- Sunday
- July 12th, 2026
ಕೋವಿಡ್ ಸಂಕಷ್ಟದ ಕಾಲದಲ್ಲಿಯು ಹಾಲು ಉತ್ಪಾದಕರ ಹಿತ ಕಾಯುವ ಕಾರ್ಯ ಕೆಎಂಎಫ್ ಮೂಲಕ ಆಗಿದೆ. ಹೈನುಗಾರರು ಹೈನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ರೂಪಿಸಬೇಕು ಎಂದು ದ.ಕ.ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಕಾರಿ ಹರೀಶ್ ಕುಮಾರ್ ಹೇಳಿದರು. ಮುಕ್ಕೂರು ಶಾಲಾ ವಠಾರದಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ...
ಹಲವಾರು ವರ್ಷಗಳಿಂದ ನಗರ ಪಂಚಾಯತ್ ಎದುರಿನಲ್ಲಿ ತುಂಬಿದ್ದ ಕಸದರಾಶಿಯನ್ನು ಒಣಕಸ ಮತ್ತು ಹಸಿಕಸ ವಿಂಗಡಿಸಿ ಒಣಕಸವನ್ನು ಕಲ್ಚರ್ಪೆ ಸಾಗಿಸುವ ಪ್ರಕ್ರಿಯೆ ಇದೀಗ ಅರಂಭಗೊಂಡಿದ್ದು ಅತಿ ಶೀಘ್ರದಲ್ಲಿ ನಗರ ಪಂಚಾಯತಿಯ ಮುಂಭಾಗದಲ್ಲಿರುವ ಕಸದ ರಾಶಿಗೆ ಮುಕ್ತಿ ಸಿಗಲಿದೆ. ಕಲ್ಚರ್ಪೆಯ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಬೇಲಿಯನ್ನು ನಿರ್ಮಿಸಿ ಅಲ್ಲಿ ಕಸವನ್ನು ಶೇಖರಿಸುವ ತಯಾರಿ ಪುನಃ ಪ್ರಾರಂಭಗೊಂಡಿದೆ. ನಗರ...
ಕಳಂಜ ಗ್ರಾಮದ ತಂಟೆಪ್ಪಾಡಿಯ 'ನಿನಾದ ಸಾಂಸ್ಕೃತಿಕ ಕೇಂದ್ರ'ದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಮಾನಿಷಾದ ಎಂಬ ಕಾಲಮಿತಿ ಯಕ್ಷಗಾನ ಜರುಗಿತು. ಈ ಸಂದರ್ಭದಲ್ಲಿ ಯಕ್ಷಾಭಿಮಾನಿಗಳು, ಕಲಾಸಕ್ತರು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಭಜರಂಗದಳ, ಭಗತ್ ಸಿಂಗ್ ಶಾಖೆ ಗುತ್ತಿಗಾರು ಇದರ ವತಿಯಿಂದ ಡಿ.1ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಶಾಖೆಯ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಕಾರ್ಯದರ್ಶಿ ದಯಾನಂದ ಕನ್ನಡ್ಕ, ಉಪಾಧ್ಯಕ್ಷ ಚಂದ್ರಶೇಖರ್ ಪಾರೆಪ್ಪಾಡಿ ಬಜರಂಗದಳದ ಸಂಯೋಜಕರಾದ ಹರ್ಷಿತ್ ಕಡ್ತಲ್ ಕಜೆ...
ಸುಳ್ಯದ ಖ್ಯಾತ ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳ ರವರಿಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿಯ ಕೋಟೆ ವೀರಣ್ಣ ರಂಗಮಂದಿರದಲ್ಲಿ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ ಬೆಳಕು ಸಾಹಿತ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿತು . ಎಚ್ .ಭೀಮರಾವ್ ವಾಷ್ಠರ್ ರವರು ಅಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದಾಗ ಅವರ ಸಮಗ್ರ...
ಪಂಜದ ಇತಿಹಾಸದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ವಿನೂತನ ಮಾದರಿಯ PPL -2020 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಡಿ.13 ರಂದು ನಡೆಯಲಿದೆ ಸದಾ ಕ್ರೀಡೆಯ ಜೊತೆ ಜೊತೆಯಲ್ಲಿ ಸಮಾಜ ಸೇವೆಗೂ ಮಹತ್ವವನ್ನು ನೀಡಿ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಹೊಂದಿರುವ ಪಂಚಶ್ರೀ ಪಂಜ ಸ್ಪೋರ್ಟ್ಸ್...
ದೆಹಲಿ ಮಿತ್ರ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ಆಶಯದಂತೆ ಕಳಂಜ ಗ್ರಾಮದ ಸುತ್ತಮುತ್ತಲಿನ ಜನರಿಗೆ ಅವರ ಗ್ರಾಮದ ಕಿಟಕಿಯಿಂದಲೇ ಸಾಂಸ್ಕೃತಿಕ ಜಗತ್ತಿನ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ, ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ 'ನಿನಾದ ಸಾಂಸ್ಕೃತಿಕ ಕೇಂದ್ರ'ವು ರೂಪುಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಡಿ.05 ರಂದು ಜರುಗಿತು. ಉದ್ಘಾಟನೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಡಪ್ಪಾಡಿ ಗ್ರಾಮ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಅಭಿಯಾನಕ್ಕೆ ಡಿ.5 ರಂದು ಚಾಲನೆ...
ಐವರ್ನಾಡಿನ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಡಾ| ಪ್ರಿಯಾಂಕ ನಾಟಿಕೇರಿಯವರ ಆತ್ರೇಯ ಕ್ಲಿನಿಕ್ ಡಿ. 05 ರಂದು ಶುಭಾರಂಭಗೊಂಡಿತು.ಡಾ| ಪ್ರಿಯಾಂಕ ನಾಟಿಕೇರಿಯವರ ತಂದೆ ಶ್ರೀ ಜಯಪ್ರಸಾದ್ ನಾಟಿಕೇರಿ ಹಾಗೂ ತಾಯಿ ಶ್ರೀಮತಿ ಸ್ವರಾಜ್ಯಲಕ್ಷ್ಮೀಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಡ್ತಿಲ ಕಾಂಪ್ಲೆಕ್ಸ್ ಮಾಲಕರಾದ ಶ್ರೀ ಸತೀಶ್ ಮಡ್ತಿಲ ಹಾಗೂ ಶ್ರೀಮತಿ ಮಮತಾ ಮಡ್ತಿಲ, ನರಸಿಂಹ ಭಟ್...
ಕಲ್ಮಕಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಶ್ರೀಮತಿ ಬೊಳಿಯಮ್ಮ ಡಿ. ನವಂಬರ್ 30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಪೋಷಕರ ಮೆಚ್ಚುಗೆ ಗಳಿಸಿದ್ದರು. 1982 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು ಭೂತಕಲ್ಲು, ಮೈತಡ್ಕ, ದೇವಚಳ್ಳ,...
Loading posts...
All posts loaded
No more posts
