- Thursday
- May 7th, 2026
ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು ಶೇ 80.54 ಮತದಾನ ದಾಖಲಾಗಿದೆ. ಉತ್ತಮ ಫಲಿತಾಂಶ ದಾಖಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 89311 ಮತದಾರರಲ್ಲಿ 71934 ಮತ ಚಲಾವಣೆಯಾಗಿದೆ. 44418 ಪುರುಷ ಮತದಾರರಲ್ಲಿ 36186 ಹಾಗೂ 44893 ಮಹಿಳಾ ಮತದಾರರಲ್ಲಿ 35748 ಮತ ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.
ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ನ ಕುಂತೂರು ಎರಡನೇ ವಾರ್ಡ್ ನ ಬೂತ್ ಗೆ ಭೇಟಿ ಮಾಡಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಉಪಸ್ಥಿತರಿದ್ದರು.
ಐನೆಕಿದು 1ನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗಿರೀಶ್ ಆಚಾರ್ಯ ,ಭಾರತಿ ಶಶಿಕಾಂತ್, ಲಲಿತಾ ಗುಂಡಡ್ಕ, ಹಾಗೂ ಬಿಜೆಪಿ ಕಾರ್ಯಕರ್ತರುಗಳಾದ ವಿಶ್ವನಾಥ ಬಿಳಿಮಲೆ,ಕಿಶೋರ್ ಕುಮಾರ್ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ನವೀನ್ ಕಟ್ರಮನೆ, ಕಿರಣ್ ಪೈಲಾಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸತ್ಯಪ್ರಸಾದ್ ಪುಳಿಮಾರಡ್ಕ, ಜನಾರ್ದನ ಸುಬ್ಬ ಬೈರ, ಭುವನೇಶ್ವರಿ (ಸ್ವಾತಿ) ಮತ್ತು ಬಿಜೆಪಿ ಬೆಂಬಲಿಗರು ಅಭ್ಯರ್ಥಿಗಳ ಪರವಾಗಿ ಕೊನೆ ಕ್ಷಣದ ಮತಬೇಟೆ ನಡೆಸಿದರು.
ಕೊಲ್ಲಮೊಗ್ರ ಬೂತ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಶಾಸಕ ಎಸ್.ಅಂಗಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಮಾಧವ ಚಾಂತಾಳ, ಉದಯ ಕೊಪ್ಪಡ್ಕ, ಜಯಶ್ರೀ ಎಸ್. , ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು (5ನೇ ವಾರ್ಡ್)ಪಕ್ಷೇತರ ಅಭ್ಯರ್ಥಿ ಅಶೋಕ್ ಕುಮಾರ್ ರವರೊಂದಿಗೆ ಬೆಂಬಲಿಗರು ಮತಯಾಚಿಸಿದರು.
Loading posts...
All posts loaded
No more posts
