Ad Widget

ಮರ್ಕಂಜ : ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರು

ಮರ್ಕಂಜ ಬೂತ್ ನಲ್ಲಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಜತೆ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಸಾಥ್ ನೀಡಿದರು.

ಎಲಿಮಲೆ : ಸೈಂಟ್ ಮೇರಿಸ್ ಹಾರ್ಡ್‌ವೇರ್ ಮತ್ತು ಪೈಂಟ್ಸ್ ಶುಭಾರಂಭ

ಎಲಿಮಲೆಯ ಸೈಂಟ್ ಮೇರಿಸ್ ಇಂಡಸ್ಟ್ರೀಸ್ ನ ನೂತನ ಘಟಕವಾಗಿ ಹಾರ್ಡ್‌ವೇರ್, ಪೈಂಟ್ಸ್, ಪೈಪ್ಸ್ ಮತ್ತು ಪಿಟ್ಟಿಂಗ್ಸ್, ಸ್ಯಾನಿಟರಿವೇರ್ಸ್ , ಸಿಮೆಂಟ್ ಮತ್ತು ಸಿಮೆಂಟ್ ಪ್ರೊಡಕ್ಟ್ ನ ವಿಶಾಲವಾದ ಮಳಿಗೆ ಡಿ‌.28 ರಂದು ಶುಭಾರಂಭಗೊಂಡಿತು. ಧರ್ಮಗುರುಗಳಾದ ಫಾ|ಸಿಬಿ ಪನಚಿಕಲ್ ಪ್ರಾರ್ಥಿಸಿ, ಸಂಸ್ಥೆಯ ಬೆಳವಣಿಗೆಗೆ ಶುಭಹಾರೈಸಿದರು. ಶ್ರೀಮತಿ ರೋಸಮ್ಮ ಮತ್ತು ಮ್ಯಾಥ್ಯೂ ಕಕ್ಕಿಂಜೆ ದಂಪತಿಗಳು ಉದ್ಘಾಟಿಸಿ ಶುಭಹಾರೈಸಿದರು. ಸುಮಾರು...
Ad Widget

ಹುಟ್ಟುಹಬ್ಬ ಆಚರಿಸಿ ಗ್ರಾಮದ ಸೇವಕನಿಗೆ ಕೃತಜ್ಞತೆ ಸಲ್ಲಿಸಿದ ಕಾರ್ಯಕರ್ತರು

ನಡುಗಲ್ಲಿನಲ್ಲಿ ಮತದಾನ ಮುಗಿದ ಬಳಿಕ ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಚುನಾವಣಾ ಅಭ್ಯರ್ಥಿ ವಿಜಯಕುಮಾರ್ ಚಾರ್ಮತ ಅವರ ಹುಟ್ಟುಹಬ್ಬವನ್ನು ನಾಲ್ಕೂರು ಗ್ರಾಮದ ಬಿ.ಜೆ.ಪಿ. ಕಾರ್ಯಕರ್ತರು ಸೇರಿ ಆಚರಿಸಿದರು. ಈ ಮೂಲಕ ಗ್ರಾಮದ ಅಭಿವೃದ್ಧಿ ಗೆ ದುಡಿದ ಗ್ರಾ.ಪಂ.ಸದಸ್ಯನಿಗೆ ಕೃತಜ್ಞತೆ ಸಲ್ಲಿಸಿದರು.

ಉಬರಡ್ಕ : ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರು

ಉಬರಡ್ಕ : ವಾರ್ಡ್ 1, 2 ಮತ್ತು 3 ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜತೆ ಕಾರ್ಯಕರ್ತರು ಸಾಥ್ ನೀಡಿದರು.

ಮೊಗ್ರ : ಹಿರಿಯರ ಮತದಾನಕ್ಕೆ ನೆರವಾದ ಗ್ರಾಮಭಾರತ ತಂಡದ ಸದಸ್ಯರು

ಮೊಗ್ರ ಬೂತ್ ನಲ್ಲಿ 97 ವರ್ಷದ ಚೆನ್ನು ಅವರ ಮತದಾನಕ್ಕೆ ಗ್ರಾಮಭಾರತ ತಂಡದ ಸದಸ್ಯರು ನೆರವಾದರು.

