುಬ್ರಹ್ಮಣ್ಯ ಉಪಾಧ್ಯಾಯ ರವರನ್ನು ಸರಕಾರ ನೇಮಕ ಮಾಡಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷರಾಗಿ ಶಾಂತೆಯಂಡ ರವಿಕುಶಾಲಪ್ಪರವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇದೀಗ ಅಕ್ರಮ ಸಕ್ರಮ ಸಮಿತಿಯಲ್ಲಿ ವಿಲೇವಾರಿಗೆ ಬಾಕಿಯಿರುವ ಸಾರ್ವಜನಿಕರ...
ಸಂಪಾಜೆಯ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನ.16 ರಂದು ದೀಪಾವಳಿ, ಬಲಿ ಪಾಡ್ಯಮಿ ಹಾಗೂ ವೃಶ್ಚಿಕ ಸಂಕ್ರಾಂತಿ ಪೂಜೆ ನಡೆಯಿತು. ಪೂಜಾ ವಿಧಿವಿಧಾನಗಳ ನಂತರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಾರ್ಗದರ್ಶಕ ರಾಗಿರುವ ಐತ ಮೊಗೇರ ಇವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಗುತ್ತಿಗಾರು : ಬಾರ್ ಗೆ ತೆರಳುವ ಮದ್ಯಪ್ರಿಯರಿಗೆ ಶಾಲಾ ಮೈದಾನವೆಂಬ ಅರಿವಿಲ್ಲದೆಯೋ ಅಥವಾ ಅಮಲಿನ ಭರದಲ್ಲಿಯೋ ಕುಡಿದು ಬಾಟಲ್, ಪ್ಯಾಕೆಟ್ ಗಳನ್ನು ಎಸೆದು ಹೋಗುತ್ತಿದ್ದಾರೆ ಎಂಬ ದೂರು ಹಲವು ಸಮಯದಿಂದ ಕೇಳಿ ಬರುತ್ತಿದ್ದವು. ಸರಕಾರಿ ಆಸ್ಪತ್ರೆಯ ಸಮೀಪ ಶಾಲಾ ಮೈದಾನದ ಮೂಲಕ ಹಲವಾರು ಮದ್ಯಪ್ರಿಯರ ಸಂಚಾರ ಜೋರಾಗಿಯೇ ಇದೆ. ಶಾಲಾ ಮೈದಾನಕ್ಕೆ ಸಂಪೂರ್ಣ ಆವರಣ ಗೋಡೆ...
ಸ್ವಾತಂತ್ರ್ಯ ಬಂದ ಬಳಿಕ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳ ವರೆಗೂ ಹೆಚ್ಚಿನ ವಸ್ತುಗಳಿಗೆ ವಿದೇಶ ಗಳನ್ನು ಅವಲಂಬಿಸಬೇಕಾಗಿತ್ತು. ಬಳಿಕ ಸರಕಾರಗಳು ಪ್ರಯತ್ನದಿಂದ ನಮ್ಮ ದೇಶದಲ್ಲೇ ವಿವಿಧ ಕಾರ್ಖಾನೆಗಳು ಹೆಚ್ಚೆಚ್ಚೂ ಬೆಳೆಯತೊಡಗಿತು. ಇದೀಗ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಯವರ ಸರ್ಕಾರದಲ್ಲಿ ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ....
ಮಾವಿನಕಟ್ಟೆಯ ಶ್ರೀ ಶಭರೀಶ ಕಾಂಪ್ಲೆಕ್ಸ್ ನಲ್ಲಿ ನ.4 ರಂದು ವಿಜೇತ್ ಎಂ ಮಾಲೀಕತ್ವದ ಶ್ರೀ ಶಭರೀಶ ಎಲೆಕ್ಟ್ರಿಕಲ್ ಸೇಲ್ಸ್ & ಸರ್ವಿಸ್ ಉದ್ಘಾಟನೆ ಗೊಂಡಿತು. ಈ ಸಂದರ್ಭದಲ್ಲಿ ದೇರಣ್ಣ ಗೌಡ, ಕೃಷ್ಣಪ್ಪಗೌಡ ಮಾವಿನಕಟ್ಟೆ ಹೊನ್ನಪ್ಪಗೌಡ ಮಾವಿನಕಟ್ಟೆ,ವೆಂಕಟ್ರಮಣ ಗೌಡ ಕುಚ್ಚಾಲ, ಸುಬ್ರಮಣ್ಯ ಪಾರೆಪ್ಪಾಡಿ, ಭಾಸ್ಕರ ಮೆದು ಹಾಗು ಊರವರು ಆಗಮಿಸಿದ್ದರು.
ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಮತ್ತು ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ನ.15 ರಂದು ಸಂಜೆ ಅಕ್ಕೋಜಿಪಾಲ್ ಕಾಲೋನಿಯಲ್ಲಿ ವಸ್ತ್ರದಾನ ಮತ್ತು ದೀಪಾವಳಿ ಆಚರಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗರುಡ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಕರ್ಮಾಜೆಯವರು ಭಾಗವಹಿಸಿದ್ದರು, ಸಭಾಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿ...
Loading posts...
All posts loaded
No more posts
