ಕಾಲೇಜುಗಳಲ್ಲಿ ಕೋವಿಡ್ 19 ರ ತಪಾಸಣೆ ನಡೆಸಿ ವರದಿ ನೀಡಲು ಎನ್ ಎಸ್ ಯು ಐ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಾಲೇಜುಗಳಲ್ಲಿ ಕೋವಿಡ್ 19 ರ ತಪಾಸಣೆ ನಡೆಸಿ,ಅದರ ವರದಿಯನ್ನು ಕಾಲೇಜಿನಲ್ಲೆ ನೀಡುವಂತಾಗಲು ಸುಳ್ಯವಿಧಾನ ಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ (ಎನ್ ಎಸ್ ಯು ಐ) ವಿಧಾನ ಸಭಾ ಕ್ಷೇತ್ರದ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ,...

ಆಲೆಟ್ಟಿ ಶಿವಶಕ್ತಿ ಶಾಖೆ ವತಿಯಿಂದ ಗೋಹತ್ಯೆ ನಿಷೇಧ ಜಾರಿಗೆ ತರುವಂತೆ ಸಿಎಂ ಗೆ ಮನವಿ

ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಶಕ್ತಿ ಶಾಖೆ ಆಲೆಟ್ಟಿ ಘಟಕದ ವತಿಯಿಂದ ಡಿ.1 ರಂದು ಆಲೆಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುಖಾಂತರ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಾರಾಯಣ ರೈ ಆಲೆಟ್ಟಿ, ಮಹೇಶ್ ಕುತ್ಯಾಳ, ಸುದರ್ಶನ ಪಾತಿಕಲ್ಲು, ಸುಧಾಕರ ಆಲೆಟ್ಟಿ, ರೂಪಾನಂದ ಗುಂಡ್ಯ, ರಚನ್ ಆಲೆಟ್ಟಿ,...
Ad Widget

ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಒತ್ತಾಯಿಸಿ ಮುಖ್ಯಮಂತ್ರಿ ಮನವಿ

ಗೋ ಹತ್ಯೆ ನಿಷೇಧ ಜಾರಿಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಅಯೋಧ್ಯೆ ಶಾಖೆ ಎಲಿಮಲೆ ಇದರ ವತಿಯಿಂದ ಮುಖ್ಯಮಂತ್ರಿಯವರಿಗೆ ನೆಲ್ಲೂರು ಕೆಮ್ರಾಜೆ ಪಂಚಾಯತ್ ಆಡಳಿತಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಎಲಿಮಲೆ ಶಾಖೆಯ ಅಧ್ಯಕ್ಷ ಪುರುಷೋತ್ತಮ ಚಿತ್ತಡ್ಕ, ಕಿರಣ್ ಗುಡ್ಡೆಮನೆ ಭಜರಂಗದಳ ಗೋ ರಕ್ಷಾ ಪ್ರಮುಖ್ ನಾಗರಾಜ್ ಕೇಪಳಕಜೆ,...

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಪಿಂಡಿಮನೆ ಇಂದು ಮೃತ್ಯು

ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಂತೋಡಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಅರಂತೋಡು ಗ್ರಾಮದ ಪಿಂಡಿಮನೆ ನಿವಾಸಿ ಮಾಧವ ಗೌಡರ ಮಗ ಪ್ರವೀಣ್ (39) ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಮೆಸ್ಕಾಂ ಸ್ಟೇಷನ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಾರದ ಹಿಂದೆ ರಾತ್ರಿ...

ತೊಡಿಕಾನ ದೇವರಗುಂಡಿ ಸುತ್ತ ಬೇಲಿ‌ ಅಳವಡಿಕೆ – ಅನಾಚಾರ ನಡೆಯದಂತೆ ಆಡಳಿತ ಮಂಡಳಿ ಕ್ರಮ – ಇದು ಅಮರ ಸುದ್ದಿ ವರದಿಯ ಫಲಶ್ರುತಿ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ ಮೂಲ ಸ್ಥಾನವಾದ ದೇವರ ಗುಂಡಿಯ ಪಾವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಂತಿ ಬೇಲಿಯನ್ನು. ಅಳವಡಿಸಲಾಗಿದೆ. ಇತ್ತೀಚೆಗೆ ಈ ಸ್ಥಳದಲ್ಲಿ ಅಶ್ಲೀಲ ಪೋಟೋ, ವಿಡಿಯೋ ಶೂಟಿಂಗ್ ನಡೆದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಕಟಿಸಿತ್ತು. ಬಳಿಕ ಅದು ರಾಜ್ಯಮಟ್ಟದ ಸುದ್ದಿಯಾಗಿತ್ತು. ವಿಶ್ವ ಹಿಂದೂ ಪರಿಷತ್...

