Ad Widget

ಗಾಂಧಿನಗರ : ತಡೆಬೇಲಿಗೆ ಡಿಕ್ಕಿಯಾಗಿ ಕಾರು ಜಖಂ

ಗಾಂಧಿನಗರ ಮಸೀದಿ ಸಮೀಪ ಕಾರೊಂದು (KL 14 Z 3232):ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ ಘಟನೆ ಇಂದು ರಾತ್ರಿ 3 ಗಂಟೆಗೆ ನಡೆದಿದೆ. ಕಾರಿನ ಮುಂಭಾಗ ಜಖಂ ಗೊಂಡಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಅರಂತೋಡು : ಬಿಯರ್ ತುಂಬಿದ ಲಾರಿ ಪಲ್ಟಿ – ಜನ ದಾಪುಗಾಲು

ಮೈಸೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ ಬಿಯರ್ ತುಂಬಿದ ಲಾರಿ ಅರಂತೋಡು ಸಮೀಪ ಕೊಡಂಕೇರಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಚಾಲಕ ಮತ್ತು ಕ್ಲಿನರ್ ಅಪಾಯದಿಂದ ಪಾರಾಗಿದ್ದಾರೆ. ಸುಮಾರು ರೂ 45 ಲಕ್ಷ ಮೌಲ್ಯದ ಬಿಯರ್ ಇತ್ತೆಂದು ಹೇಳಲಾಗುತ್ತಿದೆ....
Ad Widget

ಜ.20 ರಂದು ರೈತಪರ ಸಂಘಟನೆಗಳ ವತಿಯಿಂದ ಸುಳ್ಯದಲ್ಲಿ ಉಪವಾಸ ಸತ್ಯಾಗ್ರಹ

ಸುಳ್ಯ ತಾಲೂಕಿನ ರೈತ,ಕಾರ್ಮಿಕ, ದಲಿತ, ಜನಪರ ಚಳವಳಿಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತ,ಕಾರ್ಮಿಕ, ದಲಿತ ಹಾಗೂ ಜನ ವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸುಳ್ಯ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಜ.೨೦ ರಂದು ಖಾಸಗಿ ನಿಲ್ದಾಣ ಬಳಿ ನಡೆಯಲಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದರು.ಜ.26 ರಂದು...

ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾಗಿ ವಿಜಯ ಪಾಟಾಜೆ

ಅಂಬೇಡ್ಕರ್ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ. ವಿಜಯ ಪಾಟಾಜೆಯವರು ನೇಮಕಗೊಂಡಿದ್ದಾರೆ.

ಕಳಂಜ : ರಾಮಮಂದಿರ ನಿಧಿ ಸಮರ್ಪಣೆ ಕಾರ್ಯಕ್ಕೆ ಚಾಲನೆ

ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣೆ ಮಾಡುವ ಕಾರ್ಯಕ್ಕೆ ಕಳಂಜ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಧಿ ಸಮರ್ಪಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕರಿಕ್ಕಳ : ರಾಮಮಂದಿರ ನಿಧಿ ಸಮರ್ಪಣೆ ಕಾರ್ಯಕ್ಕೆ ಚಾಲನೆ

ಐವತ್ತೊಕ್ಲು ಗ್ರಾಮದ ಕರಿಕ್ಕಳದಲ್ಲಿ ಅಯೋಧ್ಯ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಜನೆಯೊಂದಿಗೆ ಊರವರು ಕರಿಕ್ಕಳದಲ್ಲಿ ನಿಧಿಸಮರ್ಪಣೆ ಅಭಿಯಾನ ನಡೆಸಿದರು.

ಕೊಲ್ಲಮೊಗ್ರ : ಮಕ್ಕಳ ಗ್ರಾಮ ಸಭೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವತಿಯಿಂದ ಜ.16 ರಂದು ಗ್ರಾ. ಪಂ. ಸಭಾಂಗಣದಲ್ಲಿ ಕೆ.ವಿ.ಜಿ ಪ್ರೌಢಶಾಲೆಯ ವಿದ್ಯಾರ್ಥಿ ರಚನ್ ಎ.ಡಿ ಇವರ ಅಧ್ಯಕ್ಷತೆಯಲ್ಲಿ 2020-21ನೇ ಸಾಲಿನ ಮಕ್ಕಳ ಗ್ರಾಮ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕೆ.ವಿ.ಜಿ ಪ್ರೌಢಶಾಲೆ ಕೊಲ್ಲಮೊಗ್ರು ಇದರ ಸಹ ಶಿಕ್ಷಕರಾದ ವೆಂಕಟ್ರಮಣ ಕೆ.ಕೆ. ಹಾಗೂ ರಾಜೇಶ್ ಕುಮಾರ್ ಆರ್. ಸ. ಹಿ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು...

ಜ.17- ಅಜ್ಜಾವರದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ

ಅಜ್ಜಾವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಉಚಿತವಾಗಿ ನಾಯಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಜ.17 ರಂದು ಗ್ರಾಮದ ಆರು ಕಡೆಗಳಲ್ಲಿ ನಡೆಯಲಿದೆ. ದೊಡ್ಡೇರಿ ಭಜನಾ ಮಂದಿರದ ಬಳಿ, ಮುಳ್ಯ ಭಜನಾ ಮಂದಿರದ ಬಳಿ, ಮೇನಾಲ ಹಾಲು ಸೊಸೈಟಿ ಬಳಿ, ಕಾಂತಮಂಗಲ ಬಸ್ ಸ್ಟಾಂಡ್ ಬಳಿ, ಅಜ್ಜಾವರ ಹಾಲು ಸೊಸೈಟಿ ಬಳಿ, ಅಡ್ಪಂಗಾಯ ಶಾಲಾ ಬಳಿ ನಡೆಯಲಿದೆ ಎಂದು...

ಜ.31 ಕ್ಕೆ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

ಮುಂದೂಡಲ್ಪಟ್ಟಿದ್ದ ಪೋಲೀಯೋ ಲಸಿಕಾ ಕಾರ್ಯಕ್ರಮ ಜ.31 ಕ್ಕೆ ನಡೆಯಲಿದೆ. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕುವಂತೆ ತಾಲೂಕು ವೈಧ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ಕ್ರಮ ಸರಿಯಲ್ಲ : ಎಂ ವೆಂಕಪ್ಪ ಗೌಡ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಘಟನೆಗಳು ದೇಣಿಗೆ ಸಂಗ್ರಹಿಸುವ ಕ್ರಮ ಸರಿಯಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ. ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನ್ಯಾಯಾಲಯದ ತೀರ್ಪಿನ ಪ್ರಕಾರ ಹಾಗೂ ಎಲ್ಲಾ ಅಡ್ಡಿಗಳು ನಿವಾರಣೆಯಾಗಿ ರಾಮ ಮಂದಿರ ನಿರ್ಮಾಣವಾದರೆ ಸಂತೋಷವೇ. ಅದಕ್ಕೆ ಯಾರೂ...
Loading posts...

All posts loaded

No more posts

error: Content is protected !!