ಗೂನಡ್ಕ : ಟಿ.ಎಂ. ಶಹೀದ್ ನೇತೃತ್ವದಲ್ಲಿ ಮತಯಾಚನೆ

ಸಂಪಾಜೆ ಗ್ರಾಮ ಪಂಚಾಯತ್ ದರ್ಖಾಸ್ ,ಪೇರಡ್ಕ 3ನೇ ವಾರ್ಡ್ ನಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ,ವಿರಾಜಪೇಟೆ ಉಸ್ತುವಾರಿ ಟಿ.ಎಂ ಶಹೀದ್ ಮತಯಾಚನೆ ನಡೆಸಿದರು.

ಕೋಟೆಮುಂಡುಗಾರು ಶಾಲೆಯಲ್ಲಿ ಮೂರು ಕೇಂದ್ರಗಳಲ್ಲಿ ಮತದಾನ

ಕೋಟೆಮುಂಡುಗಾರು ಸ.ಹಿ.ಪ್ರಾ.ಶಾಲೆಯಲ್ಲಿ ಕಳಂಜ ಗ್ರಾ.ಪಂ.ನ 2 ವಾರ್ಡುಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು , ಮತದಾರರು ಬಿರುಸಿನಿಂದ ಮತ ಚಲಾಯಿಸುತ್ತಿದ್ದಾರೆ. ಕೋವಿಡ್ ಸುರಕ್ಷತಾ ಕ್ರಮದೊಂದಿಗೆ ಒಟ್ಟು 3 ಮತಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
Ad Widget

ಜಾಲ್ಸೂರು : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ಮತಯಾಚನೆ

ಜಾಲ್ಸೂರು ಗ್ರಾಮ ಎರಡನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗುಲಾಬಿ ಕೆ ಎನ್, ಮುಜೀಬ್ ಪೈಚಾರ್, ವೇದ ಆರ್ ಶೆಟ್ಟಿ ಮತಯಾಚನೆಯಲ್ಲಿ ನಿರತರಾಗಿರುವುದು.

ಬೊಳುಬೈಲು : ಸರತಿ ಸಾಲಿನಲ್ಲಿ ನಿಂತಿರುವ ಮತದಾರರು

ಜಾಲ್ಸೂರು ಗ್ರಾಮದ ಬೊಳುಬೈಲು ಶಾಲಾ ಮತಗಟ್ಟೆಯಲ್ಲಿ ಹೆಚ್ಚಿನ ಕ್ಯೂ ಕಂಡು ಬರುತ್ತಿದ್ದು,ಸರತಿ ಸಾಲಿನಲ್ಲಿ ಬಂದು ಮತಚಲಾಯಿಸಿದರು.

ಕರಿಕ್ಕಳ ಬೂತ್ ನಲ್ಲಿ ಕಾಂಗ್ರೆಸ್ ಮತಯಾಚನೆ

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕ್ಕಳ ಶಾಲೆಯ ಬೂತ್ ನಲ್ಲಿ ಕಾಂಗ್ರೆಸ್‌ ಬೆಂಬಲಿತರು ಕೊನೆಯ ಹಂತದ ಮತಯಾಚನೆ ನಡೆಸಿದರು.

ಸೋಣಂಗೇರಿ : ಕೋವಿಡ್ ಸುರಕ್ಷತೆಯ ಜತೆಗೆ ಬಿರುಸಿನ ಮತದಾನ

ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು , ಚುನಾವಣೆ ಸಿಬ್ಬಂದಿಗಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ನಡೆಸಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಕಂಡುಬರುತ್ತಿದೆ

ಸುಳ್ಯ ರೇಂಜ್: ತನ್’ಶೀತ್ ವಿಶೇಷ ಸಭೆ

ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ಹಾಗೂ ಮದ್ರಸಾ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ತನ್'ಶೀತ್ - 2020 ರೇಂಜ್ ಮಟ್ಟದ ವಿಶೇಷ ಸಭೆಯು ಡಿಸೆಂಬರ್ 22 ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಸುಳ್ಯ ಗ್ರಾಂಡ್ ಪರಿವಾರ್ ಹಾಲ್ ನಲ್ಲಿ ನಡೆಯಿತು. ಬೆಳ್ಳಾರೆ ಮುದರ್ರಿಸ್ ತಾಜುದ್ದೀನ್ ರಹ್ಮಾನಿಯವರ ಪ್ರಾರ್ಥನೆಯೊಂದಿಗೆ ಆರಂಭಿಸಿದ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ರೇಂಜ್...

ಕಂದ್ರಪ್ಪಾಡಿ : ಬಿಜೆಪಿ ಕಾರ್ಯಕರ್ತರಿಂದ ಮತಬೇಟೆ

ಕಂದ್ರಪ್ಪಾಡಿ ಬೂತ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಗ್ರಾ.ಪಂ. ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ ನೇತೃತ್ವದಲ್ಲಿ ಕೊನೆಯ ಹಂತದ ಮತಯಾಚನೆ ನಡೆಸಿದರು. ಅಭ್ಯರ್ಥಿಗಳಾದ ರಮೇಶ್ ಪಡ್ಪು, ಭವಾನಿಶಂಕರ ಮುಂಡೋಡಿ, ಉಷಾ ದೇವ, ಸೀತಮ್ಮ ಕರಂಗಲ್ಲು ಹಾಗೂ ಕಾರ್ಯಕರ್ತರನ್ನು ಕಾಣಬಹುದು.

ಹಳ್ಳಿ ಪೈಟ್ ಫೊಟೋ ಕಳುಹಿಸಿ 9449387044

ನಿಮ್ಮ ನಿಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದ ಪೋಟೋ ನೀಡಿ ಸಹಕರಿಸಿ. ಜತೆಗೆ ಸ್ವಲ್ಪ ವಿವರಣೆ ಕಳುಹಿಸಿ. ನಾವು ಅದನ್ನು ಅಮರ ಸುದ್ದಿ ವೆಬ್ಸೈಟ್ ಪ್ರಕಟಿಸುತ್ತೇವೆ.ವಾಟ್ಸಾಪ್ ಸಂಖ್ಯೆ : 9449387044

ರಾಷ್ಟ್ರೀಯ ಕ್ರೀಡಾಪಟು ಸಂಶೀರ್ ಜಯನಗರ ರವರಿಗೆ ಸನ್ಮಾನ ಕಾರ್ಯಕ್ರಮ

ರಾಷ್ಟ್ರೀಯ ಕ್ರೀಡಾಪಟು, ಉದ್ದ ಜಿಗಿತ , ಓಟ , ಮುಂತಾದ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಿನ್ನದ ಪದಕವನ್ನು ಪಡೆದು ದೇಶಕ್ಕೆ ಕೀರ್ತಿ ತಂದ ಸಂಶೀರ್ ಜಯನಗರ ರವರಿಗೆ ಯೋನೆಕ್ಸ್ ಶಟಲ್ ಬ್ಯಾಡ್ಮಿಂಟನ್ ಕ್ಲಬ್. ರಿ. ಸುಳ್ಯ ವತಿಯಿಂದ ಡಿಸೆಂಬರ್ 25ರಂದು ಸುಳ್ಯ ಕುರುಂಜಿಗುಡ್ಡೆ ಒಳ ಕ್ರೀಡಾಂಗಣದಲ್ಲಿ ನಡೆದ ಯೋನೆಕ್ಸ್ ಡೇ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಳೆದ...
Loading posts...

All posts loaded

No more posts

error: Content is protected !!