ಮೊಗ್ರ ಮತಗಟ್ಟೆ ಬಳಿ ಗ್ರಾಮಭಾರತ ತಂಡದಿಂದ ಸ್ವಚ್ಛತೆ

ಮೊಗ್ರ ಮತಗಟ್ಟೆ ಬಳಿ ಮತದಾನದ ಮುಗಿದ ಬಳಿಕ ಮತಗಟ್ಟೆ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಭಾರತ ತಂಡದ ಸದಸ್ಯರು ಭಾಗವಹಿಸಿದರು.

ಗುತ್ತಿಗಾರು : ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ

ಗುತ್ತಿಗಾರು ಮತಗಟ್ಟೆ ಬಳಿ ಮತದಾನ ಮುಗಿದ ಬಳಿಕ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ ನಡೆಯಿತು.

ನೆಲ್ಲೂರು ಕೆಮ್ರಾಜೆ : ಸೌಹಾರ್ದ ವೇದಿಕೆ ಅಭ್ಯರ್ಥಿಗಳ ಜತೆ ಕಾರ್ಯಕರ್ತರು

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾರ್ಣಕಜೆ ಮತ್ತು ಬೊಳ್ಳಾಜೆ ಬೂತ್ ಗಳಲ್ಲಿ ಸೌಹಾರ್ದ ವೇದಿಕೆ ಅಭ್ಯರ್ಥಿಗಳೊಂದಿಗೆ ಕಾರ್ಯಕರ್ತರು ಮತಯಾಚಿಸಿದರು.

ಸುಳ್ಯ ತಾಲೂಕಿನಲ್ಲಿ ಯಶಸ್ವಿ ಮತದಾನ – ಡಿಮಸ್ಟರಿಂಗ್ ಕೇಂದ್ರಕ್ಕೆ ಮತಪೆಟ್ಟಿಗೆ ಆಗಮನ

ಸುಳ್ಯ ತಾಲೂಕಿನಲ್ಲಿ ಯಶಸ್ವಿ ಮತದಾನ ನಡೆದಿದ್ದು ಶೇ 80.54 ಮತದಾನ ದಾಖಲಾಗಿದೆ. ತಾಲೂಕಿನ ಎಲ್ಲಾ ಮತಗಟ್ಟೆಗಳಿಂದ ಡಿಮಸ್ಟರಿಂಗ್ ಕೇಂದ್ರಕ್ಕೆ ಮತಪೆಟ್ಟಿಗೆ ಆಗಮನವಾಗುತ್ತಿದೆ. ಡಿಮಸ್ಟರಿಂಗ್ ಕೇಂದ್ರ ತಹಶೀಲ್ದಾರ್ ವೇದವ್ಯಾಸ್ ಮುತಾಲಿಕ್ ಖುದ್ದಾಗಿ ಪರಿಶೀಲನೆ ಹಾಗೂ ಪೆಟ್ಟಿಗೆಗಳ ಸರಿಯಾಗಿ ಜೋಡಣೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.

ಸುಳ್ಯ ತಾಲೂಕಿನಲ್ಲಿ ಒಟ್ಟು ಶೇ 80.54 ಮತದಾನ

ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು ಶೇ 80.54 ಮತದಾನ ದಾಖಲಾಗಿದೆ. ಉತ್ತಮ ಫಲಿತಾಂಶ ದಾಖಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 89311 ಮತದಾರರಲ್ಲಿ 71934 ಮತ ಚಲಾವಣೆಯಾಗಿದೆ. 44418 ಪುರುಷ ಮತದಾರರಲ್ಲಿ 36186 ಹಾಗೂ 44893 ಮಹಿಳಾ ಮತದಾರರಲ್ಲಿ 35748 ಮತ ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!