ಸುಳ್ಯ : ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ; ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಆರೋಪ

ಸುಳ್ಯದ ಜೂನಿಯರ್ ಕಾಲೇಜು ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಸುಳ್ಯದ ಜೂನಿಯರ್ ಕಾಲೇಜ್ ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್...

ಸುಳ್ಯ : ವಿಶೇಷ ಕಾರ್ಯಾಗಾರ ಮತ್ತು ಯೋಗ ಪ್ರದರ್ಶನ

ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ಮಂಗಳೂರು ವಿಭಾಗ, ಸುಳ್ಯ ನಗರ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರ ಮತ್ತು ಯೋಗ ಪ್ರದರ್ಶನವು ಸುಳ್ಯದ ಶಿವಕೃಪಾ ಕಲಾ ಮಂದಿರ ನಡೆಯಿತು. ಕಾರ್ಯಕ್ರಮವನ್ನು ಸುಳ್ಯದ ಆನಂದ್ ಇಲೆಕ್ಟ್ರಿಕಲ್ಸ್ ನ ಮಾಲಕ ಆನಂದ್ ಪೂಜಾರಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತ್...
Ad Widget

ಬೆಳ್ಳಾರೆ : ಸ್ವಚ್ಚತಾ ಕಾರ್ಯಕ್ರಮ

ಬೆಳ್ಳಾರೆ ಪೇಟೆಯಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿಯ ಪಟ್ಟಣ ಸವಾರಿಯ ಸಲುವಾಗಿ ಸ್ವಚ್ಛತಾ ಕಾರ್ಯ ಇಂದು ನಡೆಸಲಾಯಿತು. ಗ್ರಾ.ಪಂ.ನ ನೂತನ ಸದಸ್ಯರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಈ ಸ್ವಚ್ಚತಾ ಕಾರ್ಯ ನಡೆಯಿತು.

ಉಬರಡ್ಕ : ಗುದ್ದಲಿಪೂಜೆಗೆ ಸೀಮಿತವಾದ ಉರುಂಡೆ ಕಿರು ಸೇತುವೆ

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುಂಡೆ ಎಂಬಲ್ಲಿ ಕಿರು ಸೇತುವೆ ಕಾಮಗಾರಿ ಅರ್ಧದಲ್ಲಿ ಉಳಿದಿದ್ದು ಗ್ರಾಮಸ್ಥರ ಹಲವು ವರ್ಷಗಳ ಕನಸು ಕನಸಾಗಿಯೇ ಉಳಿದಿದೆ. ಸುಳ್ಯ - ಉಬರಡ್ಕ ಮುಖ್ಯ ರಸ್ತೆಯಲ್ಲಿ ಸಿಗುವ ಹುಳಿಯಡ್ಕದಿಂದ ಮಿತ್ತೂರು(ಕೆದಂಬಾಡಿ)ಗೆ ಸಂಪರ್ಕ ಸಾಧಿಸುವ ರಸ್ತೆಗೆ ಕಳೆದ ಕೆಲವು ವರುಷಗಳ ಹಿಂದೆ ಉರುಂಡೆ ಎಂಬ ಪ್ರದೇಶದಲ್ಲಿ ಉಬರಡ್ಕ ಗ್ರಾಮ ಪಂಚಾಯತಿ ವತಿಯಿಂದ...

ಶುಭವಿವಾಹ ಜಯಪ್ರಕಾಶ್- ಧನ್ಯ

ಉಬರಡ್ಕ‌ ಮಿತ್ತೂರು ಗ್ರಾಮದ ಉರುಂಡೆ ದಿ. ದುಗ್ಗಪ್ಪ‌ ಗೌಡರವರ ಪುತ್ರ ಜಯಪ್ರಕಾಶ ರವರ ವಿವಾಹವು ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಕೃಷ್ಣಪ್ಪ ಗೌಡರ ಪುತ್ರಿ ಧನ್ಯಾರೊಂದಿಗೆ ಗೌಡ ಸಮುದಾಯ ಭವನ ಕೊಡಿಯಾಲ ಬೈಲು ಇಲ್ಲಿ ಜ.18 ರಂದು ‌ನಡೆಯಿತು.

