- Sunday
- March 15th, 2026
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಪೈಲಾಜೆ, ಐನೆಕಿದು ಸರ್ಕಲ್, ಶಾಲೆ, ಕೋಟೆ, ಆಚಾರಿಗದ್ದೆ, ನವಗ್ರಾಮ, ಗುಂಡಡ್ಕ ದಲ್ಲಿ ಫೆ.10 ರಂದು ಬೀದಿದೀಪ ಅಳವಡಿಸಲಾಯಿತು. ಜನತೆಯ ಬಹುದಿನದ ಬೇಡಿಕೆಯನ್ನು ಗ್ರಾ.ಪಂ.ನೂತನ ಸದಸ್ಯರು ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ ಇವರ ಉಪಸ್ಥಿತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಯಿತು.✍ವರದಿ:-ಉಲ್ಲಾಸ್...
ಯುವಜನ ಸಂಯುಕ್ತ ಮಂಡಳಿ(ರಿ.) ಇದರ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಫೆಬ್ರವರಿ 13 ರಂದು ಮಂಡಳಿಯ ಆವರಣದಲ್ಲಿ ನಡೆಯಲಿದೆ. ಆಸಕ್ತ ಸಾರ್ವಜನಿಕರು ಇದರ ಉಪಯೋಗವನ್ನು ಪಡಕೊಳ್ಳಬೇಕಾಗಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜು ಇದರ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಫೆ. 10 ರಂದು ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ., ಯು.ಪಿ.ರಾಮಕೃಷ್ಣ ಹಾಗೂ...
ಕಲ್ಲುಗುಂಡಿ ಸಮೀಪದ ರಬ್ಬರ್ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಯೋ , ಕೊಲೆಯೋ ಎಂದು ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯನ್ನು ಪಂಜ ಸಮೀಪದ ಪಂಬೆತ್ತಾಡಿಯ ರಾಮಣ್ಣ ನಾಯ್ಕ ಅವರ ಪುತ್ರ ಗಣೇಶ್ ಚೀಮುಳ್ಳು ಎಂದು ಗುರುತಿಸಲಾಗಿದೆ.
ಅಂಬೇಡ್ಕರ್ ರಕ್ಷಣಾ ವೇದಿಕೆಯ ನೆಟ್ಟಾರು ಘಟಕದ ಉದ್ಘಾಟನೆ ನಡೆಯಿತು. ನೂತನ ಘಟಕದ ಅಧ್ಯಕ್ಷರಾಗಿ ರಾಜೇಶ್ ಕಜೆ, ಉಪಾಧ್ಯಕ್ಷರಾಗಿ ರಮೇಶ್ ನೆಟ್ಟಾರು, ಕಾರ್ಯದರ್ಶಿಯಾಗಿ ವಸಂತ ಬೊಳಿಯಮೂಲೆ, ಜತೆ ಕಾರ್ಯದರ್ಶಿಯಾಗಿ ಗಂಗಾಧರ ನಾಯ್ಕ ನವಗ್ರಾಮ, ನೆಟ್ಟಾರು ಮಹಿಳಾ ಘಟಕದ ಅಧ್ಯಕ್ಷರಾಗಿ ಉಷಾ ಎಸ್. ನವಗ್ರಾಮ, ಮಹಿಳಾ ಕಾರ್ಯದರ್ಶಿಯಾಗಿ ಹರಿಣಾಕ್ಷಿ ನೆಟ್ಟಾರು ಆಯ್ಕೆಯಾದರು. ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ...
ಹರಿಹರಪಲ್ಲತ್ತಡ್ಕದಿಂದ ಕಟ್ಟಕ್ಕೆ ಹೋಗುವ ರಸ್ತೆಯಲ್ಲಿ ಹಗಲಿನ ವೇಳೆಯಲ್ಲಿಯೇ ಆನೆ ಸಂಚರಿಸುತ್ತಿರುವುದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಫೆ. 9 ರಂದು ಸಂಜೆ 6 ಗಂಟೆಗೆ ದ್ವಿಚಕ್ರ ಸವಾರನಿಗೆ ಒಂಟಿ ಸಲಗ ಅಡ್ಡ ಬಂದಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಆನೆ ಕಂಡು ಸ್ಕೂಟರನ್ನು ಕೂಡಲೇ ತಿರುಗಿಸಿದ್ದಾರೆ. ಈ ಭಾಗದಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರು...
ಮುಕ್ಕೂರು : ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಆಶ್ರಯದಲ್ಲಿ ಫೆ.13 ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನುಶಿವಳ್ಳಿ ಸಂಪನ್ನ ಬೆಳಂದೂರು ವಲಯ ಅಧ್ಯಕ್ಷ ಮೋಹನ ಬೈಪಡಿತ್ತಾಯ ಉದ್ಘಾಟಿಸಲಿದ್ದಾರೆ. ನೇಸರ...
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಜಿಯೋ ಕೇಬಲ್ ಅಳವಡಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್ ಕೇಬಲ್ ಕಟ್ ಮಾಡಿದ್ದರು. ಇದರಿಂದಾಗಿ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಸಂಪರ್ಕ ಸರಿಯಾಗಿ ಇರಲಿಲ್ಲ. ಇದನ್ನು ಸ್ಥಳೀಯರೇ ಸೇರಿ ಹಳೆಯ ಕೇಬಲ್ ಗಳನ್ನೇ ಸರಿಪಡಿಸಿ ಲ್ಯಾಂಡ್ ಲೈನ್ ಸಂಪರ್ಕವನ್ನು ಸರಿಪಡಿಸಿದ್ದರು. ಆದರೆ ಕೆಲವರಿಗೆ ಇಂಟರ್ನೆಟ್ ಸಂಪರ್ಕ ಸಿಗುತ್ತಿರಲಿಲ್ಲ ಹಾಗೂ ಫೋನ್ ನಲ್ಲಿ ಮಾತನಾಡುವ...
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನಾ ಉಪವಿಭಾಗ ಮಡಿಕೇರಿ ವತಿಯಿಂದ ಚೆಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ವಿ.ಕೃಷ್ಣಪ್ಪ ನಡುಬೆಟ್ಟು, ಪೆರಾಜೆ ಗ್ರಾಮದ ಥೋಮಸ್ ಬಿಳಿಯಾರು, ಕೊಡಗು ಸಂಪಾಜೆಯಿಂದ ಇಸ್ಮಾಯಿಲ್ ಚಡಾವುರವರನ್ನು ಸೆಸ್ಕ್ ಎಇಇ ಮಹೇಶ್ ಮತ್ತು ಸಿಬ್ಬಂದಿವರ್ಗದವರು ಸಂಪಾಜೆ ವಿದ್ಯುತ್ ಕಚೇರಿಯಲ್ಲಿ ಸನ್ಮಾನಿಸಿದರು.ಸಮಯಕ್ಕೆ ಮುಂಚಿತವಾಗಿಯೇ ಇವರು ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಈ ಸಂದರ್ಭದಲ್ಲಿ...
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಫೆ.19ರಂದು ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಯುವ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಡಾ.ಪೂವಪ್ಪ ಕಣಿಯೂರು ಅಧ್ಯಕ್ಷತೆಯಲ್ಲಿ ಫೆ.19 ರಂದು 25ನೇ ಕನ್ನಡ ಸಾಹಿತ್ಯ ಸಮ್ಮೇಳನ...
Loading posts...
All posts loaded
No more posts
