- Thursday
- September 24th, 2026
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ನೆಟ್ಟಾರು ವೆಂಕಟ್ರಮಣ ಭಟ್ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಖಾತೆಯ ನೂತನ ಸಚಿವ ಎಸ್. ಅಂಗಾರ ಅವರು ಉಡುಪಿಯ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜ.26ರಂದು ಧ್ವಜಾರೋಹಣ ನೆರವೇರಿಸಿದರು.ಬಳಿಕ 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಶುಭಹಾರೈಸಿದರಲ್ಲದೆ ಹುತಾತ್ಮ ಸೈನಿಕರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ...
ಪೆರುವಾಜೆ ಗ್ರಾಮದ ಮುಕ್ಕೂರು ಬಿರುಸಾಗು ನಿವಾಸಿ ಮಾಧವಿ ರೈ ಯವರು ಮನೆಯ ಮೇಲ್ಛಾವಣಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸುವಂತಿತ್ತು. ಈ ವಿಷಯ ಮನಗಂಡ ಯುವಸೇನೆ ಮುಕ್ಕೂರು ಪೆರುವಾಜೆಯ ಸದಸ್ಯರು ಬೀಳುವ ಸ್ಥಿತಿಯಲ್ಲಿದ್ದ ಮನೆಯ ದುರಸ್ತಿ ಕಾರ್ಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕ್ಯಾನ್ಸರ್ ನಿಂದ ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಮಾಧವಿ ರೈ ಯವರು...
ಸುಳ್ಯ ವಿಧಾನ ಸಭಾ ಕ್ಷೇತ್ರದ ಎನ್.ಎಸ್.ಯು.ಐ ವತಿಯಿಂದ ಇಂದು ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನವನ್ನು ಕೆ ಎಸ್ ಎಸ್ ಕಾಲೇಜ್ ಹಾಗೂ ಎನ್ ಎಂ ಸಿ ಕಾಲೇಜಿನ ಕ್ಯಾಂಪಸ್ ನ ಹೊರಗಡೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಸುಳ್ಯ ಎನ್ ಎಸ್ ಯು ಐ ಮುಖಂಡರುಗಳದ ಕೀರ್ತನ್ ಗೌಡ ಕೊಡಪಾಲ, ಆಶಿಕ್ ಆರಂತೋಡು, ಪವನ್ ಅಂಬೇಕಲ್ಲು, ಕೌಶಿಕ್...
ಸುಳ್ಯದ ಬಂಗಾರ, ನೂತನ ಸಚಿವರಾದ ಶ್ರೀ ಎಸ್. ಅಂಗಾರರವರನ್ನು ಕೇನ್ಯ ಗ್ರಾಮಸ್ಥರ ಪರವಾಗಿ ಜ. 25 ರಂದು ಸನ್ಮಾನಿಸಲಾಯಿತು. ಇದೇ ವೇಳೆ ಕೇನ್ಯ , ಐನಡ್ಕ, ಬರಮೇಲು, ಕೆರೆಕೋಡಿ , ನೇಲ್ಯಡ್ಕ , ಕಣ್ಕಲ್, ಪೆರುಂಬುಡ ಮತ್ತು ಕಾರ್ಯತಡ್ಕದವರೆಗೆ ಕಾಂಕ್ರೀಟಿಕರಣ ಮಾಡುವಂತೆ ಸಚಿವರಿಗೆ ಮನವಿ ಪತ್ರ ನೀಡಲಾಯಿತು.
ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾದಿನ ಹಾಗೂ ವರ್ಷಾವಧಿ ಜಾತ್ರೋತ್ಸವ ಫೆ. 18 ರಿಂದ 20 ತನಕ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ರಕ್ತೇಶ್ವರಿ, ವನಶಾಸ್ತಾವು, ನಾಗದೇವರು, ಪರಿವಾರ ದೈವಗಳ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವ ಬ್ರಹ್ಮಶ್ರೀ ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಜರುಗಲಿರುವುದು. ಫೆ 12 ರಂದು ಬೆಳಿಗ್ಗೆ...
ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮ ವಹಿಸಿದ್ದರು. ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಕೀನ ಡಿಸೋಜಾ, ರಾಜ್ಯಶಾಸ್ತ್ರ ಉಪನ್ಯಾಸಕರಾದ ರಂಜಿತ್ ಅಂಬೆಕಲ್ಲು ರಾಷ್ಟ್ರೀಯ ಮತದಾರರ ದಿನದ ಮಹತ್ವವನ್ನು ತಿಳಿಸಿದರು. ಹೈಸ್ಕೂಲ್ ವಿಭಾಗದ ಹಿಂದಿ ಶಿಕ್ಷಕರಾದ ಪ್ರಸನ್ನ ಕುಮಾರ್ ವೈ.ಬಿ. ಮತದಾರರ ದಿನದ...
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟನೆ ಇಂದು ನಡೆಯಿತು. ಪಿಡಿಓ ಶ್ಯಾಮ್ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ಪ್ರಾ.ಆ. ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ನಂದಕುಮಾರ್ ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಗುತ್ತಿಗಾರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತ್ರಭಾನು ಕೆ.ಎಸ್. ಉಪಸ್ಥಿತರಿದ್ದರು. ಪ್ರಥಮವಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾದ...
ನಾಲ್ಕೂರು ಶ್ರೀ ವಿಷ್ಣುಮೂರ್ತಿ, ಧರ್ಮದೈವ ಹಾಗೂ ಪರಿವಾರ ದೈವಗಳ ಸ್ಥಾನ ಚೌಟಾಜೆ ಮನೆತನದ ಛಾವಡಿಯಲ್ಲಿ ಪೇರಾಲು ಹದಿನಾರರ ಹಾಗೂ ಅಂಬ್ರೋಟಿ ಹದಿನಾರರ ಸಮಕ್ಷಮದಲ್ಲಿ ಧರ್ಮದೈವ ದ (ರುದ್ರಚಾಮುಂಡಿ) ಭಂಡಾರ ತೆಗೆದು ಇಂದು ಮಧ್ಯಾಹ್ನ ದೈವದ ನೇಮ ಹಾಗೂ ಮಾರಿ ಓಡಿಸುವ ಕಾರ್ಯಕ್ರಮ ನಡೆಯಲಿರುವುದು.
ಹರಿಹರಪಲ್ಲತ್ತಡ್ಕ ಗ್ರಾಮದ ಗುಂಡಿಹಿತ್ಲು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಸಪರಿವಾರ ದೈವಗಳ ಗುಡಿಗಳು ನವೀಕರಣಗೊಂಡಿದ್ದು ಜ. 24 ಜ. 26ರ ತನಕ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಿದೆ. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ...
Loading posts...
All posts loaded
No more posts