ಉಗ್ರರ ಬೆಂಬಲಿಸುವ ಗೋಡೆ ಬರಹದ ಬಗ್ಗೆ ಎಬಿವಿಪಿ ಖಂಡನೆ – ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ

ಮಂಗಳೂರಿನಲ್ಲಿ ಉಗ್ರ ಸಂಘಟನೆಗೆ ಜೈಕಾರ ಹಾಕುವ ಗೋಡೆ ಬರಹವನ್ನು ಖಂಡಿಸಿ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎ.ಬಿ.ವಿ.ಪಿ ಸುಳ್ಯ ನಗರ ವತಿಯಿಂದ ತಹಶಿಲ್ದಾರ್ ಮುಖಾಂತರ ಮಾನ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು .2008 ನವೆಂಬರ್ 26 ದೇಶ ಕಂಡ ಕರಾಳ ದಿನ. ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೋಲಿಸರು, ಸೇರಿ...

ಕೇನ್ಯ : ಕಣ್ಕಲ್ ತರವಾಡು ಮನೆಯಲ್ಲಿ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ

ಕೇನ್ಯ ಗ್ರಾಮದ ಕಣ್ಕಲ್ ತರವಾಡು ಮನೆಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಮತ್ತು ನೂತನ ತರವಾಡು ಮನೆಯ ಪ್ರವೇಶೋತ್ಸವವು ನ. 29 ಮತ್ತು ನ. 30ರಂದು ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ನ. 29ರಂದು ಸಂಜೆ ವಿವಿಧ ವೈದಿಕ ಕಾರ್ಯಗಳು, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ನ.30 ರಂದು...

ಗ್ರಾಮ ಪಂಚಾಯತ್ ಚುನಾವಣೆ ನಿಮಿತ್ತ ಕೋವಿ ಡೆಪಾಸಿಟ್ ಇಡಲು ಸೂಚನೆ

ಡಿಸೆಂಬರ್ 27 ರಂದು ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ನಿಮಿತ್ತ ಡಿ. 5 ರ ಒಳಗೆ ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಕೋವಿ ಲೈಸೆನ್ಸ್ ಹೊಂದಿರುವವರು ತಮ್ಮ ಕೋವಿಗಳನ್ನು ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಡೆಪಾಸಿಟ್ ಇಡಬೇಕಾಗಿ ಠಾಣಾಧಿಕಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸುಳ್ಯ ಮಂಡಲ ಪ್ರಶಿಕ್ಷಣ ವರ್ಗ ಸಮಾರೋಪ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಪೆರುವಾಜೆ ಜೆ. ಡಿ. ಸಭಾಂಗಣದಲ್ಲಿ 2ದಿನಗಳ ಕಾಲ ನಡೆದ ಸುಳ್ಯ ಮಂಡಲ ಪ್ರ ಶಿಕ್ಷಣ ವರ್ಗ ಇದರ ಸಮಾರೋಪ ಸಮಾರಂಭ ಇಂದು ನಡೆಯಿತು. ಸಮಾರೋಪ ಭಾಷಣಕಾರರಾಗಿ ಆಗಮಿಸಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ ಅಂತ್ಯೋದಯದ ಕಲ್ಪನೆ ಸಾಕಾರವಾಗಬೇಕು, ದೇಶ ಪರಮವೈಭವಕ್ಕೆ ಕೊಂಡು...

ಗಾಂಧಿನಗರ : ಬೈಕ್ ಮತ್ತು ಜೀಪ್ ಮುಖಾಮುಖಿ ಡಿಕ್ಕಿ

ಗಾಂಧಿನಗರ ಅರಣ್ಯ ಇಲಾಖೆಯ ಸಮೀಪ ಬೈಕ್ ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ನಡೆದಿದೆ. ಬೈಕ್ ಸವಾರನಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!