ಜ.21 : ಕಳಂಜ ಸಹಕಾರಿ ಸಂಘದಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನಾ ಕಾರ್ಯಕ್ರಮ

ಕಳಂಜ‌ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಪಿ.ಜಿ.ಎಸ್.ಎನ್. ಪ್ರಸಾದರಿಗೆ ಅಭಿನಂದನಾ ಕಾರ್ಯಕ್ರಮ ಜ. 21ರಂದು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತರನ್ನು ಸಂಘದ ಮಾಜಿ ಉಪಾಧ್ಯಕ್ಷ...

ಪೆರುವಾಜೆ : ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಅಂಗಾರ – ಸನ್ಮಾನ

ಪೆರುವಾಜೆ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಬೆಂಗಳೂರಿನಿಂದ ಇಂದು ಆಗಮಿಸಿದ ಸಚಿವ ಅಂಗಾರರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪಟ್ಲ ಫೌಂಡೇಶನ್ ಸುಳ್ಯ ಘಟಕದ ವತಿಯಿಂದ ಸಚಿವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾಭಿಮಾನಿಗಳು ಇದ್ದರು

ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ವತಿಯಿಂದ ಸಚಿವ ಅಂಗಾರರಿಗೆ ಅಭಿನಂದನೆ

ಕರ್ನಾಟಕ ರಾಜ್ಯ ಸರಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕರಾದ ಅಂಗಾರ ರವರನ್ನು ಜ.18ರಂದು ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಭೇಟಿ ಮಾಡಿದ ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಆರ್. ಕೆ. ಮಹಮ್ಮದ್, ಮಾಜಿ ಉಪಾಧ್ಯಕ್ಷರು ಹಾಲಿ ನಿರ್ದೇಶಕರಾದ ಹಸೈನಾರ್...

ಅಜ್ಜಾವರ : ಬರಗಾಲ ತಡೆಯುವಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ಕೃಷಿ ಇಲಾಖೆ ಸುಳ್ಯ ಇದರ ವತಿಯಿಂದ ಜಲಾನಯನ ಅಭಿವೃದ್ಧಿ ಯೋಜನೆಯ ಮೂಲಕ ಬರಗಾಲ ತಡೆಯುವಿಕೆ ಬಗ್ಗೆ ಅರಿವು ಮೂಡಿಸುವ ಗ್ರಾಮಸಭೆ ಜ.18 ರಂದು ಅಜ್ಜಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ಲಡ್ಕ, ಗ್ರಾಮ ಪಂಚಾಯಿತ್ ಆಡಳಿತ ಅಧಿಕಾರಿ ಲಕ್ಷ್ಮೀಶ ರೈ, ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು,...

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಚೇತಸ್ವಿ ನೆಕ್ಲಾಜೆ ಡಿಸ್ಟಿಂಕ್ಷನ್

ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಚೇತಸ್ವಿ ಎನ್. ಇವರು 329 ಅಂಕ ಪಡೆದು ಶೇಕಡಾ 82.25 ರೊಂದಿಗೆ ಡಿಸ್ಟಿಂಕ್ಷನ್ ಉತ್ತೀರ್ಣಗೊಂಡಿರುತ್ತಾರೆ. ಇವರು ವಿಶ್ವಕಲಾನಿಕೇತನ ಪಂಜ ಇಲ್ಲಿಯ ನೃತ್ಯ ಗುರು ಸ್ವಸ್ತಿಕಾ ಆರ್. ಶೆಟ್ಟಿ ರವರ ಶಿಷ್ಯೆ ನೆಕ್ಲಾಜೆ ಮನೆ ವಿಶ್ವನಾಥ ಎನ್. ಹಾಗೂ ದಿವ್ಯ ಎನ್. ಇವರ ಪುತ್ರಿ ಹಾಗೂ...
Loading posts...

All posts loaded

No more posts

error: Content is protected !!